Latest Updates
-
ದೀಪಾವಳಿ ಹಬ್ಬದ ಡ್ರಾಮಾ ತಪ್ಪಿಸಿ: ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಪ್ಲಾನ್ ಮತ್ತು ಮೆಸೇಜ್ ಟಿಪ್ಸ್ -
ದೀಪಾವಳಿ ಪಾರ್ಟಿ ಜೋರಾಗಿದೆಯಾ? ₹30ರೊಳಗೆ ಸಿಗುವ 12 ಆರೋಗ್ಯಕರ ಹೈ-ಪ್ರೋಟೀನ್ ಸ್ನ್ಯಾಕ್ಸ್ ಇಲ್ಲಿದೆ! -
ಧನ್ತೇರಸ್ ಮುನ್ನವೇ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ: ಇಂದೇ ಖರೀದಿಸಬೇಕಾ ಅಥವಾ ನಾಳೆ ಕಾಯಬೇಕಾ? -
IND vs NZ 2nd ODI: ಪಂದ್ಯದ ದಿನ ಬೆಳಿಗ್ಗೆ ಫ್ರೆಶ್ ಆಗಿರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಎನ್ಆರ್ಐಗಳೇ ಎಚ್ಚರ! ವಿದೇಶಿ ವಿಚ್ಛೇದನ ಭಾರತದಲ್ಲಿ ಸಿಂಧುವಲ್ಲ: ದ್ವಿವಿವಾಹದ ಅಪಾಯ ತಪ್ಪಿಸಿಕೊಳ್ಳುವುದು ಹೇಗೆ? -
ದೀಪಾವಳಿ ಸಿಹಿ ಕೊಳ್ಳುವ ಮುನ್ನ ಎಚ್ಚರ! ಕಲಬರಕೆ ಪತ್ತೆ ಹಚ್ಚುವುದು ಹೇಗೆ? -
IND vs NZ 1st ODI: ಈಡನ್ ಪಾರ್ಕ್ನಲ್ಲಿ ಸಿಕ್ಸರ್ಗಳ ಸುರಿಮಳೆ, ಫ್ಯಾಂಟಸಿ ಟೀಮ್ಗೆ ಯಾರನ್ನು ಆರಿಸಬೇಕು? -
ದೆಹಲಿ-ಎನ್ಸಿಆರ್ನಲ್ಲಿ ತೀವ್ರ ವಾಯು ಮಾಲಿನ್ಯ: ನಿಮ್ಮ ಶ್ವಾಸಕೋಶವನ್ನು ರಕ್ಷಿಸಿಕೊಳ್ಳಲು ಇಲ್ಲಿದೆ ತ್ವರಿತ ಗೈಡ್ -
ದೆಹಲಿ ಮಾಲಿನ್ಯದ ಹೊಡೆತ: ಶ್ವಾಸಕೋಶದ ಆರೋಗ್ಯ ಕಾಪಾಡಲು ಇಂದೇ ನಿಮ್ಮ ಆಹಾರದಲ್ಲಿ ಈ ಬದಲಾವಣೆ ಮಾಡಿ! -
ಧನ್ತೇರಸ್ ಶಾಪಿಂಗ್: ಬಂಗಾರ ಖರೀದಿಸುವ ಮುನ್ನ ಈ 5 ವಿಷಯ ಮರೆಯದಿರಿ, ಇಲ್ಲವಾದರೆ ಮೋಸ ಹೋಗ್ತೀರಾ!
ನವರಾತ್ರಿಯ 8ನೇ ದಿನ: ಮಹಾ ಗೌರಿ ದೇವಿಯನ್ನು ಒಲಿಸಿಕೊಳ್ಳಲು ಈ ಮಂತ್ರ ಪಠಿಸಿ
ದಸರಾ ಹಬ್ಬ ಎಂದರೆ ಹಿಂದೂಗಳಿಗೆ ಅದ್ಧೂರಿ ಹಬ್ಬಗಳಲ್ಲಿ ಒಂದು. ಈ ದಿನಗಳನ್ನು ಪವಿತ್ರ ದಿನ ಎಂದು ಆರಾಧಿಸುತ್ತಾರೆ. ನವರಾತ್ರಿಯಲ್ಲಿ ದುರ್ಗೆಯ 9 ಸ್ವರೂಪಗಳನ್ನು ಆರಾಧಿಸುತ್ತೇವೆ, ನವರಾತ್ರಿ 8ನೇ ದಿನ ಮಹಾಗೌರಿಯನ್ನು ಪೂಜಿಸುತ್ತೇವೆ.
ನವರಾತ್ರಿ ಎಂಟನೇ ದಿನದ ಪೂಜೆಯು ಮಹಾ ಅಷ್ಟಮಿ ತಿಥಿ(ಚಂದ್ರ ಕರಗುವ ಎಂಟನೇ ದಿನ)ದಂದು ಮಹಾಗೌರಿಯನ್ನು ಆರಾಧಿಸಲಾಗುತ್ತದೆ. ಈ ವರ್ಷ ಅಕ್ಟೋಬರ್ 3ರಂದು ಸೋಮವಾರ ಮಹಾಗೌರಿಯನ್ನು ಪೂಜಿಸುತ್ತೇವೆ. ಮಹಾಗೌರಿಯನ್ನು ಹೇಗೆ ಆರಾಧಿಸಬೇಕು, ಪಠಿಸಬೇಕಾದ ಮಂತ್ರಗಳೇನು ಎಂದು ನೋಡೋಣ ಬನ್ನಿ:

ದೇವಿ ಮಹಾಗೌರಿಯ ಪೂಜೆ(ನವರಾತ್ರಿ 8ನೇ ದಿನ)
ನವರಾತ್ರಿಯ ಎಂಟನೇ ದಿನದಂದು ಮಹಾಗೌರಿ ದೇವಿಯನ್ನು ಪೂಜಿಸಲಾಗುತ್ತದೆ. ಮಹಾಗೌರಿಯು ತನ್ನ 16ನೇ ವಯಸ್ಸಿನವರಾಗಿರುವರು. ಗೌರಿ ಎಂದರೆ ಆಕೆಯು ಗಿರಿ ಅಥವಾ ಪರ್ವತದ ಮಗಳೆಂದು ಹೇಳಲಾಗುತ್ತದೆ. ಗೂಳಿ ಮೇಲೆ ಪ್ರಯಾಣಿಸುವ ಗೌರಿ ತನ್ನ ಕೈಯಲ್ಲಿ ತ್ರಿಶೂಲದೊಂದಿಗೆ ಢಮರುವನ್ನು ಹಿಡಿಕೊಂಡಿರುವರು. ಆಕೆಯು ಬಿಳಿ ಬಟ್ಟೆ ಧರಿಸಿರುವರು ಮತ್ತು ಆಕೆಯ ಮುಖವು ತಂಪಾಗಿರುವ ಚಂದ್ರನಂತೆ ಹೊಳೆಯುತ್ತಲಿರುವುದು ಮತ್ತು ಇದು ಭಕ್ತರಿಗೆ ವರವನ್ನು ನೀಡುವಂತಿದೆ.

ತಾಯಿ ಮಹಾಗೌರಿಯ ಕಥೆ
ಒಂದು ಸಲ ತಾಯಿ ದುರ್ಗೆಯು ಭೂಮಿ ಮೇಲೆ ಜನ್ಮವನ್ನು ಪಡೆಯುವರು ಮತ್ತು ಮರಳಿ ದೇವಲೋಕಕ್ಕೆ ಹೋಗಲು ಅವರು ಶಿವನನ್ನು ಮದುವೆಯಾಗಲು ಬಯಸುವರು. ನಾರದ ಮುನಿಗಳ ಸಲಹೆಯಂತೆ ದೇವಿಯು ಶಿವನನ್ನು ಒಲಿಸಿಕೊಳ್ಳಲು ಹಲವಾರು ತಪಸ್ಸನ್ನು ಮಾಡುವರು. ಆಕೆ ತಪಸ್ಸಿನಲ್ಲಿ ಸಂಪೂರ್ಣವಾಗಿ ಮಗ್ನರಾಗಿರುವ ವೇಳೆ ದೇಹದಲ್ಲಿ ಧೂಳು ಹಾಗೂ ಕೊಳೆಯು ತುಂಬಿರುವುದು. ಆಕೆ ಆಹಾರ ಹಾಗೂ ನೀರನ್ನು ಬಿಟ್ಟು ಸಂಪೂರ್ಣವಾಗಿ ತಪಸ್ಸಿನಲ್ಲಿ ತೊಡಗಿಕೊಳ್ಳುವರು. ಬಿಸಿಲಿನಿಂದಾಗಿ ಆಕೆಯ ದೇಹವು ಸಂಪೂರ್ಣವಾಗಿ ಕಪ್ಪಾಗಿರುವುದು ಮತ್ತು ಆಕೆಯು ಸಾವಿರಾರು ವರ್ಷಗಳ ಹೀಗೆ ಇರುವರು. ಶಿವ ದೇವರು ಆಕೆಯ ತಪಸ್ಸಿನಿಂದ ಪ್ರಭಾವಿತರಾಗಿ, ಆಕೆಯ ದೇವನ್ನು ಹೊಳೆಯುವಂತೆ ಮಾಡಲು ಗಂಗಾ ದೇವಿಯನ್ನು ಬಿಡುವರು. ಇದರಿಂದಾಗಿ ಮಹಾಗೌರಿಯ ಅವತಾರವು ತುಂಬಾ ಕಾಂತಿಯುತ, ಬಿಳಿ ಹಾಗೂ ಧಾನ್ಯಸಕ್ತದಲ್ಲಿರುವುದು.

ಮಹಾಗೌರಿ ತಾಯಿಯ ಪೂಜೆಯ ಮಹತ್ವ
ಮಹಾಗೌರಿ ದೇವಿಯು ರಾಹುವಿನ ಅಧಿಪತಿ. ಜನ್ಮ ಕುಂಡಲಿಯಲ್ಲಿ ರಾಹುವಿನಿಂದ ಆಗಿರುವ ಎಲ್ಲಾ ರೀತಿಯ ಸಮಸ್ಯೆಗಳನ್ನು ನಿವಾರಣೆ ಮಾಡಿ, ತನ್ನ ಭಕ್ತರಿಗೆ ಸಮೃದ್ಧಿ ಹಾಗೂ ಆಧ್ಯಾತ್ಮಿಕ ಧಾನ್ಯ ನೀಡುವರು. ಮನಸ್ಸಿನಲ್ಲಿರುವಂತಹ ಗೊಂದಲ ನಿವಾರಣೆ ಮಾಡಿ, ಯಶಸ್ವಿ ಜೀವನ ಸಾಗಿಸಲು ನೆರವಾಗುವರು.

ನವರಾತ್ರಿ ಎಂಟನೇ ದಿನ ಮಹಾಗೌರಿ ಪೂಜೆ
ಮಹಾಗೌರಿ ದೇವಿಯ ಪೂಜೆ ಮಾಡಲು ರಾತ್ರಿ ಅರಳುವಂತಹ ಮಲ್ಲಿಗೆ ಹೂವನ್ನು ಬಳಸಬೇಕು. ಭಕ್ತಿ ಹಾಗೂ ಶ್ರದ್ಧೆಯಿಂದ ನವರಾತ್ರಿಯ ಎಂಟನೇ ದಿನದಂದು ಮಹಾಗೌರಿ ಪೂಜೆ ಮಾಡಬೇಕು. ಗಣೇಶ ಪ್ರಾರ್ಥನೆ ಮೂಲಕ ಪೂಜೆ ಆರಂಭಿಸಿ, ಷೋಡಸೋಪಚಾರ ಮಾಡಿದ ಬಳಿಕ ಆರತಿಯೊಂದಿಗೆ ಪೂಜೆ ಕೊನೆಗೊಳಿಸಬೇಕು.

ಎಂಟನೇ ದಿನದಂದು ಮಹಾಗೌರಿ ತಾಯಿಯ ಮಂತ್ರ
ಓಂ ದೇವಿ ಮಹಾಗೌರೈ ನಮಃ
ಓಂ ದೇವಿ ಮಹಾಗೌರೈ ನಮಃ ಶ್ವೇತಾ ವೃಶೇಸಾಮುದ್ರ ಶ್ವೇತಾಂಭರಧಾರ ಶುಚಿ
ಮಹಾಗೌರಿ ಶುಭಾಮ್ ಧ್ಯಾನಮಹದೇವ ಪ್ರಮೋದದಾ

8ನೇ ದಿನ ಮಹಾಗೌರಿ ಪ್ರಾರ್ಥನೆ
ಶ್ವೇತಾ ವೃಶೇಸಾಮುದ್ರ ಶ್ವೇತಾಂಭರಧಾರ ಶುಚಿ
ಮಹಾಗೌರಿ ಶುಭಾಮ್ ಧ್ಯಾನಮಹದೇವ ಪ್ರಮೋದದಾ

8ನೇ ದಿನ ಮಹಾಗೌರಿ ಸ್ತುತಿ
ಯಾ ದೇವಿ ಸರ್ವಭುತೇಶ ಮಾ ಮಹಾಗೌರಿ ರುಪೇನ ಸಂಹಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ

8ನೇ ದಿನ ಮಹಾಗೌರಿ ತಾಯಿಯ ಧ್ಯಾನ
ವಂದೇ ವಂಚಿತ ಕಾಮರ್ಥೇ ಚಂದ್ರಧರಿತ್ರಶೇಖರಂ
ಸಿಮರೂಢ ಚತುರ್ಭುಜಾ ಮಹಾಗೌರಿ ಯಶಾಸ್ವಿನಿಮ್
ಪುರ್ನಂದ್ ನಿಭಾಮ್ ಗೌರಿ ಸೋಮಾಚಕ್ರಸ್ಥಿತಂ ಅಷ್ಟಾಮ ಮಹಾಗೌರಿ ತ್ರಿನೇತಂ
ವರಭೀತಿಕಾರಾಮ್ ತ್ರಿಶುಲಾ ದಮಾರುಧರಂ ಮಹಾಗೌರಿ ಭಜೆಮ್
ಪತಂಬರಾ ಪರಿಧನಂ ಮೃದುಹಾಸ್ಯ ನಾನಾಲಂಕರಾ ಭೂಷಿತಂ
ಮಂಜೀರಾ, ಹರಾ, ಕೀರುರಾ, ಕಿಂಕಿನಿ, ರತ್ನಾಕುಂಡಲ ಮಂಡಿತಮ್
ಪ್ರಫುಲ್ಲಾ ವಂದನಾ ಪಲ್ಲವಧರಂ ಕಾಂತಾ ಕಪೋಲಮ್ ತ್ರಿಲೋಕ್ಯ ಮೋಹನಂ
ಕಾಮನಿಯಮ್ ಲಾವಣಮ್ ಮೃಣಾಳಂ ಚಂದನ ಗಂಧಲೇಪಿತಂ

8ನೇ ದಿನ ಮಹಾಗೌರಿ ಸ್ತೋತ್ರ
ಸರ್ವಾಸಂಕಟ ಹಂತ್ರಿ ತುವಂಹಿ ಧಾನ ಐಶ್ವರ್ಯ ಪ್ರದಾಯನಮ್
ಜ್ಞಾನ ಚತುರ್ವೇದೈ ಮಹಾಗೌರಿ ಪ್ರಾಣಮಾಮಯಂ
ಸುಖ ಶಾಂತಿಧಾತ್ರಿ ಧನ ಧಾನ್ಯ ಪ್ರದಯಾನಿಮ್
ಢಮಾರುವಾದ್ಯ ಪ್ರಿಯಾ ಆದಿ ಮಹಾಗೌರಿ ಪ್ರಾಣಮಾಮಯಂ
ತ್ರಿಲೋಕ್ಯಮಂಗಲ ತ್ವಮಹಿ ತಾಪತ್ರಯ ಹರಿನಿಮ್
ವದದಾಮ್ ಚೈತನ್ಯಮಯಿ ಮಹಾಗೌರಿ ಪ್ರಾಣಮಾಮಯಂ

ಎಂಟನೇ ದಿನದ ಪೂಜೆಯ ಮಹತ್ವ
ನವರಾತ್ರಿಯ ಎಂಟನೇ ದಿನದಂದು ಮಹಾಗೌರಿ ಪೂಜೆಯನ್ನು ಮಾಡುವುದರಿಂದ ಭಕ್ತರಿಗೆ ಶಕ್ತಿ ಮತ್ತು ಯೋಗ್ಯತೆ ಸಿಗುವುದು. ಎಲ್ಲಾ ಸಂಕಷ್ಟಗಳನ್ನು ಆಕೆ ನಿವಾರಣೆ ಮಾಡುವಳು. ಭಕ್ತರ ಚಿಂತೆ ದೂರ ಮಾಡಿ, ಸದ್ಗುಣ ನೀಡುವರು. ಸುಖ ಜೀವನ ಸಾಗಿಸಲು ಭಕ್ತರಿಗೆ ಜೀವನದಲ್ಲಿ ಬೇಕಾಗಿರುವ ಎಲ್ಲವನ್ನು ಆಕೆ ಕರುಣಿಸವಳು.
ಮಹಾಗೌರಿ ತಾಯಿಯನ್ನು ಪರಿಪೂರ್ಣತೆಯ ಅಧಿಕಾರಿಣಿ. ಭಕ್ತರ ಎಲ್ಲಾ ಆಕಾಂಕ್ಷೆಗಳನ್ನು ಈಡೇರಿಸುವ ಆಕೆ ಎಲ್ಲಾ ರೀತಿಯ ಸುಖ ಹಾಗೂ ಸಂತೋಷವನ್ನು ಕರುಣಿಸುವಳು. ನವರಾತ್ರಿಯ ಎಂಟನೇ ದಿನದ ಪೂಜೆಯು ಸರಸ್ವತಿ ಪೂಜೆಯ ಎರಡನೇ ದಿನವಾಗಿದೆ. ಇದನ್ನು ಮಹಾ ಅಷ್ಟಮಿ ಎಂದು ಕರೆಯಲಾಗುತ್ತದೆ.



Click it and Unblock the Notifications
