Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಮಹಾಶಿವರಾತ್ರಿ 2022: ಶಿವ ಪೂಜೆಗೆ ಈ ಹೂಗಳನ್ನು ಬಳಸಿ
ಹಿಂದೂಗಳು ಬಹು ನಿರೀಕ್ಷೆಯಿಂದ ಕಾಯುತ್ತಿರುವ ಮಹಾಶಿವರಾತ್ರಿಯನ್ನು ಮಾರ್ಚ್ 1ರಂದು ಆಚರಿಸಲಾಗುತ್ತಿದೆ. ಶಿವರಾತ್ರಿ ಶಿವನಿಗೆ ತುಂಬಾ ಪ್ರಿಯವಾದ ದಿನ. ಈ ದಿನ ಶಿವನ ಭಕ್ತರು ಶಿವನ ಆರಾಧನೆಯಲ್ಲಿ ತೊಡಗಿಕೊಳ್ಳುತ್ತಾರೆ. ಶಿವನು ಪಾರ್ವತಿ ದೇವಿಯನ್ನು ಮದುವೆಯಾದ ದಿನ ಶಿವರಾತ್ರಿ ಎಂದು ಹೇಳಲಾಗುವುದು. ಶಿವನು ಗಂಗೆಯನ್ನು ಭೂಮಿಗೆ ಹರಿಯ ಬಿಟ್ಟದ್ದು ಇದೇ ದಿನ ಎಂಬ ಪೌರಾಣಿಕ ಕತೆಯೂ ಇದೆ.
ಶಿವ ಪೂಜೆಯಲ್ಲಿ ಶಿವನಿಗೆ ಇಷ್ಟವಾದ ರೀತಿಯಲ್ಲಿ ಪೂಜೆ ಮಾಡಬೇಕು, ಅದರಲ್ಲೂ ಬಿಲ್ವೆ ಪತ್ರೆ ಇರಲೇಬೇಕು. ಅಲ್ಲದೆ ಶಿವನಿಗೆ ಕೆಲವೊಂದು ಪ್ರಿಯವಾದ ಹೂಗಳಿವೆ, ಅವುಗಳನ್ನು ಪೂಜೆಗೆ ಬಳಸಿದರೆ ಇನ್ನೂ ಒಳ್ಳೆಯದು.

ಕಣಗಿಲೆ ಹೂ
ಶಿವನ ಕಣಗಿಲೆ ಹೂವನ್ನು ಅರ್ಪಿಸಲಾಗುವುದು. ಈ ಹೂವಿನ ಗಿಡ ಬೆಳೆಸುವುದು ಸುಲಭವಾಗಿ ಬೆಳೆಯುವುದು, ಅಲ್ಲದೆ ಈ ಗಿಡದಲ್ಲಿ ಎಲ್ಲಾ ಸಮಯದಲ್ಲೂ ಹೂ ಇರುತ್ತದೆ.

ಕಾಡು ಕಣಗಿಲೆ
ಹಳದಿ ಬಣ್ಣದ ಈ ಹೂ ಶಿವನಿಗೆ ತುಂಬಾ ಪ್ರಿಯವಾದ ಹೂವಾಗಿದೆ. ಈ ಹೂ ಸಾಮಾನ್ಯವಾಗಿ ಎಲ್ಲಾ ಶಿವನ ದೇವಾಲಯಗಳಲ್ಲಿ ಇರುತ್ತದೆ.

ಪಾರಿಜಾತ
ಶಿವನಿಗೆ ಪಾರಿಜಾತ ಹೂ ಕೂಡ ತುಂಬಾ ಪ್ರಿಯವಾದ ಹೂವಾಗಿದೆ. ನೀವು ಶಿವನಿಗೆ ಪಾರಿಜಾತ ಹೂವನ್ನು ಹರಿಕೆ ಜೊತೆ ಅರ್ಪಿಸಿ.

ಗುಲಾಬಿ:
ನೀವು ಕೆಂಪು, ಬಿಳಿ ಹೀಗೆ ಯಾವುದೇ ಬಣ್ಣದ ಹೂವುಗಳನ್ನು ಶಿವನ ಪೂಜೆಯಲ್ಲಿ ಬಳಸಬಹುದು.

ಮಲ್ಲಿಗೆ ಹೂ:
ಶಿವನ ಆರಾಧನೆ ಮಲ್ಲಿಗೆ ಹೂವನ್ನು ಬಳಸಬಹುದು. ದುಂಡು ಮಲ್ಲಿಗೆಯ ಸುವಾಸನೆ ಶಿವನಿಗೆ ತುಂಬಾ ಪ್ರಿಯವಂತೆ.

ಎಕ್ಕ ಗಿಡದ ಹೂ
ಬಿಡಿಸಿದ ಎಕ್ಕ ಗಿಡದ ಹೂ ಶಿವನಿಗೆ ಅರ್ಪಿಸಬಹುದು. ಶಿವಲಿಂಗಕ್ಕೆ ಈ ಹೂಗಳನ್ನು ಅರ್ಪಿಸುವುದರಿಂದ ರೋಗ-ರುಜಿನಗಳು ದೂರಾಗುವುದು ಎಂದು ಹೇಳಲಾಗುವುದು.

ಶಂಖ ಪುಷ್ಪ
ಶಂಖ ಪುಷ್ಪ ಕೂಡ ಶಿವನಿಗೆ ತುಂಬಾ ಪ್ರಿಯವಾದ ಹೂ.. ನೀಲಿ ಬಣ್ಣದ ಹೂ ನೋಡಲು ಶಂಖದ ರೀತಿಯಲ್ಲಿ ಇರುತ್ತದೆ, ಈ ಹೂವನ್ನು ಪೂಜೆಗೆ ಬಳಸಲಾಗುವುದು.



Click it and Unblock the Notifications
