Latest Updates
-
ಆಗಸ್ಟ್ 15 ಧ್ವಜಾರೋಹಣ: ಬೆಂಗಳೂರಿನಲ್ಲಿ ಜೋಡಿಗಳು ಪಾಲಿಸಬೇಕಾದ ಪ್ರಮುಖ ನಿಯಮಗಳಿವು! -
ಆನ್ಲೈನ್ ಸೆಕ್ಸ್ಟಾರ್ಷನ್ ವಂಚನೆ: ಅಪರಿಚಿತ ವಿಡಿಯೋ ಕಾಲ್ ರಿಸೀವ್ ಮಾಡಿದ್ರೆ ಹುಷಾರ್, ಇಲ್ಲಿದೆ ಎಚ್ಚರಿಕೆ! -
ಮಳೆಗಾಲದ ಕಿರಿಕಿರಿ ಬೇಡವೇ? ₹999 ಒಳಗೆ ಸಿಗುವ ಈ ಸ್ಮಾರ್ಟ್ ವಸ್ತುಗಳು ನಿಮ್ಮ ಮನೆಗೆ ಮಸ್ಟ್! -
ಜಂಕ್ ಫುಡ್ ಪ್ಯಾಕೆಟ್ ಮೇಲೆ ಎಚ್ಚರಿಕೆ ಲೇಬಲ್ ಕಡ್ಡಾಯ: ಸುಪ್ರೀಂ ಕೋರ್ಟ್ನಿಂದ ಕಂಪನಿಗಳಿಗೆ ಖಡಕ್ ಎಚ್ಚರಿಕೆ! -
ಆಗಸ್ಟ್ 14 ಮತ್ತು 15ರ ಗೊಂದಲ ಬೇಡ: ಸೋಶಿಯಲ್ ಮೀಡಿಯಾದಲ್ಲಿ ಡಿಪಿ ಮತ್ತು ಪೋಸ್ಟ್ ಹಾಕುವಾಗ ಈ ತಪ್ಪು ಮಾಡ್ಬೇಡಿ! -
ಬಂಬಲ್ ಆಪ್ನಲ್ಲಿ ಮಹತ್ವದ ಬದಲಾವಣೆ: ಡೇಟಿಂಗ್ನಲ್ಲಿ ಸಂಭಾಷಣೆ ಶುರು ಮಾಡುವುದು ಹೇಗೆ? -
ಬೆಂಗಳೂರಿನ ಡೇಟಿಂಗ್ ಆ್ಯಪ್ಗಳಲ್ಲಿ ಹೊಸ ವಂಚನೆ: ಪಬ್ಗಳಲ್ಲಿ ಹಣ ಕಳೆದುಕೊಳ್ಳದಂತೆ ಪಾರಾಗುವುದು ಹೇಗೆ? -
ಬೆಂಗಳೂರಿನಲ್ಲಿ ಮಳೆಗಾಲ: ನಿಮ್ಮ ಅಪಾರ್ಟ್ಮೆಂಟ್ನಲ್ಲಿ ಹಾವುಗಳ ಕಾಟವೇ? ಈ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಿ! -
ಇಂದು ರಾತ್ರಿ ಆಕಾಶದಲ್ಲಿ ಅದ್ಭುತ: ಪರ್ಸೀಡ್ಸ್ ಉಲ್ಕಾಪಾತ ವೀಕ್ಷಿಸಲು ಮತ್ತು ಫೋಟೋ ತೆಗೆಯಲು ಸರಳ ಟಿಪ್ಸ್ -
ಮಳೆಗಾಲದಲ್ಲಿ ಹೊರಗಿನ ಊಟ ಅಪಾಯಕಾರಿ: ಆನ್ಲೈನ್ ಫುಡ್ ಆರ್ಡರ್ ಮಾಡುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಕಾರ್ತಿಕ ಮಾಸ 2022: ಮಾಸ ಆರಂಭ- ಅಂತ್ಯ, ಪ್ರದೋಷ, ಉಪವಾಸದ ದಿನಗಳು
ದೀಪಗಳ ಮಾಸ ಎಂದೇ ಪ್ರಖ್ಯಾತಿ ಪಡೆದ ಕಾರ್ತಿಕ ಮಾಸವು ಹಿಂದೂ ಪಂಚಾಂಗದ ಎಂಟನೇ ತಿಂಗಳು. ಚಳಿಗಾಲದ ಆರಂಭವನ್ನು ಸೂಚಿಸುವ ಕಾರ್ತಿಕ ಮಾಸವು ಶಿವನ ಆರಾಧನೆಗೆ ಶ್ರೇಷ್ಠ ಕಾಲ. ಈ ಮಾಸದಲ್ಲಿ ಮನೆಯಲ್ಲಿ ದೀಪ ಬೆಳಗುವುದು ಶ್ರೇಯಸ್ಕರ.

ಅತ್ಯಂತ ಪವಿತ್ರ ಮಾಸ ಎಂದೇ ಹೆಸರಾದ ಕಾರ್ತಿಕ ಮಾಸವು 2022ನೇ ಸಾಲಿನಲ್ಲಿ ಅಕ್ಟೋಬರ್ 26 ರಂದು ಪ್ರಾರಂಭ ನವೆಂಬರ್ 23 ರವರೆಗೆ ಇರಲಿದೆ. ಕಾರ್ತಿಕ ಮಾಸದ ಆರಂಭವೇ ದೀಪಾವಳಿಯ ಅಕ್ಟೋಬರ್ 26 ರಂದು ಬಲಿ ಪಾಡ್ಯಮಿಯೊಂದಿಗೆ ಆರಂಭವಾಗುತ್ತದೆ.
ಈ ಕಾರ್ತಿಕ ಮಾಸದಲ್ಲಿ ಬರುವ ಪ್ರದೋಷ, ಅಮಾವಾಸ್ಯೆ, ಪೌರ್ಣಿಮೆ, ಸಂಕಷ್ಟ ಚತುರ್ಥಿ ಹಾಗೂ ವಿಶೇಷ ದಿನಗಳು ಯಾವುವು ಮುಂದೆ ನೋಡೋಣ:

1. ಕನ್ನಡ ಕಾರ್ತಿಕ ಮಾಸದ ಶಿವ ಪ್ರದೋಷಂ ಉಪವಾಸದ ದಿನಗಳು
2022 ಕಾರ್ತಿಕ ಮಾಸದ ಪ್ರದೋಷ - ನವೆಂಬರ್ 5
2022 ಕಾರ್ತಿಕ ಮಾಸದ ಪ್ರದೋಷ - ನವೆಂಬರ್ 21

2. ಸಂಕಷ್ಟಹರ ಚತುರ್ಥಿ
ಕಾರ್ತಿಕ ಮಾಸ 2022ರಲ್ಲಿ ಗಣೇಶನಿಗೆ ಸಮರ್ಪಿತವಾದ ಸಂಕಷ್ಟಹರ ಚತುರ್ಥಿ ವ್ರತವು ನವೆಂಬರ್ 12ರಂದು, ಸೂರ್ಯೋದಯ ಅಥವಾ ಚಂದ್ರೋದಯವು ರಾತ್ರಿ 8:59 ಕ್ಕೆ.

3. 2022 ಕಾರ್ತಿಕ ಮಾಸದ ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷ
* ಕಾರ್ತಿಕ ಮಾಸ 2022 ಶುಕ್ಲ ಪಕ್ಷವು ಅಕ್ಟೋಬರ್ 26ರಿಂದ ನವೆಂಬರ್ 8ರವರೆಗೆ ಇರುತ್ತದೆ.
* ಕಾರ್ತಿಕ ಮಾಸ 2022 ಕೃಷ್ಣ ಪಕ್ಷ ನವೆಂಬರ್ 9 ರಿಂದ ನವೆಂಬರ್ 23 ರವರೆಗೆ ಇರುತ್ತದೆ.

4. ಕಾರ್ತಿಕ ಮಾಸದಲ್ಲಿ ಏಕಾದಶಿ ಉಪವಾಸದ ದಿನಾಂಕಗಳು
* ಪ್ರಬೋಧಿನಿ ಏಕಾದಶಿ - ನವೆಂಬರ್ 4
* ಕಾರ್ತಿಕ ಏಕಾದಶಿ ಮತ್ತು ಪಂಢರಪುರ ಯಾತ್ರೆ - ತುಳಸಿ ವಿವಾಹ ಪ್ರಾರಂಭ - ನವೆಂಬರ್ 4
* ಉತ್ಪತ್ತಿ ಏಕಾದಶಿ - ನವೆಂಬರ್ 20

5. ಕಾರ್ತಿಕ ಮಾಸದಲ್ಲಿ ಪೂರ್ಣಿಮಾ
* 2022 ಕಾರ್ತಿಕ ಪೂರ್ಣಿಮಾ ಅಥವಾ ಹುಣ್ಣಿಮೆ- ನವೆಂಬರ್ 8
ಪೂರ್ಣಿಮಾ ನವೆಂಬರ್ 7 ರಂದು ಮಧ್ಯಾಹ್ನ 3:58 ಕ್ಕೆ ಪ್ರಾರಂಭವಾಗುತ್ತದೆ ಮತ್ತು ನವೆಂಬರ್ 8 ರಂದು 3:53 ಕ್ಕೆ ಕೊನೆಗೊಳ್ಳುತ್ತದೆ.
* ತ್ರಿಪುರಾರಿ ಪೂರ್ಣಿಮೆ- ನವೆಂಬರ್ 7
* ಪೂರ್ಣಿಮಾ ವ್ರತ - ನವೆಂಬರ್ 7
* ಕಾರ್ತಿಕ ಸ್ನಾನ ಅಂತ್ಯದ ದಿನ
* ಕಾರ್ತಿಕ ಮಾಸ ತುಳಸಿ ಪೂಜೆ ಕೊನೆಯ ದಿನ.
* ಭೀಷ್ಮ ಪಂಚಕ ಕೊನೆಗೊಳ್ಳುತ್ತದೆ

6. ಕಾರ್ತಿಕ ಮಾಸದಲ್ಲಿ ಅಮವಾಸ್ಯೆ
ಕಾರ್ತಿಕ ಅಮಾವಾಸ್ಯೆ ಅಥವಾ ಚಂದ್ರನಿಲ್ಲದ ದಿನ ನವೆಂಬರ್ 23 ರಂದು.
ಅಮಾವಾಸ್ಯೆಯು ನವೆಂಬರ್ 23 ರಂದು ಬೆಳಿಗ್ಗೆ 6:07 ಕ್ಕೆ ಪ್ರಾರಂಭವಾಗುತ್ತದೆ ಮತ್ತು ನವೆಂಬರ್ 24 ರಂದು ಮುಂಜಾನೆ 3:02ಕ್ಕೆ ಕೊನೆಗೊಳ್ಳುತ್ತದೆ.

7. ಕಾರ್ತಿಕ ಸೋಮವಾರದ ದಿನಾಂಕಗಳು
2022ರ ಕಾರ್ತಿಕ ಮಾಸದಲ್ಲಿ ನಾಲ್ಕು ಸೋಮವಾರಗಳು (ಕಾರ್ತಿಕ ಸೋಮವಾರ) ಇವೆ.
* 31 ಅಕ್ಟೋಬರ್
* ನವೆಂಬರ್ 7
* 14 ನವೆಂಬರ್
* ನವೆಂಬರ್ 21

8. ಕಾರ್ತಿಕ ಮಾಸದ ಪ್ರಮುಖ ಹಬ್ಬಗಳು ಮತ್ತು ಮಂಗಳಕರ ದಿನಗಳು
ಬಲಿ ಪ್ರತಿಪದ - ಅಕ್ಟೋಬರ್ 26
ಗೋವರ್ಧನ ಪೂಜೆ - ಅಕ್ಟೋಬರ್ 26
ಯಮ ದ್ವಿತೀಯಾ - ಅಕ್ಟೋಬರ್ 26
ವೈಕುಂಠ ಚತುರ್ದಶಿ - ನವೆಂಬರ್ 7
ತ್ರಿಪುರಾರಿ ಪೂರ್ಣಿಮಾ - ನವೆಂಬರ್ 7
ಕಾಲಭೈರವ ಜಯಂತಿ - ನವೆಂಬರ್ 16



Click it and Unblock the Notifications