For Quick Alerts
ALLOW NOTIFICATIONS  
For Daily Alerts

ಮನುಷ್ಯರು ಸತ್ತ ನಂತರ ದೆವ್ವಗಳಾಗಿ ನಮ್ಮನ್ನು ಏಕೆ ಕಾಡುತ್ತಾರೆ?

By Deepak M
|

ನಿಮಗೆ ಗೊತ್ತೇ, ಜನರು ಸತ್ತ ಮೇಲೆ ದೆವ್ವಗಳಾಗುತ್ತಾರೆ ಎಂದು? ಇದು ಸಾಮಾನ್ಯವಾಗಿ ಪ್ರಪಂಚದಲ್ಲಿರುವ ಎಲ್ಲಾ ಧರ್ಮಗಳಲ್ಲಿಯೂ ಇರುವ ನಂಬಿಕೆಗಳಲ್ಲಿ ಒಂದಾಗಿದೆ. ಇದಕ್ಕೆ ಹಲವಾರು ಕಾರಣಗಳು ಇವೆ. ಆದರೆ ನಾವಿಲ್ಲಿ ಭಾರತದಲ್ಲಿ ಸಾಮಾನ್ಯವಾಗಿ ಚಾಲ್ತಿಯಲ್ಲಿರುವ ಮತ್ತು ಎಲ್ಲಾ ಕಡೆ ನಂಬುವ ನಂಬಿಕೆಗಳನ್ನು ಮಾತ್ರ ಇಲ್ಲಿ ಚರ್ಚಿಸೋಣ. ನಾವೆಲ್ಲರು ಸಾಮಾನ್ಯವಾಗಿ ದೆವ್ವಗಳೆಂದರೆ ಭಯಪಡುತ್ತೇವೆ.

ಆ ಆಲೋಚನೆಯೇ ನಮ್ಮಲ್ಲಿ ನಡುವುಂಟು ಮಾಡುತ್ತದೆ. ನಾವೆಲ್ಲರು ಸತ್ತ ನಂತರ ದೆವ್ವಗಳಾಗುತ್ತೇವೆ ಎಂದು ನೆನೆದ ಕೂಡಲೆ, ಆ ಆಲೋಚನೆಯೇ ನಮ್ಮಲ್ಲಿ ಭಯ ಭೀತಿಗಳನ್ನುಂಟು ಮಾಡುತ್ತದೆ. ಸತ್ತ ಮೇಲೆ ಪ್ರತಿಯೊಬ್ಬರು ಸ್ವರ್ಗಕ್ಕೆ ಹೋಗಬೇಕೆಂದು ಬಯಸುತ್ತಾರೆ. ಭೂತಗಳೆಂದರೆ ಭಯಾನಕ ಮತ್ತು ಅಪವಿತ್ರ. ಅದಕ್ಕಾಗಿಯೆ ನಾವು ಧರ್ಮ ಭೇದವಿಲ್ಲದೆ ಪವಿತ್ರತೆಯನ್ನು ಮತ್ತು ಧರ್ಮದ ಸಿದ್ಧಾಂತಗಳನ್ನು ಅಪ್ಪಿಕೊಂಡಿದ್ದೇವೆ.

ಸತ್ತ ಮೇಲೆ ದೆವ್ವಗಳಾಗದೆ ಇರುವ ಸಲುವಾಗಿ ವಿಶ್ವದ ಪ್ರತಿಯೊಂದು ಧರ್ಮವು ಒಳ್ಳೆಯ ಮಾರ್ಗದಲ್ಲಿ ಜೀವನ ಸಾಗಿಸಲು ಹಲವಾರು ಮಾರ್ಗಗಳನ್ನು ನೀಡುತ್ತವೆ. ಹಾಗಾದರೆ ಸತ್ತ ನಂತರ ದೆವ್ವಗಳು ಏಕೆ ಆಗುತ್ತಾರೆ? ಎಂದು ತಿಳಿಯಲು ಮುಂದೆ ಓದಿ.....

ಸತ್ತ ನಂತರ ಮನುಷ್ಯರು ಏಕೆ ದೆವ್ವಗಳಾಗುತ್ತಾರೆ

ಸತ್ತ ನಂತರ ಮನುಷ್ಯರು ಏಕೆ ದೆವ್ವಗಳಾಗುತ್ತಾರೆ

ಈಡೇರದ ಕೋರಿಕೆಗಳು. ದೆವ್ವಗಳಾಗಲು ಇರುವ ನಂಬಿಕೆಗಳಲ್ಲಿ ಮೊಟ್ಟ ಮೊದಲನೆಯದು, ತಮ್ಮ ಕೋರಿಕೆಗಳು ಈಡೇರದೆ ಇದ್ದಲ್ಲಿ, ಅವರು ದೆವ್ವಗಳಾಗುತ್ತಾರೆ ಎಂಬುದು. ವಿಶ್ವದ ಬಹುತೇಕ ಎಲ್ಲಾ ಸಂಸ್ಕೃತಿಗಳಲ್ಲಿ ಈ ನಂಬಿಕೆ ಚಾಲ್ತಿಯಲ್ಲಿದೆ.

ಧಾರ್ಮಿಕ ನಂಬಿಕೆಗಳ ಕೊರತೆ

ಧಾರ್ಮಿಕ ನಂಬಿಕೆಗಳ ಕೊರತೆ

ಕೆಲವೊಂದು ನಂಬಿಕೆಗಳು ಮನುಷ್ಯ ಬದುಕಿದ್ದಾಗ ಧಾರ್ಮಿಕ ಆಚರಣೆಗಳನ್ನು ಮಾಡದಿದ್ದರೆ, ಅಂತಹವನು ಸತ್ತ ನಂತರ ದೆವ್ವವಾಗುತ್ತಾನಂತೆ. ಆದ್ದರಿಂದಲೆ ಬಹಳಷ್ಟು ಜನರು ಜೀವಂತವಿರುವಾಗ ಧಾರ್ಮಿಕ ಆಚರಣೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ ಮತ್ತು ಆದರ್ಶ ಪ್ರಾಯವಾದ ಜೀವನವನ್ನು ಸಾಗಿಸುತ್ತಾರೆ. ಆದ್ದರಿಂದಲೆ ನಮ್ಮ ಹಿರಿಯರು ನಮ್ಮನ್ನು ಧಾರ್ಮಿಕ ಪಥದಲ್ಲಿ ಸಾಗುವಂತೆ ಮತ್ತು ಮೋಕ್ಷವನ್ನು ಪಡೆಯುವಂತೆ ಹಿತ ವಚನಗಳನ್ನು ಹೇಳುತ್ತಿದ್ದುದು. ಸತ್ತ ನಂತರ ಮೋಕ್ಷವನ್ನು ಪಡೆಯಲು ಹಲವಾರು ಧರ್ಮಗಳಲ್ಲಿ ತಮ್ಮದೇ ಆದ ಮಾರ್ಗಗಳಿವೆ. ಪುರಾಣಗಳ ಪ್ರಕಾರ ಮೋಕ್ಷವನ್ನು ಪಡೆದ ವ್ಯಕ್ತಿಯು ಜೀವನ ಮತ್ತು ಸಾವಿನಿಂದ ಮುಕ್ತವಾಗಿರುತ್ತಾನಂತೆ. ಅಂತಹ ವ್ಯಕ್ತಿಯು ಮತ್ತೆ ದೆವ್ವ ಮತ್ತು ಭೂತವಾಗುವುದಿಲ್ಲ.

ದುರಾಸೆ ಮತ್ತು ಅನುಬಂಧಗಳು

ದುರಾಸೆ ಮತ್ತು ಅನುಬಂಧಗಳು

ದುಡ್ಡು, ಕಾಸು ಮತ್ತು ಸಂಪತ್ತುಗಳ ಮೇಲೆ ದುರಾಸೆ ಮತ್ತು ಅನುಬಂಧಗಳನ್ನು ಹೊಂದಿರುವ ವ್ಯಕ್ತಿಯು ಸತ್ತ ಮೇಲೆ ದೆವ್ವವಾಗುತ್ತಾನೆ. ಕೆಲವೊಂದು ತತ್ವಗಳ ಪ್ರಕಾರ ಸಂಪತ್ತು ಮತ್ತು ಮಧ್ಯದ ಮೇಲೆ ಮೋಹ ಇರುವವರು ಸತ್ತ ನಂತರ ದೆವ್ವಗಳಾಗುತ್ತಾರೆ. ಇದು ಸಹ ಈಡೇರದ ಕೋರಿಕೆಗಳಂತೆಯೇ, ಅನುಬಂಧಗಳು ಲೌಕಿಕ ಜಗತ್ತಿನಲ್ಲಿನ ಆನಂದಗಳನ್ನು ಅನುಭವಿಸಿಕೊಂಡಿರಲು ಆಸೆ ಹುಟ್ಟಿಸುತ್ತವೆ. ಇದೇ ಆಸೆಗಳು ನಮ್ಮನ್ನು ದೆವ್ವವಾಗಿ ಭೂಮಿಯ ಮೇಲೆ ಉಳಿಸುತ್ತವೆ. ನಾವು ಸತ್ತ ಮೇಲೆ ಏಕೆ ದೆವ್ವಗಳಾಗುತ್ತೇವೆ ಎಂದು ನಿಮಗೆ ಅರ್ಥವಾಯಿತೆ? ಇದಕ್ಕೆ ಹಲವಾರು ಮಹಾನ್ ತತ್ವಙ್ಞಾನಿಗಳು ನಮ್ಮನ್ನು ಕಾಮ, ದುರಾಸೆಗಳಿಂದ ದೂರವಿರುವಂತೆ ತಿಳಿಸಿದ್ದು. ಇದಕ್ಕೆ ಅಲ್ಲವೇ ಬುದ್ಧ ಹೇಳಿದ್ದು " ಆಸೆಯೇ ದುಃಖಕ್ಕೆ ಮೂಲ" ಎಂದು. ಆಸೆ ಬಿಡದಿದ್ದರು ಪರವಾಗಿಲ್ಲ, ದುರಾಸೆಯನ್ನು ಬಿಟ್ಟು ಬಿಡಿ.

ನಕಾರಾತ್ಮಕ ಆಲೋಚನಾ ವಿಧಾನ

ನಕಾರಾತ್ಮಕ ಆಲೋಚನಾ ವಿಧಾನ

ನಾವು ಸಹ ಸತ್ತ ನಂತರ ದೆವ್ವಗಳಾಗುತ್ತೇವೆಯೇ? ಯಾರು ನಕಾರಾತ್ಮಕವಾಗಿ ಆಲೋಚಿಸುತ್ತಾರೋ, ಅವರು ತಮ್ಮ ಮನಸ್ಸನ್ನು ವಿಷಮಯವನ್ನಾಗಿಸಿಕೊಳ್ಳುತ್ತಾರೆ. ಅಂತಹ ವಿಷಮಯ ಮನಸ್ಸಿನಲ್ಲಿ, ಕೋಪ, ದುಃಖ ಮತ್ತು ಖಿನ್ನತೆಗಳು ಮನೆ ಮಾಡಿರುತ್ತವೆ.

ನಕಾರಾತ್ಮಕ ಆಲೋಚನಾ ವಿಧಾನ

ನಕಾರಾತ್ಮಕ ಆಲೋಚನಾ ವಿಧಾನ

ಯಾವಾಗ ಒಬ್ಬ ವ್ಯಕ್ತಿಯು ತನ್ನ ಜೀವನವನ್ನು ನಕಾರಾತ್ಮಕತೆಯಿಂದ ತುಂಬಿ ಬಿಡುತ್ತಾನೋ, ಅವನು ಸತ್ತ ನಂತರ ದೆವ್ವವಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ. ಆದ್ದರಿಂದ ನಮ್ಮ ಸುತ್ತ-ಮುತ್ತ ಧನಾತ್ಮಕತೆಯನ್ನು ತುಂಬುವುದರಿಂದ, ನಮ್ಮ ಜೀವಂತ ದೇಹ ಮತ್ತು ನಾವು ಸತ್ತ ನಂತರ ಆತ್ಮಗಳಿಗೆ ಶಾಂತಿಯನ್ನು ಮತ್ತು ಮುಕ್ತಿಯನ್ನು ನೀಡಬಹುದು.

ಬಲವಾದ ಅಹಂ

ಬಲವಾದ ಅಹಂ

ನಿಜವಾಗಿಯೂ ಒಂದು ಬಲವಾದ ಅಹಂ ನಿಸ್ಸಂಶಯವಾಗಿ ನಾವು ಸತ್ತ ಮೇಲೆ ದೆವ್ವವನ್ನಾಗಿ ಮಾಡಬಲ್ಲದು. ಇದಕ್ಕೆ ಕಾರಣ ಭೂಮಿಯ ಮೇಲೆ ಇನ್ನೂ ಪೂರ್ಣವಾಗಿರದ ಕೆಲಸ ಕಾರ್ಯಗಳು ಇರುವುದು. ಆಗ ಆತ್ಮವು ತಾನು ಉಳಿಸಿರುವ ಕೆಲಸ ಕಾರ್ಯವನ್ನು ಮುಗಿಸಿ, ನಂತರ ಮುಕ್ತಿಯನ್ನು ಪಡೆಯಲು ಬಯಸುತ್ತದೆ. ಈ ಕಾರಣಕ್ಕಾಗಿಯೇ ಮನುಷ್ಯರು ದೆವ್ವಗಳಾಗುತ್ತಾರೆ.

English summary

Reasons Why People Become Ghosts After Death

Do you know why people become ghosts after death? Well, almost all cultures in this world believe in ghosts. There are so many reasons but let us discuss a few of the common beliefs which are widely believed in India. All of us are scared of ghosts.
X
Desktop Bottom Promotion