Latest Updates
-
ಎವೆಲಿನ್ ಶರ್ಮಾ ವಿಚ್ಛೇದನ: ಮಕ್ಕಳ ಭವಿಷ್ಯಕ್ಕಾಗಿ ಈ ಜೋಡಿ ಆರಿಸಿದ ಹೊಸ ದಾರಿ ಯಾವುದು? -
ಬಿಸಿಲ ಧಗೆಗೆ ತಂಪಾದ ಗುಡ್ ನ್ಯೂಸ್: ಮೇ 8 ರಿಂದ ಶುರುವಾಗಲಿದೆ ಗ್ರೇಟ್ ಸಮ್ಮರ್ ಸೇಲ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಪದ್ಧತಿಯಿಂದ ಇಡೀ ದಿನ ಇರಿ ಫ್ರೆಶ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಕೂಲ್ ಆಗಿರಿ! -
ಬಿಸಿಗಾಳಿಯ ಅಬ್ಬರ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ! -
ಹೊಸ ಜೀವನ ಆರಂಭಿಸುವ ಮುನ್ನ ಎಚ್ಚರ: ವಿಚ್ಛೇದನ ಮತ್ತು ಕಾನೂನು ಹಕ್ಕುಗಳ ಬಗ್ಗೆ ಹೈಕೋರ್ಟ್ ಹೇಳಿದ್ದೇನು? -
ಬಿರುಗಾಳಿ ಮತ್ತು ಬಿಸಿಲ ಬೇಗೆ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ನಿಮ್ಮ ಜೀವ ಉಳಿಸುವ ಸರಳ ಮನೆಮದ್ದುಗಳಿವು! -
ಬಿಸಿಲಿನ ಬೇಗೆಗೆ ತತ್ತರಿಸಿದ್ದೀರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಕೂಲಿಂಗ್ ಹ್ಯಾಕ್ಸ್ ಮಿಸ್ ಮಾಡ್ಬೇಡಿ! -
ಬದಲಾಗುತ್ತಿರುವ ಹವಾಮಾನ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಕಾದಿದೆ ಅಪಾಯ!
ಶನಿ ಸಾಡೆ ಸಾತಿ 2023: ಯಾವ ರಾಶಿಗೆ ಶನಿ ಸಾಡೆಸತಿ ಆರಂಭವಾಗಲಿದೆ?
ಕರ್ಮ, ನ್ಯಾಯದ ದೇವರು ಶನಿ ಎಲ್ಲರಿಗೂ ಅವರ ಕರ್ಮಕ್ಕನುಸಾರವಾಗಿ ಪ್ರತಿಫಲ ಕೊಡುತ್ತಾನೆ. ಈ ಶನಿಯ ಕೆಟ್ಟ ದೃಷ್ಟಿ ಬಿದ್ದರೆ ನಕಾರಾತ್ಮಕ ಫಲಿತಾಂಶಗಳು ಆರಂಭವಾಗುತ್ತದೆ. ಅದನ್ನೇ ಜ್ಯೋತಿಶಾಸ್ತ್ರದಲ್ಲಿ ಶನಿ ಸಾಡೇಸತಿ ಎನ್ನಲಾಗುತ್ತದೆ. ಶನಿ ಸಾಡೇ ಸತಿಯ ಪರಿಣಾಮ ತುಂಬಾ ಅಪಾಯಕಾರಿ. ಶನಿ ಸಾಡೇಸತಿ ಬಾಧಿತರಾದವರಿಗೆ ಜೀವನದಲ್ಲಿ ಹಲವಾರು ರೀತಿಯ ಕಷ್ಟಗಳು ಬರುತ್ತಲೇ ಇರುತ್ತವೆ.
ನೂತನ ವರ್ಷದಲ್ಲಿ 2023ಯಲ್ಲಿ ಶನಿ ಸಾಡೇ ಸತಿ ಯಾವ ರಾಶಿಗೆ ಸಂಚರಿಸಲಿದೆ, ಯಾವ ದಿನ ಹಾಗೂ ಮುಹೂರ್ತ ಶನಿ ಸಾಡೆ ಸತಿ ಬದಲಾಗಲಿದೆ, ಸಾಡೆ ಸತಿಯಿಂದ ಮುಕ್ತಿ ಪಡೆಯಲು ಪರಿಹಾರವೇನು ಮುಂದೆ ನೋಡೋಣ:

1. ಕುಂಭ ರಾಶಿಗೆ ಶನಿ ಸಂಚಾರ
ಜ್ಯೋತಿಷ್ಯದ ಪ್ರಕಾರ, ನ್ಯಾಯದ ದೇವರು ಶನಿ ದೇವ ಪ್ರಸ್ತುತ ಮಕರ ರಾಶಿಯ ಹಾದಿಯಲ್ಲಿ ಸಾಗುತ್ತಿದ್ದಾನೆ. ಶನಿಯು ಅಕ್ಟೋಬರ್ 23, 2022 ರಂದು ಮಕರ ರಾಶಿಯಲ್ಲಿ ಸಂಕ್ರಮಿಸುತ್ತಿದ್ದರು ಮತ್ತು ಜನವರಿ 17, 2023 ರವರೆಗೆ ಮಕರ ರಾಶಿಯಲ್ಲಿ ಇದ್ದು ಅದರ ನಂತರ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ.

2. ಮೀನ ರಾಶಿಯಲ್ಲಿ ಶನಿ ಸಾಡೇ ಸತಿ ಆರಂಭ
ಹಿಂದೂ ಪಂಚಾಂಗದ ಪ್ರಕಾರ, 2023 ಜನವರಿ 17ರಂದು, ಶನಿದೇವನು ಮಕರ ರಾಶಿಯನ್ನು ಬಿಟ್ಟು ರಾತ್ರಿ 8:02ಕ್ಕೆ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಕುಂಭ ರಾಶಿಯಲ್ಲಿ ಶನಿದೇವನ ಸಂಚಾರದಿಂದ ಮೀನ ರಾಶಿಯವರಿಗೆ ಶನಿಯ ಸಾಡೇ ಸತಿ ಆರಂಭವಾಗಲಿದೆ. ಸಾಡೇ ಸತಿಯ ಮೊದಲ ಹಂತವು ಮೀನ ರಾಶಿಯಲ್ಲಿ ಪ್ರಾರಂಭವಾಗುತ್ತದೆ. ಅಲ್ಲದೆ, ಕೆಲವು ರಾಶಿಚಕ್ರಗಳು ಶನಿಯ ಅರ್ಧ-ಅರ್ಧ ಧೈಯಾದಿಂದ ಸ್ವಾತಂತ್ರ್ಯವನ್ನು ಪಡೆಯುತ್ತವೆ.

3. ಶನಿಯ ಅರ್ಧ-ಅರ್ಧ ಧೈಯಾವನ್ನು ತಪ್ಪಿಸುವ ಪರಿಹಾರ
* ಶನಿಯ ಸಾಡೇಸಾತಿಯ ದುಷ್ಪರಿಣಾಮಗಳನ್ನು ತಪ್ಪಿಸಲು ಶನಿವಾರದಂದು ಎಳ್ಳು ಮತ್ತು ಬೇಳೆಕಾಳುಗಳನ್ನು ದಾನ ಮಾಡಬೇಕು. ಈ ದಾನವನ್ನು ಬಡವರು ಮತ್ತು ನಿರ್ಗತಿಕರಿಗೆ ನೀಡಬೇಕು.
* ಶನಿಯ ಸಾಡೇ ಸತಿಯ ದುಷ್ಪರಿಣಾಮಗಳನ್ನು ತಪ್ಪಿಸಲು ಹನುಮಾನ್ ಚಾಲೀಸಾವನ್ನು ಕನಿಷ್ಠ ಶನಿವಾರದಂದು ನಿಯಮಿತವಾಗಿ ಪಠಿಸಬೇಕು. ಹೀಗೆ ಮಾಡುವುದರಿಂದ ಏಳೂವರೆ ವರ್ಷಗಳ ಸಂಕಟಗಳು ಕಡಿಮೆಯಾಗುತ್ತವೆ.
* ಶನಿವಾರದಂದು ಕಪ್ಪು ಹಸು ಮತ್ತು ಕಪ್ಪು ನಾಯಿಗೆ ಊಟ ತಿನ್ನಿಸುವುದರಿಂದ ಶನಿಯ ಸಾಡೇ ಸತಿಯ ಪರಿಣಾಮ ಕಡಿಮೆಯಾಗುತ್ತದೆ.
* ಪ್ರತಿನಿತ್ಯ "ಶನಿ ಸ್ತೋತ್ರ" ಪಠಿಸಿ
ಓಂ ನೀಲಾಂಜನ ಸಮಾಭಾಸಂ ರವಿ ಪುತ್ರ ಯಾಮಗ್ರಜಂ ಛಾಯಾ ಮಾರ್ತಂಡ ಸಂಭೂತಂ ತಂ ನಮಾಮಿ ಶನೇಶ್ವರಂ
* ಪ್ರತಿನಿತ್ಯ "ಶನಿ ಕವಚ" ಪಠಿಸಿ
ಓಂ ಶ್ರೀಶನೈಶ್ಚರಃ ಪಾತು ಭಾಲಂ ಮೇ ಸೂರ್ಯನಂದನಃ |
ನೇತ್ರೇ ಛಾಯಾತ್ಮಜಃ ಪಾತು ಪಾತು ಕರ್ಣೌ ಯಮಾನುಜಃ ||
ನಾಸಾಂ ವೈವಸ್ವತಃ ಪಾತು ಮುಖಂ ಮೇ ಭಾಸ್ಕರಃ ಸದಾ |
ಸ್ನಿಗ್ಧಕಂಠಶ್ಚ ಮೇ ಕಂಠಂ ಭುಜೌ ಪಾತು ಮಹಾಭುಜಃ ||
ಸ್ಕಂಧೌ ಪಾತು ಶನಿಶ್ಚೈವ ಕರೌ ಪಾತು ಶುಭಪ್ರದಃ |
ವಕ್ಷಃ ಪಾತು ಯಮಭ್ರಾತಾ ಕುಕ್ಷಿಂ ಪಾತ್ವಸಿತಸ್ತಥಾ ||
ನಾಭಿಂ ಗ್ರಹಪತಿಃ ಪಾತು ಮಂದಃ ಪಾತು ಕಟಿಂ ತಥಾ |
ಊರೂ ಮಮಾಂತಕಃ ಪಾತು ಯಮೋ ಜಾನುಯುಗಂ ತಥಾ ||
ಪಾದೌ ಮಂದಗತಿಃ ಪಾತು ಸರ್ವಾಂಗಂ ಪಾತು ಪಿಪ್ಪಲಃ |
ಅಂಗೋಪಾಂಗಾನಿ ಸರ್ವಾಣಿ ರಕ್ಷೇನ್ಮೇ ಸೂರ್ಯನಂದನಃ ||

4. ಸಾಡೆ ಸಾತಿ ಎಂದರೇನು?
ಜ್ಯೋತಿಶಾಸ್ತ್ರದ ಪ್ರಕಾರ ಸಾಡೆ ಸಾತಿಯು ಜೀವನದಲ್ಲಿ ಬರುವ ಒಂದು ಹಂತವಾಗಿದೆ. ಮತ್ತೊಂದು ಅರ್ಥದಲ್ಲಿ ಮನುಷ್ಯದ ಜೀವನದಲ್ಲಿ ಎದುರಾಗುವ ಕಷ್ಟಕರ ಸಮಯ ಅಥವಾ ಸಾಕಷ್ಟು ಸವಾಲುಗಳು ಎದುರಾಗುವ ಸಮಯ ಎನ್ನಬಹುದು. ಒಬ್ಬ ವ್ಯಕ್ತಿಯು ಪ್ರಪಂಚದಲ್ಲಿ ಎಷ್ಟು ವರ್ಷಗಳ ಕಾಲ ಜೀವಂತವಾಗಿರುತ್ತಾನೆ ಎಂಬುದರ ಆಧಾರದ ಮೇಲೆ ಇದು ಖಂಡಿತವಾಗಿಯೂ ವ್ಯಕ್ತಿಯ ಸಂಪೂರ್ಣ ಜೀವಿತಾವಧಿಯಲ್ಲಿ ಕನಿಷ್ಠ ಒಂದು ಬಾರಿ ಅಥವಾ ಒಂದಕ್ಕಿಂತ ಹೆಚ್ಚು ಬಾರಿ ಬರುತ್ತದೆ.

5. ಶನಿ ಸಾಡೆ ಸತಿ ಹೇಗೆ ಪರಿಣಾಮ ಬೀರುತ್ತದೆ
ಶನಿ ಸಾಡೆ ಸಾತಿಯ ಚಕ್ರವು ಪ್ರತಿ 25 ವರ್ಷಗಳಿಗೊಮ್ಮೆ ಪುನರಾವರ್ತನೆಯಾಗುತ್ತಲೇ ಇರುತ್ತದೆ. ಶನಿ ಸಾಡೆ ಸಾತಿ ಇರುವವರ ಜೀವನದಲ್ಲಿ ಸಾಕಷ್ಟು ದುಃಖಗಳು, ಆತಂಕಗಳು, ವಿಳಂಬಗಳು ಇತ್ಯಾದಿಗಳು ಎದುರಾಗುತ್ತದೆ ಎಂದು ನಂಬಲಾಗಿದೆ. ಸಾಡೆಸಾತಿಯು 7.5 ವರ್ಷಗಳ ಅವಧಿಯಾಗಿದೆ. ಈ ಅವಧಿಯನ್ನು ಬಹಳ ಕೆಟ್ಟ ಸಮಯ ಎಂದು ಪರಿಗಣಿಸಲಾಗುತ್ತದೆ.

6. ಸಾಡೆಸಾತಿ ಅವಧಿಯಲ್ಲಿ ಈ ಕೆಲಸಗಳನ್ನು ಮಾಡಲೇಬೇಡಿ
ಸಾಡೆಸಾತಿಯು ನಮ್ಮ ಮನಸ್ಸಿನ ಮೇಲೆ ನೇರವಾಗಿ ನಕಾರಾತ್ಮಕವಾಗಿ ಪ್ರಭಾವ ಬೀರುವ ಅವಧಿಯಾಗಿದೆ. ಸಾಡೆಸಾತಿಯ ಹಂತದಲ್ಲಿ ನಾವು ಯಾವ ಚಟುವಟಿಕೆಗಳನ್ನು ತಪ್ಪಿಸಬೇಕು ಎಂಬುದನ್ನು ನೋಡೋಣ:-
* ಯಾವುದೇ ಸಾಹಸಮಯ ಕ್ರೀಡೆಗಳಲ್ಲಿ ಭಾಗವಹಿಸಬೇಡಿ.
* ಮನೆಯಲ್ಲಿ ಯಾವುದೇ ವಾದಗಳನ್ನು ತಪ್ಪಿಸಬೇಕು ಮತ್ತು ಸಾಡೆಸಾತಿಯ ಸಮಯದಲ್ಲಿ ಕೆಲಸದ ವಿಚಾರದಲ್ಲಿ ಸದಾ ಮುಂದಿರಬೇಕು.
* ಚಾಲನೆ ಮಾಡುವಾಗ ನಾವು ಅಜಾಗರೂಕ ಮನೋಭಾವವನ್ನು ತಪ್ಪಿಸಬೇಕು.
* ರಾತ್ರಿಗಳಲ್ಲಿ ಏಕಾಂಗಿಯಾಗಿ ಪ್ರಯಾಣಿಸುವುದನ್ನು ತಪ್ಪಿಸಬೇಕು.
* ಶನಿವಾರ ಮತ್ತು ಮಂಗಳವಾರ ಮದ್ಯಪಾನ ಮಾಡುವುದನ್ನು ತಪ್ಪಿಸಬೇಕು.
* ಶನಿವಾರ ಮತ್ತು ಮಂಗಳವಾರ ಕಪ್ಪು ಬಟ್ಟೆ ಅಥವಾ ಚರ್ಮದ ವಸ್ತುಗಳನ್ನು ಖರೀದಿಸುವುದನ್ನು ತಪ್ಪಿಸಬೇಕು.



Click it and Unblock the Notifications