Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ಸೂಚನೆಗೆ ಭಯಪಡಲೇ ಬೇಕು...ಯಾಕಂದ್ರೆ ಇದು ಸಾವಿನ ಸೂಚನೆ!!
ಮನುಷ್ಯನ ಹುಟ್ಟು ಸಾವು ಮೇಲ್ನೋಟಕ್ಕೆ ನೈಸರ್ಗಿಕವಾದ್ದು ಎನಿಸಬಹುದು. ಆದರೆ ಅದು ದೈವದತ್ತವಾದದ್ದು ಎನ್ನುವುದನ್ನು ನಾವು ನಂಬಲೇ ಬೇಕು. ಈ ಪ್ರಪಂಚ ಬ್ರಹ್ಮ, ವಿಷ್ಣು, ಮಹೇಶ್ವರ ಎಂಬ ಮೂರು ದೇವತೆಗಳ ಸೃಷ್ಟಿ. ಇಲ್ಲಿ ಏನೇ ನಡೆದರೂ ಅದು ಬ್ರಹ್ಮನ ಸೃಷ್ಟಿ, ವಿಷ್ಣುವಿನ ಪಾಲನೆ ಹಾಗೂ ಶಿವನ ಲಯದ ಕಾರ್ಯದ ಅನುಸಾರ ನಡೆಯುತ್ತದೆ. ಈ ಕುರಿತು ಶಿವ ಪುರಾಣದ ಪವಿತ್ರ ಗ್ರಂಥವು ಹಲವಾರು ನೀತಿ ನಿಯಮಗಳನ್ನು ಸಾರುತ್ತದೆ.
ಪುರಾಣದ ಪ್ರಕಾರ ಪಾರ್ವತಿ ದೇವಿಯು ಒಮ್ಮೆ ವ್ಯಕ್ತಿಯ ಸಾವನ್ನು ಊಹಿಸುವ ಸೂಚನೆಗಳು ಅಥವಾ ಚಿಹ್ನೆಗಳ ಬಗ್ಗೆ ಶಿವನನ್ನು ಕೇಳಿದಳು. ಪಾರ್ವತಿಯ ಪ್ರಶ್ನೆಗೆ ಪ್ರತ್ಯುತ್ತರವಾಗಿ ಕೆಲವು ಜ್ಞಾನದ ವಿವರಣೆ ನೀಡಿದನು. ಆ ವಿವರಣೆ ವ್ಯಕ್ತಿಯು ತನ್ನ ಸಾವಿಗೂ ಮುಂಚೆ ಯಾವೆಲ್ಲ ಲಕ್ಷಣಗಳನ್ನು ಹೊಂದಿರುತ್ತಾನೆ ಎನ್ನುವುದಾಗಿತ್ತು ಎನ್ನಲಾಗುತ್ತದೆ. ಆ ವಿಚಾರದಲ್ಲಿ ಸೂಚಿಸಿದ ಸೂಚನೆಗಳ ವಿವರ ತಿಳಿಯಬೇಕೆನ್ನುವ ಬಯಕೆ ಇದ್ದರೆ ಮುಂದೆ ಓದಿ....
ವಿಶೇಷ ಸೂಚನೆ: ಈ ಸೂಚನೆಗಳು ಗ್ರಂಥಗಳಲ್ಲಿ ಕಂಡುಬಂದ ವಿಷಯಗಳನ್ನು ಆಧರಿಸಿದ್ದೇ ಹೊರತು ಯಾವುದೇ ವ್ಯಕ್ತಿಯ ವೈಯಕ್ತಿಕ ಅನುಭವದಿಂದಲ್ಲ...

ಸೂಚನೆ-1
ಮನುಷ್ಯನ ಬಾಯಿ, ಕಿವಿ, ಕಣ್ಣು ಮತ್ತು ನಾಲಿಗೆ ಇವುಯಾವುದೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದಾದರೆ ವ್ಯಕ್ತಿಗೆ 6 ತಿಂಗಳೊಳಗೆ ಸಾವು ಬರುವುದಂತೆ!

ಸೂಚನೆ-2
ವ್ಯಕ್ತಿಯು ಎಣ್ಣೆಯಲ್ಲಿ, ನೀರಿನಲ್ಲಿ ಅಥವಾ ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ನೋಡಿದಾಗ, ಅದು ಕಾಣದಿದ್ದರೆ ಆತ ತನ್ನ ಜೀವನವನ್ನು 6 ತಿಂಗಳಿಗಿಂತ ಹೆಚ್ಚುಕಾಲ ನಡೆಸಲಾರ.

ಸೂಚನೆ-3
ವ್ಯಕ್ತಿಗೆ ಅಚಾನಕ್ ಎನ್ನುವ ರೀತಿಯಲ್ಲಿ ಜಗತ್ತೆಲ್ಲಾ ನೀಲಿಮಯವಾಗಿ ಕಂಡರೆ, ಅವನ ಸಾವು ಒಂದು ತಿಂಗಳಲ್ಲೇ ಬರುವುದು.

ಸೂಚನೆ-4
ವ್ಯಕ್ತಿ ಓರ್ವನಿಗೆ ಅವನ ನೆರಳಲ್ಲಿ ತಲೆಯ ಭಾಗ ಕಾಣದಿದ್ದರೆ, ಅದು ಸಾವಿನ ಸೂಚನೆಯಾಗುತ್ತದೆ.

ಸೂಚನೆ-5
ಯಾರಿಗೆ ತಮ್ಮ ನೆರಳು ಕಾಣುವುದಿಲ್ಲವೋ ಅಥವಾ ತಲೆ ಇಲ್ಲದ ನೆರಳು ಕಾಣುತ್ತದೆಯೋ ಅವರು ಒಂದು ತಿಂಗಳಿಗಿಂತ ಹೆಚ್ಚು ಕಾಲ ಬದುಕುಳಿಯಲಾರರು.

ಸೂಚನೆ-6
ಹದ್ದು, ಪಾರಿವಾಳ ಮತ್ತು ಕಾಗೆ ಇವುಗಳಲ್ಲಿ ಯಾವುದಾದರೊಂದು ತಲೆಯಮೇಲೆ ಕುಳಿತುಕೊಂಡರೆ ಅದು ಸಾವಿನ ಸೂಚನೆಯನ್ನು ನೀಡಿದಂತೆ.

ಸೂಚನೆ-7
ಇದ್ದಕ್ಕಿದ್ದಂತೆಯೇ ದೇಹವು ಹೆಚ್ಚು ಬಿಳುಪು, ಹಳದಿ ಅಥವಾ ಕೆಂಪು ಕಲೆಗಳಿಂದ ಆವರಿಸಿಕೊಂಡರೆ, ವ್ಯಕ್ತಿ 6 ತಿಂಗಳೊಳಗೆ ಸಾಯುತ್ತಾನಂತೆ!

ಸೂಚನೆ-8
ಗಂಟಲು ಮತ್ತು ನಾಲಿಗೆ ಪದೇ ಪದೇ ಒಣಗಲು ಪ್ರಾರಂಭಿಸಿದರೆ ಅದು ಸಾವಿನ ಶಕುನವನ್ನು ಹೇಳಿದಂತೆ.

ಸೂಚನೆ-9
ಎಂದು ಸೂರ್ಯನ ಕಿರಣ, ಚಂದ್ರನ ಕಿರಣ ಅಥವಾ ಬೆಂಕಿಯನ್ನು ನೋಡುವ ಶಕ್ತಿಯನ್ನು ಕಳೆದುಕೊಂಡಿರುತ್ತೀರೋ, ಆಗ ಸಾವು ನಿಮ್ಮ ಸುತ್ತ ಒಂದು ಮೂಲೆಯಲ್ಲಿ ನಿಂತಿದೆ ಎಂದು ಪರಿಗಣಿಸಬಹುದು.

ಸೂಚನೆ-10
ವ್ಯಕ್ತಿಗೆ ಉತ್ತರ ದಿಕ್ಕಿನ ನಕ್ಷತ್ರ ಕಾಣದಿರುವುದು ಅಥವಾ ಆಕಾಶ, ಸೂರ್ಯ, ಚಂದ್ರರೆಲ್ಲರೂ ಕೆಂಪು ಬಣ್ಣದಲ್ಲಿ ಕಂಡರೆ ಇದು ಸ್ಪಷ್ಟವಾದ ಸಾವಿನ ಸೂಚನೆ ಎನ್ನಲಾಗುತ್ತದೆ.



Click it and Unblock the Notifications
