Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕನ್ನಡ ರಾಜ್ಯೋತ್ಸವ 2023 : ಮೈಸೂರು ರಾಜ್ಯ ಕರ್ನಾಟಕ ಆದ ಇತಿಹಾಸ, ಕನ್ನಡ ಬಾವುಟದ ಮಹತ್ವ
ಎಲ್ಲಾದರು ಇರು ಎಂತಾದರು ಇರು ||೨||
ಎಂದೆಂದಿಗೂ ನೀ ಕನ್ನಡವಾಗಿರು
ಕನ್ನಡವೇ ಸತ್ಯ, ಕನ್ನಡವೇ ನಿತ್ಯ
ಕವಿ ಕುವೆಂಪುರವರ ಈ ಸಾಲುಗಳನ್ನು ಪ್ರತಿಯೊಬ್ಬ ಕನ್ನಡಿಗ ಜಗತ್ತಿನ ಯಾವುದೇ ಮೂಲೆಯಲ್ಲಿ ಇರಲಿ ಖಂಡಿತ ಮರೆಯಲ್ಲ, ನಮ್ಮ ಕನ್ನಡ ನಾಡು, ಇಲ್ಲಿಯ ಭಾಷೆ, ಇಲ್ಲಿಯ ಸಂಸ್ಕೃತಿ, ಪರಂಪರೆ, ಅಚಾರ-ವಿಚಾರ, ವನ್ಯ ಸಂಪತ್ತು ಇವುಗಳಿಂದ ಶ್ರೀಮಂತವಾಗಿರುವ ನಾಡಾಗಿದೆ. ಈ ನಮ್ಮ ಕನ್ನಡ ನಾಡು, ಈ ಭಾಷೆಯನ್ನು ಕೊಂಡಾಡುತ್ತಾ ಸಂಭ್ರಮದಿಂದ ಆಚರಿಸುವ ದಿನವೇ ನವೆಂಬರ್ 1. ವಿವಿಧ ಭಾಗಗಳಾಗಿ ಹರಡಿ ಹೋಗಿದ್ದ ಕನ್ನಡಿಗರನ್ನು ಒಂದಾಗಿಸಿದ ದಿನವನ್ನು ನಾವೆಲ್ಲಾ ಕನ್ನಡ ರಾಜ್ಯೋತ್ಸವವೆಂದು ಆಚರಿಸುತ್ತೇವೆ.
ಕನ್ನಡವನ್ನು ಪ್ರತಿನಿಮಿಷ, ಪ್ರತಿದಿನ ಉಸಿರಾಡುತ್ತೇವೆ, ನವೆಂಬರ್ 1ರಂದು ಹಬ್ಬವಾಗಿ ಸಂಭ್ರಮಿಸುತ್ತೇವೆ. ಕನ್ನಡ ರಾಜ್ಯೋತ್ಸವದ ಇತಿಹಾಸ ಈ ದಿನದ ಮಹತ್ವದ ಬಗ್ಗೆ ಮತ್ತಷ್ಟು ವಿವರವಾಗಿ ನೋಡೋಣ ಬನ್ನಿ:

ಕನ್ನಡ ರಾಜ್ಯೋತ್ಸವ ಇತಿಹಾಸ
ಭಾರತಕ್ಕೆ ಸ್ವಾತಂತ್ರ್ಯ ಬಂದು ಹಲವು ವರ್ಷಗಳಾದರೂ ಕರ್ನಾಟಕದ ಏಕೀಕರಣವಾಗಿರಲಿಲ್ಲ. 1956ರ ರಾಜ್ಯ ಪುನರ್ವಿಗಂಡನಾ ಕಾಯ್ದೆ ಜಾರಿಯಾದ ಬಳಿಕ ಕೂರ್ಗ್(ಕೊಡಗು), ಮದರಾಸು. ಹೈದರಾಬಾದ್, ಬಾಂಬೆ ಸಂಸ್ತಾನವನ್ನು ಮೈಸೂರಿಗೆ ಸೇರಿಸಲಾಯಿತು. 1956 ನವೆಂಬರ್ 1ರಂದು ಮೈಸೂರು ರಾಜ್ಯವನ್ನು ಭಾಷೆಗಳ ಅಧಾರದ ಮೇಲೆ ರಾಜ್ಯಗಳನ್ನು ವಿಂಗಡಿಸಲಾಯಿತು, ಆದರೆ ಉತ್ತರ ಕರ್ನಾಟಕದ ಜನರಿಗೆ ಮೈಸೂರು ಹೆಸರನ್ನು ಉಳಿಸಿಕೊಳ್ಳಲು ಯಾವುದೇ ಒಲವು ಇರಲಿಲ್ಲ, ಹೀಗಾಗಿ 1873 ನವೆಂಬರ್ 1ರಂದು ಮೈಸಊರು ರಾಜ್ಯ ಅಂತ ಇದ್ದಿದ್ದನ್ನು ಕರ್ನಾಟಕವೆಂದು ಮರುನಾಮಕರಣ ಮಾಡಲಾಯಿತು. ಅಗ ದೇವರಾಜ್ ಅರಸು ಮುಖ್ಯಮಂತ್ರಿಯಾಗಿದ್ದರು.

ಈ ನಾಡಿಗೆ ಕರ್ನಾಟಕ ಎಂದು ಹೆಸರು ಬಂದಿದ್ದೇಗೆ?
ಕರು+ನಾಡು=ಕರ್ನಾಟಕವಾಗಿದೆ. ಕರುನಾಡು ಅಂದರೆ ಕಪ್ಪು ಮಣ್ಣಿನ ನಾಡು, ಹಾಗಾಗಿ ಇದಕ್ಕೆ ಕರ್ನಾಟಕ ಎಂದು ಕರೆಯಲಾಗಿದೆ. ಭಾರತದಲ್ಲಿ ಕರ್ನಾಟಕ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ 6ನೇ ದೊಡ್ಡ ರಾಜ್ಯವಾಗಿದೆ.

ಕನ್ನಡದ ಬಾವುಟ
ಕರ್ನಾಟಕಕ್ಕೆ ಹಳದಿ ಹಾಗೂ ಕೆಂಪು ಬಣ್ಣದ ಬಾವುಟವಿದೆ. ಕನ್ನಡ ಹೋರಾಟಗಾರರಾದ ರಾಮಮೂರ್ತಿಯವರು ಕನ್ನಡ ಬಾವುಟ ಸಿದ್ಧಪಡಿಸಿದರು. ಹಳದಿ ಬಣ್ಣ ಸೌಹಾರ್ದತೆಯ ಸಂಕೇತ ಕೆಂಪು ಕ್ರಾಂತಿಯ ಸಂಕೇತ. ನಾವು ಕನ್ನಡಿಗರು ಕ್ರಾಂತಿಗೂ ಸೈ, ಶಾಂತಿಗೂ ಸೈ ಎಂಬ ಸಂದೇಶ ಸೂಚಿಸುತ್ತದೆ.
ಬಾರಿಸು ಕನ್ನಡ ಡಿಂಡಿಮವ
ಕರ್ನಾಟಕ ಹೃದಯ ಶಿವ



Click it and Unblock the Notifications
