Kumbh Mela 2021 : ಕುಂಭ ಮೇಳ ಪ್ರಾರಂಭ: ಕುಂಭ ಮೇಳ ವಿಶೇಷತೆ ಹಾಗೂ ಎಷ್ಟು ದಿನ ಇರುತ್ತದೆ?

2021, ಜನವರಿ 14ರಂದು ಸೂರ್ಯನು ಮಕರ ರಾಶಿಗೆ ಪ್ರವೇಶಿಸಿದ ನಂತರ ಮಹಾ ಕುಂಭಮೇಳ ನಡೆಯುತ್ತಿದೆ. ಈ ಬಾರಿ ಹರಿದ್ವಾರದಲ್ಲಿ ಕುಂಭಮೇಳ ನಡೆಯುತ್ತಿದ್ದು ಶತಮಾನದ ಪೂರ್ಣ ಕುಂಭ ಮೇಳೆ ನಡೆಯುತ್ತಿದೆ.

2020ರಲ್ಲಿ ಪ್ರಯಾಗರಾಜ್‌ನಲ್ಲಿ ಅರ್ಧ ಕುಂಭ ಮೇಳ ನಡೆದಿತ್ತು. ಈ ವರ್ಷ ಹರಿದ್ವಾರದಲ್ಲಿ ನಡೆಯಲಿರುವ ಕುಂಭ ಮೇಳವು ಜನವರಿ 14ರಂದು ಪ್ರಾರಂಭವಾಗಿ ಏಪ್ರಿಲ್‌ 27ರವರೆಗೂ ಇರಲಿದೆ.

ಗಂಗಾ, ಯಮುನಾ ಮತ್ತು ಸರಸ್ವತಿ ತ್ರಿವೇಣಿ ಸಂಗಮದಲ್ಲಿ ಲಕ್ಷಾಂತರು ಜನರು ಬಂದು ಪುಣ್ಯ ಸ್ನಾನ ಮಾಡುತ್ತಾರೆ. ಈ ಪುಣ್ಯ ಸ್ನಾನ ಮಾಡುವುದರಿಂದ ಪಾಪಗಳು ತೊಡೆದು ಹೋಗುತ್ತದೆ ಎಂಬ ನಂಬಿಕೆ ಇದೆ.

ಸುಮಾರು 2000 ವರ್ಷಗಳ ಇತಿಹಾಸ ಇರುವ ಕುಂಭ ಮೇಳ ಆಚರಣೆಯ ಕುರಿತ ವಿಶೇಷ ಮಾಹಿತಿ ಇಲ್ಲಿದೆ ನೋಡಿ:

 ಕುಂಭ ಮೇಳ

ಕುಂಭ ಮೇಳ

ಕುಂಭ ಮೇಳವನ್ನು 2000 ವರ್ಷಗಳ ಹಿಂದಿನಿಂದಲೂ ಆಚರಿಸಲಗುತ್ತಿದೆ ಎಂದು ನಂಬಲಾಗಿದೆ. ನಾಲ್ಕು ಬಗೆಯ ಕುಂಭ ಮೇಳ ಆಚರಿಸಲಾಗುವುದು.

* ಕುಂಭ ಮೇಳವನ್ನು ನಾಲ್ಕು ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ.

* ಅರ್ಧ ಕುಂಭ ಮೇಳವನ್ನು ಆರು ವರ್ಷಗಳಿಗೊಮ್ಮೆ ಹರಿದ್ವಾರ ಹಾಗೂ ಪ್ರಯಾಗರಾಜ್‌ನಲ್ಲಿ ಆಚರಿಸಲಾಗುತ್ತದೆ.

* ಪೂರ್ಣ ಕುಂಭ ಮೇಳವನ್ನು 12 ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ.

* ಮಹಾ ಕುಂಭ ಮೇಳವನ್ನು 12 ಪೂರ್ಣ ಕುಂಭ ಮೇಳವನ್ನು ಆಚರಿಸಿದ ಬಳಿಕ 144 ವರ್ಷಗಳಿಗೊಮ್ಮೆ ಪ್ರಯಾಗ್‌ನಲ್ಲಿ ಆಚರಿಸಲಾಗುವುದು.

ಕುಂಭ ಮೇಳದ ಹಿಂದಿರುವ ಪೌರಾಣಿಕ ಕತೆ

ಕುಂಭ ಮೇಳದ ಹಿಂದಿರುವ ಪೌರಾಣಿಕ ಕತೆ

ಆದಿ ಶಂಕರರು ಕುಂಭ ಮೇಳ ಆರಂಭಿಸಿದರು ಎನ್ನಲಾಗುತ್ತದೆ. ಪೌರಾಣಿಕ ಕತೆಯ ಪ್ರಕಾರ ದೇವತೆಗಳು ಹಾಗೂ ಅಸುರರು ಒಟ್ಟಾಗಿ ಸಮುದ್ರ ಮಂಥನ ಮಾಡಿದಾಗ ಅಮೃತ ಉಕ್ಕಿ ಬರಲಾರಂಭಿಸಿತ್ತು. ಆಗ ಆ ಅಮೃತಕ್ಕಾಗಿ ಅಸುರರು ಹಾಗೂ ದೇವತೆಗಳ ನಡುವೆ ಹೋರಾಟ ನಡೆಯುತ್ತದೆ, ಆಗ ಗರುಢನು ಅಮೃತವಿದ್ದ ಕುಂಭವನ್ನು ಎತ್ತಿಕೊಂಡು ಹೋಗುತ್ತಾನೆ, ಹೀಗೆ ಹೋಗುವಾಗ ಕೆಲವು ಹನಿಗಳು ಭೂಮಿಯಲ್ಲಿ ಬೀಳುತ್ತವೆ. ಎಲ್ಲೆಲ್ಲಿ ಅಮೃತ ಹನಿಗಳು ಬಿತ್ತೋ ಅಲ್ಲಿ ಕುಂಭ ಮೇಳ ಆಚರಿಸಲಾಗುತ್ತದೆ ಎಂಬ ಕತೆಯಿದೆ. ಪ್ರಯಾಗ್, ಹರಿದ್ವಾರ, ನಾಸಿಕ್, ಉಜ್ವೈನ್‌ಗಳಲ್ಲಿ ಕುಂಭ ಮೇಳ ಆಚರಿಸಲಾಗುವುದು.

ನಿತ್ಯ ಲಕ್ಷಾಂತರ ಜನರು ಕುಂಭ ಮೇಳದಲ್ಲಿ ಭಾಗವಹಿಸುತ್ತಾರೆ

ನಿತ್ಯ ಲಕ್ಷಾಂತರ ಜನರು ಕುಂಭ ಮೇಳದಲ್ಲಿ ಭಾಗವಹಿಸುತ್ತಾರೆ

ಕುಂಭ ಮೇಳ ಇದ್ದಾಗ ಲಕ್ಷಾಂತರ ಜನರು ಬಂದು ಪುಣ್ಯ ಸ್ನಾನ ಮಾಡುತ್ತಾರೆ. ಈ ಬಾರಿ ಕೂಡ ಪ್ರತಿನಿತ್ಯ 30-50 ಲಕ್ಷ ಜನ ಪುಣ್ಯ ಸ್ನಾನ ಮಾಡುತ್ತಾರೆ ಎಂದು ಅಂದಾಜಿಸಲಾಗಿದ್ದು ಇದಕ್ಕಾಗಿಯೇ ಒಂಭತ್ತು ಘಾಟ್‌ಗಳನ್ನು ನಿರ್ಮಿಸಲಾಗಿದೆ.

ಕೋವಿಡ್‌ 19 ಪರಿಸ್ಥಿತಿ ಇರುವುದರಿಂದ ಇದಕ್ಕೆ ತಕ್ಕಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೂಡ ಕೈಗೊಳ್ಳಲಾಗಿದೆ.

2021ರ ಕುಂಭ ಮೇಳದ ಪ್ರಮುಖ ದಿನಾಂಕಗಳು

2021ರ ಕುಂಭ ಮೇಳದ ಪ್ರಮುಖ ದಿನಾಂಕಗಳು

ಜನವರಿ 14, 2021: ಮಕರ ಸಂಕ್ರಾಂತಿ

ಫೆಬ್ರುವರಿ 11, 2021: ಮೌನಿ ಅಮಾವಾಸ್ಯೆ

ಫೆಬ್ರುವರಿ 16, 2021: ವಸಂತ ಪಂಚಮಿ ಫೆ

ಬ್ರುವರಿ 27, 2021: ಮಾಗಿ ಪೂರ್ಣಿಮಾ

ಮಾರ್ಚ್ 11, 2021: ಮಹಾ ಶಿವರಾತ್ರಿ (ಮೊದಲ ಶಾಹಿ ಸ್ನಾನ)

ಏಪ್ರಿಲ್ 12, 2021: ಸೋಮವತಿ ಅಮಾವಾಸ್ಯೆ

ಏಪ್ರಿಲ್ 14, 2021: ಮೂರನೇ ಶಾಹಿ ಸ್ನಾನ

ಏಪ್ರಿಲ್ 27, 2021: ಚೈತ್ರ ಪೂರ್ಣಿಮಾ

ಕುಂಭ ಮೇಳದ ವಿಶೇಷತೆ ಏನು?

ಕುಂಭ ಮೇಳದ ವಿಶೇಷತೆ ಏನು?

* ಆರತಿಯು ಕುಂಭ ಮೇಳದ ಪ್ರಮುಖ ಆಕರ್ಷಣೆಯಾಗಿದ್ದು, ಲಕ್ಷಾಂತರ ಜನರು ನದಿಯ ತಟದಲ್ಲಿ ನಿಂತು ಮುಂಜಾನೆ ಮತ್ತು ಸಂಜೆ ಆರತಿ ಬೆಳಗುತ್ತಾರೆ. ಇದನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿದೆ.

* ಕುಂಭ ಮೇಳದಲ್ಲಿ ಭಾಗವಹಿಸಿ ಸ್ನಾನ ಮಾಡಿದರೆ ಇದನ್ನು ಅತ್ಯಂತ ಪುಣ್ಯ ಸ್ನಾನವೆಂದು ಹೇಳಲಾಗುವುದು. ಪಾಪಕರ್ಮಗಳ, ದುಷ್ಟ ಶಕ್ತಿಗಳು ಆ ಪುಣ್ಯ ನೀರಿನಲ್ಲಿ ಸ್ನಾನ ಮಾಡಿದರೆ ತೊಲಗಿ ಹೋಗುವುದು ಎಂಬ ನಂಬಿಕೆ. ಕುಂಭ ಮೇಳದಲ್ಲಿ ಸೂರ್ಯ ಉದಯಿಸುವುದು ಮುಂಚೆಯೇ ಎದ್ದು ಸ್ನಾನ ಮಾಡುತ್ತಾರೆ.

ಕೋವಿಡ್ 19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮುನ್ನೆಚ್ಚರಿಕೆ

ಕೋವಿಡ್ 19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮುನ್ನೆಚ್ಚರಿಕೆ

* ಈ ವರ್ಷ ಕುಂಭ ಮೇಳಕ್ಕೆ ಆಗಮಿಸುವವರು ಮುಂಚಿತವಾಗಿಯೇ ಆನ್‌ಲೈನ್ ರಿಜಿಸ್ಟ್ರೇಷನ್ ಮಾಡಬೇಕು.

* ಅಲ್ಲದೆ ಬಸ್‌, ಇತರ ವಾಹನಗಳಲ್ಲಿ ಬರುವವರನ್ನೂ ಗಮನಿಸಲಾಗುವುದು.

* ಯಾತ್ರಾರ್ಥಿಗಳು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಬೇಕು, ನಂತರವಷ್ಟೇ ಹರಿದ್ವಾರಕ್ಕೆ ಪ್ರಯಾಣ ಬೆಳೆಸಲಾಗುವುದು.

* ಭಕ್ತಾದಿಗಳು ಉಚಿತ ಮಾಸ್ಕ್ ನೀಡಲಾಗುವುದು. ಮಾಸ್ಕ್‌ ಇಲ್ಲದೆ ಘಾಟ್ ಪ್ರವೇಶಿಸಲು ಅನುಮತಿ ನೀಡುವುದಿಲ್ಲ.

* ಅಲ್ಲಿ ಇರುವ ಅಂಗಡಿಯವರು ಕೋವಿಡ್‌ 19 ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ.

English summary

Kumbh Mela 2021: Starting and End Date, Time, Places, Maha Kumbh Dates For Shahi & Ganga Snan, Registration Details

Kumbh Mela 2021: Starting and End Date, Time, Places, Maha Kumbh Dates For Shahi & Ganga Snan, Registration Details,
X
Desktop Bottom Promotion