Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಹಿಂದೂ ಧರ್ಮದಲ್ಲಿ ಮೆಹಂದಿ ಶಾಸ್ತ್ರದ ಅರ್ಥವೇನು?
ಹಿಂದೂ ಮದುವೆಯಲ್ಲಿ ಅನೇಕ ರೀತಿಯ ಸಂಪ್ರದಾಯಗಳನ್ನು ಕಾಣಬಹುದು. ಅದರಲ್ಲೊಂದು ಮದರಂಗಿ ಸಂಪ್ರದಾಯ. ಮದುವೆಯ ಹಿಂದಿನ ದಿನ ಮದರಂಗಿ ಶಾಸ್ತ್ರ ಮಾಡಿ ಮದು ಮಗ ಮತ್ತು ಮದು ಮಗಳ ಕೈಗೆ ರಂಗೋಲಿಯನ್ನು ಹಾಕಲಾಗುವುದು. ಈ ಸಂಪ್ರದಾಯ ಹಿಂದಿನ ಕಾಲದಿಂದಲೂ ಇದೆ.
ಹಿಂದೆಯೆಲ್ಲಾ ಮೆಹಂದಿಯಿಂದ ಚುಕ್ಕಿಗಳನ್ನು ಹಾಕುತ್ತಿದ್ದರು. ಈಗ ಮದುವೆ ಶಾಸ್ತ್ರ ಅಂತ ಮಾಡಿ ಮಾಡಿ ನಂತರ ಆಕರ್ಷಕ ವಿನ್ಯಾಸದಲ್ಲಿ ಮೆಹಂದಿಯನ್ನು ಹಾಕಲಾಗುವುದು. ಈ ಮೆಹಂದಿ ಸಂಪ್ರದಾಯದ ಉದ್ದೇಶವೇನು ಎಂದು ಈ ಕೆಳಗೆ ಹೇಳಲಾಗಿದೆ:

ಮದುವೆಯ ಅನುಬಂಧ: ಮೆಹಂದಿ ಮದುವೆಯ ಸಂಬಂಧದ ಸಂಕೇತವಾಗಿದೆ. ಮೊದಲು ಮೆಹಂದಿಯನ್ನು ಮದುವೆಯಲ್ಲಿ ಮಾತ್ರ ಹಾಕಲಾಗುತ್ತಿತ್ತು. ಕಾಲ ಬದಲಾದಂತೆ ಫ್ಯಾಷನ್ ಹೆಸರಿನಲ್ಲಿ ಮೆಹಂದಿಯನ್ನು ಹಾಕಲಾಗುತ್ತಿದೆ.
ಪ್ರೀತಿಯ ಬಣ್ಣ: ಮೆಹಂದಿ ಪೋಷಕರ ಪ್ರೀತಿಯ ಪ್ರತೀಕವಾಗಿದೆ. ಮೆಹಂದಿ ತುಂಬಾ ಕಪ್ಪಾದರೆ ಗಂಡನ ತಾಯಿ ಸೊಸೆಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾಳೆ ಎಂಬುದರ ಸಂಕೇತ ಎಂಬ ನಂಬಿಕೆ ಅನೇಕರಲ್ಲಿದೆ.
ಪವಿತ್ರ: ಮೆಹಂದಿ ಶುಭದ ಸಂಕೇತವಾಗಿದೆ. ಉತ್ತರ ಭಾರತದ ಕಡೆಗೆ ಕೆಲವೊಂದು ವಿಶೇಷ ಹಬ್ಬಗಳಲ್ಲಿ ಉದಾಹರಣೆಗೆ ಕರ್ವಾ ಚೌತ್ ಗೆ ಮದುವೆಯಾದ ಹೆಣ್ಣು ಮಕ್ಕಳು ಮೆಹಂದಿ ಹಚ್ಚದಿದ್ದರೆ ಅದು ಶಾಪ ದೊರೆಯುತ್ತದೆ ಎಂಬ ನಂಬಿಕೆ ಇದೆ.
ಸಂತೋಷ ಮತ್ತು ಸಂಸ್ಕೃತಿ: ಮೆಹಂದಿ ಶಾಸ್ತ್ರವನ್ನು ಹೆಚ್ಚಿನವರು ತಮ್ಮ ಮದುವೆಯಲ್ಲಿ ತುಂಬಾ ಅದ್ಧೂರಿಯಿಂದ ಮಾಡುತ್ತಾರೆ.
ಸಹೋದರನ ರಕ್ಷಣೆಗೆ: ಈ ಪದ್ಧತಿ ಹಿಂದೂ ಧರ್ಮದ ಅನೇಕ ಪಂಗಡಗಳಲ್ಲಿ ಕಂಡು ಬರುತ್ತದೆ. ಮದು ಮಗಳಿಗೆ ಸಹೋದರ ಇದ್ದರೆ ಅಣ್ಣ-ತಂಗಿಯ ಸಂಬಂಧ ಚೆನ್ನಾಗಿರಲಿ ಎಂದು ಸಹೋದರನ ಕೈಯ ಹಿಂಬದಿಗೆ ಮೆಹಂದಿಯನ್ನು ಹಚ್ಚಲಾಗುವುದು.
ಮದುವೆಯಲ್ಲಿ ಮೆಹಂದಿ ಶಾಸ್ತ್ರ ಸಂತೋಷ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಆಚರಣೆಯಾಗಿದೆ.



Click it and Unblock the Notifications
