Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಮಗುವಿಗೆ ಕೃಷ್ಣನ ವೇಷ ಹಾಕುತ್ತಿದ್ದೀರಾ? ಈ ಟಿಪ್ಸ್ ಸಹಾಯವಾದೀತು
ಆಗಸ್ಟ್ 18ಕ್ಕೆ ಕೃಷ್ಣ ಜನ್ಮಾಷ್ಟಮಿ. ಈ ದಿನ ಮುದ್ದು ಕಂದಮ್ಮಗಳಿಗೆ ಕೃಷ್ಣ-ರಾಧೆಯ ವೇಷ ಹಾಕಿಸಿ ಅವರಲ್ಲಿ ಆ ದೇವರನ್ನು ಕಾಣುವುದೇ ಮಹದಾನಂದ. ಮಕ್ಕಳಿಗೆ ಕೃಷ್ಣ ವೇಷ ಹಾಕಿದರೆ ತುಂಬಾ ಮುದ್ದು-ಮುದ್ದಾಗಿ ಕಾಣುತ್ತಾರೆ, ಇನ್ನು ಶಾಲೆಗಳಲ್ಲೂ ಮಕ್ಕಳಿಗೆ ಕೃಷ್ಣನ ವೇಷ ಹಾಕಿ ಕಳುಹಿಸಲು ಹೇಳಿರುತ್ತಾರೆ.
ನೀವು ನಿಮ್ಮ ಮಗುವಿಗೆ ಕೃಷ್ಣನ ವೇಷ ಹಾಕಬೇಕೆಂದು ಬಯಸುವುದಾದರೆ ಈ ಟಿಪ್ಸ್ ನಿಮಗೆ ತುಂಬಾ ಸಹಾಯವಾದೀತು ನೋಡಿ.
ಮಗುವಿಗೆ ಕೃಷ್ಣ ವೇಷ ಹಾಕಿಸಲು ಇವುಗಳನ್ನು ಜೋಡಿಸಿ

1. ಧೋತಿ
ಧೋತಿ ನೀವು ರೆಡಿಮೇಡ್ ಖರೀದಿಸಬಹುದು ಅಥವಾ ಶಲ್ಯದಿಂದಲೂ ಹಾಕಬಹುದು. ನೀವು ಸಿಲ್ಕ್ ಅಥವಾ ಕಾಟನ್ ಧೋತಿ ಬಳಸಬಹುದು.

2. ಕಿರೀಟ
ಇನ್ನು ಕೃಷ್ಣನಿಗೆ ಮುಕುಟ ಬೇಕು, ಕಿರೀಟ ಮಾರ್ಕೆಟ್‌ನಲ್ಲಿ ಸಿಗುತ್ತೆ ಅಥವಾ ನೀವೇ ಮಾಡಬಹುದು. ಮಾರ್ಕೆಟ್‌ನಿಂದ ತರುವುದಾದರೆ ಕಿರೀಟ ಲೈಟ್‌ವೇಯ್ಟ್ ಆಗಿರಲಿ, ತುಂಬಾ ಭಾರವಿದ್ದರೆ ಕಿರೀಟ ಧರಿಸಲು ಮಕ್ಕಳು ಇಷ್ಟಪಡಲ್ಲ.

3. ನವಿಲುಗರಿ
ಇನ್ನು ಶ್ರೀಕೃಷ್ಣ ವೇಷಕ್ಕೆ ನವಿಲುಗರಿ ಬೇಕೇಬೇಕು. ಕೃಷ್ಣನ ವೇಷ ಕಂಪ್ಲೀಟ್ ಆಗುವುದೇ ನವಿಲುಗರಿ ಮುಡಿಸಿದ ಮೇಲೆಯೇ...

4. ಕೊಳಲು
ಶ್ರೀಕೃಷ್ಣ ನಿಗೆ ಕೊಳಲು ಎಂದರೆ ಪ್ರಿಯ, ಆದ್ದರಿಂದ ಕೊಳಲು ಬೇಕೇಬೇಕು. ಇದನ್ನು ಕೂಡ ಖರೀದಿಸಬಹುದು, ಅಥವಾ ರಟ್ಟಿನಿಂದ ಮಾಡಿ ಅದಕ್ಕೆ ಶೈನಿಂಗ್ ಪೇಪರ್ ಹಚ್ಚಿದರೆ ಸಾಕು.

5. ಆಭರಣ
ಇನ್ನು ಶ್ರೀಕೃಷ್ಣನಿಗೆ ಆಭರಣಗಳು ಬೇಕು, ಆಭರಣಗಳು ಕೂಡ ಲೈಟ್ ವೇಯ್ಟ್ ಆಗಿರಲಿ, ತುಂಬಾ ಭಾರವಾದ ಆಭರಣಗಳನ್ನು ಹಾಕಿದರೆ ಮಗುವಿಗೆ ತುಂಬಾ ಹೊತ್ತು ಇರಲು ಕಷ್ಟ.

6. ಮೇಕಪ್
ಕೆಲವರು ನೀಲಿ ಬಣ್ಣ ಹಚ್ಚುತ್ತಾರೆ, ಆದರೆ ಹೀಗೆ ಹಚ್ಚುವಾಗ ಹುಷಾರು, ಕಡಿಮೆ ಬೆಲೆಯ ಕಳಪೆ ಗುಣಮಟ್ಟದ ಬಣ್ಣ ಮಕ್ಕಳಿಗೆ ತ್ವಚೆ ಅಲರ್ಜಿ ತರಬಹುದು. ಏನೂ ದೊಡ್ಡ ಮೇಕಪ್ ಬೇಕಾಗಿಲ್ಲ, ಹಣೆಗೆ ಒಂದು ಉದ್ದ ಕುಂಕುಮ ಇಟ್ಟರೂ ಸಾಕು ಚೆನ್ನಾಗಿ ಮಕ್ಕಳು ಕೃಷ್ಣ ವೇಷದಲ್ಲಿ ತುಂಬಾನೇ ಮುದ್ದಾಗಿ ಕಾಣುತ್ತಾರೆ.

7.ಬೆಣ್ಣೆ ಮಡಿಕೆ
ಇನ್ನು ಚಿಕ್ಕ ಮಣ್ಣಿನ ಮಡಿಕೆಯಲ್ಲಿ ಬೆಣ್ಣೆ ತುಂಬಿ ಕೊಟ್ಟರೆ ಬೆಣ್ಣೆ ಪ್ರಿಯ ಕೃಷ್ಣ ವೇಷ ಪೋಟೋಗೆ ಡ್ರೆಸ್ಸಿಂಗ್ ರೆಡಿ.



Click it and Unblock the Notifications
