Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
Ugadi Wishes in kannada : ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೊರಲು ಇಲ್ಲಿವೆ ಚಾಂದ್ರಮಾನ ಯುಗಾದಿ ಶುಭಾಶಯಗಳು
ನೋವು, ನಲಿವು, ಸಿಹಿ, ಕಹಿಯ ಮಿಶ್ರಣವಾಗಿದ್ದ ವಿಕಾರಿನಾಮ ಸಂವತ್ಸರ ಮುಗಿದು ನೂತನವಾದ ಶ್ರೀ ಶಾರ್ವರಿ ಸಂವತ್ಸರದ ಆಗಮನಕ್ಕೆ ಇನ್ನೇನು ದಿನಗಣನೆ ಆರಂಭವಾಗಿದೆ. ಚೈತ್ರ ಮಾಸ ಮೊದಲ ದಿನ ಆಚರಿಸುವ ಯುಗಾದಿ ಈ ವರ್ಷ ಮಾರ್ಚ್ 25ರಂದು ಆಚರಿಸಲಾಗುತ್ತಿದೆ. ಯಾವುದೇ ಹಬ್ಬವಾದರೂ ಬಂಧು, ಬಾಂಧವರು- ಸ್ನೇಹಿತರಿಗೆ ಶುಭಾಶಯ ಕೋರಲು ಬಯಸುತ್ತಾರೆ. ಎಲ್ಲರಿಗೂ ಶುಭವಾಗಲಿ, ಆರೋಗ್ಯ, ಐಶ್ವರ್ಯ, ನೆಮ್ಮದಿ ಪ್ರಾಪ್ತಿಯಾಗಲಿ ಎಂದು ಹಾರೈಸಲು ಇಚ್ಛಿಸುತ್ತಾರೆ.

ಇದಕ್ಕಾಗಿಯೇ ಬೋಲ್ಡ್ ಸ್ಕೈ ಕನ್ನಡ ಓದುಗಾರಿಗಾಗಿ ಯುಗಾದಿ ಹಬ್ಬದ ವಿಶೇಷ ಶುಭಾಶಯಗಳನ್ನು ಈ ಲೇಖನದಲ್ಲಿ ನೀಡಿದೆ.

1. ಹಸಿರಾಗಲಿ ನಿಮ್ಮ ಬಾಳು
ಯುಗಾದಿಯ ಸಂಭ್ರಮದಲ್ಲಿ ನೋವೆಲ್ಲ ಬತ್ತು ಹೋಗಿ
ಸಂತೋಷದ ಕಾರಂಜಿ ಚಿಮ್ಮಲಿ
ಶ್ರೀ ಶಾರ್ವರಿ ಸಂವತ್ಸರದ ಶುಭಾಶಯಗಳು

2. ಕಹಿಯಾದ ಬೇವಿನ ಅಂಚಿನಲ್ಲಿ ಬೆಲ್ಲದ ಸಿಂಚನ ಸಿಗಲಿ
ನಿಮ್ಮ ಬಾಳಲ್ಲಿ ಹೊಸ ಚೇತನ, ಉತ್ಸಾಹ, ನೆಮ್ಮದಿ ಇರಲಿ
ಯುಗಾದಿ ಹಬ್ಬದ ಶುಭಾಶಯಗಳು

3. ಬೇವು ಬೆಲ್ಲದಂತೆ ಎಲ್ಲರ ಜೀವನದಲ್ಲೂ ಸಿಹಿ ಕಹಿ ಇರುವುದು ಸಾಮಾನ್ಯ
ಆದರೆ ನಿಮ್ಮ ಬಾಳಲ್ಲಿ ಬೇವಿನ ಕಹಿಗಿಂತ ಬೆಲ್ಲದ ಸಿಹಿಯೇ ಹೆಚ್ಚಿರಲಿ
ಸುಖ, ಸಮೃದ್ಧಿ, ಶಾಂತಿ, ಸೌಹಾರ್ದತೆ ನಿಮ್ಮ ಜೀವನದಲ್ಲಿ ಹಾಲಿನಂತೆ ಉಕ್ಕಲಿ
ಯುಗಾದಿ ಹಬ್ಬದ ಶುಭಾಶಯಗಳು

4. ಹೊಂಗೆ ಹೂವ ತೊಂಗಲಲ್ಲಿ ಬೃಂಗದ ಸಂಗೀತ ಕೇಳಿ ಮತ್ತೆ ಬಂದ ಯುಗಾದಿ
ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವ ಜೀವಕಳೆಯ ತರುತಿದೆ
ಯುಗಾದಿ ಹಬ್ಬದ ಶುಭಾಶಯಗಳು

5. ಹೊಸ ವರ್ಷ ಅಡಿ ಇಡುವ ದಿನ
ತುಂಬುತಿದೆ ನವೋಲ್ಲಾಸ ನವ ಚೇತನ
ಬೆಲ್ಲದ ಸವಿಯ ತೋರುವ ಮನ
ಬೇವನ್ನೂ ಬೆಲ್ಲವಾಗಿ ಸ್ವೀಕರಿಸುವ ಜೀವನ
ಶ್ರೀ ಶಾರ್ವರಿ ಸಂವತ್ಸರದ ಶುಭಾಶಯಗಳು

6. ಮರಳಿ ಬಂದಿದೆ ಯುಗಾದಿ
ತಂದಿದೆ ಹೊಸ ವರುಷದ ಆದಿ
ತೋರಲಿ ಹೊಸ ವರುಷಕ್ಕೆ ಹಾದಿ
ನೀಡಲಿ ನಮ್ಮೆಲ್ಲರ ಬಾಳಿಗೂ ಭದ್ರ ಬುನಾದಿ
ಯುಗಾದಿ ಹಬ್ಬದ ಶುಭಾಶಯಗಳು

7. ಹೊಸ ವರುಷ, ನೂತನ ಸಂವತ್ಸರದ ಹೊಸ ದಿನ
ಹೊಸ ಕನಸುಗಳೆಲ್ಲ ಹೊಸೆದುಕೊಳ್ಳಲಿ
ಕನಸುಗಳು ನನಸಾಗಲು ಶ್ರೀ ಶಾರ್ವರಿ ಸಂವತ್ಸರ
ನಿಮಗೆ ಸಕಲ ಶಕ್ತಿ, ಸಾಮರ್ಥ್ಯ ಕಲ್ಪಿಸಲಿ
ಯುಗಾದಿ ಹಬ್ಬದ ಶುಭಾಶಯಗಳು

8. ಸಾಕಷ್ಟು ಉತ್ಸಾಹ, ಸಂಭ್ರಮ, ಸಡಗರದಿಂದ
ಶ್ರೀ ಶಾರ್ವರಿ ಸಂವತ್ಸರವನ್ನು ಸ್ವಾಗತಿಸೋಣ
ನೂತನ ವರುಷದಲ್ಲಿ ಸಂತೋಷ, ನೆಮ್ಮದಿ, ಅಭಿವೃದ್ಧಿ ನಿಮ್ಮದಾಗಲಿ
ವರುಷ ಪೂರ್ತಿ ಹರುಷ ತುಂಬಿರಲಿ
ಯುಗಾದಿ ಹಬ್ಬದ ಶುಭಾಶಯಗಳು

9. ನಿಮ್ಮ ಶತ್ರುಗಳ ಮೇಲಿನ ದ್ವೇಷ ಅಳಿಸಿ ಹೋಗಲಿ
ನಿಮ್ಮ ಸುತ್ತಲಿನ ಕತ್ತಲು ಬೆಳಕಾಗಲಿ
ಈ ಯುಗಾದಿ ನಿಮ್ಮ ಕುಟುಂಬಕ್ಕೆ
ಸುಖ, ಶಾಂತಿ, ನೆಮ್ಮದಿ ತರಲಿ
ಯುಗಾದಿ ಹಬ್ಬದ ಶುಭಾಶಯಗಳು

10. ನೂತನ ಸಂವತ್ಸರದಲ್ಲಿ ಕೌಟುಂಬಿಕ ಜೀವನದಲ್ಲಿ ಸೌಹಾರ್ದತೆ ಇರಲಿ
ವೃತ್ತೀಯ ಬದುಕು ಏರುಗತಿಯಲ್ಲಿ ಸಾಗಲಿ
ಆರ್ಥಿಕವಾಗಿ ಸುಭದ್ರರಾಗಲು ನಿಮ್ಮ ಶ್ರಮ ಇರಲಿ
ಆರೋಗ್ಯ ಸದಾ ಸಮೃದ್ಧವಾಗಿರಲು ದೈವ ಕೃಪೆ ಸಿಗಲಿ
ಯುಗಾದಿ ಹಬ್ಬದ ಶುಭಾಶಯಗಳು



Click it and Unblock the Notifications
