Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಇಂದ್ರನ ವಾಹನ ಐರಾವತ ಆನೆಯ ಬಗ್ಗೆ ಈ ಆಸಕ್ತಿಕರ ವಿಚಾರಗಳು ಗೊತ್ತೇ?
ಐರಾವತ ಎಂದ ತಕ್ಷಣ ನಮಗೆ ಕೆಎಸ್‌ಆರ್‌ಟಿಸಿ ಬಸ್ ನೆನಪಾಗುತ್ತದೆ. ಹೆಚ್ಚಿನ ಜನರಿಗೆ ಐರಾವರ ಅಂದರೇನು ಅನ್ನೋದೇ ಗೊತ್ತಿಲ್ಲ. ಹೌದು, ಐರಾವತ ಎಂದರೆ ಅದೊಂದು ಜಾತಿಯ ಆನೆ. ಈ ಆನೆ ಅಂತಿತಾ ಆನೆಯಲ್ಲಿ ಇದು ಪವಿತ್ರವಾದ ಆನೆ. ಪುರಾಣಗಳಲ್ಲೂ ಈ ಬಗ್ಗೆ ಉಲ್ಲೇಖವಿದೆ.

ಹಾಗಾದರೆ ಐರಾವತ ಆನೆಯ ಮಹತ್ವವೇನು? ಐರಾವತ ಆನೆಯ ಬಗ್ಗೆ ಸಾಮಾನ್ಯ ಜನರಿಗೆ ಗೊತ್ತಿರದ ಆ ಸಂಗತಿಗಳೇನು? ಐರಾವತ ಆನೆಯ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ವಿಚಾರಗಳು ಯಾವುದು ಅನ್ನೋದನ್ನ ಹೇಳ್ತೀವಿ.
1. ಐರಾವತ ಹೆಸರು ಯಾಕೆ ಇಷ್ಟೊಂದು ಶ್ರೇಷ್ಠ?
ಐರಾವತ ಆನೆ ಎಂದರೆ ಇದೊಂದು ದೈವೀಕ ಗುಣಗಳಿರುವ ಆನೆಯಾಗಿದೆ. ಇದರ ಹೆಸರು ಕೇಳಿದ ತಕ್ಷಣ ಪ್ರತಿಯೊಬ್ಬರು ಐಶ್ವರ್ಯ ಹಾಗೂ ಅದೃಷ್ಟವನ್ನು ಅನುಭವಿಸುತ್ತಾರೆ.
2. ಪುಣ್ಯಸ್ಥಳಗಳಲ್ಲಿ ಐರಾವತವನ್ನು ಕಾಣಬಹುದು
ಆನೆಯನ್ನು ಪವಿತ್ರವಾದ ಪ್ರಾಣಿ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಭಾರತದಲ್ಲಿ ಅನೇಕ ದೇವಾಲಯಗಳಲ್ಲಿ ನಾವು ಆನೆಯನ್ನು ಕಾಣುತ್ತೇವೆ. ಧರ್ಮಸ್ಥಳ, ಕಟೀಲು ಹಾಗೂ ಅನೇಕ ಪುಣ್ಯ ಕ್ಷೇತ್ರಗಳಿಗೆ ಭೇಟಿ ಕೊಟ್ಟಾಗ ಇಂದಿಗೂ ನಾವು ಅಲ್ಲಿ ಆನೆಯನ್ನು ನೋಡಬಹುದಾಗಿದೆ. ಅಥವಾ ಕೆಲವೊಂದು ದೇವಾಲಯಗಳಲ್ಲಿ ಆನೆಯ ಮೂರ್ತಿಗಳು ನಮಗೆ ಕಾಣಸಿಗುತ್ತದೆ. ನಂಬಿಕೆಗಳ ಪ್ರಕಾರ ಕನಸಿನಲ್ಲಿ ಐರಾವತ ಆನೆಯನ್ನು ಕಂಡರೆ ಶುಭವಾಗಲಿದ್ಯಂತೆ. ನಮ್ಮ ಎಲ್ಲಾ ಆಸೆಗಳು, ಕನಸು ಈಡೇರುತ್ತಂತೆ. ಜೊತೆಗೆ ಕುಟುಂಬದಲ್ಲಿ ಶಾಂತಿ, ಅದೃಷ್ಟ, ಅಭಿವೃದ್ಧಿಯಾಗಲಿದೆ ಎಂಬ ನಂಬಿಕೆ ಇದೆ.
3. ಐರಾವತವನ್ನು ಭೂಮಿಗೆ ಕರೆಸಿಕೊಂಡಿದ್ದ ಅರ್ಜುನ
ಪ್ರತಿ ವರ್ಷ ಅಶ್ವಿನಿ ಕೃಷ್ಣ ಅಷ್ಟಮಿ ದಿನದಂದು ಮಹಾಲಕ್ಷ್ಮೀ ಅಥವಾ ಗಜಲಕ್ಷ್ಮೀ ವ್ರತವನ್ನು ಕೈಗೊಳ್ಳಲಾಗುತ್ತದೆ. ಇದರ ಹಿಂದಿನ ಕಾರಣ ಏಂದ್ರೆ ಮಹಾಭಾರತದಲ್ಲಿ ಅರ್ಜುನನು ತನ್ನ ತಾಯಿ ಕುಂತಿಗಾಗಿ ಗಜಲಕ್ಷ್ಮೀಯನ್ನು ಬೇಡಿಕೊಳ್ಳಲು ಐರಾವತವನ್ನು ಭೂಮಿಗೆ ಕರೆಸಿಕೊಂಡಿದ್ದನು ಎಂಬ ಪ್ರತೀತಿ ಇದೆ.
4. ಇಂದ್ರನ ಆನೆ ಐರಾವತ
ಐರಾವತ ಎಂದರೆ ಸಾಮಾನ್ಯ ಆನೆಯಲ್ಲ ಇದರ ಬಣ್ಣ ಬಿಳಿ. ಐರಾವತ ಎಂದರೆ ಅದು ಇಂದ್ರನ ಆನೆಯ ಹೆಸರಂತೆ.
5. ಇಂದ್ರ ಐರಾವತ ಪಡೆದಿದ್ಹೇಗೆ?
ಇಂದ್ರನು ಒಂದು ಸಾರಿ ಆಭರಣಗಳನ್ನು ಹಂಚುತ್ತಿರುತ್ತಾನೆ ಈ ವೇಳೆ ಇಂದ್ರನು ಆತನಿಗಾಗಿ ಐರಾವತವನ್ನು ಪಡೆಯುತ್ತಾನೆ. ಅದು ನೋಡೋದಕ್ಕೆ ತುಂಬಾನೇ ಸುಂದರವಾಗಿತ್ತು ಹಾಗೂ ಅದರಲ್ಲಿ ದೈವೀಕ ಗುಣಗಳಿತ್ತಂತೆ. ಇದೇ ಕಾರಣಕ್ಕೆ ಐರಾವತವನ್ನು ಇಂದ್ರ ಹಸ್ತಿ ಅಥವಾ ಇಂದ್ರ ಕುಂಜರ ಎಂದು ಕರೆಯಲಾಗುತ್ತದೆ.
6. ಸರ್ಪದ ಹೆಸರು ಕೂಡ ಐರಾವತ
ಐರಾವತ ಎಂದು ಕರೆಯಲು ಮುಖ್ಯ ಕಾರಣವೇನೆಂದರೆ ಇರಾ ಎಂದರೆ ನೀರು. ಈ ಆನೆಯು ಐರಾವತವೆಂಬ ಸಮುದ್ರದಿಂದ ಹುಟ್ಟಿದ ಕಾರಣ ಇದಕ್ಕೆ ಐರಾವತವೆಂಬ ಹೆಸರಿಡಲಾಯಿತು. ಪುರಾಣಗಳಲ್ಲಿ ಐರಾವತ ನಾಗನ ಬಗ್ಗೆ ಉಲ್ಲೇಖವಿದೆ. ಅಷ್ಟೇ ಅಲ್ಲದೇ ದೃತರಾಷ್ಟ್ರವೆಂಬ ಸರ್ಪದ ಪೂರ್ವಜರ ಹೆಸರು ಕೂಡ ಐರಾವತ ಆಗಿದ್ಯಂತೆ.
7. ಸಮುದ್ರ ಮಂಥನದಲ್ಲಿ ಹುಟ್ಟಿದ ಪವಿತ್ರ ವಸ್ತು
ನೀವೆಲ್ಲಾ ಸಮುದ್ರ ಮಂಥನದ ಕಥೆ ಖಂಡಿತ ಕೇಳಿರ್ತೀರಾ. ದೇವತೆಗಳು ಹಾಗೂ ಅಸುರರ ನಡುವೆ ಅಮೃತಕ್ಕಾಗಿ ಹೋರಾಟ ನಡೆಯುತ್ತಿದ್ದಾಗ ಸಮುದ್ರ ಮಂಥನದಲ್ಲಿ ಹದಿನಾಲ್ಕು ಅಮೂಲ್ಯ ವಸ್ತುಗಳು ಹೊರ ಬರುತ್ತದೆ. ಅವುಗಳಲ್ಲಿ ಐರಾವತ ಆನೆಯು ಕೂಡ ಒಂದಾಗಿತ್ತು.
8. ಜೈನ ಸಾಹಿತ್ಯದಲ್ಲಿ ಉಲ್ಲೇಖವಾಗಿದೆ
ಮಹಾಭಾರತದ ಎಂಟನೇ ಅಧ್ಯಯದ ಭೀಷ್ಮಪರ್ವದಲ್ಲಿ ಉತ್ತರ ಭರತವರ್ಷದ ಭೂಮಿಯನ್ನು ಉತ್ತರ ಕುರು ಎಂದು ಕರೆಯುವ ಬದಲು ಐರಾವತ ಎಂದು ಕರೆಯಲಾಗುತ್ತಿತ್ತಂತೆ. ಈ ರೀತಿ ಉಲ್ಲೇಖವಾಗಿರೋದನ್ನ ಜೈನ ಸಾಹಿತ್ಯದಲ್ಲಿ ನಾವು ಕಾಣಬಹುದು.
9. ಕನಸಿನಲ್ಲಿ ಐರಾವತ ಆನೆಯನ್ನು ಕಂಡರೆ ಶುಭ
ಜೋತಿಷ್ಯಶಾಸ್ತ್ರದ ಪ್ರಕಾರ ನೀವೇನಾದರೂ ಕನಸಿನಲ್ಲಿ ಐರಾವತವನ್ನು ಕಂಡರೆ ಶುಭಕರವೆಂದು ನಂಬಲಾಗಿದೆ. ಇದು ಸಮೃದ್ಧಿಯ ಸಂಕೇತವಾಗಿದೆ ಹಾಗೂ ಮನೆಯಲ್ಲಿ ಸಂತೋಷ ನೆಲೆಸಲು ಕಾರಣವಾಗುತ್ತದೆ.
10. ಐರಾವತದ ಇತರ ಹೆಸರುಗಳು
ಐರಾವತ ಆನೆಯ ಇತರ ಹೆಸರುಗಳು ಯಾವುದು ಅಂತ ನಾವು ನೋಡ್ತಾ ಹೋಗೋದಾದ್ರೆ ಅಭ್ರಮತಂಗ, ಐರಾವನ್, ಅಭ್ರಭೂವಲ್ಲಭ, ಶ್ವೆಟಷ್ಠಿ, ಮಲ್ಲನಾಗ, ಹಸ್ತಿಮಲ್ಲ, ಸಧಾದನ, ಸುಧಾಮ, ಶ್ವೇತಕುಂಜ, ಗಜಗ್ರನಿ ಮತ್ತು ನಾಗಮಲ್ಲ.
ಇವೆಲ್ಲಾ ಐರಾವತ ಆನೆಯ ಬಗ್ಗೆ ನೀವು ತಿಳಿದುಕೊಂಡಿರದ ಕೆಲವೊಂದು ಇಂಟ್ರಸ್ಟಿಂಗ್ ವಿಚಾರಗಳು.



Click it and Unblock the Notifications



