Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸುಗ್ಗಿಯ ಕಾಲದ ಹಬ್ಬ ಪೊಂಗಲ್ (ಸಂಕ್ರಾಂತಿ)
ಜನವರಿ 14ಕ್ಕೆ ನಮ್ಮ ಕರ್ನಾಟಕದಲ್ಲಿ ಮಕರ ಸಂಕ್ರಾಂತಿ ಆಚರಿಸಿದರೆ ತಮಿಳು ನಾಡಿನಲ್ಲಿ ಪೊಂಗಲ್ ಆಚರಿಸುತ್ತಾರೆ. ಪೊಂಗಲ್ ಸುಗ್ಗಿಯ ಸಂಕೇತವಾಗಿದೆ. ಅಕ್ಕಿ, ಕಬ್ಬು, ದವಸ ಧಾನ್ಯ ಹೀಗೆ ಬೆಳೆದ ಬೆಳೆಗಳನ್ನು ಮನೆಗೆ ತರಲು ಇದು ಸೂಕ್ತ ಕಾಲವಾಗಿದೆ. ಈ ಲೇಖನದಲ್ಲಿ ಪೊಂಗಲ್ ಆಚರಣಿಯ ವೈವಿಧ್ಯತೆ ಬಗ್ಗೆ ಹೇಳಲಾಗಿದೆ.
ಪೊಂಗಲ್ ತಮಿಳು ನಾಡಿನಲ್ಲಿ ನಾಲ್ಕು ದಿನಗಳ ಕಾಲ ಆಚರಿಸಲಾಗುವುದು.

ಮೊದಲನೇ ದಿನದ ಆಚರಣೆ
ಇದನ್ನು ಭೋಗಿ ಆಚರಣೆಯೆಂದು ಆರಿಸಲಾಗುವುದು. ಮೊದಲನೇ ದಿನದ ಆಚರಣೆಯಲ್ಲಿ ಇಂಧ್ರ ದೇವತೆಯನ್ನು ಪೂಜಿಸಲಾಗುವುದು. ಈ ಸಮಯದಲ್ಲಿ ಬೆಳೆ ಸಂಪತ್ತು ಭರಿತವಾಗಿ ಬೆಳೆಯಲು ನೀರು ಮತ್ತು ಗಾಳಿಯನ್ನು ನೀಡಿದ್ದಕ್ಕೆ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಲಾಗುವುದು. ಈ ದಿನ ಮನೆಯಲ್ಲಿರುವ ಬೇಡದ ಸಾಮಾನುಗಳನ್ನು ತಂದು ಗುಡ್ಡೆ ಹಾಕಿ ಬೆಂಕಿ ಹಚ್ಚಿ ಭಸ್ಮ ಮಾಡುವ ಸಂಪ್ರದಾಯವಿದೆ.
ಎರಡನೇ ದಿನ
ಎರಡನೇ ದಿನವನ್ನು ಪೊಂಗಲ್ ಎಂದು ಆಚರಿಸಲಾಗುವುದು. ಈ ದಿನ ಪೊಂಗಲ್ ಅಡುಗೆಯನ್ನು ತಯಾರಿಸಲಾಗುವುದು. ಪೊಂಗಲ್ ಅಡುಗೆ ಮಾಡುವ ಮಡಿಕೆಯ ಸುತ್ತ ಅರಿಶಿಣ ಗಿಡವನ್ನು ಕಟ್ಟುತ್ತಾರೆ. ಪೊಂಗಲ್ ಅಡುಗೆ ಮಾಡುವ ಜಾಗವನ್ನು ರಂಗೋಲಿಯಿಂದ ಅಲಂಕರಿಸಲಾಗಿರುತ್ತದೆ. ಕಬ್ಬಿನಿಂದ ತೋರಣ ಕಟ್ಟಿರುತ್ತಾರೆ. ಅಕ್ಕಿ, 2 ಕಡ್ಡಿ ಕಬ್ಬು, ಬಾಳೆ ಹಣ್ಣು, ತೆಂಗಿನ ಕಾಯಿಯನ್ನು ದೇವರಿಗೆ ನೈವೇದ್ಯವಾಗಿ ಇಡಲಾಗಿರುತ್ತದೆ.
3ನೇ ದಿನ
3ನೇ ದಿನವನ್ನು ಮಾಟು ಪೊಂಗಲ್ ಎಂದು ಆಚರಿಸುತ್ತಾರೆ. ಈ ದಿನ ದನಗಳಿಗೆ ಅಲಂಕಾರ ಮಾಡುತ್ತಾರೆ. ಅವುಗಳ ಕುತ್ತಿಗೆಗೆ ಗಂಟೆ ಕಟ್ಟುತ್ತಾರೆ. ಹೂವಿನ ಮಾಲೆಯನ್ನು ಹಾಕುತ್ತರೆ. ದನಗಳಿಗೆ ಪೊಂಗಲ್ ಅಡುಗೆಯನ್ನು ನೀಡಲಾಗುವುದು. ನಂತರ ಅವುಗಳನ್ನು ಸಮೀಪದ ಪ್ರದೇಶಗಳಿಗೆ ಮೇಯಲು ಬಿಡಲಾಗುವುದು.
4ನೇ ದಿನ
4ನೇ ದಿನವನ್ನು ಕಾಣುಂ ಪೊಂಗಲ್ ಎಂದು ಆಚರಿಸಲಾಗುವುದು. ಈ ದಿನ ಜನರು ತಮ್ಮ ನೆಂಟರಿಷ್ಟರನ್ನು ಭೇಟಿ ಮಾಡುತ್ತಾರೆ. ತಮ್ಮಲ್ಲಿ ಕೆಲಸ ಮಾಡುವವರಿಗೆ ಯಜಮಾನರು ಉಡುಗೊರೆ ನೀಡುತ್ತಾರೆ.
ಈ ರೀತಿ ಸುಗ್ಗಿ ಹಬ್ಬವಾದ ಪೊಂಗಲ್ ಅನ್ನು ತಮಿಳು ನಾಡಿನಲ್ಲಿ ಆಚರಿಸಲಾಗುವುದು.



Click it and Unblock the Notifications
