ಜಾತಕದಲ್ಲಿ ಮಾಂಗಲಿಕ ದೋಷವಿದ್ದರೆ- ಮದುವೆಯ ಸಂದರ್ಭದಲ್ಲಿ ಸಮಸ್ಯೆ ಬರಲಿದೆ!!

ಭಾರತವು ಮೂಢನಂಬಿಕೆಗಳ ತವರು ಎಂದರೆ ತಪ್ಪಾಗದು. ಯಾಕೆಂದರೆ ಭಾರತವು ವಿವಿಧ ಧರ್ಮಗಳಲ್ಲಿ ಹಲವಾರು ರೀತಿಯ ಮೂಢನಂಬಿಕೆಗಳು ಇವೆ. ಇಂದಿಗೂ ಕೆಲವೊಂದು ನಂಬಿಕೆಗಳು ಹಾಗೆ ಉಳಿದುಕೊಂಡಿದೆ. ಇದರಲ್ಲಿ ಕೆಲವು ವೈಜ್ಞಾನಿಕ ಕಾರಣಗಳು ಇರುವಂತಹ ನಂಬಿಕೆಗಳು. ಆದರೆ ಇನ್ನು ಕೆಲವು ನಂಬಿಕೆಗಳಿಗೆ ಯಾವುದೇ ತಲೆಬುಡವೇ ಇರಲ್ಲ. ಉದಾಹರಣೆಗೆ ಮಾಂಗಲಿಕ ಇರುವಂತಹ ಮಹಿಳೆ ಅಥವಾ ಪುರುಷರು ಮಾಂಗಲಿಕ ಇಲ್ಲದೆ ಇರುವಂತವರನ್ನು ಮದುವೆಯಾದರೆ ಆಗ ಕೆಲವೇ ದಿನಗಳಲ್ಲಿ ಸಂಗಾತಿಯು ಮರಣವನ್ನಪ್ಪುವರು ಎಂದು ಹೇಳಲಾಗುತ್ತದೆ. ಅದರಲ್ಲೂ ಪುರುಷ ಪ್ರಧಾನವಾಗಿರುವಂತಹ ನಮ್ಮ ದೇಶದಲ್ಲಿ ಮಹಿಳೆಯ ಜಾತಕದಲ್ಲಿ ಮಾಂಗಲಿಕ ದೋಷವಿದ್ದರೆ (ಕುಜ ದೋಷ) ಆಗ ಆಕೆಗೆ ಮದುವೆಯೆನ್ನುವುದು ಕನಸಿನ ಮಾತೇ ಸರಿ.

Most Successful Remedies To Mitigate Manglik Dosh!

ವೈದಿಕ ಜ್ಯೋತಿಷ್ಯದ ಪ್ರಕಾರ ಮಂಗಲಿಕ ದೋಷವನ್ನು ಜ್ಯೋತಿಷ್ಯದಲ್ಲಿ ತುಂಬಾ ಗಂಭೀರ ದೋಷವೆಂದು ಪರಿಗಣಿಸಲಾಗಿದೆ. ಇದು ಒಬ್ಬ ವ್ಯಕ್ತಿಯ ಜೀವನ, ಮದುವೆ ಮೇಲೆ ಪರಿಣಾಮ ಬೀರುವುದು ಮತ್ತು ಆತನಿಗೆ ದುರಾದೃಷ್ಟವನ್ನೇ ಉಂಟು ಮಾಡುವುದು. ಮಾಂಗಲಿಕ ದೋಷವನ್ನು ಕುಜ ದೋಷ, ಭೋಮ ದೋಷ ಅಥವಾ ಅಂಗಾರಖ ದೋಷವೆಂದು ಕರೆಯಲಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳ ಗ್ರಹವು ವ್ಯಕ್ತಿಯ ಕುಂಡಲಿಯ 1,2,4,7,8 ಮತ್ತು 12ನೇ ಮನೆಯಲ್ಲಿ ಕುಳಿತಿರುವುದು. 12 ಮನೆಗಳಲ್ಲಿ ಈ ಮೇಲಿನ ಯಾವುದಾದರೂ ಒಂದು ಮನೆಯಲ್ಲಿ ಮಂಗಳ ಗ್ರಹವು ಇದ್ದರೆ ಆಗ ಮಾಂಗಲಿಕ ದೋಷವಿದೆ ಎಂದು ಹೇಳಬಹುದು. ಬಾಲಿವುಡ್ ನಟಿ ಐಶ್ವರ್ಯ ರೈಗೆ ಮಾಂಗಲಿಕ ದೋಷವಿತ್ತು ಎಂದು ಹೇಳಲಾಗಿತ್ತು. ಆಕೆ ಅಭಿಷೇಕ್ ಬಚ್ಚನ್ ನ್ನು ಮದುವೆಯಾಗುವ ಮೊದಲು ಒಂದು ಬಾಳೆಗಿಡಕ್ಕೆ ಮದುವೆ ಮಾಡಿಕೊಡಲಾಗಿತ್ತು. ಇದರಿಂದ ಮಾಂಗಲಿಕ ದೋಷವು ಕಡಿಮೆಯಾಗುವುದು. ಮಾಂಗಲಿಕ ದೋಷದ ಬಗ್ಗೆ ತಿಳಿಯಬೇಕಾದರೆ ನಾವು ಇದರ ಬಗ್ಗೆ ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಅದಕ್ಕೆ ಇರುವಂತಹ ಪರಿಹಾರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.

ಮಾಂಗಲಿಕ ದೋಷ ವೆಂದರೇನು?

ಮಾಂಗಲಿಕ ದೋಷ ವೆಂದರೇನು?

ಕುಂಡಲಿಯಲ್ಲಿ 12 ಮನೆಗಳು ಇರುವುದು. ಜನ್ಮ ಕುಂಡಲಿಯಲ್ಲಿ ಮಂಗಳ ಗ್ರಹವು 1,2,4,7, 8 ಮತ್ತು 12ನೇ ಮನೆಯಲ್ಲಿ ಇದ್ದರೆ ಆಗ ಆ ವ್ಯಕ್ತಿಗೆ ಮಾಂಗಲಿಕ ದೋಷವಿದೆ ಎಂದು ಹೇಳಬಹುದು. ಮಾಂಗಲಿಕ ದೋಷವಿರುವ ವ್ಯಕ್ತಿಗೆ ಮಂಗಳ ಗ್ರಹದ ನಕಾರಾತ್ಮಕ ಪರಿಣಾಮವು ಇರುವುದು. ಇದು ಮದುವೆ ವಿಚಾರದಲ್ಲಿ ಹೆಚ್ಚಿನ ಪ್ರಭಾವ ಬೀರುವುದು. ಯಾಕೆಂದರೆ ಮದುವೆ ಸಂದರ್ಭದಲ್ಲಿ ಹುಡುಗ ಹಾಗೂ ಹುಡುಗಿಯ ಕುಂಡಲಿಯು ಹೊಂದಾಣಿಕೆಯಾಗಬೇಕು. ಮದುವೆಗೆ ಮೊದಲು ಜ್ಯೋತಿಷಿಗಳು ಕುಂಡಲಿಯಲ್ಲಿ ಮಂಗಳ ದೋಷವಿದೆಯಾ ಎಂದು ನೋಡುವರು ಮತ್ತು ಇದರ ಬಳಿಕ ಮದುವೆ ಹೊಂದಾಣಿಕೆಯಾಗುವುದೇ ಎಂದು ತಿಳಿಸುವರು.

ಮಾಂಗಲಿಕ ದೋಷದ ಗುಣಲಕ್ಷಣಗಳು

ಮಾಂಗಲಿಕ ದೋಷದ ಗುಣಲಕ್ಷಣಗಳು

ಕುಂಡಲಿಯಲ್ಲಿ ಎರಡೂ ಲಿಂಗದವರಿಗೆ ಮಾಂಗಲಿಕ ದೋಷವು ಕಾಣಿಸಬಹುದು.

ಮಂಗಳ ಗ್ರಹವು ತುಂಬಾ ಆಕ್ರಮಣಕಾರಿ ಎಂದು ಹೇಳಲಾಗುತ್ತದೆ. ಇದರಿಂದ ಮಾಂಗಲಿಕ ದೋಷವಿರುವ ವ್ಯಕ್ತಿಗಳು ಬೇಗನೆ ತಾಳ್ಮೆ ಕಳೆದುಕೊಳ್ಳುವರು.

ಯಾವುದೇ ಸಮಸ್ಯೆಯನ್ನು ತಡೆಯಲು ಮಾಂಗಲಿಕ ದೋಷವಿರುವವರು ತಮ್ಮಲ್ಲಿರುವ ಬೆಂಕಿಯಂತಹ ಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳಬೇಕು.

ಮಾಂಗಲಿಕ ದೋಷದಿಂದಾಗಿ ಮದುವೆಯಲ್ಲಿ ವಿಳಂಬವಾಗಬಹುದು.

ಮಾಂಗಲಿಕ ದೋಷವು ಮದುವೆಯಲ್ಲಿ ಒತ್ತಡ ಮತ್ತು ಅಪಸ್ವರ ಕಾಣಿಸುವಂತೆ ಮಾಡುವುದು.

ಮಾಂಗಲಿಕ ದೋಷವಿರುವಂತಹ ಇಬ್ಬರು ಮದುವೆಯಾದರೆ ಗ್ರಹ ಪ್ರಭಾವ ತಗ್ಗಿಸಬಹುದು.

ಹಿಂದಿನ ಜನ್ಮದಲ್ಲಿ ಸಂಗಾತಿಯೊಂದಿಗೆ ಸರಿಯಾಗಿ ವರ್ತಿಸದೆ ಇರುವಂತಹ ವ್ಯಕ್ತಿಗಳಿಗೆ ಮಾಂಗಲಿಕ ದೋಷವು ಬರುವುದು.

ಮಂಗಳನು ಯಾವಾಗ ಸಮಸ್ಯೆಯುಂಟು ಮಾಡುವನು?

ಮಂಗಳನು ಯಾವಾಗ ಸಮಸ್ಯೆಯುಂಟು ಮಾಡುವನು?

ಮಂಗಳನು ಮೊದಲ ಮನೆಯಲ್ಲಿ ಇರುವಾಗ ವೈವಾಹಿಕ ಜೀವನದಲ್ಲಿ ಜಗಳ ಹಾಗು ಹಿಂಸೆಯು ಉಂಟಾಗುವುದು.

ಎರಡನೇ ಮನೆಯಲ್ಲಿ ಮಂಗಳನಿದ್ದರೆ ಆಗ ವ್ಯಕ್ತಿಯ ಮದುವೆಯಲ್ಲಿ ಹಾಗೂ ವೃತ್ತಿ ಜೀವನದಲ್ಲಿ ಸಮಸ್ಯೆಯಾಗಬಹುದು.

ನಾಲ್ಕನೇ ಮನೆಯಲ್ಲಿ ಮಂಗಳನಿದ್ದರೆ ಆಗ ವೃತ್ತಿಯಲ್ಲಿ ಆ ವ್ಯಕ್ತಿಗೆ ಯಶಸ್ಸು ಸಿಗದು. ಉದ್ಯೋಗವನ್ನು ಪದೇ ಪದೇ ಬದಲಿಸುತ್ತಿರುತ್ತಾನೆ.

ಮಂಗಳನು 7ನೇ ಮನೆಯಲ್ಲಿ ಇದ್ದರೆ

ಮಂಗಳನು 7ನೇ ಮನೆಯಲ್ಲಿ ಇದ್ದರೆ

ಮಂಗಳನು 7ನೇ ಮನೆಯಲ್ಲಿ ಇದ್ದರೆ ಆ ವ್ಯಕ್ತಿಯಲ್ಲಿನ ಶಕ್ತಿಯು ಕ್ರೋಧದಲ್ಲಿ ವ್ಯಯವಾಗುವುದು. ತನ್ನಲ್ಲಿರುವಂತಹ ಅಧಿಕಾರ ಸ್ಥಾಪಿಸುವ ಗುಣದಿಂದಾಗಿ ಕುಟುಂಬದವರೊಂದಿಗೆ ಸರಿಯಾದ ಹೊಂದಾಣಿಕೆಯಾಗದು.

8ನೇ ಮನೆಯಲ್ಲಿ ಮಂಗಳನು ಕುಳಿತಿದ್ದರೆ ಆಗ ವ್ಯಕ್ತಿಯ ಷೋಷಕರಿಂದ ದೂರವಾಗುವನು ಮತ್ತು ಪಿತ್ರಾರ್ಜಿತ ಆಸ್ತಿ ಕಳೆದುಕೊಳ್ಳುವನು. ಮಂಗಳನು 12ನೇ ಮನೆಯಲ್ಲಿ ಇದ್ದರೆ ಆಗ ವ್ಯಕ್ತಿ ಮಾನಸಿಕ ಸಮಸ್ಯೆ, ಆರ್ಥಿಕ ನಷ್ಟ ಮತ್ತು ಶತ್ರುಗಳು ಹೆಚ್ಚಾಗುವರು.

ಮಾಂಗಲಿಕ ದೋಷ ನಿವಾರಣೆಗೆ ಕೆಲವು ವಿಧಾನಗಳು

ಮಾಂಗಲಿಕ ದೋಷ ನಿವಾರಣೆಗೆ ಕೆಲವು ವಿಧಾನಗಳು

ಮಾಂಗಲಿಕ ದೋಷವಿರುವ ಹುಡುಗ ಮತ್ತು ಹುಡುಗಿ ಮದುವೆಯಾದರೆ ದೋಷವು ದೂರವಾಗುವುದು.

ಮಾಂಗಲಿಕ ದೋಷ ನಿವಾರಣೆ ಮಾಡಲು ಕುಂಭ ವಿವಾಹವಾದರೆ ಸಾಧ್ಯವಾಗುವುದು. ಈ ವಿಧದ ಮದುವೆಯಲ್ಲಿ ಮಾಂಗಲಿಕ ದೋಷವಿರುವ ವ್ಯಕ್ತಿಗೆ ಮರದೊಂದಿಗೆ ಮದುವೆ ಮಾಡಿ ದೋಷ ದೂರ ಮಾಡಲಾಗುವುದು.

ಮಾಂಗಲಿಕ ದೋಷ ನಿವಾರಣೆ ಮಾಡಲು ಪ್ರತೀ ಮಂಗಳವಾರ ಉಪವಾಸ ಮಾಡಬೇಕು. ಉಪವಾಸದ ವೇಳೆ ಮಾಂಗಲಿಕ ದೋಷವಿರುವವರು ಕೇವಲ ತೊಗರಿ ಬೇಳೆ ಮಾತ್ರ ಸೇವಿಸಬೇಕು.

ನವಗ್ರಹ ಮಂತ್ರ ಅಥವಾ ಹನುಮಾನ್ ಚಾಲೀಸ ಪಠಿಸಿ

ನವಗ್ರಹ ಮಂತ್ರ ಅಥವಾ ಹನುಮಾನ್ ಚಾಲೀಸ ಪಠಿಸಿ

ಮಾಂಗಲಿಕ ಇರುವವರು ಮಂಗಳವಾರದಂದು ನವಗ್ರಹ ಮಂತ್ರ ಅಥವಾ ಹನುಮಾನ್ ಚಾಲೀಸ ಪಠಿಸಿದರೆ ದೋಷ ದೂರವಾಗುವುದು.

ಮಂಗಳವಾರದಂದು ಪೂಜೆಗಳನ್ನು ಮಾಡುವುದು ಮತ್ತು ಆಂಜನೇಯ ದೇವಸ್ಥಾನಕ್ಕೆ ಹೋಗುವುದರಿಂದ ಮಾಂಗಲಿಕ ದೋಷವನ್ನು ಕಡಿಮೆ ಮಾಡಿಕೊಳ್ಳಬಹುದು.

ಜ್ಯೋತಿಷಿಗಳ ಪ್ರಕಾರ ಮಾಂಗಲಿಕ ದೋಷವಿರುವ ವ್ಯಕ್ತಿಗಳು ಕೆಂಪು ಹವಳವಿರುವ ಬಂಗಾರದ ಉಂಗುರವನ್ನು ಬಲಗೈಯ ಉಂಗುರದ ಬೆರಳಿಗೆ ಧರಿಸಬೇಕು.

ಮಾಂಗಲಿಕ ದೋಷವಿರುವಂತಹ ವ್ಯಕ್ತಿಗಳು 28ರ ಹರೆಯದ ಬಳಿಕ ಮದುವೆಯಾಗಬೇಕು. ಯಾಕೆಂದರೆ ವಯಸ್ಸಾದಂತೆ ದೋಷದ ಪ್ರಭಾವ ಕೂಡ ತಗ್ಗುವುದು.

ಜಾತಕದಲ್ಲಿ ಕಾಡುವ ಕುಜ ದೋಷ! ಹೀಗೂ ಸಮಸ್ಯೆ ಬರಬಹುದು!

ಜಾತಕದಲ್ಲಿ ಕಾಡುವ ಕುಜ ದೋಷ! ಹೀಗೂ ಸಮಸ್ಯೆ ಬರಬಹುದು!

ಜಾತಕದಲ್ಲಿ ಕೆಲವೊಂದು ದೋಷಗಳು ಇದ್ದರೆ ಮದುವೆಯಾಗಲು ಹಿಂಜರಿಯುತ್ತಾರೆ. ಅದರಲ್ಲೂ ಮಂಗಳಿಕ ದೋಷ ಪ್ರಮುಖವಾಗಿರುವಂತದ್ದು. ಸಂಸ್ಕೃತದಲ್ಲಿ ಮಂಗಳ ಗ್ರಹಕ್ಕೆ ಮಂಗಳವೆಂದು ಕರೆಯಲಾಗುತ್ತದೆ. ಜಾತಕದಲ್ಲಿ ಮಂಗಳವು 1, 2, 4, 7, 8 ಮತ್ತು 12ನೇ ಮನೆಯಲ್ಲಿದ್ದಾಗ ಇದನ್ನು ಮಂಗಳ ದೋಷವೆಂದು ಕರೆಯಲಾಗುವುದು ಮತ್ತು ಜನರು ಇದನ್ನು ಮಂಗಳಿಕ ಎಂದು ಕರೆಯುತ್ತಾರೆ. ಈ ದೋಷವು ಯಾರಿಗೂ ಬರಬಹುದು. ಗೌರವ, ಅಹಂ, ಸ್ವಾಭಿಮಾನ ಮತ್ತು ಶಕ್ತಿಯ ಸಂಕೇತವೇ ಮಂಗಳ. ಆದರೆ ಮಂಗಳ ದೋಷದಲ್ಲಿ ಸಂಬಂಧವು ದುರ್ಬಲವಾಗುವ ಸಾಧ್ಯತೆಗಳು ಹೆಚ್ಚಿರುವುದು. ಇದನ್ನು ಸರಿಯಾಗಿ ಬಳಸಿಕೊಂಡರೆ ಮಂಗಳ ದೋಷವು ಶಕ್ತಿಯನ್ನು ನೀಡುವುದು. ಜಾತಕದಲ್ಲಿ ಮಂಗಳ ದೋಷವಿದ್ದರೆ ಅದರಿಂದ ವೈವಾಹಿಕ ಜೀವನ, ಮಾನಸಿಕ ಆರೋಗ್ಯ ಮತ್ತು ಹಣಕಾಸಿನ ಮೇಲೆ ಪರಿಣಾಮ ಉಂಟಾಗಬಹುದು.

ಮಂಗಳ ದೋಷದ ಪರಿಣಾಮ

ಮಂಗಳ ದೋಷದ ಪರಿಣಾಮ

ಜನ್ಮ ಜಾತಕದಲ್ಲಿ ಮಂಗಳಗ್ರಹ ಯಾವ ಮನೆಯಲ್ಲಿದೆ ಎಂದು ಅರ್ಥಮಾಡಿಕೊಂಡರೆ ಮಂಗಳ ದೋಷದ ಪರಿಣಾಮವು ತಿಳಿದುಬರುವುದು. 12ರಲ್ಲಿ ಆರು ಮನೆಗಳಲ್ಲಿ ಮಂಗಳವಿದ್ದರೆ ಆಗ ಅದು ಮಂಗಳನ ಕೆಟ್ಟ ಪ್ರಭಾವವೆಂದು ಭಾವಿಸಲಾಗುತ್ತದೆ.

ಒಂದನೇ ಮನೆಯಲ್ಲಿ ಮಂಗಳ ಗ್ರಹವಿದ್ದರೆ

ಒಂದನೇ ಮನೆಯಲ್ಲಿ ಮಂಗಳ ಗ್ರಹವಿದ್ದರೆ

ಜಾತಕದಲ್ಲಿ ಒಂದನೇ ಮನೆಯಲ್ಲಿ ಮಂಗಳ ಗ್ರಹವಿರುವವರು ತುಂಬಾ ಕ್ಷೋಬೆಗೊಳಗಾದವರು, ಆಕ್ರಮಣಕಾರಿಗಳು ಮತ್ತು ಅಸಭ್ಯರಾಗಿರುವರು. ಜೀವನದಲ್ಲಿ ಸಂತೋಷ ಕಳೆದುಕೊಳ್ಳುವುದು 1ನೇ ಮನೆಯಲ್ಲಿ ಮಂಗಳವಿರುವ 4ನೇ ಅಂಶದ ಲಕ್ಷಣ. ಇದರ 7ನೇ ಅಂಶವೆಂದರೆ ಚಿಂತೆ ಹಾಗೂ ತೊಂದರೆಯುಂಟು ಮಾಡಿ ಪತಿ ಮತ್ತು ಪತ್ನಿ ಮಧ್ಯೆ ಭಿನ್ನಾಭಿಪ್ರಾಯ ಉಂಟು ಮಾಡಬಹುದು. 8ನೇ ಅಂಶವೆಂದರೆ ನಿಮ್ಮ ಸುಖ ಜೀವನದ ಮೇಲೆ ಅಪಾಯದ ಸಂಭವವಿದೆ ಎನ್ನುವ ಸೂಚನೆ.

2ನೇ ಮನೆಯಲ್ಲಿ ಮಂಗಳನ ದೋಷ

2ನೇ ಮನೆಯಲ್ಲಿ ಮಂಗಳನ ದೋಷ

ಎರಡನೇ ಮನೆಯು ಸಂಪತ್ತು ಮತ್ತು ಕುಟುಂಬದ ಮನೆಯಾಗಿದೆ. ಮಂಗಳವು ಈ ಗ್ರಹದಲ್ಲಿ ಇದ್ದರೆ ಅದರಿಂದ ಆ ವ್ಯಕ್ತಿಯ ಕುಟುಂಬದೊಂದಿಗೆ ಸಂಬಂಧದ ಮೇಲೆ ಪರಿಣಾಮ ಬೀರುವುದು. ಇದು ಸಂಗಾತಿಗಳನ್ನು ಬೇರ್ಪಡಿಸಬಹುದು ಅಥವಾ ಪದೇ ಪದೇ ಜಗಳ ಮತ್ತು ಆತಂಕ ಉಂಟು ಮಾಡಬಹುದು. 2ನೇ ಮನೆಯಲ್ಲಿರುವ ಮಂಗಳನು ವ್ಯಕ್ತಿಯ ಕುಂಡಲಿಯಲ್ಲಿ 5, 8 ಮತ್ತು 9ನೇ ಮನೆಯ ಮೇಲೂ ಪ್ರಭಾವ ಬೀರಬಹುದು. ಮಂಗಳಿಕ ಹೊಂದಿರುವ ವ್ಯಕ್ತಿಯ ಮಕ್ಕಳ ಮೇಲೂ ಇದರ ಪರಿಣಾಮವಾಗಬಹುದು.

4ನೇ ಮನೆಯಲ್ಲಿ ಮಂಗಳ

4ನೇ ಮನೆಯಲ್ಲಿ ಮಂಗಳ

ಮಂಗಳವು ನಾಲ್ಕನೇ ಮನೆಯಲ್ಲಿದ್ದರೆ ಅದರ ಅಂಶವು ಕುಂಡಲಿಯ 7, 10 ಮತ್ತು 11ನೇ ಮನೆಯಲ್ಲಿರುವುದು. ಮಂಗಳವು ನಾಲ್ಕನೇ ಮನೆಯಲ್ಲಿ ಇದ್ದರೆ ಅದರಿಂದ ಸ್ಥಿರ ಸಂಪತ್ತು ಮತ್ತು ಸಮೃದ್ಧಿ ಸಿಗುವುದು. ಆದರೆ ವೈವಾಹಿಕ ಜೀವನದಲ್ಲಿ ತೊಂದರೆ ಕಾಣಿಸುವುದು. ಕುಂಡಲಿಯ ವ್ಯಕ್ತಿಯು ಹೊಂದಾಣಿಕೆ ಮಾಡಿಕೊಳ್ಳದೆ ಇರುವುದರಿಂದ ಹೀಗೆ ಆಗುವುದು. ಆದರೆ ಇದರಿಂದ ಸಂಬಂಧಿಗಳಿಗೆ ಯಾವುದೇ ಅಪಾಯವಿಲ್ಲ.

7ನೇ ಮನೆಯಲ್ಲಿ ಮಂಗಳ ದೋಷ

7ನೇ ಮನೆಯಲ್ಲಿ ಮಂಗಳ ದೋಷ

ಇದು ಮದುವೆ ಮತ್ತು ಜತೆಗಾರಿಕೆಯ ಮನೆಯಾಗಿದೆ. 7ನೇ ಮನೆಯಲ್ಲಿ ಮಂಗಳ ದೋಷವಿದ್ದರೆ ಅದರಿಂದ ಮದುವೆಗೆ ಹಾನಿಯಾಗಬಹುದು. ಈ ದೋಷವಿರುವವರು ಅನಾರೋಗ್ಯ ಹೊಂದಿರುವ ಪತ್ನಿಯನ್ನು ಪಡೆಯಬಹುದು ಅಥವಾ ಮಹಿಳೆಯರಿಗೆ ತುಂಬಾ ಕೋಪಿಷ್ಠ ಪತಿ ಸಿಗಬಹುದು.

8ನೇ ಮನೆಯಲ್ಲಿ ಮಂಗಳ ದೋಷ

8ನೇ ಮನೆಯಲ್ಲಿ ಮಂಗಳ ದೋಷ

ಇದು ಜೀವನದಲ್ಲಿ ಸುಖದುಃಖ ಮತ್ತು ಪರಿಸ್ಥಿತಿಯ ಸಂಕೇತ. ಈ ಮನೆಯಲ್ಲಿ ಮಂಗಳ ದೋಷವಿದ್ದರೆ ಅದು ತುಂಬಾ ಕೆಟ್ಟದು. ಇದು ವೈವಾಹಿಕ ಜೀವನದಲ್ಲಿ ಖಿನ್ನತೆ ಉಂಟು ಮಾಡಬಹುದು. ಆರ್ಥಿಕ ಪರಿಸ್ಥಿತಿ, ಸಂಗಾತಿಯ ಅನಾರೋಗ್ಯ ಮತ್ತು ಇತರ ಕೆಲವೊಂದು ಕಾರಣಗಳಿಂದ ಖಿನ್ನತೆ ಉಂಟಾಗಬಹುದು.

English summary

Most Successful Remedies To Mitigate Manglik Dosh!

In Vedic astrology, the Mangal dosha is considered to be a serious astrological condition that affects a person's life, marriage and only brings misfortune. It is also known as the Kuja dosha, Bhom dosha or Angrakha dosha. In astrology it is considered as the placement of the planet Mars more commonly known as Mangal, in the 1st, 2nd, 4th, 7th, 8th and 12th house of a person's horoscope chart. Out of a total of twelve houses its occurrence in any of these six houses causes this dosha. Those who have this dosha are called Mangliks.
X
Desktop Bottom Promotion