Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಹೋಳಿ ರಾಶಿಫಲ 2023: ಈ ಹಬ್ಬ ಯಾವ ರಾಶಿಗಳಿಗೆ ಬದುಕಿನಲ್ಲಿ ಅಧಿಕ ರಂಗು ತರಲಿದೆ
ಹೋಳಿ ಹಬ್ಬವನ್ನು ಫಲ್ಗುಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುವುದು. ಬಣ್ಣಗಳ ಹಬ್ಬ ಹೋಳಿ, ಈ ಹೋಳಿ ಹಬ್ಬ ಎಲ್ಲರ ಜೀವನದಲ್ಲಿ ಸಂತೋಷದ ರಂಗು ತುಂಬಲಿ, ಬದುಕು ಸಮೃದ್ಧಿಯಾಗಲಿ ಎಂಬ ಆಶಯದಿಂದ ಈ ಹಬ್ಬ ಆಚರಿಸಲಾಗುವುದು. ವೈದಿಕ ಜ್ಯೋತಿಷ್ಯದ ಪ್ರಕಾರ 2023 ಹೋಳಿ ದ್ವಾದಶ ರಾಶಿಗಳ ಮೇಲೆ ಹೇಗೆ ಪ್ರಭಾವ ಬೀರಿದೆ ಎಂದು ನೋಡೋಣ:

ಮೇಷ ರಾಶಿ
ನಿಮ್ಮ ರಾಶಿಚಕ್ರದವರಿಗೆ ಹೋಳಿ ಹಬ್ಬವು ಸಂತೋಷದಿಂದ ಕೂಡಿರುತ್ತದೆ. ನಿಮ್ಮ ಜೀವನವು ಹೋಳಿಯ ಬಣ್ಣಗಳಿಂದ ತುಂಬಿರುತ್ತದೆ ಹಾಗೂ ಇನ್ನಷ್ಟು ಬಣ್ಣಗಳನ್ನು ತರಲಿದೆ. ಚಂದ್ರನ ಅನುಕೂಲಕರ ಸ್ಥಾನವು ನಿಮ್ಮ ಕಲಾತ್ಮಕ ಮತ್ತು ಸೃಜನಶೀಲ ಸಾಮರ್ಥ್ಯಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನಿಮ್ಮ ಎಲ್ಲಾ ಕೆಲಸಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ.

ವೃಷಭ ರಾಶಿ
ಹೋಳಿ ಹಬ್ಬದಂದು ನಿಮ್ಮ ಕೆಲವು ದೂರದ ಸ್ನೇಹಿತರನ್ನು ಭೇಟಿಯಾಗಬಹುದು.ನಿಮ್ಮ ಒಡಹುಟ್ಟಿದವರ ಸಂಪೂರ್ಣ ಬೆಂಬಲ ಮತ್ತು ಪ್ರೀತಿಯನ್ನು ನೀವು ಪಡೆಯುತ್ತೀರಿ. ನೀವು ಕೆಲವು ಉತ್ತಮ ಉಡುಗೊರೆಗಳನ್ನು ಸಹ ಪಡೆಯಬಹುದು.

ಮಿಥುನ ರಾಶಿ
ಈ ವರ್ಷ ನಿಮ್ಮ ವೃತ್ತಿಪರ ಮತ್ತು ಕೌಟುಂಬಿಕ ಜೀವನದಲ್ಲಿ ತುಂಬಾ ಆರಾಮದಾಯಕ ಪರಿಸ್ಥಿತಿಗಳನ್ನು ಸೃಷ್ಟಿಸಲು ಈ ಹಬ್ಬವು ನಿಮಗೆ ಸಹಾಯ ಮಾಡುತ್ತದೆ. ನೀವು ಕೆಲವು ಹೊಸ ಅವಕಾಶಗಳನ್ನು ಪಡೆಯಬಹುದು ಮತ್ತು ಕುಟುಂಬದೊಂದಿಗೆ ಸಂಬಂಧವು ಬಲವಾಗಿರುತ್ತದೆ.

ಕರ್ಕ ರಾಶಿ
ಕರ್ಕ ರಾಶಿಯ ಜನರು ತಮ್ಮ ಜೀವನದಲ್ಲಿ ಧನಾತ್ಮಕ ಶಕ್ತಿಯನ್ನು ಅನುಭವಿಸುತ್ತಾರೆ. ನಿಮ್ಮ ಜೀವನದಲ್ಲಿ ಸಂತೋಷವಿರುತ್ತದೆ. ಜೀವನದಲ್ಲಿ ಸಕಾರಾತ್ಮಕತೆ ಬರುತ್ತದೆ.

ಸಿಂಹ ರಾಶಿ
ಈ ವರ್ಷ ಹೋಳಿ ಹಬ್ಬದಂದು ನಿಮ್ಮ ಜೀವನದಲ್ಲಿನ ಹಳೆಯ ಸಮಸ್ಯೆಗಳು ದೂರವಾಗುತ್ತವೆ ಮತ್ತು ನೀವು ಅನೇಕ ಹಳೆಯ ಚಟುವಟಿಕೆಗಳಿಂದ ಹೊರಬರುತ್ತೀರಿ. ಈ ಸಮಯದಲ್ಲಿ ನೀವು ಹಳೆಯ ಸಂಬಂಧಗಳೊಂದಿಗೆ ಸಂಪರ್ಕ ಸಾಧಿಸಲು ಅವಕಾಶವನ್ನು ಪಡೆಯುತ್ತೀರಿ.

ಕನ್ಯಾ ರಾಶಿ
ಕನ್ಯಾ ರಾಶಿಯವರಿಗೂ ಈ ಹೋಳಿ ಶುಭ ತರಲಿದೆ. ನೀವು ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿ ಹೊಂದುತ್ತೀರಿ. ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಿದರೆ ಲಾಭವನ್ನು ಸಹ ಪಡೆಯುತ್ತೀರಿ.

ತುಲಾ ರಾಶಿ
ತುಲಾ ರಾಶಿಯವರು ಈ ಹೋಳಿಯಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ನಿಮ್ಮ ಆರ್ಥಿಕ ಸ್ಥಿತಿಯು ಸ್ವಲ್ಪ ಕೆಟ್ಟದಾಗಿರಬಹುದು, ಆದರೆ ಶೀಘ್ರದಲ್ಲೇ ನೀವು ಅದರಿಂದ ಹೊರಬರುತ್ತೀರಿ ಮತ್ತು ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಹೋಳಿ ಹಬ್ಬದ ಕೆಲವು ದಿನಗಳ ನಂತರ ನಿಮ್ಮ ಸಮಸ್ಯೆಗಳು ದೂರಾಗಲಿದೆ.

ವೃಶ್ಚಿಕ ರಾಶಿ
ಹೋಳಿ ಹಬ್ಬ ನಿಮಗೆ ತುಂಬಾ ಒಳ್ಳೆಯದಾಗಲಿದೆ. ನೀವು ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಉತ್ತಮ ಅವಕಾಶಗಳನ್ನು ಪಡೆಯುತ್ತೀರಿ. ನೀವು ಉದ್ಯೋಗವನ್ನು ಪಡೆಯಬಹುದು. ಮದುವೆಯಾಗದೇ ಇರುವವರು ಸೂಕ್ತ ಸಂಗಾತಿಯನ್ನು ಪಡೆಯುವಿರಿ.

ಧನು ರಾಶಿ
ಈ ಹೋಳಿ ಹಬ್ಬದಂದು ಧನು ರಾಶಿಯ ಜನರು ತಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ನೀವು ಆಹಾರ ಮತ್ತು ಪಾನೀಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.

ಮಕರ ಸಂಕ್ರಾಂತಿ
ಮಕರ ರಾಶಿಯವರಿಗೆ ಹೋಳಿ ಹಬ್ಬವು ಕೆಲವು ಏರಿಳಿತಗಳನ್ನು ತರಬಹುದು. ಸಂಬಂಧಗಳಲ್ಲಿ ಯಾವುದೇ ಸಮಸ್ಯೆ ಇರಲ್ಲ, ಆದರೆ ಕೆಲವು ಹಣಕಾಸಿನ ನಷ್ಟದ ಸಾಧ್ಯತೆಗಳಿವೆ.

ಕುಂಭ ರಾಶಿ
ಕುಂಭ ರಾಶಿಯವರಿಗೆ ಹೋಳಿ ಹಬ್ಬವು ಅತ್ಯಂತ ಮಂಗಳಕರವಾಗಿದ್ದು, ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಕೆಲವು ಹಣಕಾಸಿನ ಸಮಸ್ಯೆಗಳಿರಬಹುದು, ಆದರೆ ಅವುಗಳಿಂದ ಶೀಘ್ರದಲ್ಲಿಯೇ ಹೊರಬರಲು ಸಾಧ್ಯವಾಗುವುದು.

ಮೀನ ರಾಶಿ
ಮೀನ ರಾಶಿಯವರಿಗೆ ಸಮಯವು ತುಂಬಾ ಒಳ್ಳೆಯದು ಮತ್ತು ನಿಮ್ಮ ಜೀವನದಲ್ಲಿ ಕೆಲವು ಪ್ರಮುಖ ಬದಲಾವಣೆಗಳು ಕಂಡುಬರುತ್ತವೆ. ನೀವು ಹಣಕ್ಕಾಗಿ ಹೊಸ ಅವಕಾಶಗಳನ್ನು ಪಡೆಯುತ್ತೀರಿ. ಹೋಳಿ ಹಬ್ಬವು ನಿಮ್ಮ ಜೀವನಕ್ಕೆ ಹೊಸ ಬಣ್ಣಗಳನ್ನು ಸೇರಿಸುತ್ತದೆ.



Click it and Unblock the Notifications











