Latest Updates
-
ಮಳೆಗಾಲದ ಫೋಟೋಗಳು ವೈರಲ್ ಆಗಬೇಕಾ? ಈ ಸಿಂಪಲ್ ಮೊಬೈಲ್ ಟ್ರಿಕ್ಸ್ ಟ್ರೈ ಮಾಡಿ! -
ಆಗಸ್ಟ್ 17 ರಂದು ರಜೆ ಇದೆಯಾ? ಕೃಷ್ಣ ಜನ್ಮಾಷ್ಟಮಿ ಗೊಂದಲಕ್ಕೆ ಇಲ್ಲಿದೆ ಸ್ಪಷ್ಟ ಮಾಹಿತಿ -
ಪಾರ್ಸಿ ಹೊಸ ವರ್ಷದ ಸಂಭ್ರಮ: ನಿಮ್ಮ ಪಾರ್ಸಿ ಸಂಬಂಧಿಕರ ಮನೆಗೆ ಹೋಗುವಾಗ ಈ ಶಿಷ್ಟಾಚಾರಗಳನ್ನು ಮರೆಯದಿರಿ! -
ಸ್ವಾತಂತ್ರ್ಯ ದಿನಾಚರಣೆ ನಂತರದ ಕ್ಲೀನಪ್: ಬಾಲ್ಕನಿ ಸ್ವಚ್ಛತೆ ಮತ್ತು ರಾಷ್ಟ್ರಧ್ವಜದ ಗೌರವಯುತ ನಿರ್ವಹಣೆ -
ಸ್ವಾತಂತ್ರ್ಯ ದಿನದ ಸಂಭ್ರಮ: ಟೆರೇಸ್ ಮೇಲೆ ಗಾಳಿಪಟ ಹಾರಿಸುವ ಮುನ್ನ ಈ ಸುರಕ್ಷತಾ ಕ್ರಮಗಳನ್ನು ಮರೆಯದಿರಿ! -
ಸ್ವಾತಂತ್ರ್ಯ ದಿನಾಚರಣೆ: ಸಿಹಿ ತಿನಿಸುಗಳ ಸವಿಯ ಜೊತೆಗೆ ಆರೋಗ್ಯವನ್ನೂ ಕಾಪಾಡಿಕೊಳ್ಳಿ, ಇಲ್ಲಿದೆ ಸಿಂಪಲ್ ಟಿಪ್ಸ್! -
ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿ ಆರೋಗ್ಯದ ಜಾಗೃತಿ: ಮಳೆಗಾಲದಲ್ಲಿ ಯಾವ ಆಹಾರ ಸೇವಿಸುವುದು ಸುರಕ್ಷಿತ? -
ಸ್ವಾತಂತ್ರ್ಯ ದಿನಾಚರಣೆ: ಮಳೆಯಲ್ಲೂ ಮಿಂಚಲು ಇಲ್ಲಿದೆ ಸಿಂಪಲ್ ಟ್ರೈಕಲರ್ ಫ್ಯಾಷನ್ ಟಿಪ್ಸ್! -
ಸ್ವಾತಂತ್ರ್ಯ ದಿನಾಚರಣೆ: 10 ನಿಮಿಷದಲ್ಲಿ ತ್ರಿರಂಗ ಲುಕ್ನಲ್ಲಿ ಮಿಂಚುವುದು ಹೇಗೆ? -
ಸ್ವಾತಂತ್ರ್ಯ ದಿನದ 'ತಿರಂಗಾ ರೈಡ್': ಮಳೆಗಾಲದಲ್ಲಿ ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿವೆ ಬೆಸ್ಟ್ ಟಿಪ್ಸ್!
ಲಾಭ ಪಂಚಮಿ 2022: ಶುಭ ಮುಹೂರ್ತ, ಈ ದಿನ ಮಹತ್ವವೇನು?
ವ್ಯಾಪಾರಸ್ಥರ ಹಿಂದಿನ ವರ್ಷದ ವ್ಯಾಪಾರದ ಲೆಕ್ಕ ಅಂತ್ಯವಾಗಿ ಹೊಸ ಲೆಕ್ಕ ಆರಂಭವಾಗುವ ಸಮಯವೇ ಲಾಭ ಪಂಚಮಿ. ಕಾರ್ತಿಕ ಮಾಸದ ಶುಕ್ಲ ಪಂಚಮಿಯಂದು 'ಲಾಭ ಪಂಚಮಿ' ಅಥವಾ 'ಸೌಭಾಗ್ಯ ಪಂಚಮಿ' ಎಂದೂ ಕರೆಯುವ ಈ ಶುಭ ದಿನ ಇರುತ್ತದೆ. ಈ ದಿನ ವ್ಯಾಪಾರಸ್ಥರಿಗೆ ಬಹಳ ಶುಭ ದಿನ.
ಜೈನರು ಇದನ್ನು ಜ್ಞಾನ ಪಂಚಮಿ ಎಂದು ಕರೆಯುತ್ತಾರೆ. ವ್ಯಾಪಾರಸ್ಥರು ತಮ್ಮ ವ್ಯಾಪಾರ ಮುಹೂರ್ತ ಇತ್ಯಾದಿಗಳನ್ನು ಲಾಭ ಪಂಚಮಿಯಂದೇ ಮಾಡುತ್ತಾರೆ. ಲಾಭಪಂಚಮಿಯ ದಿನದಂದು ಯಾವುದೇ ವ್ಯವಹಾರವನ್ನು ಪ್ರಾರಂಭಿಸಿದರೂ ಅದರಲ್ಲಿ ಅದೃಷ್ಟ ತುಂಬಿರುತ್ತದೆ ಎಂಬ ನಂಬಿಕೆ ಇದೆ.
ಅಷ್ಟೇ ಅಲ್ಲದೆ, ಸಂತರು ಮತ್ತು ಮಹಾಪುರುಷರ ಮಾರ್ಗದರ್ಶನವನ್ನು ಅನುಸರಿಸಲು ನಿರ್ಧರಿಸಿ, ದೇವರ ಮೇಲಿನ ಭಕ್ತಿಯ ಪ್ರಭಾವದಿಂದ ಈ ಐದು ದುರ್ಗುಣಗಳಾದ ಕಾಮ, ಕ್ರೋಧ, ಲೋಭ, ಮೋಹ, ಅಹಂಕಾರಗಳನ್ನು ತೊಡೆದುಹಾಕುವ ದಿನವೇ ಲಾಭ ಪಂಚಮಿ ಎನ್ನಲಾಗುತ್ತದೆ.
ಲಾಭ ಪಂಚಮಿಯ ದಿನದ ಮಹತ್ವವೇನು, ಪೂಜಾ ಮುಹೂರ್ತ

1. ಲಾಭ ಪಂಚಮಿ ಮುಹೂರ್ತ
ಲಾಭ ಪಂಚಮಿ 2022 ತಿಥಿ ಆರಂಭ: 29 ಅಕ್ಟೋಬರ್, 2022 ಬೆಳಗ್ಗೆ 08:13ರಿಂದ
ಲಾಭ ಪಂಚಮಿ 2022 ತಿಥಿ ಅಂತ್ಯ: 30 ಅಕ್ಟೋಬರ್, 2022 ಬೆಳಗ್ಗೆ 05:50ರಿಂದ
ಲಾಭ ಪಂಚಮಿ 2022 ಪೂಜೆಗೆ ಮುಹೂರ್ತ: ಅಕ್ಟೋಬರ್ 29, ಬೆಳಗ್ಗೆ 08:13 ರಿಂದ ಅಕ್ಟೋಬರ್ 29, ಬೆಳಗ್ಗೆ 11:24 ರವರೆಗೆ

2. ಲಾಭ ಪಂಚಮಿಯಂದು ಲಕ್ಷ್ಮಿ ಪೂಜೆ ಮಾಡಿ
ಲಾಭ ಪಂಚಮಿಯನ್ನು ಸೌಭಾಗ್ಯ ಪಂಚಮಿ ಎಂದೂ ಕರೆಯುತ್ತಾರೆ. ಈ ದಿನದಂದು ಲಕ್ಷ್ಮಿ ಪೂಜೆಯನ್ನು ಮಾಡುವ ಮೂಲಕ ವ್ಯಾಪಾರ ಆರಂಭಿಸುವುದು ಮಂಗಳಕರ. ಈ ದಿನದಂದು ವ್ಯಾಪಾರಿಗಳು ತಮ್ಮ ಹೊಸ ಲೆಡ್ಜರ್ ಅನ್ನು ಪೂಜಿಸುತ್ತಾರೆ. ಲಾಭ ಪಂಚಮಿಯ ದಿನದಂದು ಶಿವ ಮತ್ತು ತಾಯಿ ಪಾರ್ವತಿಯ ವಿಶೇಷ ಪೂಜೆಯು ಪ್ರಯೋಜನಗಳನ್ನು ತರುತ್ತದೆ ಎಂದು ನಂಬಲಾಗಿದೆ. ಲಾಭ ಪಂಚಮಿಯಂದು ಹೊಸ ಕೆಲಸವನ್ನು ಪ್ರಾರಂಭಿಸುವುದು ಸಹ ಮಂಗಳಕರವೆಂದು ಪರಿಗಣಿಸಲಾಗಿದೆ.

3. ಲಾಭ ಪಂಚಮಿಯ ಆಚರಣೆಗಳು
ವ್ಯಾಪಾರಸ್ಥರು ಈ ದಿನದಂದು ಲಕ್ಷ್ಮಿ ದೇವಿಯನ್ನು ಆಕೆಯ ದೈವಿಕ ಆಶೀರ್ವಾದವನ್ನು ಪಡೆಯಲು ಪ್ರಾರ್ಥಿಸುತ್ತಾರೆ.
* ಸ್ನೇಹಿತರು ಮತ್ತು ಕುಟುಂಬಸ್ಥರು ಮನೆ, ಕಚೇರಿಗೆ ಭೇಟಿ ನೀಡುತ್ತಾರೆ. ಅವರ ನಡುವಿನ ‘ಸಿಹಿಯಾದ' ಸಂಬಂಧಗಳ ಸಂಕೇತವಾಗಿ ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಳ್ಳುವ ಪದ್ಧತಿಯೂ ಇದೆ.
* ಕೆಲವು ಪ್ರದೇಶಗಳಲ್ಲಿ, ಜನರು ತಮ್ಮ ಬುದ್ಧಿವಂತಿಕೆ ಮತ್ತು ಜ್ಞಾನವನ್ನು ಹೆಚ್ಚಿಸಲು ಲಾಭ ಪಂಚಮಿಯ ದಿನದಂದು ತಮ್ಮ ಪುಸ್ತಕಗಳನ್ನು ಪೂಜಿಸುತ್ತಾರೆ.
* ಲಾಭ ಪಂಚಮಿಯಂದು ಬಡವರು ಮತ್ತು ನಿರ್ಗತಿಕರಿಗೆ ಆಹಾರ, ಬಟ್ಟೆ, ಹಣ ಅಥವಾ ಇತರ ಅಗತ್ಯ ವಸ್ತುಗಳನ್ನು ದಾನ ಮಾಡಬೇಕು.

4. ಲಾಭ ಪಂಚಮಿ ಮಹತ್ವ
ಲಾಭ ಪಂಚಮಿ ಹಬ್ಬವು ದೀಪಾವಳಿಯೊಂದಿಗೆ ಸಂಬಂಧಿಸಿದೆ. ‘ಲಾಭ' ಮತ್ತು ‘ಸೌಭಾಗ್ಯ' ಎಂಬ ಪದವು ‘ಪ್ರಯೋಜನ' ಮತ್ತು ‘ಅದೃಷ್ಟ'ವನ್ನು ಸೂಚಿಸುತ್ತದೆ. ಆದ್ದರಿಂದ ಈ ದಿನವು ಒಬ್ಬರ ಜೀವನದಲ್ಲಿ ಅದೃಷ್ಟ ಮತ್ತು ಪ್ರಯೋಜನ ತರುತ್ತದೆ ಎಂದು ಪರಿಗಣಿಸಲಾಗುತ್ತದೆ.
ಭಕ್ತರು ಈ ದಿನದಂದು ಪೂಜೆ ಮಾಡುವುದರಿಂದ ವೈಯಕ್ತಿಕ ಮತ್ತು ವೃತ್ತಿಪರವಾಗಿ ಸಂಪತ್ತು, ಲಾಭ ಮತ್ತು ಅದೃಷ್ಟವನ್ನು ತರುತ್ತದೆ ಎಂದು ನಂಬುತ್ತಾರೆ. ಗುಜರಾತ್ ರಾಜ್ಯದಲ್ಲಿ, ಲಾಭ ಪಂಚಮಿಯು ಹೊಸ ವರ್ಷದ ಮೊದಲ ಕೆಲಸದ ದಿನವಾಗಿದೆ ಮತ್ತು ಆದ್ದರಿಂದ ಈ ದಿನದಂದು ಉದ್ಯಮಿಗಳು ಹೊಸ ಖಾತೆ ಲೆಡ್ಜರ್‌ಗಳನ್ನು ತೆರೆಯುತ್ತಾರೆ. ಅವರು ಎಡಭಾಗದಲ್ಲಿ 'ಶುಭ' ಮತ್ತು ಬಲಭಾಗದಲ್ಲಿ 'ಲಾಭ' ಎಂದು ಬರೆಯುತ್ತಾರೆ ಮತ್ತು ಪುಟದ ಮಧ್ಯದಲ್ಲಿ 'ಸಥಿಯಾ' ಅನ್ನು ಸಹ ಬರೆಯುತ್ತಾರೆ. ಈ ದಿನದಂದು ಹೊಸ ವ್ಯವಹಾರವನ್ನು ಪ್ರಾರಂಭಿಸುವುದು ಹೆಚ್ಚು ಲಾಭದಾಯಕವೆಂದು ಪರಿಗಣಿಸಲಾಗಿದೆ.



Click it and Unblock the Notifications