Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಈ ವ್ಯಕ್ತಿ ವಿಶ್ವದ ಶ್ರೀಮಂತ ಖೈದಿ : ಟ್ರಂಪ್‌ಗೂ ಇವರೇ ಬ್ಯಾಂಕರ್, ಕ್ರಿಪ್ಟೋದಲ್ಲಿ ಕಿಂಗ್
ಚಾಂಗ್‌ಪಂಗ್ ಜಾಹೋ ಅಲಿಯಾಸ್ CZ ಜೈಲ್‌ನಿಂದ ಬಿಡುಗಡೆಯಾಗಿದ್ದು ಇವರ ಬಿಡುಗಡೆಯನ್ನು ದಿ ಕಿಂಗ್ ಈಸ್ ಬ್ಯಾಕ್ ಎಂಬ ಟೈಟಲ್ ನೀಡಿ ಜನರು ಸ್ವಾಗತಿಸಿದ್ದಾರೆ. ಈತ ಪ್ರಪಂಚದ ಶ್ರೀಮಂತ ಖೈದಿಯಾಗಿದ್ದ, ಈತನಿಗೆ ಹಾಕಿದ ಫೈನ್ ಕೇಳಿದರೆ ಅಬ್ಬಾ! ಎಂದು ಹೇಳುವಿರಿ, ಹೌದು ಈತನಿಗೆ ಬರೋಬರಿ 1600 ಕೋಟ ದಂಡ ಕಟ್ಟುವಂತೆ ಕೋರ್ಟ್ ಹೇಳಿದೆ.

ಕ್ರಿಪ್ಟೋಕರೆನ್ಸಿಯಲ್ಲಿ ತುಂಬಾನೇ ಸದ್ದು ಮಾಡಿದ CZ
ಈತ ವಿಶ್ವದ ಶ್ರೀಮಂತ ಉದ್ಯಮಿ, ಕ್ರಿಪ್ಟೋ ಕರೆನ್ಸಿ ಎಕ್ಸ್‌ಚಂಜ್‌ನಲ್ಲಿ ತುಂಬಾನೇ ಪ್ರಭಾವಿ. Binance ಎಂಬ ದೈತ್ಯ ಕಂಪನಿಯ ಮಾಜಿ ಸಿಇಒ, ಈಗ ಜೈಲಿನಿಂದ ಹೊರ ಬಂದಿರುವ ಇವರು ಡಿಪಾರ್ಟ್‌ಮೆಂಟ್ ಆಫ್ ಜಸ್ಟೀಸ್ ಆರ್ಡರ್ ಪ್ರಕಾರ ಇನ್ನು ಮುಂದೆ ಬಿನಾನ್ಸ್ ಕಂಪನಿಯಲ್ಲಿ ಸಿಇಒ ಆಗಿ ಮುಂದುವರೆಯುವಂತಿಲ್ಲ, ಈ ಬಗ್ಗೆ ಪ್ರತಿಕ್ರಿಯಿಸಿದ ಸಿಜೆ ಈ ಪರಿಸ್ಥಿತಿಯ ಬಗ್ಗೆ ನನಗ ಅರಿವಿದೆ, ಪರಿಸ್ಥಿತಿಯನ್ನು ಒಪ್ಪಿಕೊಳ್ಳಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೆ ಮರಳುವ ಆಲೋಚನೆಯೂ ನನ್ನಲ್ಲಿ ಇಲ್ಲ ಎಂಬುವುದಾಗಿ ಹೇಳಿದ್ದಾರೆ.
ಬಿನಾನ್ಸ್‌ನಲ್ಲಿ ಕೆಲಸ ಮಾಡಿದ್ದಕ್ಕೆ ಖುಷಿ ಇದೆ, ಆ ಅಧ್ಯಾಯ ನನ್ನ ಪಾಲಿಗೆ ಮುಗಿದಿದೆ ಎಂಬುವುದಾಗಿ ಹೇಳುತ್ತಾರೆ. ಎಕ್ಸ್ಜೇಂಜ್ ಮಾರ್ಕೆಟ್‌ನಲ್ಲಿ ಇವರ ಷೇರುಗಳನ್ನು ಖರೀದಿಸಲು ಹಲವರು ಮುಂದೆ ಬಂದಿದ್ದಾರೆ ಎಂಬುವುದಾಗಿ ಕೂಡ ಹೇಳಿದ್ದಾರೆ. ಇದರ ಬಗ್ಗೆ ಭವಿಷ್ಯದಲ್ಲಿ ಆಲೋಚನೆ ಮಾಡುವುದಾಗಿ ಸಿಜೆ ಹೇಳಿದ್ದಾರೆ.

ಬಿನಾನ್ಸ್ ಲೋಗೋವನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ
ಈಗ ಬಿನಾನ್ಸ್ ಬಿಡಲೇಬೇಕಾದ ಪರಿಸ್ಥಿತಿ ಬಂದಿದೆ, ಆದರೆ ಅವರು ಬಿನಾನ್ಸ್ ಕಂಪನಿಯನ್ನು ಎಷ್ಟು ಇಷ್ಟಪಡುತ್ತಿದ್ದರು ಎಂಬುವುದಕ್ಕೆ ಅವರು ಕೈಯಲ್ಲಿ ಹಾಕಿಕೊಂಡ ಹಚ್ಚೆಯೇ ಸಾಕ್ಷಿ, ತನ್ನ ಕಂಪನಿಯನ್ನು ಅಷ್ಟೊಂದು ಪ್ರೀತಿಸಿದ್ದ ವ್ಯಕ್ತಿಗೆ ಈಗ ಆ ಕಂಪನಿಯನ್ನು ಬಿಡಲೇಬೇಕಾದ ಪರಿಸ್ಥಿತಿ ಬಂದಿದೆ.
ಟ್ರಂಪ್ ವಿಜಯ ಸಿಜೆಗೆ ಅನುಕೂಲಕರವಾಗಿದೆ
ಟ್ರಂಪ್‌ನ ದೊಡ್ಡ ಬ್ಯಾಂಕ್ ಸಪೋರ್ಟರ್ ಎಂದರೆ ಸಿಜೆ. ಟ್ರಂಪ್ ಅಧ್ಯಕ್ಷೀಯ ಪ್ರಚಾರಕ್ಕೆ ಸಿಜೆ ತುಂಬಾನೇ ಫಂಡ್ ಮಾಡಿದ್ದಾರೆ. ಇದೀಗ ಟ್ರಂಪ್ ಜಯ ಇವರಿಗೆ ಪ್ಲಸ್ ಪಾಯಿಂಟ್ ಆಗಲಿದೆ. ಟ್ರಂಪ್ ಜಯದಿಂದ ಇವರ ಒಂದು ದಿನದ ನೆಟ್‌ವರ್ತ್ $12.1 ಬಿಲಿಯನ್ ಇದೆ, ಅಲ್ಲದೆ X ಮಾಧ್ಯಮವನ್ನು ಎಲನ್ ಮಸ್ಕ್ ಟೇಕ್ ಓವರ್ ಮಾಡಿದ್ದಕ್ಕೆ ತೃಪ್ತಿಯಿದೆ ಎಂಬುವುದಾಗಿ ಕೇಳಿದ್ದಾರೆ.
ಜಾಹೋವನ್ನು ಏಪ್ರಿಲ್ 30ಕ್ಕೆ ಜೈಲಿಗೆ ಕಳುಹಿಸಲಾಯ್ತು, ಕ್ರಿಪ್ಟೋಕರೆನ್ಸಿ ವ್ಯವಹಾರದಲ್ಲಿ ಕಾನೂನು ವಿರುದ್ಧ ನಡೆದುಕೊಳ್ಳಲಾಯ್ತು ಎಂದು ಅವರ ವಿರುದ್ಧ ಕಾನನೂನು ಕ್ರಮ ಕೈಗೊಳ್ಳಲಾಯ್ತು.
ಜಾಹೋ ಚೀನಾದಲ್ಲಿ 1977ರಲ್ಲಿ ಜನಿಸಿದರು, 12 ವರ್ಷ ಇದ್ದಾಗ ಕೆನಾಡಗೆ ಹೋದರು, ವಿದ್ಯಾಭ್ಯಾಸ ಬಳಿಕ ಟೋಕಿಯಾದಲ್ಲಿ ಕೆಲಸಕ್ಕೆ ಸೇರಿಕೊಂಡರು, ಆವಾಗ ಅವರಿಗೆ ಈ ಕ್ರಿಪ್ಟೋಕರೆನ್ಸಿ ಕ್ಷೇತ್ರದತ್ತ ಆಸಕ್ತಿ ಹೆಚ್ಚಾಯ್ತು. ಬಿನಾನ್ಸ್ ಕಂಪನಿ ಈಗಲೂ ವಿಶ್ವದ ಅರ್ಧ ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ಮಾಡುತ್ತಿದೆ.



Click it and Unblock the Notifications
