Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
International Womens Day: ಡಾ. ಕೆ ಅನ್ನಪೂರ್ಣ: ಎರಡೂ ಕಾಲುಗಳಿಲ್ಲದಿದ್ದರೂ ತನ್ನ ಕಾಲು ಮೇಲೆ ನಿಂತ ಸಾಧಕಿ
ಪ್ರೀತು ಗಣೇಶ್
ಅಂತರರಾಷ್ಟ್ರೀಯ ಮಹಿಳಾ ದಿನದ ವಿಶೇಷವಾಗಿ ನಮ್ಮ ಓದುಗರಿಗೆ ನಾವೊಬ್ಬ ಸಾಧಕಿಯ ಪರಿಚಯ ಮಾಡಿಸುತ್ತಿದ್ದೇವೆ. ಕಾಲು-ಕೈ ಸರಿಯಾಗಿ ಇದ್ದರೂ ಬದುಕಿಕಟ್ಟಿಕೊಳ್ಳಲು ಕಷ್ಟವಾಗುತ್ತಿದೆ ಎಂದು ಹೇಳುವವರ ಮಧ್ಯ ಎರಡು ಕಾಲುಗಳಿಲ್ಲದಿದ್ದರೂ ತನ್ನ ಬದುಕನ್ನು ಬಹು ಸುಂದರವಾಗಿ ಕಟ್ಟಿಕೊಂಡ ಛಲಗಾತಿ, ಅವರ ಹೆಸರು ಡಾ. ಕೆ ಅನ್ನಪೂರ್ಣ. ಇವರು ರಾಷ್ಟ್ರೀಯ ಪ್ಯಾರಾ ಅಥ್ಲೆಟ್ ಹಾಗೂ ಅಂತರರಾಷ್ಟ್ರೀಯಾ ಪ್ಯಾರಾ ಬೋಶಿಯಾ ಅಥ್ಲೆಟ್.

ನಮ್ಮ ದೇಶೀಯ ಹೆಮ್ಮೆಯ ಪ್ಯಾರಾ ಅಥ್ಲೆಟ್‌ಗಳಲ್ಲಿ ಇವರೂ ಇಬ್ಬರು. ಇವರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಹಲವಾರು ಪದಕಗಳನ್ನು ಗಳಿಸಿದ್ದಾರೆ. ಇವರ ಸಾಧನೆಗೆ ಮೆಚ್ಚು ಗೌರವ ಡಾಕ್ಟರೇಟ್ ಕೂಡ ನೀಡಲಾಗಿದೆ. ಇವರು ಇಷ್ಟೆಲ್ಲಾ ಸಾಧನೆ ಮಾಡಲು ಅವರು ಬದುಕನ್ನು ಸ್ಪೂರ್ತಿಯಾಗಿ ತೆಗೆದುಕೊಂಡ ಛಲವೇ ಕಾರಣ, ಅವರ ಬದುಕಿನ ಕತೆಯನ್ನು ಕೇಳಿದರೆ ನಿಮಗೂ ಬದುಕಿನಲ್ಲಿ ನನ್ನಿಂದಲೂ ಏನಾದರೂ ಸಾಧಿಸಲು ಸಾಧ್ಯ ಎಂಬ ಆಸೆ ಹುಟ್ಟದಿರಲ್ಲ, ಅಂಥ ಸ್ಪೂರ್ತಿಯ ವ್ಯಕ್ತಿತ್ವ.

ಕೆ. ಅನ್ನಪೂರ್ಣ: ವಿಧಿಯಾಟಕ್ಕೆ ಬಗ್ಗದೆ ಬದುಕು ಕಟ್ಟಿಕೊಂಡ ಗಟ್ಟಿಗಿತ್ತಿ
ಕೆ. ಅನ್ನಪೂರ್ಣ ಬೆಂಗಳೂರಿನ ಲಗ್ಗರೆ ನಿವಾಸಿ. ವಿಧಾನಸೌಧದಲ್ಲಿ ಸಹಾಯಾಕಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತ್ರಿಚಕ್ರ ವಾಹನದಲ್ಲಿ ಓಡಾಡುತ್ತಾ ಕಾರ್ಯನಿರ್ವಹಿಸುವುದನ್ನು ನೋಡುತ್ತಿದ್ದರೆ ಅವರ ಆತ್ಮವಿಶ್ವಾಸ ನಮ್ಮನ್ನು ಆಕರ್ಷಿಸುತ್ತದೆ ಎಂದು ವಿಧಾನಸೌಧದಲ್ಲಿಯೇ ಕಾರ್ಯನಿರ್ವಹಿಸುತ್ತಿರು ಗೀತಾ ಅವರು ತುಂಬಾ ಹೆಮ್ಮೆಯಿಂದ ಹೇಳುತ್ತಾರೆ.

ನಾಲ್ಕುವರ್ಷದವರೆಗೆ ಕುಣಿದಾಡುತ್ತಿದ್ದ ಮಗು ಕಾಲು ಬಲವಿಲ್ಲದೆ ಕುಸಿದಾಗ
ಇವರು ಹುಟ್ಟುವಾಗ ಆರೋಗ್ಯವಂತ ಮಗುವಾಗಿಯೇ ಹುಟ್ಟಿದ್ದರು. ನಾಲ್ಕು ವರ್ಷದವರೆಗೆ ಕುಣಿದು ಕುಪ್ಪಳಿಸುತ್ತಾ ತಮ್ಮ ಬಾಲ್ಯವನ್ನು ಕಳೆದಿದ್ದರು. ಆದರೆ ವಿಧಿ ಅವರ ಬದುಕಿನಲ್ಲಿ ಆಟವಾಡಲಾರಂಭಿಸಿತು. ನಾಲ್ಕು ವರ್ಷವಿದ್ದಾಗ ಜ್ವರ ಬಂತು, ಮನೆಯವರು ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆದರು. ಜ್ವರವೇನೋ ಕಡಿಮೆಯಾಯ್ತು ಆದರೆ ಮಗುವಿಗೆ ಎದ್ದು ನಿಲ್ಲಲು ಸಾಧ್ಯವಾಗುತ್ತಿಲ್ಲ, ನಿಲ್ಲಿಸಿದರೆ ಕಾಲಿಗೆ ಬಲವಿಲ್ಲದಂತೆ ಕುಸಿದು ಬೀಳುತ್ತಿತ್ತು. ಅದನ್ನು ನೋಡಿದ ಪೋಷಕರಿಗೆ ಜಂಘಾಬಲವೇ ನಿಂತು ಹೋಯ್ತು, ಮಗುವನ್ನು ಎತ್ತಿಕೊಂಡು ಆಸ್ಪತ್ರೆಗೆ ಧಾವಿಸಿದರು, ವೈದ್ಯರು ಆಕೆಯ ಕಾಲು ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದು ಹೇಳಿದರು. ಪೋಷಕರಿಗೆ ದಿಕ್ಕೇ ತೋಚಲಿಲ್ಲ, ಆದರೂ ತಮ್ಮ ಪ್ರಯತ್ನ ನಿಲ್ಲಿಸಲಿಲ್ಲ, ಯಾರಾದರೂ ಆ ವೈದ್ಯರ ಬಳಿ ತೋರಿಸಿ ಎಂದರೆ ಆ ವೈದ್ಯರ ಬಳಿ ಕರೆದುಕೊಮಡು ಹೋಗಿ ತೋರಿಸುತ್ತಿದ್ದರು, ಎಷ್ಟೇ ವೈದ್ಯರನ್ನು ಕಂಡರೂ, ವ್ಯಾಯಾಮ ಮಾಡಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಎರಡು ವರ್ಷಗಳ ಕಾಲ ಸರಿಯಾದ ಪ್ರಜ್ನೆಯೂ ಇರಲಿಲ್ವಂತೆ. ಓಡುತ್ತಾ ಆಡುತ್ತಾ ಕಳೆಯಬೇಕಾಗಿದ್ದ ಮಗು ವ್ಹೀಲ್‌ಚೇರ್ ಮೊರೆ ಹೋಗಬೇಕಾಯಿತು.
ತಾನು ವ್ಹೀಲ್ ಚೇರ್‌ನಲ್ಲಿ ಕುಳಿತಿರುವಾಗ ಇತರ ಮಕ್ಕಳು ಓಡುವುದು, ನಲಿಯುವುದು ನೋಡುವಾಗ ಈ ಮಗುವಿಗೂ ಆ ಮಕ್ಕಳಂತೆ ಎದ್ದು ಓಡಬೇಕೆಂಬ ಆಸೆಯಾಗುತ್ತಿತ್ತು. ನನ್ನಿಂದ ನಡೆದಾಡಲು ಆಗುತ್ತಿಲ್ಲ ಎಂಬ ವೇದನೆ ಇದ್ದರೂ ಬದುಕಿನ ಬಗ್ಗೆ ತುಂಬಾನೇ ಆಸೆ ಆಕಾಂಕ್ಷೆ ಇತ್ತು. ಅಮ್ಮ ಮಗಳನ್ನು ದಿನಾ ಶಾಲೆಗೆ ಕರೆದುಕೊಂಡು ಹೋಗಿ ಬರುವುದು ಮಾಡುತ್ತಿದ್ದರು.

ಮತ್ತೊಮ್ಮೆ ಇವರ ಬದುಕಿನಲ್ಲಿ ವಿಧಿಯ ಕ್ರೂರ ಆಟ
ಮಗಳಿಗೆ ಓಡಾಡಲು ಸಾಧ್ಯವಾಗದಿದ್ದರೂ ಅವಳಿಗೆ ವಿದ್ಯಾಭ್ಯಾಸ ಕೊಡಿಸಬೇಕೆಂದು ಪೋಷಕರು ಪ್ರಯತ್ನಿಸುತ್ತಿದ್ದರು. ಇವರಿಗೆ 10 ವರ್ಷ ಇರುವಾಗ ಮನೆಗೆ ಆಸರೆಯಾಗಿದ್ದ ಅಪ್ಪ ತೀರಿಹೋದರು. ಮೊದಲೇ ಬಡತನ ತುಂಬಿದ ಕುಟುಂಬ ಬೀದಿಗೆ ಬೀಳುವ ಪರಿಸ್ಥಿತಿ ಎದುರಾಯ್ತು. ಅಮ್ಮ ಹೂ, ಹಣ್ಣು, ತರಕಾರಿ ಮಾಡಿ ಮಕ್ಕಳ ಹೊಟ್ಟೆ ತುಂಬಿಸಲು ಮುಂದಾದರು. ಅಮ್ಮನೇ ಮನೆಗೆ ಆಧಾರಸ್ತಂಭವಾದರು. ಅಮ್ಮ ಪಡುತ್ತಿದ್ದ ಕಷ್ಟ ನೋಡುತ್ತಿದ್ದ ಇವರಿಗೆ ನಾನು ಚೆನ್ನಾಗಿ ಒಂದು ನೌಕರಿಗೆ ಸೇರಬೇಕೆಂಬ ಛಲ ಮೂಡಿತು. ಅದರಂತೆ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಕಾಂ ಒದವಿ ಪಡೆದು ವಿಧಾನಸೌಧದಲ್ಲಿ ಕೆಲಸಕ್ಕೆ ಸೇರಿಕೊಂಡರು. ಒಂದು ಒಳ್ಳೆಯ ನೌಕರಿ ಸಿಕ್ಕರೂ ಇವರಿಗೆ ಸಮಧಾನವಾಗಲಿಲ್ಲ. ನಾನು ಏನಾದರೂ ಸಾಧನೆ ಮಾಡಬೇಕೆಂಬ ಛಲ ಮೂಡುತ್ತೆ. ಪ್ಯಾರಾ ಅಥ್ಲೆಟ್ ಆಗಿ ಗುರುತಿಸಿಕೊಳ್ಳಲಾರಂಭಿಸಿದರು.

ಕಂಚು-ಬೆಳ್ಳಿ-ಚಿನ್ನ ಪಡೆದ ಸಾಧಕಿ
ಇವರು ರಾಷ್ಟ್ರೀಯ ಮಟ್ಟದಲ್ಲಿ ಕಂಚು, ಬೆಳ್ಳಿ, 2016ರಲ್ಲಿ ನೇಪಾಳದ ಕಠ್ಮುಂಡುವಿಲ್ಲಿ ನಡೆದ ಅಂತರಾಷ್ಟ್ರೀಯ ಪ್ಯಾರಾ ಅಥ್ಲೆಟ್ ವ್ಹೀಲ್ ಚೇರ್ ಸ್ಪರ್ಧೆಯಲ್ಲಿ 2 ಬೆಳ್ಳಿ ಪದಕ, 2022ರಲ್ಲಿ ಚಿನ್ನದ ಪದಕ ಹೀಗೆ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಇವರು ತಮ್ಮ ಸಾಧನೆಯ ಮೂಲಕ ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದ್ದಾರೆ.
ಬದುಕಿನಲ್ಲಿ ಏನೇ ನಡೆಯಲಿ ಮನಸ್ಸು ಕುಗ್ಗಬಾರದು, ಆತ್ಮವಿಶ್ವಾಸದಿಂದ ಮುನ್ನುಗ್ಗಿದರೆ ನಾವು ಬಯಸಿದ್ದನ್ನು ಪಡೆಯಬಹುದು ಎಂಬುವುದಕ್ಕೆಇವರೇ ಸ್ಪೂರ್ತಿ. ಇವರ ಸಾಧನೆ ಮತ್ತಷ್ಟು ಹೆಚ್ಚಲಿ , ಮಹಿಳಾ ದಿನದ ಶುಭಾಶಯಗಳು ಮೇಡಂ....



Click it and Unblock the Notifications