Latest Updates
-
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ
ನವರಾತ್ರಿ 2021: ಯಾವ ದಿನ ಯಾವ ಬಣ್ಣದ ಡ್ರೆಸ್ ಹಾಗೂ ಇದರ ಮಹತ್ವವೇನು?
ನವರಾತ್ರಿ ಅಂದರೆ ಸಡಗರ, ಸಂಭ್ರಮದ ಹಬ್ಬ. ಒಂಭತ್ತು ದಿನ ದುರ್ಗಾ ಮಾತೆಯನ್ನು ಆರಾಧಿಸುವ ಈ ಹಬ್ಬದಲ್ಲಿ ಬಣ್ಣಗಳಿಗೂ ಅಷ್ಟೇ ಮಹತ್ವವಿದೆ. ಒಂಭತ್ತು ದಿನಕ್ಕೆ ಒಂಬತ್ತು ಬಣ್ಣದ ಬಟ್ಟೆಯನ್ನು ದುರ್ಗಾ ಮಾತೆಗೆ ಉಡಿಸಲಾಗುವುದು.
ಇನ್ನು ಮಹಿಳೆಯರಿಗೂ ಈ ಹಬ್ಬ ಅಂದರೆ ಒಂಭತ್ತು ದಿನ ಒಂಭತ್ತು ಬಣ್ಣದ ಬಟ್ಟೆಗಳನ್ನು ಹಾಕುವ ಖುಷಿ. ಅಲ್ಲದೆ ನವರಾತ್ರಿಗೆ ಈ ಒಂಭತ್ತು ಬಣ್ಣದ ಬಟ್ಟೆ ಧರಿಸಿದರೆ ಒಳ್ಳೆಯದು ಎಂಬ ನಂಬಿಕೆ ಕೂಡ ಇದೆ. ಇದಕ್ಕಾಗಿ ತಿಂಗಳ ಮುಂದೆಯೇ ಸಿದ್ಧತೆ ಮಾಡಿಕೊಳ್ಳುತ್ತಾರೆ. ಏಕೆಂದರೆ ಕೊನೆ ಕ್ಷಣದಲ್ಲಿ ನಮಗೆ ಬೇಕಾದ ಬಣ್ಣದ ಬಟ್ಟೆಯ ಸ್ಟಿಚ್ಚಿಂಗ್ ಮಾಡಿ ಸಿಗುವುದಿಲ್ಲ, ಆದ್ದರಿಂದ ಬಟ್ಟೆ ಅದಕ್ಕೆ ತಕ್ಕ ಆ್ಯಕ್ಸಸರಿ ಎಲ್ಲಾ ಮೊದಲೇ ರೆಡಿ ಮಾಡಿಟ್ಟುಕೊಳ್ಳುತ್ತೀರಿ ಅಲ್ವಾ?
ಅದರಲ್ಲೂ ಆಫೀಸ್‌ಗಳಲ್ಲಿ ನವರಂಗ ಆಚರಿಸುತ್ತಾರೆ. ಆಗ ಆ ಬಣ್ಣದ ಡ್ರೆಸ್ ಹಾಕಿ ಹೋಗುವುದೇ ಸಂಭ್ರಮ. ಈಗಂತೂ ಕೆಲವರಷ್ಟೇ ಆಫೀಸ್ ಹೋಗಲಾರಂಭಿಸಿದ್ದಾರೆ. ಇನ್ನು ಕೆಲವರು ವರ್ಕ್ ಫ್ರಂ ಹೋಂ ಮಾಡ್ತಾ ಇದ್ದಾರೆ. ಆಫೀಸ್ ಹೋಗುವವರು ಹಾಗೂ ಮನೆಯಲ್ಲಿ ಇದ್ದವರೂ ಕೂಡ ನವರಂಗ ಆಚರಿಸಲು ಸಿದ್ಧತೆ ನಡೆಸಿರುತ್ತೀರಿ ಅಲ್ವಾ?
ನಾವಿಲ್ಲಿ ನವರಾತ್ರಿಗೆ ಯಾವ ದಿನ ಯಾವ ಬಣ್ಣದ ಬಟ್ಟೆ ಹಾಕಬೇಕು ಎಂದು ಹೇಳಿದ್ದೇವೆ ನೋಡಿ:

ನವರಾತ್ರಿ ಬಣ್ಣಗಳು
ನವರಾತ್ರಿಗೆ ಬಳಸುವ 9 ಬಣ್ಣಗಳು: ಹಳದಿ, ಹಸಿರು, ಬೂದು, ಕಿತ್ತಳೆ, ಕೆಂಪು, ನೀಲಿ, ಪಿಂಕ್ ಹಾಗೂ ನೇರಳೆ
ಪ್ರತಿವರ್ಷ ಬಳಸುವ ಬಣ್ಣ ಇದೇ ಆದರು ಯಾವ ದಿನ ನವರಾತ್ರಿ ಬರುತ್ತದೆ ಎಂಬುವುದರ ಮೇಲೆ ಬಣ್ಣಗಳನ್ನು ಧರಿಸಲಾಗುವುದು.
ಪ್ರತಿಯೊಂದು ಬಣ್ಣವು ದೇವಿಯ ಗುಣಗಳನ್ನು ಸೂಚಿಸುತ್ತದೆ. ಯಾವ ಬಣ್ಣ ಏನನ್ನು ಸೂಚಿಸುತ್ತದೆ ಎಂದು ನೋಡುವುದಾದರೆ

ನವರಾತ್ರಿ ಮೊದಲ ದಿನ-ಅಕ್ಟೋಬರ್ 7
ಧರಿಸಬೇಕಾದ ಬಟ್ಟೆ: ಬೂದು ಬಣ್ಣದ್ದು
ಬೂದು: ಬೂದು ಶಕ್ತಿಯ ಪ್ರತೀಕವಾಗಿದೆ.

ನವರಾತ್ರಿ ಎರಡನೇ ದಿನ: ಅಕ್ಟೋಬರ್ 8
ಧರಸಿಬೇಕಾದ ಬಟ್ಟೆ: ಕಿತ್ತಳೆ ಬಣ್ಣದ್ದು
ಕಿತ್ತಳೆ: ಹಳದಿ ಖುಷಿ ಹಾಗೂ ದೇವಿ ಶಕ್ತಿಯನ್ನು ಸೂಚಿಸುತ್ತದೆ.

ನವರಾತ್ರಿಯ ಮೂರನೇ ದಿನ-ಅಕ್ಟೋಬರ್ 9
ಧರಿಸಬೇಕಾದ ಬಟ್ಟೆ: ಬಿಳಿಯ ಬಣ್ಣದ್ದು
ಬಿಳಿ: ಬಿಳಿ ಶುದ್ಧತೆಯ ಸಂಕೇತವಾಗಿದೆ.

ನವರಾತ್ರಿ 4 ನೇ ದಿನ : ಅಕ್ಟೋಬರ್ 10
ಧರಿಸಬೇಕಾದ ಬಟ್ಟೆ: ಕೆಂಪು ಬಣ್ಣದ್ದು
ಕೆಂಪು: ಶತ್ರುಗಳ ವಿರುದ್ಧ ದೇವಿಯ ಕೋಪದ ಸಂಕೇತವಾಗಿದೆ.

ನವರಾತ್ರಿ 5ನೇ ದಿನ: ಅಕ್ಟೋಬರ್ 11
ಧರಿಸಬೇಕಾದ ಬಟ್ಟೆ-ನೀಲಿ (ರಾಯಲ್ ಬ್ಲೂ)
ನೀಲಿ: ದೇವಿಯ ಶಕ್ತಿಯನ್ನು ನೀಲಿ ಬಣ್ಣ ಬಿಂಬಿಸುತ್ತದೆ

ನವರಾತ್ರಿ 6ನೇ ದಿನ : ಅಕ್ಟೋಬರ್ 12
ಧರಿಸಬೇಕಾದ ಬಟ್ಟೆ: ಹಳದಿ
ಹಳದಿ ಖುಷಿಯ ಸಂಕೇತವಾಗಿದ್ದು ದಿನ ಪ್ರಾರಂಭಿಸುವ ಸಡಗರವಾಗಿದೆ.

ನವರಾತ್ರಿ 7ನೇ ದಿನ: ಅಕ್ಟೋಬರ್ 13
ಧರಿಸಬೇಕಾದ ಬಣ್ಣ: ಹಸಿರು
ಹಸಿರು ಧಾರ್ಮಿಕ ಜ್ಞಾನ ಹಾಗೂ ಸಮೃದ್ಧಿಯ ಸಂಕೇತವಾಗಿದೆ

ನವರಾತ್ರಿಯ 8ನೇ ದಿನ: ಅಕ್ಟೋಬರ್ 14
ಧರಿಸಬೇಕಾದ ಬಟ್ಟೆ: ಹಸಿರು (ಪಿಕಾಕ್ ಗ್ರೀನ್) ಅಥವಾ ಪಿಂಕ್
ಪಿಂಕ್ ಅಥವಾ ಪಿಕಾಕ್ ನೀಲಿ ಬಣ್ಣ: ಈ ಎರಡೂ ಬಣ್ಣ ಭರವಸೆಯ ಸಂಕೇತವಾಗಿದೆ.

ನವರಾತ್ರಿ 9ನೇ ದಿನ: ಅಕ್ಟೋಬರ್ 15
ಧರಿಸಿಬೇಕಾದ ಬಟ್ಟೆ: ನೇರಳೆ
ನೇರಳೆ: ಈ ಬಣ್ಣ ದೇವಿಯ ಶಕ್ತಿ ಹಾಗೂ ಭಕ್ತರು ಬೇಡಿದ್ದನ್ನು ನೆರವೇರಿಸುತ್ತಾಳೆ ಎಂಬುವುದನ್ನು ಸೂಚಿಸುತ್ತದೆ.
ನವರಾತ್ರಿ ಹತ್ತನೇ ದಿನ: ಅಕ್ಟೋಬರ್ 16
ಧರಸಿಬೇಕಾದ ಬಟ್ಟೆ: ಹಸಿರು (ಪಿಕಾಕ್ ಗ್ರೀನ್)



Click it and Unblock the Notifications











