Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತಲೆಗೂದಲು ಹೆಚ್ಚು ಉದುರುತ್ತಿದೆ ಎಂದಾದಲ್ಲಿ ನೀವು ಸಿರಿವಂತರಾಗುವುದು ಖಚಿತ!
ಇಂದಿನ ಯುಗದಲ್ಲಿ ಸೌಂದರ್ಯ ಮತ್ತು ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಸ್ತ್ರೀಯರು ಕಾಳಜಿಯನ್ನು ವಹಿಸುತ್ತಿದ್ದಾರೆ. ಅದರಲ್ಲೂ ರಾಸಾಯನಿಕ ಅಂಶಗಳನ್ನು ಬಿಟ್ಟು ಆಯುರ್ವೇದ ಮತ್ತು ನೈಸರ್ಗಿಕ ಅಂಶಗಳನ್ನು ಬಳಸಿಕೊಂಡು ಕೂದಲಿನ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತಿದ್ದಾರೆ. ಅದಾಗ್ಯೂ ಇಂದು ಮಹಿಳೆಯರನ್ನು ಅಂತೆಯೇ ಪುರುಷರನ್ನು ಕಾಡುತ್ತಿರುವ ಸಮಸ್ಯೆ ಕೂದಲುದುರುವಿಕೆಯಾಗಿದೆ.
ಸೊಂಪಾಗಿ ದಪ್ಪಗಿದ್ದ ಕೂದಲು ಒಮ್ಮೆಗೆ ರಾಶಿ ರಾಶಿಯಾಗಿ ಉದುರಲು ತೊಡಗಿದಾಗ ಯಾರಿಗಾದರೂ ಚಿಂತೆಯಾಗುವುದು ಸಹಜವೇ ತಾನೇ? ಕೂದಲುದುರಲು ಹಲವಾರು ಕಾರಣಗಳಿರುತ್ತವೆ. ಹಾರ್ಮೋನು, ಒತ್ತಡ, ಅನಾರೋಗ್ಯಕರ ಆಹಾರ ಪದ್ಧತಿ, ನೀರು, ಬಳಸುವ ಶ್ಯಾಂಪೂ ಹೀಗೆ ಪಟ್ಟಿ ಮಾಡುತ್ತಲೇ ಹೋಗಬಹುದು. ಆದರೆ ಇಂದಿನ ಲೇಖನದಲ್ಲಿ ನಾವು ನೀಡಿರುವ ಕೆಲವೊಂದು ಕಾರಣಗಳು ನಿಮಗೆ ಇದುವರೆಗೆ ಯಾರೂ ತಿಳಿಸದೇ ಇರುವ ಕೆಲವೊಂದು ಗುಟ್ಟನ್ನು ತಿಳಿಸಲಿದೆ. ನಿಮ್ಮ ಕೂದಲು ಇನ್ನು ಸಿಕ್ಕಾಪಟ್ಟೆ ಉದುರುತ್ತಿದೆ ಎಂದಾದಲ್ಲಿ ನೀವು ಅದನ್ನು ಅದೃಷ್ಟವೆಂದು ಭಾವಿಸುವ ಕಾಲ ದೂರವೇನಿಲ್ಲ. ಬದಲಿಗೆ ಕೂದಲುದುರುತ್ತಿದ್ದರೂ ನಿಮ್ಮ ಮುಖದಲ್ಲಿ ಸಂತಸ ಕಂಡುಬರುವುದು ಖಂಡಿತ.
ಹೌದು ನಾವು ಕೆಳಗೆ ನೀಡಿರುವ ಕೆಲವೊಂದು ಕಾರಣಗಳು ನಿಮ್ಮ ಕೂದಲುದುರುವಿಕೆಯ ಸಮಸ್ಯೆಗೆ ಸಂತಸಮಯ ಪರಿಹಾರವನ್ನು ನೀಡುತ್ತಿದೆ. ಕೂದಲುದುರುವುದಕ್ಕೂ ಕೂಡ ಶಾಸ್ತ್ರದಲ್ಲಿ ಕೆಲವೊಂದು ನಿದರ್ಶನಗಳನ್ನು ನೀಡಿದ್ದು ಈ ಅಂಶಗಳನ್ನು ನೀವು ಮನಗಂಡರೆ ನೀವು ದಿಗ್ಭ್ರಮೆ ಹೊಂದುವುದು ಖಚಿತ. ನಿಮ್ಮ ಮುಂಬರುವ ದಿನದ ಜೀವನ ಶೈಲಿಯ ಬದಲಾವಣೆಯನ್ನು ಕೂಡ ನಿಮ್ಮ ಕೂದಲುದುರುವಿಕೆ ನಡೆಸುತ್ತದೆ ಎಂದರೆ ನಿಮಗೆ ಆಶ್ವರ್ಯವಾಗುವುದು ಖಂಡಿತ. ನಿಮ್ಮ ಕೂದಲಿನ ಬೆಳವಣಿಗೆ ಮತ್ತು ರೂಪುರೇಷೆ ನಿಮ್ಮ ಆಹಾರವನ್ನು ಅವಲಂಬಿಸಿರುತ್ತದೆ. ಋತುಮಾನಗಳ ಬದಲಾವಣೆ, ನೀರಿನ ಗುಣಮಟ್ಟ ಅಂತೆಯೇ ಆರೋಗ್ಯಕರ ಆಹಾರ ಪದ್ಧತಿಯನ್ನು ನೀವು ಅನುಸರಿಸದೇ ಇದ್ದಾಗ ಕೂಡ ಕೂದಲುದುರುವಿಕೆ ಉಂಟಾಗುತ್ತದೆ.

ನಿಮ್ಮ ಭವಿಷ್ಯದಲ್ಲಿ ಏನಾದರೂ ಬದಲಾವಣೆಯಾದಾಗ ಕೂಡ ಕೂದಲುದುರುವಿಕೆ ಸರ್ವೇ ಸಾಮಾನ್ಯವಾಗಿ ಪರಿಣಾಮವನ್ನು ಬೀರುತ್ತದೆ ಎಂಬ ಅಂಶವನ್ನು ನೀವು ನಂಬಲೇಬೇಕು. ಈ ಕುರಿತ ರಹಸ್ಯವನ್ನು ಸಾಮುದ್ರಿಕಾ ಶಾಸ್ತ್ರದಲ್ಲಿ ವ್ಯಾಖ್ಯಾನಿಸಲಾಗಿದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಸಾಮುದ್ರಿಕಾ ಶಾಸ್ತ್ರವೇನು ಮತ್ತು ಅದರಲ್ಲಿ ನೀಡಿರುವ ಮಾಹಿತಿಗಳೇನು ಎಂಬುದನ್ನು ಕೆಳಗಿನ ಅಂಶಗಳ ಮೂಲಕ ಅರಿತುಕೊಳ್ಳೋಣ.
ವಾರದ ನಾಲ್ಕು ದಿನ ತಲೆ ಸ್ನಾನ ಮಾಡುವಂತಿಲ್ಲ! ಯಾಕೆ ಹೀಗೆ?
ಹೌದು ಈ ಗ್ರಂಥದಲ್ಲಿ ಹೇಳಿರುವ ಪ್ರಕಾರ ನಿಮ್ಮ ಜೀವನದಲ್ಲಿ ಬರುವ ಕಷ್ಟ ಸುಖವನ್ನು ನಿಮ್ಮ ಕೂದಲು ಯಾವ ರೀತಿಯಲ್ಲಿ ಬೆಳೆಯುತ್ತಿದೆ ಎಂಬುದನ್ನು ನಿರ್ಧರಿಸಿದೆ. ಕೆಲವೊಮ್ಮೆ ಆರೋಗ್ಯ ಕಾರಣಗಳಿಂದ ಕೂಡ ಕೂದಲುದುರುವ ಸಾಧ್ಯತೆ ಇರುತ್ತದೆ, ಅದಾಗ್ಯೂ ನಿಮ್ಮ ಕೂದಲು ನಾವು ಇಂದಿನ ಲೇಖನದಲ್ಲಿ ನೀಡಿರುವ ಕೆಲವೊಂದು ಕಾರಣಗಳು ನಿಮ್ಮ ಕೂದಲುದುರುವಿಕೆಯನ್ನು ನಿಮ್ಮ ಅದೃಷ್ಟವನ್ನಾಗಿ ಬದಲಾಯಿಸಿದೆ. ಅಂತೆಯೇ ಈ ಉದುರುತ್ತಿರುವ ಕೂದಲು ನಿಮ್ಮ ಬದುಕಿನಲ್ಲಿ ಬರಲಿರುವ ಅದೃಷ್ಟದ ಸಂಕೇತವಾಗಿದೆ ಎಂಬುದಾಗಿ ಇಲ್ಲಿ ತಿಳಿಸಲಾಗಿದೆ. ಹೌದು ಅದಕ್ಕಾಗಿಯೇ ಇಂದಿಲ್ಲಿ ನಿಮ್ಮ ಕೂದಲುದುರುವಿಕೆಯ ಚಿಂತೆಯನ್ನು ಗಂಭೀರವಾಗಿ ಪರಿಗಣಿಸದಿರಿ ಎಂಬುದಾಗಿಯೇ ನಾವು ಕಿವಿಮಾತನ್ನು ಹೇಳುತ್ತಿದ್ದೇವೆ.
ಕಡಿಮೆ ಕೂದಲು
ಸಾಮುದ್ರಿಕಾ ಶಾಸ್ತ್ರ ಹೇಳುವಂತೆ ಕಡಿಮೆ ಕೂದಲು ಇರುವುದಕ್ಕೆ ಕೆಲವೊಂದು ಕಾರಣಗಳಿವೆಯಂತೆ. ಜನ್ಮತಃ ಕಡಿಮೆ ಕೂದಲನ್ನು ಪಡೆದಿರುವುದು ಒಂದು ಕಾರಣವಾಗಿದೆ. ಇದನ್ನು ಉತ್ತಮವೆಂದು ಪರಿಗಣಿಸುವುದಿಲ್ಲ. ಇದರಿಂದ ವ್ಯಕ್ತಿಯು ಕೆಲವೊಂದು ಕಾಯಿಲೆಗಳಿಂದ ಬಳಲು ಸಾಧ್ಯತೆ ಇರುತ್ತದೆ. ಅಂತೆಯೇ ಇವರು ಕಡಿಮೆ ಆರೋಗ್ಯವಂತರೂ ಆಗಿರುತ್ತಾರೆ. ಇವರು ಕಡಿಮೆ ಜವಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ ಅಂತೆಯೇ ಹಿಡಿದ ಕಾರ್ಯವನ್ನು ಪೂರ್ಣಗೊಳಿಸುವುದಿಲ್ಲ. ಯಾವುದೇ ಕೆಲಸವನ್ನು ಗಂಭೀರವಾಗಿ ಇವರು ಪರಿಗಣಿಸುವುದಿಲ್ಲ. ಅಂತೆಯೇ ನೀವು ಹೆಚ್ಚು ಕೂದಲುದುರುವಿಕೆಯ ಸಮಸ್ಯೆಗೆ ಒಳಗಾಗುತ್ತಿದ್ದೀರಿ ಎಂದಾದಲ್ಲಿ ನಿಮಗೆ ಭವಿಷ್ಯದಲ್ಲಿ ಅದೃಷ್ಟ ಬರಲಿದೆ ಎಂದರ್ಥವಾಗಿದೆ. ಅಂತೆಯೇ ಕೂದಲುದುರುವ ಸಮಸ್ಯೆಯನ್ನು ನಿಮಗೆ ನಿಯಂತ್ರಿಸಲು ಆಗುತ್ತಿಲ್ಲ ಎಂದಾದಲ್ಲಿ ನಿಮಗೆ ಬರಲಿರುವ ಸಂತಸಕ್ಕೆ ಪಾರವೇ ಇಲ್ಲ ಎಂದಾಗಿದೆ. ಒಮ್ಮೆಲೇ ಕೂದಲುದುರುತ್ತಿದೆ ಎಂದಾದಲ್ಲಿ ಅದೃಷ್ಟ ನಿಮ್ಮನ್ನು ಹುಡುಕಿ ಬರಲಿದೆ ಎಂದಾಗಿದೆ.
ನಿಮ್ಮ ಬಕ್ಕತಲೆ
ನೀವು ಬಕ್ಕತಲೆಯನ್ನು ಹೊಂದುತ್ತಿದ್ದೀರಿ ಎಂದಾದಲ್ಲಿ ನೀವು ಶೀಘ್ರದಲ್ಲಿಯೇ ಶ್ರೀಮಂತರಾಗುತ್ತೀರಿ ಎಂದಾಗಿದೆ. ತಲೆಯ ಮಧ್ಯಭಾಗದಲ್ಲಿ ಕೂದಲು ಉದುರುತ್ತಿದೆ ಎಂದಾದಲ್ಲಿ ಶಾಶ್ವತ ಧನ ಲಾಭ ಎಂಬ ಸೂಚನೆ ಇದಾಗಿದೆ. ಹಣವು ನಿಮ್ಮ ಬಳಿ ದೀರ್ಘ ಕಾಲದವರೆಗೆ ಇರುತ್ತದೆ ಎಂಬುದನ್ನು ಇದು ಸೂಚಿಸುತ್ತದೆ. ನಿಮ್ಮ ಜೀವನದಲ್ಲಿ ಧನಾತ್ಮಕ ಬದಲಾವಣೆಯನ್ನು ನೀವು ಎದುರು ನೋಡುತ್ತೀರಿ. ನಿಮ್ಮ ಜೀವನದಲ್ಲಿ ಸಂತಸ ಮತ್ತು ಲಾಭ ಬರಲಿದೆ. ಎಂಬುದಾಗಿ ಶಾಸ್ತ್ರದಲ್ಲಿ ತಿಳಿಸಲಾಗಿದೆ.
ತಲೆಯ ಬದಿಯಿಂದ ಕೂದಲುದುರುವಿಕೆ
ಕೂದಲಿನ ಬದಿಯಿಂದ ಅಂದರೆ ಹಣೆಯ ಸಮೀಪದಿಂದ ಕೂದಲು ಉದುರುತ್ತಿದೆ ಎಂದಾದಲ್ಲಿ ನಿಮಗೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದಾಗಿದೆ. ಆದರೆ ಇದನ್ನು ಸಾಧಿಸಲು ಹೆಚ್ಚು ಸಮಯ ನಿಮಗೆ ಬೇಕಾಗುತ್ತದೆ. ತಲೆಯ ಮೇಲ್ಭಾಗದಿಂದ ಕೂದಲು ಉದುರುತ್ತಿದೆ, ಅಂದರೆ ಬದಿಯಿಂದ ಕೂದಲುದುರುತ್ತಿದೆ ಎಂದಾದಲ್ಲಿ ನಿಮಗೆ ಯಶಸ್ಸನ್ನು ಆನಂದಿಸಲು ಸಾಧ್ಯವಿಲ್ಲ ಎಂದಾಗಿದೆ. ಅದಾಗ್ಯೂ ಯಶಸ್ಸು ಕೊಂಚ ನಿಧಾನವಾಗಿ ನಿಮ್ಮ ಜೀವನದಲ್ಲಿ ಕಾಲಿಡಬಹುದು. ಇಂತಹವರು ತಮಗೆ ಮಾತ್ರವಲ್ಲದೆ ತಮ್ಮ ನಂತರದವರಿಗೂ ಯಶಸ್ಸನ್ನು ಇರಿಸುತ್ತಾರೆ. ಇವರು ತಮ್ಮ ನಂತರದ ತಲೆಮಾರಿಗೂ ತಾವು ಗಳಿಸಿದ ಸಂಪತ್ತನ್ನು ಹಾಗೆಯೇ ಇಡುತ್ತಾರೆ ಎಂದಾಗಿದೆ.
ಸೀಳು ಕೂದಲು
ಸೀಳು ಕೂದಲು ವ್ಯಕ್ತಿಯ ಗೊಂದಲಮಯ ನಿರ್ಧಾರವನ್ನು ತಿಳಿಸುತ್ತದೆ. ಇವರ ಜೀವನದಲ್ಲಿ ಯಶಸ್ಸು ಕೊಂಚ ನಿಧಾನವಾಗಿ ಬರುತ್ತದೆ. ದುರ್ಬಲ ಆರೋಗ್ಯವನ್ನು ಇವರು ಹೊಂದಿರುತ್ತಾರೆ.
ದಪ್ಪ/ತೆಳು ಕೂದಲು
ಸಾಮುದ್ರಿಕಾ ಶಾಸ್ತ್ರದಲ್ಲಿ ಈ ರೀತಿಯ ಕೂದಲನ್ನು ಹೊಂದಿರುವವರು ದಯಾಪರರು, ದೀನರು, ಪ್ರೀತಿಯುಳ್ಳವರು, ಸೂಕ್ಷ್ಮ ಮನಸ್ಸನ್ನು ಹೊಂದಿರುವವರೂ ಆಗಿದ್ದಾರೆ. ದಪ್ಪನೆಯ ಕೂದಲು ಉತ್ತಮ ಆರೋಗ್ಯದ ಸಂಕೇತವಾಗಿದೆ ಮತ್ತು ಇಂತಹ ವ್ಯಕ್ತಿಗಳು ಜೀವನದಲ್ಲಿ ಪುಟಿದೇಳುವ ಜೀವನೋತ್ಸಾಹವನ್ನು ಹೊಂದಿರುತ್ತಾರೆ.
ಒರಟು ಮತ್ತು ಒಣ ಕೂದಲು/ಮೃದು ಹಾಗೂ ಹೊಳೆಯುವ ಕೂದಲು
ನಿಮ್ಮ ಕೂದಲು ಒಣ ಮತ್ತು ಒರಟಾಗುತ್ತಿದೆ ಎಂದಾದಲ್ಲಿ ನಿಮ್ಮ ಜೀವನದಲ್ಲಿ ಬರಲಿರುವ ಕಷ್ಟದ ಸೂಚನೆ ಇದಾಗಿದೆ. ಆದರೆ ಇನ್ನೊಂದೆಡೆ ನಿಮ್ಮ ಕೂದಲು ನುಣುಪಾಗಿ ರೇಷ್ಮೆಯಂತೆ ಕಂಗೊಳಿಸುತ್ತಲೂ ಇರಬಹುದು. ಕೂದಲು ಹೀಗೆ ಒಮ್ಮೆಲೆ ಬದಲಾವಣೆಗೆ ಒಳಗಾಗುವುದು ನಿಮ್ಮ ಜೀವನದಲ್ಲಿ ಬರುವ ಉನ್ನತಿಯನ್ನು ಸಂಕೇತಿಸುತ್ತದೆ.



Click it and Unblock the Notifications
