Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ರಕ್ಷಾ ಬಂಧನ 2022: ರಾಶಿಚಕ್ರದ ಪ್ರಕಾರ ನಿಮ್ಮ ಸಹೋದರಿಗೆ ಯಾವ ಉಡುಗೊರೆಯನ್ನು ನೀಡಬಹುದು
ಭ್ರಾತೃತ್ವ ಸಾರುವ ರಕ್ಷಾ ಬಂಧನವು ಪ್ರೀತಿ, ಸಂತೋಷವನ್ನು ಹರಡುವ, ಸಂಬಂಧದ ಮೌಲ್ಯವನ್ನು ತಿಳಿಸುವ ವಿಶಿಷ್ಟ ಹಬ್ಬವಾಗಿದೆ. ಈ ಶುಭ ದಿನದಂದು ಸಹೋದರಿಯರು ತಮ್ಮ ಸಹೋದರನಿಗೆ ಆರತಿ ಬೆಳಗಿ ಆಯಸ್ಸು, ಆರೋಗ್ಯ ಭಾಗ್ಯ ಸಿಗಲಿ ಎಂದು ಹಾರೈಸುತ್ತಾ ಮಣಿಕಟ್ಟಿನ ಮೇಲೆ ರಕ್ಷಾ ಸೂತ್ರವನ್ನು ಕಟ್ಟುತ್ತಾರೆ ಮತ್ತು ತಮ್ಮ ದೀರ್ಘಾಯುಷ್ಯ ಮತ್ತು ಸಮೃದ್ಧಿಗಾಗಿ ಭಗವಂತನಲ್ಲಿ ಪ್ರಾರ್ಥಿಸುತ್ತಾರೆ.
ಇದಕ್ಕೆ ಪ್ರತಿಯಾಗಿ, ಸಹೋದರರು ತಮ್ಮ ಸಹೋದರಿಯರನ್ನು ರಕ್ಷಿಸುವ ಭರವಸೆ ನೀಡುತ್ತಾರೆ ಮತ್ತು ಅವರಿಗೆ ಸುಂದರ ಉಡುಗೊರೆಗಳನ್ನು ನೀಡುತ್ತಾರೆ. ಪ್ರತಿ ಬಾರಿ ವಿಭಿನ್ನ ರೀತಿಯ ಉಡುಗೊರೆ ನೀಡಿ ಅವರನ್ನು ಮೆಚ್ಚಿಸಿದ್ದೀರಿ. ಈ ಬಾರಿ ಅವರ ರಾಶಿಗೆ ಹೊಂದಾಣಿಕೆ ಆಗುವಂಥ ಹಾಗೂ ಅವರಿಗೆ ಇಷ್ಟವಾಗುವಂಥ ಆಕರ್ಷಕ ಉಡುಗೊರೆಗಳ ಮೂಲಕ ನಿಮ್ಮ ಸಹೋದರಿಯನ್ನು ಮೆಚ್ಚಿಸಬಹುದು.
2022ರಲ್ಲಿ ರಕ್ಷಾಬಂಧನವನ್ನು ಆಗಸ್ಟ್ 11ರಂದು ಗುರುವಾರ ಆಚರಿಸಲಾಗುತ್ತದೆ. ಈ ರಕ್ಷಾ ಬಂಧನವನ್ನು ನಿಮ್ಮ ಸಹೋದರಿಗೆ ಏನು ಉಡುಗೊರೆಯಾಗಿ ನೀಡಬೇಕೆಂದು ನೀವು ಇನ್ನೂ ಯೋಚಿಸುತ್ತಿದ್ದೀರಾ?. ನಿಮ್ಮ ಸಹೋದರಿಗೆ ರಾಖಿ ಉಡುಗೊರೆಯನ್ನು ಆರಿಸುವ ಮೊದಲು ಅವರು ಹೊಂದಿರುವ ವ್ಯಕ್ತಿತ್ವ ಲಕ್ಷಣಗಳನ್ನು ಪರಿಗಣಿಸುವುದು ಮುಖ್ಯ. ಇದನ್ನು ಅವರ ರಾಶಿಚಕ್ರ ಹೇಳುತ್ತದೆ. ಅದರಂತೆ ಅವರ ರಾಶಿಚಕ್ರಕ್ಕೆ ಅನುಗುಣವಾಗಿ ಸಹೋದರಿಗೆ ರಾಖಿ ಉಡುಗೊರೆಗಳನ್ನು ಆಯ್ಕೆ ಮಾಡುವುದು ಆಕೆಯ ವ್ಯಕ್ತಿತ್ವಕ್ಕೆ ಪ್ರತಿಧ್ವನಿಸುವ ಮತ್ತು ಅವಳನ್ನು ಆಕರ್ಷಿಸುವ , ಅವರ ಮೊಗದಲ್ಲಿ ಮಂದಹಾಸ ಮೂಡಿಸುವ ಉಡುಗೊರೆ ಯಾವುದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ:

ಮೇಷ ರಾಶಿ
ಮೇಷ ರಾಶಿಯ ಮಹಿಳೆಯರು ಅತ್ಯಂತ ಧೈರ್ಯಶಾಲಿ ಗುಣದವರು. ಇವರಿಗೆ ಕಿವಿಯೋಲೆಗಳು ಅಥವಾ ಆಕರ್ಷಕ ನೆಕ್ಲೇಸ್ ಆಭರಣ ಅವಳ ನಿರ್ಭೀತ ಶೈಲಿಯನ್ನು ತೋರ್ಪಡಿಸುತ್ತದೆ. ಮೇಷ ರಾಶಿಯ ಮಹಿಳೆಯರು ವಿಷಯಗಳನ್ನು ಸಂಘಟಿಸುವ ಬಗ್ಗೆ ನಿರ್ದಿಷ್ಟವಾಗಿರುತ್ತಾರೆ. ಆದ್ದರಿಂದ, ನಿಮ್ಮ ಸಹೋದರಿಗೆ ಅಂಥಾ ವಸ್ತುಗಳು ಅಂದರೆ, ಕಾರ್ಡ್ ಹೋಲ್ಡರ್, ಹೆಡ್ ಫೋನ್ ಅಥವಾ ಫೋನ್ ಚಾರ್ಜರ್ ಒಟ್ಟಾರೆ ವಸ್ತುಗಳನ್ನು ವ್ಯವಸ್ಥಿತವಾಗಿ ಇಡಲು ಸಹಾಯ ಆಗುವಂಥ ವಸ್ತುಗಳು ಇಷ್ಟವಾಗುತ್ತದೆ.

ವೃಷಭ ರಾಶಿ
ವೃಷಭ ರಾಶಿಯ ಮಹಿಳೆಯರು ಹೆಚ್ಚು ಸಾಂಪ್ರದಾಯಿಕ ಸ್ವಭಾವದವರು, ಬಲವಾದ ಇಚ್ಛಾಶಕ್ತಿ ಮತ್ತು ಸ್ವತಂತ್ರರು. ಅವರಿಗೆಂದೇ ಪ್ರತ್ಯೇಕವಾಗಿ ಮಾಡಲ್ಪಟ್ಟ ವಸ್ತುಗಳು ಅವರಿಗೆ ಇಷ್ಟವಾಗುತ್ತದೆ. ಅಂದರೆ ಪ್ರತ್ಯೇಕವಾಗಿ ವಿನ್ಯಾಸಗೊಳಿಸಿದ ಕಾಫಿ ಮಗ್, ಆಕರ್ಷಕ ಫೋಟೋಗಳು ಅಥವಾ ಪರಿಮಳಯುಕ್ತ ಮೇಣದಬತ್ತಿಗಳು ಅವರಿಗೆ ನೀಡಬಹುದಾದ ಕೆಲವು ಉತ್ತಮ ಉಡುಗೊರೆಯಾಗಿದೆ.

ಮಿಥುನ ರಾಶಿ
ಮಿಥುನ ರಾಶಿಯ ಮಹಿಳೆಯರು ಶಾಂತ ಗುಣದವರು, ಸ್ನೇಹಪರರು ಮತ್ತು ಒಟ್ಟು ಸಾಮಾಜಿಕವಾಗ ತಮ್ಮನ್ನು ತೊಡಗಿಸಿಕೊಳ್ಳುವವರು. ಚಿಟ್ಟೆ. ಅವರು ಬುದ್ಧಿವಂತರು ಮತ್ತು ಉತ್ಸಾಹಿಗಳು, ಅವರು ಜೀವನವನ್ನು ಪೂರ್ಣವಾಗಿ ಬದುಕಲು ಇಷ್ಟಪಡುತ್ತಾರೆ. ನಿಮ್ಮ ಜೆಮಿನಿ ಸಹೋದರಿಯು ಒಂದು ಸೊಗಸಾದ ಕೈಚೀಲ, ಒಂದು ಒಳ್ಳೆಯ ಪುಸ್ತಕ ಅಥವಾ ಒಂದು ಮಿನಿ ಇನ್ಸ್ಟೆಂಟ್ ಕ್ಯಾಮೆರಾವನ್ನು ರಾಖಿ ಉಡುಗೊರೆಯಾಗಿ ಇಷ್ಟಪಡುತ್ತಾರೆ.

ಕರ್ಕ ರಾಶಿ
ಕರ್ಕ ರಾಶಿಯ ಮಹಿಳೆಯನ್ನು ಕಾಳಜಿಯುಳ್ಳವರು ಎಂದು ಹೇಳಲಾಗುತ್ತದೆ, ಅವರು ದುಬಾರಿ ಉಡುಗೊರೆಗಳ ಅಭಿಮಾನಿ ಅಲ್ಲ. ಆದ ಕಾರಣ ಕೈಯಿಂದಲೇ ಮಾಡಿದ ಉಡುಗೊರೆ, ಕಾರ್ಡ್ಸ, ಆಭರಣಗಳು, ವಾಲ್ ಹ್ಯಾಂಗಿಂಗ್ ನಂತಹ ಮನೆಯ ಅಲಂಕಾರ ವಸ್ತುಗಳು ಅಥವಾ ಹೂವಿನ ಬೊಕೆ ಕರ್ಕ ರಾಶಿಯ ಸಹೋದರಿಗೆ ಉಡುಗೊರೆಯಾಗಿ ಸೂಕ್ತ ಆಯ್ಕೆಯಾಗಿದೆ.

ಸಿಂಹ ರಾಶಿ
ಸಿಂಹ ರಾಶಿಯ ಹುಡುಗಿಯರು ಗಮನವನ್ನು ಪ್ರೀತಿಸುತ್ತಾರೆ ಮತ್ತು ಅವರು ಯಾವಾಗಲೂ ಲೈಮ್‌ಲೈಟ್‌ನಲ್ಲಿರಲು ಇಷ್ಟಪಡುತ್ತಾರೆ. ಕಾಸ್ಮೆಟಿಕ್ಸ್‌ಗಳು, ಕೆಲವು ಹೊಳೆಯುವ ಆಭರಣಗಳು ಅಥವಾ ಸುಗಂಧ ದ್ರವ್ಯವು ಸಿಂಹ ರಾಶಿಯ ಸಹೋದರಿಗೆ ರಕ್ಷಾ ಬಂಧನದ ಉಡುಗೊರೆಯಾಗಿ ಇಷ್ಟಪಡುತ್ತಾರೆ.

ಕನ್ಯಾ ರಾಶಿ
ಕನ್ಯಾ ರಾಶಿಯ ಹುಡುಗಿಯರು ಒಳ್ಳೆಯವರು ಮತ್ತು ಸ್ತ್ರೀತ್ವವನ್ನು ಸ್ವೀಕರಿಸುತ್ತಾರೆ, ಆದರೆ ಅವರು ಕಷ್ಟಪಟ್ಟು ಕೆಲಸ ಮಾಡುವವರು, ಸ್ವತಂತ್ರರು ಮತ್ತು ಸಂಘಟಿತರು. ಆದ್ದರಿಂದ, ಸಂಜೆಯ ಹೊತ್ತು ಒಂದು ಒಳ್ಳೆಯ ರೆಸ್ಟೋರೆಂಟ್, ಆಕರ್ಷಕ ಚಪ್ಪಲಿ, ಹೂವುಗಳು ಮತ್ತು ಚಾಕೊಲೇಟ್ ಕಾಂಬೊ ಕನ್ಯಾ ರಾಶಿಯ ಸಹೋದರಿಗೆ ಅಚ್ಚರಿಗೊಳಿಸಲು ಅತ್ಯುತ್ತಮ ಉಡುಗೊರೆಯಾಗಿದೆ.

ತುಲಾ ರಾಶಿ
ತುಲಾ ರಾಶಿಯ ಮಹಿಳೆಯರು ಹೆಚ್ಚು ಬುದ್ಧಿವಂತರು, ಅವರು ದಯೆ, ಕೆಲವೊಮ್ಮೆ ಅಸೂಯೆ ಇವರ ಗುಣವಾಗಿದೆ. ಇವರು ಹೊಸ ಜನರನ್ನು ಭೇಟಿ ಮಾಡಲು ಮತ್ತು ಜೀವನದಲ್ಲಿ ಹೊಸ ವಿಷಯಗಳನ್ನು ಪ್ರಯತ್ನಿಸಲು ಇಷ್ಟಪಡುತ್ತಾರೆ. ಪ್ರಯಾಣಕ್ಕೆ ಕರೆದೊಯ್ಯುವ ಆಫರ್, ಪ್ರಯಾಣಕ್ಕೆ ಬೇಕಾಗುವ ಅಗತ್ಯ ವಸ್ತುಗಳು, ಸಂಗೀತ, ನೃತ್ಯ ಕಾರ್ಯಕ್ರಮದ ಟಿಕೆಟ್‌ಗಳು ಅಥವಾ ಮ್ಯಾಗಜೀನ್ ಚಂದಾದಾರಿಕೆ ತುಲಾ ರಾಶಿಯವರಿಗೆ ಉತ್ತಮ ರಾಖಿ ಉಡುಗೊರೆಯಾಗಿರುತ್ತದೆ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಮಹಿಳೆಯರು ಭಾವೋದ್ರಿಕ್ತ ಮತ್ತು ದೃಢವಾದವರು. ಅವರು ಹೆಚ್ಚು ಭಾವನಾತ್ಮಕ ಮತ್ತು ತಮ್ಮ ಭಾವನೆಗಳನ್ನು ತಮ್ಮಲ್ಲಿಯೇ ಇರಿಸಿಕೊಳ್ಳಲು ಬಯಸುತ್ತಾರೆ. ಅವರು ತಮ್ಮದೇ ಆದ ವಸ್ತುಗಳನ್ನು ಆಯ್ಕೆ ಮಾಡಲು ಬಯಸುತ್ತಾರೆ. ಆದ್ದರಿಂದ, ಗಿಫ್ಟ್ ವೋಚರ್‌ಗಳು ಅಥವಾ ನಗದು ಉಡುಗೊರೆಗಳು ವೃಶ್ಚಿಕ ರಾಶಿಯ ಸಹೋದರಿಗೆ ರಕ್ಷಾ ಬಂಧನದ ಉತ್ತಮ ಉಡುಗೊರೆಗಳಾಗಿವೆ.

ಧನು ರಾಶಿ
ಧನು ರಾಶಿಯ ಮಹಿಳೆಯರು ಸಾಹಸಪ್ರಿಯರು, ಅವರು ಪ್ರಯಾಣಿಸಲು ಮತ್ತು ಹೊಸ ವಿಷಯಗಳನ್ನು ಅನ್ವೇಷಿಸಲು ಇಷ್ಟಪಡುತ್ತಾರೆ. ಅವರು ಜೀವನವನ್ನು ಪೂರ್ಣವಾಗಿ ಬದುಕಲು ನಿರ್ಧರಿಸುತ್ತಾರೆ. ನಿಮ್ಮ ಧನು ರಾಶಿ ಸಹೋದರಿಯು ರಾಖಿಯನ್ನು ಆನಂದಿಸಲು ವಿಲಕ್ಷಣ ಸ್ಥಳ, ಪ್ರಯಾಣದ ಟಿಕೆಟ್‌ಗಳು ಅಥವಾ ವಿಮಾನ ಟಿಕೆಟ್‌ಗಳು ಅದ್ಭುತ ಉಡುಗೊರೆ ಕಲ್ಪನೆಗಳಾಗಿವೆ.

ಮಕರ ರಾಶಿ
ಮಕರ ರಾಶಿಯ ಮಹಿಳೆಯರು ಗಮನ ಮತ್ತು ವೃತ್ತಿ ಆಧಾರಿತರು. ಮಕರ ರಾಶಿಯ ಮಹಿಳೆಗೆ ಶಾಪಿಂಗ್ ಮಾಡುವಾಗ, ವೈಯಕ್ತಿಕಗೊಳಿಸಿದ ದೈನಂದಿನ ಯೋಜಕಗಳು (ಪ್ಲಾನರ್), ಟೆಕ್ ಪರಿಕರಗಳು, ಗ್ಯಾಡ್ಜೆಟ್ಸ್ ಅಥವಾ ಕಾರ್ಡ್ ಹೋಲ್ಡರ್‌ಗಳಂತಹ ಸುಂದರ ಮತ್ತು ಕ್ರಿಯಾತ್ಮಕ ಉಡುಗೊರೆಗಳು ಇಷ್ಟವಾಗುತ್ತದೆ.

ಕುಂಭ ರಾಶಿ
ಕುಂಭ ರಾಶಿಯ ಮಹಿಳೆಯರು ಉದಾರ, ಚಮತ್ಕಾರಿ ಮತ್ತು ಸ್ವತಂತ್ರರು. ಅವರು ಕೂಡ ಸ್ವಲ್ಪ ಹಠಮಾರಿ ಸ್ವಭಾವ. ಇವರಿಗೂ ಸಹ ಅವರಿಗೆಂದೇ ಪ್ರತ್ಯೇಕವಾಗಿ ಮಾಡಲ್ಪಟ್ಟ ವಸ್ತುಗಳು ಅವರಿಗೆ ಇಷ್ಟವಾಗುತ್ತದೆ. ಹ್ಯಾಂಡ್‌ಬ್ಯಾಗ್, ವೈಯಕ್ತಿಕಗೊಳಿಸಿದ ದೀಪ ಅಥವಾ ಸುಂದರವಾದ ಸಸ್ಯಗಳಂತಹ ಸರಳ ಉಡುಗೊರೆಗಳು ಅವರನ್ನು ಸಂತೋಷಪಡಿಸುತ್ತದೆ.

ಮೀನ ರಾಶಿ
ಮೀನ ರಾಶಿಯ ಮಹಿಳೆಯರು ರೋಮ್ಯಾಂಟಿಕ್, ಸೂಕ್ಷ್ಮ ಮತ್ತು ಭಾವನಾತ್ಮಕರು. ಅವರು ಗಮನ ಕೇಂದ್ರವಾಗಿರಲು ಇಷ್ಟಪಡುತ್ತಾರೆ. ನಿಮ್ಮ ಮೀನ ಸಹೋದರಿಯನ್ನು ಮೆಚ್ಚಿಸಲು ಆಕರ್ಷಕವಾದ ಆಭರಣ, ಬಳೆ, ಕಾಲ್ಗೆಜ್ಜೆ ಉತ್ತಮ ಉಡುಗೊರೆ ಕಲ್ಪನೆಗಳು.



Click it and Unblock the Notifications











