Latest Updates
-
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್!
Rama Navami 2025 Wishes: ಶ್ರೀ ರಾಮ ನವಮಿಗೆ ಶುಭ ಕೋರಲು ಇಲ್ಲಿವೆ ಶುಭಾಶಯಗಳು
ಆದರ್ಶ ಪುರುಷ ಶ್ರೀ ರಾಮನ ಹುಟ್ಟುಹಬ್ಬವನ್ನು ರಾಮನವಮಿಯೆಂದು ಆಚರಿಸಲಾಗುವುದು. ಈ ವರ್ಷ ಏಪ್ರಿಲ್ 06ರಂದು ಆಚರಿಸಲಾಗುವುದು. ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯಾದ ಬಳಿಕ 2ನೇ ರಾಮನವಮಿ ಇದಾಗಿದೆ.
ಶ್ರೀ ರಾಮನ ಭಕ್ತರು ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ನವಮಿವರೆಗೆ ರಾಮಾಯಣ ಪಾರಾಯಣ ಮಾಡಿ , ನವಮಿ ದಿನ ರಾಮ ಪಟ್ಟಾಭಿಷೇಕ ಪಾರಾಯಣ ಮಾಡಿ ಹಬ್ಬವನ್ನು ಮುಗಿಸುತ್ತಾರೆ. ಹೀಗೆ 9 ದಿನದ ರಾಮೋತ್ಸವ ಮಾಡುತ್ತಾರೆ.

ರಾಮ ನಾಮ ಜಪ ಮಾಡಿದರೆ ಸಾಕು ರಾಮ ನಮ್ಮನ್ನು ರಕ್ಷಿಸುತ್ತಾನೆ ಎಂಬ ಅಚಲ ನಂಬಿಕೆ ಭಕ್ತರದ್ದು. ಕಷ್ಟಗಳನ್ನು ಗೆಲ್ಲುವ ಶಕ್ತಿ ಶ್ರೀರಾಮ ಜಪದಿಂದ ಸಿಗುತ್ತದೆ.
ಈ ರಾಮ ನವಮಿಯಂದು ನಿಮ್ಮ ಸ್ನೇಹಿತರು, ಬಂಧುಗಳಿಗೆ ಶುಭ ಕೋರಲು ಇಲ್ಲಿದೆ ಶುಭಾಶಯಗಳು:
1. ರಾಮ ನವಮಿ ಹಬ್ಬದ ಶುಭಾಶಯಗಳು
2. ಶ್ರೀ ರಾಮನ ಆಶೀರ್ವಾದ ನಿಮ್ಮ ಕುಟುಂಬದ ಮೇಲಿರಲಿ, ನಿಮ್ಮ ಕನಸು ನೆರವೇರಲು ಆ ಭಗವಂತ ಸಹಕರಿಸಲಿ, ಜೈ ಶ್ರೀ ರಾಮ್
ರಾಮ ನವಮಿ ಹಬ್ಬದ ಶುಭಾಶಯಗಳು
3. ಶ್ರೀ ರಾಮ ನಿಮ್ಮ ಜೀವನದಲ್ಲಿ ಐಶ್ವರ್ಯ, ಆರೋಗ್ಯ, ನೆಮ್ಮದಿ ಕರುಣಿಸಲು, ಜೈ ಶ್ರೀ ರಾಮ್
ರಾಮ ನವಮಿ ಹಬ್ಬದ ಶುಭಾಶಯಗಳು
4. ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ,
ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ."
ಭಕ್ತರ ಜೀವನದಲ್ಲಿ ಇರುವ ದುಃಖಗಳನ್ನು ಕೊನೆಗೊಳಿಸಿ, ಸಂತೋಷವನ್ನು ಕರುಣಿಸುವ ರಾಮ ಜನ್ಮ ದಿನವೇ ರಾಮ ನವಮಿ.
ನಿಮ್ಮ ಬಾಳಿಗೆ ಆ ಭಗವಂತ ಶ್ರೀರಾಮ ಕರುಣಿಸಲಿ
ಜೈ ಶ್ರೀ ರಾಮ್
5. ಓಂ ಕ್ಲೀಮ್ ನಮೋ ಭಗವತೇ ರಾಮಚಂದ್ರಾಯ
ಸಕಲಜನ ವಶ್ಯಕಾರಾಯ ಸ್ವಾಹಃ"
ಹ್ಮಾಂಡದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಉತ್ತೇಜಿಸಬಲ್ಲ ವರ್ಚಸ್ವಿ ದೇವ ಶ್ರೀರಾಮನ ಕೃಪೆ ನಿಮ್ಮ ಮೇಲಿರಲಿ: ಜೈ ಶ್ರೀ ರಾಮ್
6. ಹಿಂದೂಗಳ ಹೃದಯ ಸಾಮ್ರಾಟ, ಮರ್ಯಾದ ಪುರುಷೋತ್ತಮ, ದಶರಥ ನಂದನ ಶ್ರೀರಾಮ ಹುಟ್ಟಿದ ದಿನವೇ ರಾಮ ನವಮಿ
ಎಲ್ಲಾ ರಾಮನ ಭಕ್ತರಿಗೆ ಶ್ರೀ ರಾಮ ನವಮಿಯ ಶುಭಾಶಯಗಳು
7. ಕಷ್ಟಗಳು ಎದುರಾದಾಗ ನಾವು ಹೇಗೆ ನಡೆದುಕೊಳ್ಳಬೇಕು ಎಂಬುವುದಕ್ಕೆ ರಾಮನೇ ಆದರ್ಶ, ರಾಮನ ವ್ಯಕ್ತಿತ್ವ ನೋಡಿ ಕಲಿತರೆ ಎಂಥ ಕಷ್ಟಗಳಿಂದಲೂ ಪಾರಾಗಬಹುದು.
ಶ್ರೀ ರಾಮ ನವಮಿಯ ಶುಭಾಶಯಗಳು



Click it and Unblock the Notifications








