Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಪವಾಡ: ಅನಂತ ಪದ್ಮನಾಭ ದೇವಾಲಯ ಕೊಳದಲ್ಲಿ ದೇವರ ಮೊಸಳೆ ಬಬಿಯಾ ಸ್ಥಾನ ತುಂಬಲು ಬಂದಿದೆ ಮರಿ ಮೊಸಳೆ!
ಕೇರಳದ ಅನಂತ ಪದ್ಮನಾಭ ದೇವಾಲಯದ ಹಲವು ವಿಶೇಷತೆಗಳಲ್ಲಿ ಅಲ್ಲಿರುವ ಕೊಳ ತುಂಬಾನೇ ವಿಶೇಷ.... ಆ ಕೊಳದಲ್ಲಿ ಬಬಿಯಾ ಎಂಬ ಮೊಸಳೆ ಇತ್ತು, ಆ ಮೊಸಳೆ ಸಸ್ಯಾಹಾರಿ ಆಗಿತ್ತು, ದೇವಾಲಯದಿಂದ ನೀಡುವ ಪ್ರಸಾದ ತಿಂದು ಜೀವಿಸುತ್ತಿತ್ತು. ಸುಮಾರು 70 ಕ್ಕೂ ಅಧಿಕ ವರ್ಷಗಳ ಬದುಕಿದ್ದ ಬಬಿಯಾ ಶ್ರೀ ವಿಷ್ಣುವಿನಲ್ಲಿ ಐಕ್ಯವಾದಾಗಿನಿಂದ ಅಲ್ಲಿಗೆ ಹೋಗುವ ಭಕ್ತರು ದೇವರ ಮೊಸಳೆಯನ್ನು ತುಂಬಾನೇ ಮಿಸ್ ಮಾಡುತ್ತಿದ್ದರು.

ಪವಾಡವೆಂಬಂತೆ ಮರಿ ಮೊಸಳೆ ಕಾಣಿಸಿಕೊಂಡಿದೆ
ಇದೀಗ ಬಬಿಯಾ ದೇವರ ಪಾದ ಸೇರಿ ಒಂದು ವರ್ಷ ಕಳೆಯುತ್ತಿದ್ದಂತೆ ಅದೇ ಕೊಳದಲ್ಲಿ ಮರಿ ಮೊಸಳೆ ಪ್ರತ್ಯಕ್ಷವಾಗಿರುವುದು ಭಕ್ತರಿಗೆ ಅಚ್ಚರಿ ಜೊತೆಗೆ ಖುಷಿ ತಂದಿದೆ. ಬಬಿಯಾ ಮತ್ತೆ ಬಂದಿದೆ ಎಂದು ಜನರು ನಂಬಲಾರಂಭಿಸಿದ್ದಾರೆ. ಈ ಮೊಸಳೆ ಎಲ್ಲರ ಕಣ್ಣಿಗೆ ಕಾಣಿಸಿಕೊಳ್ಳುತ್ತಿಲ್ಲ, ಜನರನ್ನು ಕಂಡರೆ ಸ್ವಲ್ಪ ಭಯವಿದೆ, ಆದರೆ ಅಲ್ಲಿಯ ಅರ್ಚಕರಿಗೆ ಹಾಗೂ ಕೆಲ ಭಕ್ತರ ಕಣ್ಣಿಗೆ ಈ ಮೊಸಳೆ ಕಂಡಿದೆ.
ದೇವಾಲಯದ ಮೂಲಗಳು ಹೇಳಿದ ಮತ್ತೊಂದು ಅಚ್ಚರಿಯ ವಿಶೇಷ
ಮೊದಲು ಈ ಮೊಸಳೆ ಕಾಣಿಸಿದ್ದು ಒಂದು ಮಗುವಿಗಂತೆ. ಕಾಙಂಗಾಡಿನಿಂದ ಒಂದು ಕುಟುಂಬ ದೇವಾಲಯಕ್ಕೆ ಬಂದಿದ್ದರು, ಆವಾಗ ಅವರ ಜೊತೆಗಿದ್ದ ಮಗು ನನಗೆ ಮೊಸಳೆ ನೋಡಬೇಕು ಎಂದು ಹಠ ಹಿಡಿಯಿತು, ಮನೆಯವರು ಈವಾಗ ಮೊಸಳೆ ಇಲ್ಲ ಎಂದು ಎಷ್ಟೇ ಸಮಧಾನ ಮಾಡಿದರೂ ಮಗು ಕೇಳಲಿಲ್ಲ, ಆದರೆ ಅಚ್ಚರಿ ಎಂಬಂತೆ ಅದೇ ಸಮಯದಲ್ಲಿ ಈ ಮರಿ ಮೊಸಳೆ ಕಣ್ಣಿಗೆ ಬಿದ್ದಿದೆ. ಅದನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಕ್ಷೇತ್ರದವರಿಗೆ ತೋರಿಸಿದಾಗ ಅವರೆಲ್ಲಾ ಬಂದು ನೋಡಿದಾಗ ಮೊಸಳೆ ಕಣ್ಣಿಗೆ ಬಿದ್ದಿಲ್ಲ. ಹಾಗಾಗಿ ಆ ಕೊಳದಲ್ಲಿ ನಿಜವಾಗಿಯೂ ಮೊಸಳೆ ಇದೆಯೇ ಎಂಬ ಸಂಶಯವಿತ್ತು.
ಆದರೆ ಅದೇ ಕುಟುಂಬ ಮತ್ತೊಮ್ಮೆ ಆ ದೇವಾಲಯಕ್ಕೆ ಬಂದಾಗ ಅವರಿಗೆ ಎರಡನೇ ಬಾರಿ ಕೂಡ ಮೊಸಳೆ ಕಾಣಿಸಿತು. ಈ ಬಾರಿ ದೇವಾಲಯದ ಅರ್ಚಕರಿಗೆ, ಅಲ್ಲಿಗೆ ಬಂದಿದ್ದ ಭಕ್ತರಿಗೆಲ್ಲಾ ಕಾಣಿಸಿತು. ಜನರ ಜೊತೆ ಇನ್ನೂ ಬರೆಯುತ್ತಿಲ್ಲ, ನಿಧಾನಕ್ಕೆ ಬಬಿಯಾ ರೀತಿಯೇ ಈ ಮೊಸಳೆ ಎಲ್ಲರಿಗೂ ದರ್ಶನ ಭಾಗ್ಯ ನೀಡಬಹುದು.ಮರಿ ಬಬಿಯಾ ಬಂದಿರುವುದಂತೂ ಭಕ್ತರಿಗೆ ತುಂಬಾನೇ ಖುಷಿ ತಂದಿದೆ.
ಈ ಕೊಳದಲ್ಲಿ ಒಂದು ಮೊಸಳೆ ಹೋದರೆ ಮತ್ತೊಂದು ತಾನಾಗಿಯೇ ಬರುತ್ತದೆ ಎಂಬ ಮಾತು ನಿಜವಾಗಿದೆ
ಬಬಿಯಾ ಬರುವುದಕ್ಕಿಂತ ಮುಂಚೆ ಒಂದು ಮೊಸಳೆಯಿತ್ತು, ಅದನ್ನು ಬ್ರಿಟಿಷರು ಗುಂಡು ಹಾಕಿ ಕೊಂಡರು, ಅದಾದ ಸ್ವಲ್ಪ ದಿನಗಳಲ್ಲಿ ಅಲ್ಲಿ ಮತ್ತೊಂದು ಮೊಸಳೆ ಮರಿ ಕಾಣಿಸಿತು. ಅದುವೇ ಬಬಿಯಾ... 70ಕ್ಕೂ ಅಧಿಕ ವರ್ಷ ಜೀವಿಸಿದ ಆ ಮೊಸಳೆ ಅರ್ಚಕರು ಬಬಿಯಾ ಅಂತ ಕೂಗಿದರೆ ಸಾಕು ಪ್ರತ್ಯಕ್ಷವಾಗಿ ಬಂದು ಪ್ರಸಾದ ತಿಂದು ಹೋಗುತ್ತಿತ್ತು,ಅರ್ಚರು ಮೊಸಳೆ ಬಂದಾಗ ಯಾವುದೇ ಭಯವಿಲ್ಲದೆ ಅದರ ಹಣೆಮುಟ್ಟಿ, ಹಣೆಗೆ ಚಂದನವಿಡುತ್ತಿದ್ದರು. ದೇವರ ಈ ಚಮತ್ಕಾರ ನೋಡಲೆಂದೇ ಭಕ್ತರು ಕಾಯುತ್ತಿದ್ದರು. ಬಬಿಯಾ ಕಾಲವಾದ ಬಳಿಕ ದೇವಾಸ್ಥಾನಕ್ಕೆ ಬಂದವರೆಲ್ಲಾ ಬಬಿಯಾವನ್ನು ತುಂಬಾನೇ ಮಿಸ್ ಮಾಡುತ್ತಿದ್ದರು. ಮತ್ತೊಂದು ಮೊಸಳೆ ಖಂಡಿತ ಬರುತ್ತದೆ ಎಂದು ಜನರು ಬಲವಾಗಿ ನಂಬಿದ್ದರು, ಅದರಂತೆ ಮೊಸಳೆ ಕಾಣಿಸಿಕೊಂಡಿದೆ.



Click it and Unblock the Notifications
