For Quick Alerts
ALLOW NOTIFICATIONS  
For Daily Alerts

ನ.30 ಕಾರ್ತಿಕ ಪೌರ್ಣಿಮೆಯಂದು ಚಂದ್ರಗ್ರಹಣ: ಎಷ್ಟು ಹೊತ್ತಿಗೆ ಸೂತಕ ಕಾಲ?

|

ನವೆಂಬರ್‌ 30ಕ್ಕೆ ಚಂದ್ರಗ್ರಹಣ. ಈ ಚಂದ್ರಗ್ರಹಣ ಹಲವು ವಿಶೇಷಗಳಿಂದ ಕೂಡಿದೆ, ಏಕೆಂದರೆ ಈ ವರ್ಷದ ಅಷ್ಟೇ ಏಕೆ ಈ ದಶಕದ ಕೊನೆಯ ಚಂದ್ರಗ್ರಹಣ ಕೂಡ ಹೌದು.

ಚಂದ್ರ ಗ್ರಹಣವಿರಲಿ, ಸೂರ್ಯ ಗ್ರಹಣವಿರಲಿ ನಭೋ ಮಂಡಲದಲ್ಲಿ ನಡೆಯುವ ಒಂದು ಕೌತುಕ. ಸೂರ್ಯಗ್ರಹಣ ಅಮವಾಸ್ಯೆ ದಿನ ಬಂದರೆ ಚಂದ್ರಗ್ರಹಣ ಹುಣ್ಣಿಮೆಯಂದು ಉಂಟಾಗುವುದು. ಹಾಗಂತ ಎಲ್ಲಾ ಹುಣ್ಣಿಮೆ, ಅಮವಾಸ್ಯೆಗೆ ಗ್ರಹಣ ಉಂಟಾಗುವುದಿಲ್ಲ.

Lunar eclipse of 2020 date

ಭೂಮಿ, ಸೂರ್ಯ, ಚಂದ್ರ ಮೂರು ಒಂದೇ ಸರಳ ರೇಖೆಯಲ್ಲಿ ಬಂದಾಗ ಮಾತ್ರ ಗ್ರಹಣ ಉಂಟಾಗುವುದು. ಚಂದ್ರಗ್ರಹಣದಲ್ಲಿ ಭೂಮಿಯ ನೆರಳು ಚಂದ್ರನ ಮೇಲೆ ಬೀಳುವುದು, ಇದರಿಂದಾಗಿ ಚಂದ್ರನಿಗೆ ಗ್ರಹಣ ಹಿಡಿಯುವುದು.

ಶ್ರೀ ಶ್ರೀನಿವಾಸ್ ಗುರೂಜಿ
ಶ್ರೀ ಸಾಯಿ ಅನುಗ್ರಹ ಜ್ಯೋತಿಷ್ಯ ಪೀಠ
ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ
ಕರಾವಳಿ ವಂಶಪರಂಪರೆ ಮನೆತನದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು
ನಿಮ್ಮ ಸಮಸ್ಯೆಗಳಾದ-
ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ, ಅತ್ತೆ-ಸೊಸೆ ಕಲಹ, ಹಣಕಾಸಿನ ತೊಂದರೆ, ಮದುವೆಯಲ್ಲಿ ಅಡೆತಡೆ, ಸತಿ ಪತಿ ಕಲಹ, ಸಂತಾನ ಸಮಸ್ಯೆ, ಆರೋಗ್ಯ, ಉದ್ಯೋಗ, ಸಾಲ ಭಾದ, ಲವ್ ಪ್ರಾಬ್ಲಮ್ ಇನ್ನು ಯಾವುದೇ ಜಟಿಲ ಸಮಸ್ಯೆಗಳಿಗೆ ಪರಿಹಾರ ತಿಳಿಸುತ್ತಾರೆ. ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರೆ ಶ್ರೀ ಸಾಯಿ ಬಾಬಾ ಪೂಜೆ ಶಕ್ತಿಯಿಂದ ಯಾವುದೇ ಸಮಸ್ಯೆ ಇದ್ದರೂ( 5) ದಿನದಲ್ಲಿಶಾಶ್ವತ ಪರಿಹಾರ ತಿಳಿಸುತ್ತಾರೆ.
ಮನೆ ವಿಳಾಸ- #37/17 27th cross 12 th main 4th block ಜಯನಗರ ಬೆಂಗಳೂರು
M. 9986623344
web: www.sadguru-sai.com

 ಈ ವರ್ಷ ಆದ ಎಲ್ಲಾ ಚಂದ್ರಗ್ರಹಣ ಪೆನಂಬ್ರಲ್‌ ಚಂದ್ರಗ್ರಹಣ

ಈ ವರ್ಷ ಆದ ಎಲ್ಲಾ ಚಂದ್ರಗ್ರಹಣ ಪೆನಂಬ್ರಲ್‌ ಚಂದ್ರಗ್ರಹಣ

* ಈ ಬಾರಿಯ ಚಂದ್ರಗ್ರಹಣ ನವೆಂಬರ್‌ 30ಕ್ಕೆ ಕಾರ್ತಿಕ ಪೌರ್ಣಿಮೆಯಂದು ಸಂಭವಿಸಲಿದೆ.

* ಈ ವರ್ಷದ ಉಳಿದ ಮೂರು ಚಂದ್ರಗ್ರಹಣ ಜನವರಿ 10, ಜೂನ್ 5, ಜುಲೈ 4ಕಕೆ ಸಂಭವಿಸಿತ್ತು.

ಇಲ್ಲಿ ಚಂದ್ರನ ಮೇಲೆ ಭೂಮಿಯ ನೆರಳು ಮಾತ್ರ ಆವರಿಸುತ್ತದೆ.

 ಚಂದ್ರಗ್ರಹಣದ ಸಮಯ:

ಚಂದ್ರಗ್ರಹಣದ ಸಮಯ:

ಚಂದ್ರಗ್ರಹಣದ ದಿನಾಂಕ: ನವೆಂಬರ್ 20, ಕಾರ್ತಿಕ ಪೌರ್ಣಿಮೆ

ಚಂದ್ರಗ್ರಹಣದ ಸಮಯ: ನವೆಂಬರ್ 30ರಂದು ಭಾರತದ ಸಮಯ ಮಧ್ಯಾಹ್ನ 1.04ಕ್ಕೆ

ಗ್ರಹಣದ ಮಧ್ಯಭಾಗ: ಮಧ್ಯಾಹ್ನ 3.13

ಗ್ರಹಣ ಬಿಡುವ ಸಮಯ: ಸಂಜೆ 5.22

ಭಾರತದಲ್ಲಿ ಈ ಚಂದ್ರಗ್ರಹಣದ ಸೂತಕ ಇಲ್ಲ, ಏಕೆ?

ಭಾರತದಲ್ಲಿ ಈ ಚಂದ್ರಗ್ರಹಣದ ಸೂತಕ ಇಲ್ಲ, ಏಕೆ?

ಭಾರತದಲ್ಲಿ ಇದನ್ನು ಗ್ರಹಣವೆಂದು ಪರಿಗಣಿಸುವುದಿಲ್ಲ ಏಕೆಂದರೆ ಯುರೋಪಿಯನ್ ರಾಷ್ಟ್ರಗಳಲ್ಲಿ ಈ ಚಂದ್ರಗ್ರಹಣ ಗೋಚರಿಸುವಾಗ ಭಾರತದಲ್ಲಿ ಮಧ್ಯಾಹ್ನದ ಹೊತ್ತಾಗಿರುತ್ತದೆ. ಆದ್ದರಿಂದ ಇದರ ಪರಿಣಾಮ ಹಾಗೂ ಸೂತಕ ಅವಧಿ ಅಷ್ಟಾಗಿ ಮಾನ್ಯವಾಗಿರುವುದಿಲ್ಲ.

ಎಲ್ಲೆಲ್ಲಿ ಕಂಡು ಬರುವುದು?

ಆಸ್ಟ್ರೇಲಿಯಾ, ಅಮೆರಿಕ, ಪೆಸಿಫಿಕ್ ಸಾಗರ

 ಗ್ರಹಣ

ಗ್ರಹಣ

ವಿಜ್ಞಾನಿಗಳಿಗೆ ಚಂದ್ರಗ್ರಹಣ ಮತ್ತಷ್ಟು ಅಧ್ಯಯನಕ್ಕೆ ತೊಡಗಲು ಪ್ರೇರಕ. ಆದರೆ ಧಾರ್ಮಿಕ ನಂಬಿಕೆಯಿರುವವರು ಚಂದ್ರಗ್ರಹಣವನ್ನು ನೋಡುವ ದೃಷ್ಟಿಕೋನ ಬೇರೆ. ಒಟ್ಟಿನಲ್ಲಿ ಇಲ್ಲಿ ನಾವು ವಿಜ್ಞಾನವೋ, ನಂಬಿಕೆ ಎಂಬ ತರ್ಕ ಮಾಡುತ್ತಿಲ್ಲ.

ನಂಬಿಕಸ್ಥರ ಪ್ರಕಾರ ಚಂದ್ರಗ್ರಹಣವನ್ನು ಬರಿಗಣ್ಣಿನಿಂದ ನೋಡಬಾರದು ಎಂಬ ಸಾಂಪ್ರದಾಯಿಕ ನಂಬಿಕೆ ಇದೆ. ಆದರೆ ಇದಕ್ಕೆ ಯಾವುದೇ ಧಾರ್ಮಿಕ ಮಹತ್ವದ ಹಿನ್ನಲೆಯಿಲ್ಲ. ಪ್ರತಿ ಚಂದ್ರಗ್ರಹಣದ ಸಂದರ್ಭದಲ್ಲಿ ಮಂತ್ರ ಪಠಣ ಮತ್ತು ಧ್ಯಾನ ಮಾಡುವಂತೆ ಸೂಚಿಸಲಾಗುತ್ತದೆ. ಆದರೆ ಇದು ಉಪಛಾಯಾ ಚಂದ್ರಗ್ರಹಣವಾಗಿರುವುದರಿಂದ ಸೂತಕ ಇರುವುದಿಲ್ಲ.

ಶ್ರೀ ಶ್ರೀನಿವಾಸ್ ಗುರೂಜಿ
ಶ್ರೀ ಸಾಯಿ ಅನುಗ್ರಹ ಜ್ಯೋತಿಷ್ಯ ಪೀಠ
ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ
ಕರಾವಳಿ ವಂಶಪರಂಪರೆ ಮನೆತನದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು
ನಿಮ್ಮ ಸಮಸ್ಯೆಗಳಾದ-
ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ, ಅತ್ತೆ-ಸೊಸೆ ಕಲಹ, ಹಣಕಾಸಿನ ತೊಂದರೆ, ಮದುವೆಯಲ್ಲಿ ಅಡೆತಡೆ, ಸತಿ ಪತಿ ಕಲಹ, ಸಂತಾನ ಸಮಸ್ಯೆ, ಆರೋಗ್ಯ, ಉದ್ಯೋಗ, ಸಾಲ ಭಾದ, ಲವ್ ಪ್ರಾಬ್ಲಮ್ ಇನ್ನು ಯಾವುದೇ ಜಟಿಲ ಸಮಸ್ಯೆಗಳಿಗೆ ಪರಿಹಾರ ತಿಳಿಸುತ್ತಾರೆ. ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರೆ ಶ್ರೀ ಸಾಯಿ ಬಾಬಾ ಪೂಜೆ ಶಕ್ತಿಯಿಂದ ಯಾವುದೇ ಸಮಸ್ಯೆ ಇದ್ದರೂ( 5) ದಿನದಲ್ಲಿಶಾಶ್ವತ ಪರಿಹಾರ ತಿಳಿಸುತ್ತಾರೆ.
ಮನೆ ವಿಳಾಸ- #37/17 27th cross 12 th main 4th block ಜಯನಗರ ಬೆಂಗಳೂರು
M. 9986623344
web: www.sadguru-sai.com

English summary

Last Lunar Eclipse of 2020 Date, Time, Sutak Kaal And Other Details In Kannada

Here is last Lunar eclipse of 2020 date, time, sutak kaal And other Details, read on.
X
Desktop Bottom Promotion