ವಿಶ್ವದಲ್ಲೇ ಹಿಂದೆಂದೂ ಕಾಣದ ಅದ್ಭುತ, ಬಣ್ಣ ಬದಲಾಯಿಸುವ ಶಿವಲಿಂಗ!

Posted By: Jaya subramanya
Subscribe to Boldsky

ಪ್ರಕೃತಿಯು ಅತ್ಯಂತ ವಿಸ್ಮಯವಾಗಿರುವ ಸಂಗತಿಗಳನ್ನು ನಮ್ಮ ಮುಂದೆ ತೆರೆದಿಡುತ್ತದೆ ಎಂಬುದಕ್ಕೆ ಅಂಕೆಯೇ ಇಲ್ಲ. ದಿನದಿಂದ ದಿನಕ್ಕೆ ಅದ್ಭುತವನ್ನು, ಆಕರ್ಷಣೆಯನ್ನು ನಮ್ಮ ಮುಂದೆ ತೆರೆದಿಡುವ ಈ ನಿಸರ್ಗದ ಅದ್ಭುತ ಶಕ್ತಿಗೆ ಹುಲು ಮಾನವರು ತಲೆಬಾಗಲೇಬೇಕು. ದೇವರನ್ನು ನಂಬದೇ ಇರುವ ನಾಸ್ತಿಕರು ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ ರಸವತ್ತಾದ ಮಾಹಿತಿಯನ್ನು ಓದಿದಲ್ಲಿ ಪ್ರಕೃತಿಯು ನಾನಾ ವಿಧವಾದ ಚಮತ್ಕಾರಗಳನ್ನು ಮಾಡುವುದು ನಿಜ ಎಂದಾಗಿಯೇ ಒಪ್ಪಿಕೊಳ್ಳುತ್ತಾರೆ.

ಇಲ್ಲಿರುವ ಶಿವನ ದೇವಾಲಯದಲ್ಲಿರುವ ಶಿವಲಿಂಗವು ಮೂರು ದಿನಗಳಿಗೊಮ್ಮೆ ಬಣ್ಣವನ್ನು ಬದಲಾಯಿಸುತ್ತದೆ. ರಾಜಸ್ಥಾನದ ದೋಲಾಪುರಲ್ಲಿರುವ ಅಚಲೇಶ್ವರ ಮಹಾದೇವ ದೇವಸ್ಥಾನದಲ್ಲಿರುವ ಶಿವಲಿಂಗವು ಮೂರು ದಿನಗಳಿಗೊಮ್ಮೆ ತನ್ನ ಬಣ್ಣವನ್ನು ಬದಲಾಯಿಸುತ್ತದಂತೆ. ಈ ಕುರಿತು ಇನ್ನಷ್ಟು ಮಾಹಿತಿಯನ್ನು ಕೆಳಗೆ ನೀಡುತ್ತಿದ್ದೇವೆ...

Shivling

ಅತ್ಯಂತ ಕೌತುಕಮಯ

ಜಗತ್ತಿನಲ್ಲಿರುವ ಬೇರೆ ಬೇರೆ ಶಿವ ದೇವಾಲಯಗಳ ಬಗ್ಗೆ ನೀವು ಮಾಹಿತಿಯನ್ನು ಹೊಂದಿದ್ದರೂ ಶಿವಲಿಂಗದ ಬಣ್ಣ ಬದಲಾಗುವ ವಿಷಯ ಅತ್ಯಂತ ಕೌತುಕಮಯವಾಗಿದೆ.

ರಾಜಸ್ಥಾನದ ದೇವಾಲಯ

ರಾಜಸ್ಥಾನದಲ್ಲಿರುವ ಈ ಶಿವಾಲಯದಲ್ಲಿರುವ ಶಿವಲಿಂಗವೇ ಈ ವಿಶಿಷ್ಟ ಶಕ್ತಿಯನ್ನು ಪಡೆದುಕೊಂಡಿದೆ. ದೇವಸ್ಥಾನವು ರಾಜಸ್ಥಾನದ ಮಧ್ಯಪ್ರದೇಶದಲ್ಲಿದ್ದು ಹೆಚ್ಚಿನ ಪ್ರವಾಸಿಗರ ಗಮನವನ್ನು ಸೆಳೆಯುತ್ತಿದೆ.

Shivling

ದೇವಸ್ಥಾನಕ್ಕೆ ಹೋಗುವುದು

ಚಂಬಲ್‌ನ ಪ್ರದೇಶದಲ್ಲಿ ಈ ದೇವಾಲಯವಿದ್ದು ಹೋಗುವುದು ಕ್ಲಿಷ್ಟಕರವಾಗಿದೆ. ಅದಾಗ್ಯೂ ದೇವಸ್ಥಾನಕ್ಕಿರುವ ಮಹತ್ವದಿಂದಾಗಿ ಭಕ್ತರು ಆಲಯಕ್ಕೆ ಭೇಟಿ ನೀಡುತ್ತಿದ್ದಾರೆ.

ಕಾಲ್ಬೆರಳಿಗೆ ಪೂಜೆ

ಇಲ್ಲಿ ಶಿವನ ಕಾಲ್ಬೆರಳಿಗೆ ಪೂಜೆಯನ್ನು ಮಾಡಲಾಗುತ್ತಿದ್ದು ಇದು ಅತ್ಯಂತ ವಿಶೇಷವಾಗಿದೆ. ಅಂತೆಯೇ ಸಂಪೂರ್ಣ ಹಿತ್ತಾಳೆಯಿಂದ ಮಾಡಿದ ನಂದಿಯನ್ನು ಈ ದೇವಾಲಯ ಹೊಂದಿದೆ.

Shivling

ಭೂಮಿಯ ಕೇಂದ್ರ

ದೇವಾಲಯವು 2500 ವರ್ಷಗಳು ಹಳೆಯದಾಗಿದ್ದು ಶಿವನ ಕಾಲ್ಬೆರಳು ಪ್ರಪಂಚಕ್ಕೆ ದೇವರು ಅಡಿಇಟ್ಟಂತೆ ಕಾಣುತ್ತಿದೆ.

ದಂತಕಥೆ

ದಂತಕಥೆಯ ಪ್ರಕಾರ ಅಚಲೇಶ್ವರ ದೇವಸ್ಥಾನವನ್ನು 9ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು, ಶಿವನ ಕಾಲ್ಬೆರಳಿನ ಗುರುತಿನಿಂದಾಗಿ ದೇವಾಲಯ ಕಟ್ಟಲ್ಪಟ್ಟಿದೆ.

ಶಿವಲಿಂಗ

ನೈಸರ್ಗಿಕ ಶಿವಲಿಂಗವನ್ನು ದೇವಳವು ಹೊಂದಿದೆ. ಈ ಪ್ರದೇಶದ ಶ್ರೀಮಂತಿಕೆಯನ್ನು ಇದು ಎತ್ತಿಹಿಡಿದಿದೆ.

ಅದ್ಭುತಗಳ ಆಗರ

ಈ ದೇವಸ್ಥಾನವು ಅದ್ಭುತಗಳ ಆಗರ ಎಂದೆನಿಸಿದೆ. ಮುಸ್ಲಿಂ ದಾಳಿಕೋರರು ಶಿವಾಲಯದ ಮೇಲೆ ದಾಳಿ ಎಸಗಲು ನೋಡಿದಾಗ ನಂದಿ ಪ್ರತಿಮೆಯು ಉದ್ಭವವಾಯಿತು ಎಂದು ಹೇಳಲಾಗುತ್ತಿದೆ.

ಶಿವಲಿಂಗದ ಮೂಲ

ಒಮ್ಮೆ ಅನ್ವೇಷಕರು ಶಿವಲಿಂಗದ ಮೂಲವನ್ನು ಹುಡುಕಿಕೊಂಡು ಹೊರಟರು. ಆದರೆ ಎಷ್ಟು ಪ್ರಯತ್ನಿಸಿದರೂ ಇದರ ಮೂಲ ದೊರಕಲಿಲ್ಲ.

ಶಿವಲಿಂಗದ ಬಣ್ಣ

ಸೂರ್ಯನ ಬೆಳಿನಿಂದಾಗಿ ಶಿವಲಿಂಗ ಬೇರೆ ಬೇರೆ ಬಣ್ಣವನ್ನು ಪ್ರದರ್ಶಿಸುತ್ತದೆ ಎಂಬುದಾಗಿ ವಿಜ್ಞಾನಿಗಳು ಹೇಳಿದ್ದಾರೆ. ಆದರೆ ಇದಕ್ಕೆ ಯಾವುದೇ ಸಾಕ್ಷಿಗಳಿಲ್ಲ

Shivling

ಏನು ಸಂಭವಿಸಿತು?

ಬೆಳಗ್ಗಿನ ಜಾವ ಲಿಂಗವು ಕೆಂಪು ಬಣ್ಣದಲ್ಲಿರುತ್ತದೆ ಮಧ್ಯಾಹ್ನ ಕೇಸರಿ ಬಣ್ಣಕ್ಕೆ ತಿರುಗುತ್ತದೆ ಮತ್ತು ರಾತ್ರಿ ವೇಳೆ ಶಿವಲಿಂಗದ ಬಣ್ಣವು ಕಪ್ಪಾಗಿ ಮಾರ್ಪಡುತ್ತದೆ. ಹೆಚ್ಚಿನ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ.

ಸರಿಯಾದ ಉದ್ದ

ಶಿವಲಿಂಗವು ಹೇಗೆ ಉದ್ಭವವಾಯಿತು ಎಂಬುದು ಯಾರಿಗೂ ತಿಳಿದಿಲ್ಲ. ಇದು ವಿಜ್ಞಾನಿಗಳಿಗೆ ಬಿಟ್ಟ ಅಂಶವಾಗಿದೆ.

ದೈವಿಕ ಶಕ್ತಿ

ಶಿವಲಿಂಗವು ತನ್ನ ಶಕ್ತಿಗೆ ಪ್ರಸಿದ್ಧವಾಗಿದೆ. ದೇವಸ್ಥಾನದಲ್ಲಿ ಪ್ರಾರ್ಥಿಸಿದವರ ಎಲ್ಲಾ ಬಯಕೆಗಳು ಈಡೇರುತ್ತದೆ ಎನ್ನಲಾಗಿದೆ.

ವಿವಾಹ ಮಹೋತ್ಸವ

ಸಂಗಾತಿಯನ್ನು ಕಂಡುಕೊಳ್ಳದೇ ಇರುವ ಅವಿವಾಹಿತ ಸ್ತ್ರೀ, ಪುರುಷರು ದೇವಸ್ಥಾನಕ್ಕೆ ಭೇಟಿ ಇತ್ತಲ್ಲಿ ಶೀಘ್ರದಲ್ಲೇ ವಿವಾಹಿತರಾಗುತ್ತಾರೆ. ಇಲ್ಲಿಯೇ ಇರುವ ಇನ್ನೊಂದು ಶಿವಾಲಯದ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.

ದಕ್ಷಿಣ ದೇವಸ್ಥಾನ

ದಕ್ಷಿಣ ಮುಖ ನಂದಿ ತೀರ್ಥ ಕಲ್ಯಾಣಿ ಕ್ಷೇತ್ರವು ಬೆಂಗಳೂರಿನಲ್ಲಿದ್ದು ಭಾರತದ ಐತಿಹ್ಯವುಳ್ಳ ದೇವಸ್ಥಾನಗಳಲ್ಲಿ ಒಂದಾಗಿದೆ.

ಗೂಳಿ ಕಂಡುಬಂದಿದೆ

ಇಂದು ದೇವಸ್ಥಾನ ನಿಂತಿರುವ ಸ್ಥಳದಲ್ಲಿ ಅನ್ವೇಷಕರು 1967 ರಲ್ಲಿ ಗೂಳಿಯನ್ನು ಕಂಡುಹಿಡಿದಿದ್ದರು. ನಂತರ ಪ್ರಾಚ್ಯ ಸಂಗ್ರಹಾಲಯವು ಅದನ್ನು ಹೊರತೆಗೆಯುವ ಯೋಜನೆಯನ್ನು ತಮ್ಮದಾಗಿಸಿಕೊಂಡರು.

ಅವರಿಗೆ ಏನು ಸಿಕ್ಕಿತ್ತು?

ಇದು 400 ವರ್ಷಗಳ ಹಳೆಯ ದೇವಸ್ಥಾನವೆಂಬುದಾಗಿ ಅನ್ವೇಷಕರು ನುಡಿದಿದ್ದಾರೆ. ಗೂಳಿಯೊಂದಿಗೆ ಶಿವಲಿಂಗ, ಮತ್ತು ಕೆರೆಯನ್ನು ಇವರು ಪತ್ತೆಹಚ್ಚಿದ್ದರು.

Shivling

ಪವಾಡ

ಸಂಶೋಧಕರು ಸ್ಥಳವನ್ನು ಬಿಟ್ಟು ಹೋಗುತ್ತಿದ್ದಂತೆ ನಂದಿಯ ಬಾಯಿಯಿಂದ ಸ್ವಯಂಚಾಲಿತವಾಗಿ ನೀರು ಚಿಮ್ಮಲು ಆರಂಭವಾಯಿತು. ತದನಂತರ ಈ ದೇವಸ್ಥಾನಕ್ಕೆ ಪವಾಡದ ಸ್ಥಳವೆಂಬ ಹೆಸರು ಬಂದಿದೆ.

For Quick Alerts
ALLOW NOTIFICATIONS
For Daily Alerts

    English summary

    Mysterious Shivling changes colour thrice a day!

    We have read a lot about mysterious temples all around the world. However, ever heard about a Shivling that changes colour thrice a day? We tell you more...We are talking about the Shivling in Achaleshwar Mahadev temple in Dholpur, Rajasthan that changes its colors three times a day. Don't believe us? Read on.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more