Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ವಿಶ್ವ ಶಿಕ್ಷಕರ ದಿನಾಚರಣೆ 2021: ಗುರುಗಳಿಗೆ ಶುಭ ಕೋರಲು ಶುಭಾಶಯಗಳು
ಶಿಕ್ಷಕರ ದಿನಾಚರಣೆಯನ್ನು ಭಾರತದಲ್ಲಿ ಸೆಪ್ಟೆಂಬರ್ 5ರಂದು ಆಚರಿಸಲಾಗುವುದು. ವಿಶ್ವ ಶಿಕ್ಷಕರ ದಿನಾಚರಣೆಯನ್ನು ಅಕ್ಟೋಬರ್ 5ರಂದು ಆಚರಿಸಲಾಗುವುದು. ವಿದ್ಯಾರ್ಥಿಗಳಿಗೆ ಶಿಕ್ಷಕ ವೃಂದದವರು ನೀಡುವ ಕೊಡುಗೆ ಅಪಾರವಾದದ್ದು. ಇದಕ್ಕಾಗಿ ಕೃತಜ್ಞತೆ ಹಾಗೂ ಗೌರವ ಸಲ್ಲಿಸಲು 1994ರಿಂದ ವಿಶ್ವ ಶಿಕ್ಷಕರ ದಿನವನ್ನು ಆಚರಿಸುತ್ತಾ ಬರುತ್ತಿದೆ.
2021ರ ವಿಶ್ವ ಶಿಕ್ಷಕರ ದಿನದ ಥೀಮ್ ಅಂದ್ರೆ ಶಿಕ್ಷಣ ವ್ಯವಸ್ಥೆ ಸುಧಾರಣೆಯ ಹೃದಯವೇ ಶಿಕ್ಷಕರು' ಎಂಬುವುದಾಗಿದೆ. ಕೊರೊನಾ ಬಂದ ಮೇಲೆ ಶಿಕ್ಷಣ ಕ್ಷೇತ್ರದಲ್ಲಿ ಹಲವು ಬದಲಾವಣೆಗಳಾಗಿವೆ. ಶಿಕ್ಷಕರು ಹಲವಾರು ಸವಾಲುಗಳನ್ನು ಎದುರಿಸಬೇಕಾಯಿತು. ಕೆಲವಿಗೆ ಸಂಬಳ ಬರದೆ ತಮ್ಮ ಖರ್ಚುಗಳನ್ನು ತೂಗಿಸಿಕೊಂಡು ಹೋಗಲು ಕಷ್ಟಪಡುವ ಪರಿಸ್ಥಿತಿ ಬಂದಿತ್ತು. ಇನ್ನು ಪ್ರತಿಯೊಬ್ಬ ಶಿಕ್ಷಕರು ಆನ್‌ಲೈನ್ ಶಿಕ್ಷಣ ವ್ಯವಸ್ಥೆಗೆ ಹೊಂದಿಕೊಳ್ಳುವಂಥ ಪರಿಸ್ಥಿತಿ ಎದುರಾಯ್ತು... ಆದರೆ ಶಿಕ್ಷಕರು ಮಾತ್ರ ತಮಗೇ ಎಷ್ಟೇ ಕಷ್ಟವಾದರೂ ತಮ್ಮ ವಿದ್ಯಾರ್ಥಿಗಳಿಗಾಗಿ ಹಲವಾರು ಕಷ್ಟಗಳನ್ನು ಸಹಿಸಿಕೊಂಡಿದ್ದಾರೆ. ಆ ಶಿಕ್ಷಕರೆಲ್ಲರಿಗೂ ನಮ್ಮದೊಂದು ಸಲಾಂ.
ನೀವಿಲ್ಲದೆ ವಿದ್ಯಾರ್ಥಿಗಳಿಗೆ ಭವಿಷ್ಯವಿಲ್ಲ, ಒಂದು ಒಳ್ಳೆಯ ಸಮಾಜ ನಿರ್ಮಾಣವಾಗಬೇಕೆಂದರೆ ನಿಮ್ಮ ಕೊಡುಗೆ ಅಪಾರವಾದದ್ದು. ವಿದ್ಯಾರ್ಥಿಗಳ ಭವಿಷ್ಯದ ಸದಾ ಚಿಂತಿಸುವ, ತಮ್ಮ ವಿದ್ಯಾರ್ಥಿಗಳ ಸಾಧನೆ ನೋಡಿ ನಮ್ಮ ಮಕ್ಕಳೇ ಸಾಧನೆ ಮಾಡಿದಷ್ಟು ಖುಷಿ ಪಡುವವರೇ ಗುರುಗಳು... ಎಲ್ಲಾ ಶಿಕ್ಷಕರಿಗೆ ವಿಶ್ವ ಶಿಕ್ಷಕರ ದಿನದ ಶುಭಾಶಯಗಳು...

ಶುಭಾಶಯಗಳು 1
ವಿಶ್ವ ಶಿಕ್ಷಕರ ದಿನದ ಶುಭಾಶಯಗಳು

ಶುಭಾಶಯಗಳು 2
ಬದುಕಿನಲ್ಲಿ ಒಂದು ಗುರಿ, ಆ ಗುರಿ ತಲುಪಲು ಮಾರ್ಗದರ್ಶನ ನೀಡಲು ಒಂದು ಒಳ್ಳೆಯ ಗುರು ಸಿಕ್ಕರೆ ಯಶಸ್ಸು ಎಂಬುವುದು ಕಷ್ಟವಾಗುವುದಿಲ್ಲ
ವಿಶ್ವ ಶಿಕ್ಷಕರ ದಿನದ ಶುಭಾಶಯಗಳು

ಶುಭಾಶಯಗಳು 3
ಗುರು ದೇವೋಭವ... ಗುರುವೆಂದರೆ ಶಾಲೆಯಲ್ಲಿ ಕಲಿಸಿದವರಷ್ಟೇ ಅಲ್ಲ, ಕೆಲಸ ಕಲಿಸಿ ಕೊಟ್ಟವರು, ಹದ ತಪ್ಪಿದ ಬದುಕಿಗೆ ಸರಿ ದಾರಿ ತೋರಿದವರು ಎಲ್ಲರೂ ಗುರುವಿನ ಸಮಾನ...
ವಿಶ್ವ ಶಿಕ್ಷಕರ ದಿನದ ಶುಭಾಶಯಗಳು

ಶುಭಾಶಯಗಳು 4
ಇಂದು ನನ್ನ ಬದುಕು ಇಷ್ಟು ಒಳ್ಳೆಯ ರೀತಿಯಲ್ಲಿ ರೂಪುಗೊಳ್ಳಲು ಪ್ರಮುಖ ಕಾರಣ ಗುರುಗಳಾದ ನೀವು... ವಿಶ್ವ ಶಿಕ್ಷಕರ ದಿನದ ಶುಭಾಶಯಗಳು

ಶುಭಾಶಯಗಳು 5
ಬದುಕಿನಲ್ಲಿ ಸರಿ-ತಪ್ಪು ನಡುವಿನ ವ್ಯತ್ಯಾಸ ತಿಳಿ ಹೇಳುವವರೇ ಗುರು. ಒಂದು ಸುಸಂಸ್ಕೃತ ಸಮಾಜ ರೂಪಿಸುವಲ್ಲಿ ಗುರುವಿನ ಮಾತ್ರ ಪ್ರಮುಖವಾದದ್ದು, ಎಲ್ಲಾ ಗುರುಗಳಿಗೆ ವಿಶ್ವ ಶಿಕ್ಷಕರ ದಿನದ ಶುಭಾಶಯಗಳು



Click it and Unblock the Notifications