Latest Updates
-
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ!
ಕೈಲ್ ಮುಹೂರ್ತ: ಕೊಡಗಿನ ಈ ಹಬ್ಬ ಇತರ ಹಬ್ಬಗಳಿಗಿಂತ ಭಿನ್ನ ಹಾಗೂ ವೈಶಿಷ್ಟ್ಯವಾದ್ದದು
ಕರ್ನಾಟಕದ ಕಾಶ್ಮೀರವೆಂದು ಕರೆಯಲ್ಪಡುವ ಕೊಡಗು ಪ್ರಕೃತಿ ರಮಣೀಯವಾದ ಸ್ಥಳ ಎಷ್ಟು ಸುಂದರವೋ ಇಲ್ಲಿಯ ಉಡುಪು, ಆಚರಣೆ ಎಲ್ಲವೂ ವೈವಿಧ್ಯತೆಯಿಂದ ಕೂಡಿದೆ. ಇಲ್ಲಿಯ ಪ್ರಮುಖ ಹಬ್ಬಗಳೆಂದರೆ ಹುತ್ತರಿ ಹಾಗೂ ಕೈಲ್ ಪೋಳ್ದ್.

ಕೊಡವರ ಪ್ರಮುಖ ಹಬ್ಬವಾದ ಈ ದಿನದಂದು ಆಯುಧಗಳನ್ನು ಪೂಹಿಸಲಾಗುವುದು. ಕೊಡಗಿನವರ ಪ್ರಮುಖ ಆಯುಧಗಳಾದ ಕೋವಿ, ಒಡಿಕತ್ತಿ, ಪೀಚೆ ಕತ್ತಿ, ಗೆಜ್ಜೆ ತಂಡ್ ಹಾಗೂ ಕೃಷಿಗೆ ಬಳಸುವ ಪರಿಕರಗಳನ್ನು ಈ ದಿನ ಪೂಜಿಸಲಾಗುವುದು.
2021ರಂದು ಕೈಲ್ ಪೋಳ್ದ್ ಆಚರಣೆ
ಸೆಪ್ಟೆಂಬರ್ 2 ಹಾಗೂ 3ರಂದು ಕೈಲ್ ಪೋಳ್ದ್ ಆಚರಿಸಲಾಗುವುದು.
ಈ ದಿನ ಕೊಡಗಿನಲ್ಲಿ ಸಾರ್ವಜನಿಕ ರಜೆ ದಿನವಾಗಿದೆ.
ಕೈಲ್ ಪೋಳ್ದ್ ಆಚರಣೆಯ ಹಿನ್ನೆಲೆ
ಸೆಪ್ಟೆಂಬರ್ ಹೊತ್ತಿಗೆ ನಾಟಿ ಕೆಲಸ, ತೋಟದ ಕೆಲಸವೆಲ್ಲಾ ಮಗಿದಿರುತ್ತದೆ. ಎಲ್ಲಾ ಕೆಲಸಗಳು ಸರಾಗವಾಗಿ ನೆರವೇರಲು ಸಹಾಯವಾದ ಆಯುಧಗಳಿಗೆ ಈ ದಿನದಂದು ಪೂಜೆಯನ್ನು ಸಲ್ಲಿಸಲಾಗುವುದು.
ಮಾಂಸಾಹಾರವೇ ಈ ಅಡುಗೆಯಲ್ಲಿ ಹೈಲೈಟ್ಸ್
ಕೈಲ್ ಪೋಳ್ದ್ ಹಬ್ಬವೆಂದರೆ ಮಾಂಸಾಹಾರವೇ ಈ ಹಬ್ಬದಲ್ಲಿ ಪ್ರಮುಖವಾಗಿರುತ್ತದೆ. ಅದರಲ್ಲೂ ಕೊಡಗಿನಲ್ಲಿ ಪಂದಿ ಕರಿಗೆ ತುಂಬಾ ಪ್ರಾಮುಖ್ಯತೆ. ಈ ಹಬ್ಬದಲ್ಲಿ ಕಡಬು, ತಟ್ಟೆ ಇಡ್ಲಿ ಪಂದಿ ಕರಿ, ಕೋಳಿ ಸಾರು ಮಾಡಿ ಈ ಹಬ್ಬವನ್ನು ಆಚರಿಸಲಾಗುವುದು.
ಹಿಂದಿನ ಕಾಲದಲ್ಲಿ ಬೇಟೆಯಾಡಿ ಮಾಂಸ ತಂದು ಹಬ್ಬವನ್ನು ಆಚರಿಸಲಾಗುತ್ತಿತ್ತು. ಈಗ ಚೌಂಡಿಗೆ ಹಂದಿ, ಕೋಳಿಗಳನ್ನು ಬಲಿ ಕೊಟ್ಟು ಹಬ್ಬವನ್ನು ಆಚರಿಸಲಾಗುವುದು. ಈ ಹಬ್ಬದಲ್ಲಿ ವೈನ್ ಹಾಗೂ ಮದ್ಯ ಕೂಡ ಪ್ರಮುಖ ಆಕರ್ಷಣೆಯಾಗಿದೆ.



Click it and Unblock the Notifications
