ದಾನಗಳಲ್ಲಿ ಹೆಚ್ಚು ಶ್ರೇಷ್ಠ ಅನ್ನದಾನದ ಮಹತ್ವವೇನು?

By: jaya subramanya
Subscribe to Boldsky

ದಾನಗಳಲ್ಲಿ ಅನ್ನದಾನ ಶ್ರೇಷ್ಠ ಎಂಬ ಮಾತಿದೆ. ಹಣ ದಾನ, ವಸ್ತ್ರ ದಾನ, ಭೂ ದಾನ ಹೀಗೆ ಪ್ರತಿಯೊಬ್ಬರೂ ತಮ್ಮ ಕೈಲಾದ ಮಟ್ಟಿಗೆ ದಾನಗಳನ್ನು ಮಾಡಿ ಇರದವರನ್ನು ತೃಪ್ತಿಪಡಿಸುವುದು ಲೋಕರೂಢಿಯಾಗಿದೆ. ಉಳ್ಳವರು ಇಲ್ಲದವರಿಗೆ ದಾನವನ್ನು ಮಾಡುವುದರ ಮೂಲಕ ಅವರ ಸ್ವಲ್ಪ ಹೊರೆಯನ್ನು ಕಡಿಮೆ ಮಾಡಬಹುದಾಗಿದೆ. ಅವರ ಬಡತನವನ್ನು ಕೊಂಚವಾದರೂ ತಗ್ಗಿಸಬಹುದಾಗಿದೆ ಎಂಬುದು ಇದರ ಒಳಾರ್ಥವಾಗಿದೆ.

ಎಲ್ಲಾ ದಾನದಲ್ಲೂ ಅತ್ಯಂತ ಮಹತ್ವವಾಗಿರುವುದು ಅನ್ನದಾನವಾಗಿದೆ. ದಾನ ಮಾಡುವುದಕ್ಕಾಗಿ ನೀವು ಹೆಚ್ಚಿನ ಜನರನ್ನು ಸಂಘಟಿಸುವುದಾಗಲೀ ಇಲ್ಲವೇ ಇದಕ್ಕಾಗಿಯೇ ಪ್ರತ್ಯೇಕವಾಗಿ ಹಣ ಹೊಂದಿಸುವುದೋ ಮೊದಲಾದ ಕಾರ್ಯಗಳನ್ನು ಮಾಡಬೇಕಾಗಿಲ್ಲ. ನಿಮ್ಮ ಬಳಿ ಏನಿದೆಯೋ ಅದನ್ನು ಇಲ್ಲದವರಿಗೆ ನೀಡುವುದರ ಮೂಲಕ ನಿಮ್ಮ ದಾನ ಶ್ರೇಷ್ಟತೆಯನ್ನು ನಿರೂಪಿಸಬಹುದಾಗಿದೆ. ಅಂತೆಯೇ ಅವರ ಶುಭ ಹಾರೈಕೆಯಿಂದ ನಿಮಗೆ ಒಳಿತಾಗುವುದು ಖಂಡಿತ.  

Lord krishna
 

ಹಸಿವೆ ಎಂಬುದು ವಿಶ್ವದ ಅತಿ ದೊಡ್ಡ ಕಾಯಿಲೆ ಎಂಬ ಮಾತಿದೆ. ಇದು ಪ್ರತಿಯೊಬ್ಬರನ್ನೂ ಕಾಡುವ ಕಾಯಿಲೆಯಾಗಿದ್ದು ಇದಕ್ಕೆ ಪರಿಹಾರವಿಲ್ಲ ಎಂಬುದು ಜನಜನಿತ. ಪುರಾಣಗಳು ಹೇಳುವಂತೆ ಹೊಟ್ಟೆ ಎಂಬುದು 'ಅಗ್ನಿ ಕುಂಡ' ಎಂದೆನಿಸಿದ್ದು ಪಂಚಭೂತಗಳಿಂದ ನಮ್ಮ ದೇಹವನ್ನು ನಿರ್ಮಿಸಲಾಗಿದೆ. ನಿತ್ಯವೂ ಬಿಡದೇ ಅದಕ್ಕೆ ಆಹಾರವನ್ನು ಒದಗಿಸಬೇಕು. ಈ ಅರ್ಪಣೆಯು ಎಲ್ಲಿಯಾದರೂ ವಿಳಂಬವಾದಲ್ಲಿ ದೇಹವು ಖಾಲಿಯಾಗುತ್ತದೆ.

ಈ ಅಗ್ನಿ ಕುಂಡವನ್ನು ತೃಪ್ತಿಪಡಿಸುವುದು ಮಹತ್ವದ ಕಾರ್ಯ ಎಂದೆನಿಸಿದ್ದು ಇದು ಹಲವಾರು ಯಜ್ಞಗಳನ್ನು ಮಾಡುವುದಕ್ಕೆ ಸಮನಾಗಿದೆ. "ಅನ್ನದ್ ಭವಂತಿ ಭೂತಾನಿ" ಎಂದಾಗಿ ಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದ್ದಾರೆ. ಅಂದರೆ ಪ್ರತಿಯೊಬ್ಬ ಚರಾಚರ ಜೀವಿಯೂ ಅನ್ನಕ್ಕಾಗಿಯೇ ದುಡಿಯುತ್ತಿದ್ದು ವ್ಯಕ್ತಿಯ ಹಸಿವನ್ನು ತಣಿಸುವುದು ಎಂಬುದು ಮಹತ್ ಕಾರ್ಯವಾಗಿದೆ.

ಬರಿಯ ಮನುಷ್ಯರಿಗೆ ಮಾತ್ರವೇ ಅನ್ನವನ್ನು ನೀಡುವುದು ಇಲ್ಲವೇ ಅವರ ಹಸಿವನ್ನು ತಣಿಸುವುದಲ್ಲದೆ ಸಸ್ಯಗಳಿಗೆ ಮತ್ತು ಪ್ರಾಣಿಗಳಿಗೆ ಆಹಾರವನ್ನು ಉಣಿಸುವುದು ಕೂಡ ಮಹತ್ ಕಾರ್ಯವಾಗಿದೆ. ಅನ್ನದಾನದ ಮಹತ್ವವನ್ನು ತಿಳಿಸಿಕೊಡುವ ಆಸಕ್ತಿಕರ ಕಥಾನಕಗಳನ್ನು ಇಂದಿಲ್ಲಿ ತಿಳಿಸುತ್ತಿದ್ದು ಗಮನ ಹರಿಸಿ.

ಶಿವ ಮತ್ತು ಪಾರ್ವತಿ ದೇವಿ

ಶಿವ ಮತ್ತು ಪಾರ್ವತಿಯು ಒಮ್ಮೆ ದಾಳವನ್ನು ಆಡುತ್ತಿದ್ದರು. ಪಂದ್ಯದಲ್ಲಿ ಶಿವನು ತಮ್ಮ ತ್ರಿಶೂಲ, ಹಾವು ಮತ್ತು ಭಿಕ್ಷಾಟನೆಯ ಪಾತ್ರೆ ಸೇರಿದಂತೆ ಎಲ್ಲವನ್ನೂ ಪಾರ್ವತಿಯ ಎದುರಿಗೆ ಕಳೆದುಕೊಳ್ಳುತ್ತಾರೆ. ಎಲ್ಲವನ್ನೂ ಕಳೆದುಕೊಂಡು ಶಿವನು ಅರಣ್ಯದಲ್ಲಿ ಸಂಚರಿಸುತ್ತಿದ್ದಾಗ ವಿಷ್ಣು ದೇವರು ಅವರೆದುರು ಪ್ರತ್ಯಕ್ಷರಾಗಿ ಆಟವನ್ನು ಪುನಃ ಆಡುವಂತೆ ಹುರಿದುಂಬಿಸುತ್ತಾರೆ. ಶಿವನು ಗೆಲ್ಲಲು ವಿಷ್ಣುವು ಸಹಾಯ ಮಾಡುತ್ತಾರೆಂದು ಅವರು ಭರವಸೆಯನ್ನು ನೀಡುತ್ತಾರೆ.

ವಿಷ್ಣುವಿನ ಸಹಾಯದಂತೆ ಶಿವನು ಪುನಃ ಪಂದ್ಯವನ್ನು ಆಡಿ ಕಳೆದುಕೊಂಡಿರುವುದೆಲ್ಲವನ್ನೂ ಮರಳಿ ಪಡೆಯುತ್ತಾರೆ. ವಿಷ್ಣುವಿನ ಮಾಯೆಯನ್ನು ಪಾರ್ವತಿ ದೇವಿಯು ಅರಿತುಕೊಳ್ಳುತ್ತಾರೆ ಮತ್ತು ಅವರು ಕ್ರೋಧಗೊಳ್ಳುತ್ತಾರೆ. ಪಾರ್ವತಿಯನ್ನು ಶಾಂತರಾಗಿಸಲು, ಪ್ರತಿಯೊಂದು ಮಾಯೆಯ ಬಂಧನದಲ್ಲಿ ಬಂಧಿತವಾಗಿದೆ ಅಂತೆಯೇ ನಾವು ಸೇವಿಸುವ ಆಹಾರ ಕೂಡ ಮಾಯೆ ಎಂಬುದಾಗಿ ವಿಷ್ಣು ಪಾರ್ವತಿಗೆ ಸಮಾಧಾನ ಪಡಿಸುತ್ತಾರೆ. ಈ ಮಾತನ್ನು ಅನುಮೋದಿಸಿದ ಪಾರ್ವತಿಯು ಆಹಾರವು ಮಾಯೆಯಾಗಿದ್ದಲ್ಲಿ ತಾನು ಕೂಡ ಮಾಯೆ ಎಂಬುದಾಗಿ ಆಕೆ ತಿಳಿಸುತ್ತಾರೆ.  

Shiva and parvathi
 

ಅಂತೆಯೇ ಪ್ರತಿಯೊಂದು ರಚನೆಯನ್ನೂ ತನ್ನ ಶಕ್ತಿಯಿಂದ ಪಾರ್ವತಿಯು ಎಲ್ಲವನ್ನೂ ಅಳಿಸುತ್ತಾರೆ ಮತ್ತು ಸೃಷ್ಟಿಯು ಸ್ತಬ್ಧಗೊಳ್ಳುತ್ತದೆ. ಆಕೆಯ ಅನುಪಸ್ಥಿತಿಯಲ್ಲಿ ಆಹಾರ ಕೂಡ ಇಲ್ಲವಾಗುತ್ತದೆ. ಆಹಾರವಿಲ್ಲದೆ ಶಿವನೂ ಕೂಡ ಕಂಗಾಲಾಗುತ್ತಾರೆ ಮತ್ತು ಎಲ್ಲೆಡೆ ಆಹಾರಕ್ಕಾಗಿ ಅಲೆದಾಡುತ್ತಾರೆ. ಇದನ್ನು ಸಹಿಸದ ಪಾರ್ವತಿಯು ತನ್ನ ಮಕ್ಕಳ ಹಸಿವನ್ನು ತೀರಿಸುವುದಕ್ಕಾಗಿ ಅನ್ನಪೂರ್ಣೆಯ ರೂಪವನ್ನು ತಾಳುತ್ತಾರೆ ಮತ್ತು ಹಸಿವನ್ನು ನೀಗಿಸುತ್ತಾ ಕಾಶಿಯಲ್ಲಿ ನೆಲೆಗೊಳ್ಳುತ್ತಾರೆ. ಈ ಸುದ್ದಿಯನ್ನು ಅರಿತ ಶಿವನು, ಅನ್ನಪೂರ್ಣೆಯ ಬಳಿ ಧಾವಿಸಿ ಆಕೆಯಿಂದ ಅನ್ನದಾನವನ್ನು ಸ್ವೀಕರಿಸುತ್ತಾರೆ. ವಿಷ್ಣುವಿನ ಮಾತು ಸುಳ್ಳು ಎಂಬುದನ್ನು ಪಾರ್ವತಿಯು ಈ ನಿದರ್ಶನದ ಮೂಲಕ ಸಾಧಿಸುತ್ತಾರೆ.ಶಿವನೊಂದಿಗೆ ಮರಳಿ ಪಾರ್ವತಿಯು ಕೈಲಾಸವನ್ನು ಸೇರುತ್ತಾರೆ ಮತ್ತು ಸೃಷ್ಟಿ ತನ್ನ ಹಿಂದಿನ ಸ್ಥಿತಿಗೆ ಮರಳುತ್ತದೆ.

ಕರ್ಣ ಮತ್ತು ಮರುಜನ್ಮದ ಚಕ್ರ

ಯುದ್ಧಭೂಮಿಯಲ್ಲಿ ಕರ್ಣನು ತನ್ನ ಸಾವನ್ನು ನಿರೀಕ್ಷಿಸುತ್ತಾ ಮಲಗಿರುತ್ತಾನೆ, ಕೃಷ್ಣ ಭಗವಾನ್ ಅವನಿದ್ದಲ್ಲಿಗೆ ಧಾವಿಸುತ್ತಾರೆ ಮತ್ತು ಕರ್ಣನಿಗೆ ಎರಡು ವರವನ್ನು ನೀಡಿ ತನಗೆ ಇಷ್ಟವಾಗಿರುವುದನ್ನು ಕೇಳಲು ತಿಳಿಸುತ್ತಾರೆ. ಅಂತೆಯೇ ಕರ್ಣನು ತನ್ನ ಮೊದಲ ವರವನ್ನು ಕೃಷ್ಣನಲ್ಲಿ ತಿಳಿಸುತ್ತಾನೆ. ತನ್ನ ಸಾವಿನ ಸುದ್ದಿಯನ್ನು ತಾಯಿ ಕುಂತಿಗೆ ತಿಳಿಸುವಂತೆ ಆತ ಕೇಳಿಕೊಳ್ಳುತ್ತಾನೆ. ಇದರಿಂದ ತಾನು ಪ್ರಥಮ ಪುತ್ರ ಎಂಬುದನ್ನು ಆಕೆ ಒಪ್ಪಿಕೊಳ್ಳಬೇಕು ಎಂಬುದು ಕರ್ಣನ ಆಸೆಯಾಗಿರುತ್ತದೆ. 

Krishna and sudhama
 

ಅಂತೆಯೇ ಕರ್ಣನ ಎರಡನೆಯ ಆಸೆ, ತನಗೆ ಮರುಜನ್ಮವಿಲ್ಲ ಏಕೆಂದರೆ ತಾನು ಅನ್ನದಾನವನ್ನು ಕೈಗೊಂಡಿಲ್ಲ ಎಂಬುದಾಗಿ ಕರ್ಣನು ಕೃಷ್ಣನಿಗೆ ತಿಳಿಸುತ್ತಾನೆ. ಅನ್ನದಾನದ ಹೊರತಾಗಿ ಕರ್ಣನು ಸಂಪೂರ್ಣವಾಗಿ ಮತ್ತೆಲ್ಲಾ ದಾನವನ್ನು ಕೈಗೊಂಡಿರುತ್ತಾನೆ. ಆದ್ದರಿಂದ ಉತ್ತಮ ಕುಟುಂಬದಲ್ಲಿ ತಾನು ಮರುಜನ್ಮವನ್ನು ಪಡೆದು ಅನ್ನದಾನವನ್ನು ಕೈಗೊಳ್ಳುವಂತೆ ಆಗಬೇಕು ಎಂಬುದಾಗಿ ಕೃಷ್ಣನಲ್ಲಿ ಬೇಡಿಕೊಳ್ಳುತ್ತಾನೆ. ಕೃಷ್ಣನು ಕರ್ಣನ ಬೇಡಿಕೆಯನ್ನು ನೆರವೇರಿಸುವುದಾಗಿ ತಿಳಿಸುತ್ತಾರೆ ತದನಂತರವೇ ಕರ್ಣನು ಮರಣವನ್ನು ಹೊಂದುತ್ತಾನೆ.

ಸುಧಾಮ ಮತ್ತು ಶ್ರೀಕೃಷ್ಣ

ಬಾಲ್ಯದಲ್ಲಿಯೇ ಸುಧಾಮ ಮತ್ತು ಶ್ರೀಕೃಷ್ಣ ಅತ್ಯುತ್ತಮ ಸ್ನೇಹಿತರಾಗಿರುತ್ತಾರೆ. ಆದರೆ ಬೆಳೆಯುತ್ತಿದ್ದಂತೆ ಕೃಷ್ಣ ಅರಸನಾಗುತ್ತಾನೆ ಮತ್ತು ಸುಧಾಮ ಬಡ ಬ್ರಾಹ್ಮಣನಾಗಿ ತಮ್ಮ ವೃತ್ತಿಯಲ್ಲಿ ತೊಡಗುತ್ತಾನೆ. ಒಮ್ಮೆ ಸುಧಾಮನು ಶ್ರೀಕೃಷ್ಣನನ್ನು ಭೇಟಿಯಾಗಲು ನಿರ್ಧರಿಸುತ್ತಾನೆ ಅಂತೆಯೇ ತನ್ನ ಬಡತನದ ಬಗ್ಗೆ ಆತನಲ್ಲಿ ಹೇಳಿ ಸಹಾಯವನ್ನು ಕೇಳಬೇಕು ಎಂಬುದಾಗಿ ಸುಧಾಮನು ಕೃಷ್ಣನ ಬಳಿಗೆ ಹೋಗುತ್ತಾನೆ. ಪ್ರಿಯ ಮಿತ್ರನಿಗಾಗಿ ಸುಧಾಮನು ಒಂದು ಮುಷ್ಟಿ ಅವಲಕ್ಕಿಯನ್ನು ಜೊತೆಗೆ ಕೊಂಡೊಯ್ಯುತ್ತಾನೆ.

ಕೃಷ್ಣನ ಅರಮನೆಗೆ ಸುಧಾಮನು ಪ್ರವೇಶಿಸುತ್ತಿದ್ದಂತೆಯೇ ಅತ್ಯಂತ ಆಪ್ತತೆಯಿಂದ ಕೃಷ್ಣನು ಸುಧಾಮನನ್ನು ಬರಮಾಡಿಕೊಳ್ಳುತ್ತಾರೆ. ಸುಧಾಮನಿಗೆ ಕೃಷ್ಣನ ಬಳಿ ಸಹಾಯವನ್ನು ಯಾಚಿಸಲು ಸಾಧ್ಯವಾಗುವುದಿಲ್ಲ. ಸ್ವಲ್ಪ ಹೊತ್ತು ಕೃಷ್ಣನೊಂದಿಗೆ ಇದ್ದು ಸುಧಾಮನು ಮರಳಿ ಪ್ರಯಾಣ ಬೆಳೆಸಲು ನಿರ್ಧರಿಸುತ್ತಾನೆ. ಈ ಸಂದರ್ಭದಲ್ಲಿ ಕೃಷ್ಣನು ಸುಧಾಮನಲ್ಲಿ ತನಾಗಿ ಏನೂ ತಂದಿಲ್ಲವೇ ಎಂಬುದಾಗಿ ಕೇಳಲು ಅವಲಕ್ಕಿಯನ್ನು ನೀಡಲು ಸುಧಾಮ ಹಿಂಜರಿಯುತ್ತಾನೆ. ಕೃಷ್ಣನು ಸುಧಾಮನ ಬಳಿ ಧಾವಿಸಿ ಅವಲಕ್ಕಿಯ ಪೊಟ್ಟಣವನ್ನು ಸುಧಾಮನಿಂದ ಪಡೆದು ಅದನ್ನು ಸೇವಿಸುತ್ತಾರೆ.

ಅಂತೆಯೇ ತನ್ನ ಪತ್ನಿ ರುಕ್ಮಿಣಿಗೂ ಅವಲಕ್ಕಿಯನ್ನು ಸೇವಿಸಲು ನೀಡುತ್ತಾರೆ. ಸುಧಾಮನು ಕೃಷ್ಣನಿಗೆ ಮಾಡಿರುವುದು ಅನ್ನದಾನ ಎಂಬುದಾಗಿ ಕರೆಯಿಸಿಕೊಂಡಿದ್ದು ಇದರಿಂದ ಸಂಪ್ರೀತಗೊಂಡ ಭಗವಂತ ಸುಧಾಮನ ಕಷ್ಟವನ್ನು ನೀಗಿಸುತ್ತಾರೆ. ಅವರ ಹಳೆಯ ಗುಡಿಸಲು ಮಾರ್ಪಾಡುಗೊಂಡು ಅಲ್ಲಿ ದೊಡ್ಡ ಬಂಗಲೆ ತಲೆಎತ್ತುತ್ತದೆ ಮತ್ತು ಮನೆತುಂಬಾ ಧನಕನಕಗಳಿಂದ ತುಂಬಿಹೋಗುತ್ತದೆ.

English summary

Importance of Annadanam In Hinduism

Every living being requires certain basic things to lead a peaceful life. While things like clothes and shelter affect the quality of life, the absence of food can snatch life itself."Annadanam" is made up of two words - 'Annam' which means food and 'danam' which means the act of giving or donating. Annadanam is called the 'Mahadanam' among the various kinds of danam.
Story first published: Thursday, March 9, 2017, 16:07 [IST]
Subscribe Newsletter