Latest Updates
-
UGC NET ಪರೀಕ್ಷೆ: ಪರೀಕ್ಷೆಯ ಒತ್ತಡದ ನಡುವೆ ಮನೆಯಲ್ಲಿ ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈಗಲೇ ಈ ಕೆಲಸ ಮಾಡಿ! -
ಭಾರಿ ಮಳೆ, ವಿದ್ಯುತ್ ಕಡಿತ: ಸಂಕಷ್ಟದ ಸಮಯದಲ್ಲಿ ನಿಮ್ಮ ಆರೋಗ್ಯ ಮತ್ತು ಆಹಾರ ಸುರಕ್ಷತೆ ಕಾಪಾಡಿಕೊಳ್ಳುವುದು ಹೇಗೆ? -
ಮುಂಬೈನಲ್ಲಿ ವರುಣನ ಆರ್ಭಟ: ರೆಡ್ ಅಲರ್ಟ್ ಘೋಷಣೆ, ಪ್ರಯಾಣಿಕರೇ ಎಚ್ಚರ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಆರ್ಭಟ: ಹೊರಗೆ ಹೋಗುವ ಮುನ್ನ ಎಚ್ಚರ, ಮನೆಯಲ್ಲೇ ಫಿಟ್ ಆಗಿರಲು ಈ 8 ನಿಮಿಷದ ಟಿಪ್ಸ್! -
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ!
ದೇವರಲ್ಲಿ ಐಕ್ಯತೆಯನ್ನು ಸಾಧಿಸಲು 'ಭಕ್ತಿ ಯೋಗ'
ಭಕ್ತಿ ಎಂಬುದು ದೇವರಿಗೆ ನೀವು ಸಲ್ಲಿಸುವ ವಂದನೆಯಾಗಿದೆ. ಇದು ಅರ್ಪಣೆಯನ್ನು ಪರಿಪೂರ್ಣತೆಯನ್ನು ಹೊಂದಿರಬೇಕು. ದಾಸರು ಹೇಳಿರುವಂತೆ ದೇವರಿಗೆ ಸಮರ್ಪಿಸುವ ಭಕ್ತಿ ನಿಷ್ಕಳಂಕವಾಗಿರಬೇಕು ಮತ್ತು ಅದರಲ್ಲಿ ಪರಿಶುದ್ಧತೆ ಇರಬೇಕು. ನಿಮ್ಮನ್ನು ನೀವು ಮರೆತು ಸಂಪೂರ್ಣವಾಗಿ ಆ ದೇವರಲ್ಲಿ ನೀವು ಲೀನರಾಗಬೇಕು. ಭಕ್ತರ ಸಂಕಷ್ಟಗಳನ್ನು ಅರಿಯುವ ಮಹಾಮಹಿಮನಾದ ಆ ದೇವರು ಭಕ್ತರ ಕೋರಿಕೆಯನ್ನು ಈಡೇರಿಸುತ್ತಾನೆ ಮತ್ತು ಅವರನ್ನು ಕೈಬಿಡುವುದಿಲ್ಲ.

ಸಂಕಟ ಬಂದಾಗ ವೆಂಕಟರಮಣ ಎಂಬಂತೆ ಭಕ್ತಿ ಎಂಬುದು ಸ್ಫೂರ್ತಿಯ ಸೆಲೆ ಇದ್ದಂತೆ. ಯಾರೂ ಇಲ್ಲದಿದ್ದರೂ ಆ ಭಗವಂತನಿದ್ದಾನೆ ಎಂಬ ಅಚಲ ವಿಶ್ವಾಸವೇ ನಮ್ಮನ್ನು ಜೀವನ ಪಥದಲ್ಲಿ ಮುಂದಕ್ಕೆ ಕೊಂಡೊಯ್ಯುವುದು. ಭಕ್ತಿಯಲ್ಲಿ ಯೋಗದ ಪ್ರಧಾನ್ಯತೆಯಿಂದ ನಿಮಗಾಗುವ ಫಲಗಳ ಕುರಿತು ಇಂದಿನ ಲೇಖನದಲ್ಲಿ ತಿಳಿಸಲಿದ್ದೇವೆ. ಭಕ್ತಿ ಯೋಗ ಎಂಬುದು ನಾಲ್ಕು ಯೋಗ ವಿಧಾನಗಳಿಂದ ಆ ದೇವರನ್ನು ಕಂಡುಕೊಳ್ಳುವ ವಿಧಾನವಾಗಿದೆ. ಭಕ್ತಿಯಲ್ಲಿ ಸಾರ್ವಭೌಮತ್ವವನ್ನು ಪಡೆದುಕೊಳ್ಳುವ ಸಿದ್ಧಿಯಾಗಿದೆ.
ರಾಜ ಯೋಗ ಮತ್ತು ಹತ ಯೋಗದಲ್ಲಿ ನಿಮಗೆ ದೈಹಿಕ ಆರೋಗ್ಯ ಮತ್ತು ಆಂತರಿಕ ಶಕ್ತಿಯ ಅಗತ್ಯವಿದೆ. ಜ್ಞಾನ ಯೋಗದಲ್ಲಿ ಉತ್ಸಾಹ ಮತ್ತು ಸೂಕ್ಷ್ಮ ಬುದ್ಧಿಮತ್ತೆ ಬೇಕು. ಭಕ್ತಿ ಯೋಗದಲ್ಲಿ ನಿಮಗೆ ಬೇಕಾಗಿರುವುದು ಪ್ರೀತಿ ಮತ್ತು ಮುಕ್ತತೆಯಿಂದ ಕೂಡಿದ ಹೃದಯವಾಗಿದೆ. ಭಕ್ತಿ ಯೋಗದ ಅನುಷ್ಟಾನ ತುಂಬಾ ಸರಳವಾಗಿದ್ದು ಯಾರೂ ಬೇಕಾದರೂ ಇದನ್ನು ಅನುಸರಿಸಬಹುದಾಗಿದೆ.
ಭಕ್ತಿ ಯೋಗ ಕುರಿತಾದ ಸಣ್ಣ ಇತಿಹಾಸ
12ನೇ ಶತಮಾನದ ಒಂದು ಘಟನೆ ಭಕ್ತಿ ಯೋಗಕ್ಕೆ ಉತ್ತಮ ಉದಾಹರಣೆಯಾಗಿದೆ. ಹತ್ತು ವರ್ಷದ ಸಣ್ಣ ಹುಡುಗಿ ಅಕ್ಕ ಮಹಾದೇವಿ ಬಾಲ್ಯದ ಆಟಪಾಠಗಳನ್ನೆಲ್ಲಾ ಬಿಟ್ಟು ಶಿವನನ್ನು ಆರಾಧನೆ ಮಾಡುತ್ತಾಳೆ. ಮಹಾದೇವಿ ಯುವತಿಯಾಗುತ್ತಿದ್ದಂತೆ ಸ್ಥಳೀಯ ರಾಜನಿಗೆ ಆಕೆಯನ್ನು ಕೊಟ್ಟು ವಿವಾಹ ಮಾಡುತ್ತಾರೆ. ಆದರೆ ಶಿವನ ಭಕ್ತೆಯಾಗಿದ್ದ ಮಹಾದೇವಿಗೆ ಶಿವನೇ ಸರ್ವಸ್ವ ಮತ್ತು ಮಾನವ ಪ್ರೀತಿಗಿಂತ ಶಿವನ ಮೇಲೆ ಆಕೆಗಿದ್ದ ಭಕ್ತಿಯ ಪ್ರೀತಿ ಮಹತ್ವದ್ದಾಗಿಬಿಡುತ್ತದೆ.
ವೈವಾಹಿಕ ಜೀವನವನ್ನು ತ್ಯಜಿಸಿ ಪತಿಯನ್ನು ತೊರೆದು ಸಕಲ ಐಶ್ವರ್ಯ ಸುಖ ಸಂಪತ್ತುಗಳನ್ನು ತ್ಯಾಗ ಮಾಡಿ ಶಿವನ ಮಹಾನ್ ಭಕ್ತೆಯಾಗಿ ಬಿಡುತ್ತಾಳೆ ಅಕ್ಕ ಮಹಾದೇವಿ. ಕವಯಿತ್ರಿ ಮತ್ತು ಮಹಾನ್ ಸಂತೆಯಾಗಿ ದೇಶಗಳನ್ನು ಆಕೆ ಸುತ್ತುತ್ತಾಳೆ ಅಂತೆಯೇ ಪರಶಿವನ ಕುರಿತು ಆಕೆ ಭಕ್ತಿ ಪ್ರಧಾನ ಹಾಡುಗಳು, ಕಥೆಗಳು ಮತ್ತು ಸ್ತೋತ್ರಗಳನ್ನು ಬರೆಯುತ್ತಾಳೆ.
ಹಿಂದೂ ಧರ್ಮದಲ್ಲಿ ಭಕ್ತಿ ಯೋಗವನ್ನು ಅರಿಯಲು ಅಕ್ಕ ಮಹಾದೇವಿಯ ಭಕ್ತಿ ಮುಖ್ಯ ಕಾರಣ ಎಂದೆನಿಸಿದೆ. ಭಕ್ತಿ ಯೋಗಕ್ಕೆ ಇರುವ ಮತ್ತೊಂದು ಪ್ರಮುಖ ಉದಾಹರಣೆ ಎಂದರೆ ಭಗವದ್ಗೀತೆಯಾಗಿದೆ. ದೇವರ ಕುರಿತಾದ ಪ್ರೇಮ ಪೂರಿತ ಹಾಡುಗಳು ಎಂಬುದಾಗಿ ಇದನ್ನು ಕರೆಯುತ್ತಾರೆ. ಗೀತೆ ಹೇಳುವಂತೆ ನಿಮ್ಮನ್ನು ನಿಮ್ಮ ಹೃದಯದೊಂದಿಗೆ ಸಂಪರ್ಕಪಡಿಸುವುದರಿಂದ ಆಧ್ಯಾತ್ಮಿಕ ಸಾಕ್ಷಾತ್ಕಾರವನ್ನು ಪಡೆದುಕೊಳ್ಳಬಹುದು.
ಐದನೇ ಶತಮಾನದಲ್ಲಿ ಭಾರತದ ದಕ್ಷಿಣ ಭಾಗದಲ್ಲಿ ಪ್ರಥಮ ಬಾರಿಗೆ ಶೈವ ಪಂಥದ ಆಧ್ಯಾತ್ಮಿಕ ಶಾಲೆಗಳು ಆರಂಭಗೊಂಡವು. ಆಧ್ಯಾತ್ಮಿಕತೆಯನ್ನು ಬೆಂಬಲಿಸುವುದು ಮತ್ತು ಪ್ರೋತ್ಸಾಹಿಸುವುದೇ ಇವುಗಳ ಮುಖ್ಯ ಉದ್ದೇಶವಾಗಿತ್ತು. ಪ್ರಾರ್ಥನೆ ಹಾಗೂ ಕೃಷ್ಣ, ಕಾಳಿ, ಶಿವ ಮತ್ತು ವಿಷ್ಣುವಿನ ಕುರಿತಾದ ಮಂತ್ರಗಳನ್ನು ಪಠಿಸುವುದು ಇದರಲ್ಲಿ ಸೇರ್ಪಡೆಯಾಗಿತ್ತು.
ಇದರ ಜೊತೆಗೆ ಧಾರ್ಮಿಕ ಹಾಡುಗಳನ್ನು ಹಾಡುವುದು, ಗುರುವನ್ನು ಅನುಸರಿಸುವುದು, ಧ್ಯಾನ, ಭಕ್ತಿ ಗೀತೆಗಳ ರಚನೆ, ಪೂಜೆ ಅಂತೆಯೇ ಪೂಜಾ ಕಾರ್ಯಗಳ ಆಚರಣೆಯನ್ನು ಜಾರಿಗೆ ತರಲಾಯಿತು. ದೇವರನ್ನು ಇನ್ನಷ್ಟು ಚೆನ್ನಾಗಿ ಅರಿತುಕೊಳ್ಳುವ ಪ್ರಕ್ರಿಯೆಗೆ ಭಕ್ತಿ ಯೋಗ ನಾಂದಿ ಹಾಡಿತು. ಇತಿಹಾಸ ಮೂಲಗಳ ಪ್ರಕಾರ ಭಕ್ತಿ ಯೋಗವು ಭಾರತೀಯ ಸಮುದಾಯದ ಎಲ್ಲಾ ಜನಾಂಗ ಮತ್ತು ಪಂಥಗಳು ಸ್ವೀಕರಿಸಿದವು.
ನಿಮ್ಮ ದೇವರು ಮತ್ತು ಗುರು ಯಾರು
ಭಕ್ತಿ ಯೋಗದ ಕುರಿತಾದ ಕೆಲವೊಂದು ದಂತಕಥೆಗಳು ಹೇಳುವಂತೆ, ಶಿವನು ಅಕ್ಕಮಹಾದೇವಿಯ ಗುರು ಮತ್ತು ದೇವರಾಗಿದ್ದನು. ಅಂತೆಯೇ ಹೆಚ್ಚಿನ ಭಕ್ತರುಗಳು ತಮ್ಮನ್ನು ತಮ್ಮ ನೆಚ್ಚಿನ ದೇವರುಗಳಿಗೆ ಸಮರ್ಪಿಸಿಕೊಂಡಿದ್ದಾರೆ. ಜೀವಂತ ಗುರುಗಳನ್ನೇ ದೇವರಂತೆ ನಂಬಿ ತಮ್ಮ ಸರ್ವಸ್ವವನ್ನು ಅವರುಗಳ ಪಾದಾರವಿಂದಕ್ಕೆ ಅರ್ಪಿಸಿದವರಿದ್ದಾರೆ. ಭಕ್ತಿ ಯೋಗವನ್ನು ಅರಿತುಕೊಳ್ಳಲು ಅದನ್ನು ತಿಳಿಯಪಡಿಸುವ ಗುರು ಬೇಕೇ ಬೇಕು.
ನಿಮ್ಮನ್ನು ದೇವರಿಗೆ ಶರಣಾಗತರನ್ನಾಗಿ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಗುರುವು ತಿಳಿಸಿಕೊಡುತ್ತಾನೆ. ಅಂತೆಯೇ ಇನ್ನು ಕೆಲವರ ಪ್ರಕಾರ ಭಕ್ತಿ ಯೋಗ ಮತ್ತು ಗುರುಗಳು ಅನಾವಶ್ಯಕ ಅದನ್ನು ತಿಳಿದುಕೊಳ್ಳುವ ಅಗತ್ಯತೆ ಇಲ್ಲ ಎಂಬುದಾಗಿದೆ. ನಿಮ್ಮ ಅಹಂಕಾರವನ್ನು ಮೆಟ್ಟಿ ನಿಂತು ನಿಮ್ಮ ಕುಟುಂಬದೊಂದಿಗೆ ಸಂತಸದ ಜೀವನವನ್ನು ಸಾಗಿಸಲು ಭಕ್ತಿ ಯೋಗ ಸಹಕಾರಿಯಾಗಿದೆ.
ಭಕ್ತಿಯ 9 ಪ್ರಕಾರಗಳು
ಭಕ್ತಿ ತಂತ್ರಗಳನ್ನು ಬಳಸಿಕೊಂಡು ದೇವರಿಗೆ ಸಮರ್ಪಿಸುವ ಭಕ್ತಿ ಮತ್ತು ಪ್ರೀತಿ ಊರ್ಜಿತಗೊಳ್ಳುತ್ತದೆ. ಭಕ್ತಿ ಯೋಗದಲ್ಲಿ 9 ಪ್ರಕಾರಗಳಿದ್ದು, ಕೀರ್ತನೆ, ಪಾದಸೇವನಮ್, ಶ್ರವಣಂ, ಸ್ಮರಣಂ, ಅರ್ಚನಂ, ದಾಸ್ಯಂ, ಸಕ್ಯಂ, ವಂದನಂ ಮತ್ತು ಆತ್ಮನಿವೇದನಂ ಎಂಬುದಾಗಿದೆ. ಕೊನೆಯದಾಗಿ ಭಕ್ತಿ ಯೋಗವು ಹಿಂದೂ ಧರ್ಮದಲ್ಲಿ ದೇವರನ್ನು ಪ್ರೀತಿಸಲು, ಪೂಜಿಸಲು ಮತ್ತು ಆರಾಧಿಸಲು ಹೇಳತ್ತದೆ. ಇದರಿಂದ ದೇವರ ಶಕ್ತಿಗಳನ್ನು ಅರಿತುಕೊಂಡು ಅವರಲ್ಲಿ ಸರ್ವಾಂತರ್ಯಾಮಿಯಾಗಿ ಏಕತೆಯನ್ನು ಸಾಧಿಸಬಹುದಾಗಿದೆ.



Click it and Unblock the Notifications


