Latest Updates
-
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ -
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ?
Holi Wishes 2025 in Kannada : ಹೋಳಿ ಹಬ್ಬಕ್ಕೆ ಶುಭ ಕೋರಲು ಇಲ್ಲಿವೆ ಅತ್ಯದ್ಭುತ ಸಂದೇಶಗಳು
ಬಣ್ಣಗಳ ಓಕುಳಿಯಾಟ ಎಲ್ಲರಲ್ಲೂ ಸಂಭ್ರಮವನ್ನು ಗರಿಗೆದರುವುದು. ಈ ಹಬ್ಬ ಸರ್ವ ಮತಬಾಂಧವರನ್ನು ಒಂದುಗೂಡಿಸುತ್ತದೆ. ಜಾತಿ ಮತಗಳ ಭೇದವಿಲ್ಲದೆ ಆಚರಿಸುವ ಬಣ್ಣಗಳ ಹಬ್ಬ ಹೋಳಿ ತನ್ನದೇ ಆಚಾರ ಸಂಪ್ರದಾಯಗಳನ್ನು ಹೊಂದಿದೆ. ಈ ವರ್ಷ ಹೋಳಿಯನ್ನು ಮಾರ್ಚ್ 14ರಂದು ಆಚರಿಸಲಾಗುವುದು.

ಪ್ರತಿಯೊಂದು ಹಬ್ಬಕ್ಕೂ ಆಚಾರ ಸಂಪ್ರದಾಯ ಪ್ರಮುಖವಾಗಿರುತ್ತದೆ ಅದಕ್ಕೆ ಹೋಳಿ ಹಬ್ಬ ಕೂಡ ಹೊರತಲ್ಲ. ಪ್ರೀತಿ, ಸಂತಸ ಮತ್ತು ಸಹೋದರತ್ವದ ಪಾಠವನ್ನು ಬಣ್ಣಗಳ ಹಬ್ಬ ಹೋಳಿ ತಿಳಿಸುತ್ತದೆ.
ಈ ಹಬ್ಬದಂದು ಬಣ್ಣಗಳನ್ನು ಎರಚಾಡುತ್ತಾ ಸಂತೋಷ, ಸಂಭ್ರಮದಿಂದ ಆಚರಿಸಿ ಜೊತೆಗೆ ಈ ಸಂದೇಶಗಳನ್ನು ನಿಮ್ಮ ಪ್ರೀತಿ ಪಾತ್ರರರೊಂದಿಗೆ ಹಂಚಿಕೊಳ್ಳಿ. ಈ ಹೋಳಿ ನಿಮ್ಮೆಲ್ಲರ ಬದುಕಿನ ಹೊರ ಹರುಷದ ಬಣ್ಣ ತುಂಬಲಿ, ನಿಮ್ಮ ಪ್ರೀತಿ ಪಾತ್ರರಿಗೆ ಹೀಗೆ ಶುಭ ಕೋರಿ..

ಶುಭಾಶಯಗಳು 1
1. ರಂಗಿನ ಹಬ್ಬ ಹೋಳಿಯ ಶುಭಾಶಯಗಳು

ಹ್ಯಾಪಿ ಹೋಳಿ
2. ಅದೃಷ್ಟ ನಿಮ್ಮದಾಗಲಿ, ಶುಭಾಶಯ ನನ್ನದಾಗಿರಲಿ. ನಿಮ್ಮ ಬದುಕಿನಲ್ಲಿ ಒಲವಿನ ರಂಗೇರಲಿ, ಬದುಕು ಬಂಗಾರವಾಗಲಿ, ಹ್ಯಾಪಿ ಹೋಳಿ.

ಹೋಳಿ ಹಬ್ಬದ ಶುಭಾಶಯಗಳು
ಬಕೆಟ್‌ನಲ್ಲಿ ರಂಗು ತುಂಬಿದ ನೀರು, ಹೋಳಿಯ ರಂಗೇರಲು ಬಣ್ಣ ತುಂಬಿದ ಬಲೂನುಗಳು, ಬಾಯಿಯ ಸವಿ ಹೆಚ್ಚಿಸಲು ತಿನಿಸುಗಳು ಇವೆಲ್ಲಾ ಹೋಳಿಯ ಸಂಭ್ರಮ ಹೆಚ್ಚಿಸಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಹೋಳಿ ಹಬ್ಬದ ಶುಭಾಶಯಗಳು.

ಕಲರ್‌ಫುಲ್ ಹೋಳಿ
ಈ ಹೋಳಿಗೆ ನಿನ್ನ ಮುಖಕ್ಕೆ ನಾನು ಹಚ್ಚುವ ಈ ಬಣ್ಣದಂತೆ ನಿನ್ನ ಬದುಕು ಕೂಡ ಕಲರ್‌ಫುಲ್ ಆಗಿರಲಿ ಎಂದು ಆಶಿಸುತ್ತೇನೆ, ಹ್ಯಾಪಿ ಹೋಳಿ....

ಓಕುಳಿ ನಿಮ್ಮ ಬದುಕಿನಲ್ಲಿಯೂ ರಂಗೇರಲಿ
ಒಂದು ಸುಂದರ ಬಾಂಧವ್ಯ ಹೇಳಲು ಪದಗಳು ಬೇಕಾಗಿಲ್ಲ, ತುಟಿಯಲ್ಲಿ ನಗೆ, ಕಣ್ಣುಗಳಲ್ಲಿ ಹೊಳಪು ಅಷ್ಟೇ ಸಾಕು ಭಾವನೆಗಳನ್ನು ವ್ಯಕ್ತಪಡಿಸಲು, ಬಣ್ಣದ ಓಕುಳಿ ನಿಮ್ಮ ಬದುಕಿನಲ್ಲಿಯೂ ರಂಗೇರಲಿ. ಹೋಳಿ ಹಬ್ಬದ ಶುಭಾಶಯಗಳು.

ನಿಮ್ಮ ಕುಟುಂಬಕ್ಕೂ ಹರ್ಷವನ್ನು ತುಂಬಲಿ
ಅದೃಷ್ಟದ ದೇವರು ನಿಮ್ಮ ಬದುಕಿನಲ್ಲಿ ಸುಂದರವಾದ ಬಣ್ಣಗಳ ಚಿತ್ತಾರ ಬರೆಯಿಲಿ, ಈ ಹೋಳಿ ನಿಮಗೂ, ನಿಮ್ಮ ಕುಟುಂಬಕ್ಕೂ ಹರ್ಷವನ್ನು ತುಂಬಲಿ, ಹ್ಯಾಪಿ ಹೋಳಿ.

ಪ್ರೀತಿಯ ಭಾವನೆ ಹೋಳಿ ಬಣ್ಣ
ನಿಮ್ಮ ಪ್ರೀತಿಯ ಭಾವನೆಯನ್ನು ಹೋಳಿ ಬಣ್ಣದ ಮೂಲಕ ವ್ಯಕ್ತಪಡಿಸುವ ಸಮಯ ಬಂದಿದೆ, ಓಕುಳಿಯ ರಂಗಿನಂತೆ ಬದುಕು ವರ್ಣಮಯವಾಗಿರಲಿ. ಹ್ಯಾಪಿ ಹೋಳಿ...

ಬದುಕಿನಲ್ಲಿ ರಂಗು ತುಂಬಲಿ
ಈ ಹೋಳಿ ನಿಮ್ಮ ಹಾಗೂ ಕುಟುಂಬದವರ ಬದುಕಿನಲ್ಲಿ ರಂಗು ತುಂಬಲಿ....ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು.

ಬದುಕಿನಲ್ಲಿ ಖುಷಿ ತರಲಿ
ಹೋಳಿ ಎನ್ನುವುದು ಖುಷಿಗೆ ಬಣ್ಣ ತುಂಬುವ ಹಬ್ಬ. ಈ ಹೋಳಿ ನಿಮ್ಮ ಬದುಕಿನಲ್ಲಿ ಖುಷಿ ನೆಮ್ಮದಿ ತರಲಿ.

ಹೋಳಿ ಹಬ್ಬದ ಶುಭಾಶಯಗಳು
ಸಂತೋಷ ಎನ್ನುವುದು ಬದುಕಿನಲ್ಲಿ ಇರಲೇಬೇಕಾದ ಬಣ್ಣ, ಈ ಬಣ್ಣ ನಿಮ್ಮ ಬದುಕಿನಲ್ಲಿ ಎಂದೆಂದೂ ಮಾಸದಿರಲಿ ಎಂದು ಆಶಿಸುತ್ತೇನೆ... ಹೋಳಿ ಹಬ್ಬದ ಶುಭಾಶಯಗಳು.

ನಿಮ್ಮ ಬದುಕಿನ ಕಹಿಯೆಲ್ಲಾ ಮಾಯವಾಗಲಿ
ನಿಮ್ಮ ಬದುಕಿನ ಕಹಿಯೆಲ್ಲಾ ಮಾಯವಾಗಿ ಬದುಕು ಬಣ್ಣಗಳಿಂದ ತುಂಬಿರಲಿ, ಹೋಳಿ ಹಬ್ಬದ ಶುಭಾಶಯಗಳು.

ಹೋಳಿ ಹಬ್ಬದ ಶುಭಾಶಯಗಳು
ನನಗೆ ಈ ಹೋಳಿಗೆ ಹೆಚ್ಚೇನು ಬೇಕಾಗಿಲ್ಲ, ನನಗೆ ಬೇಕಾಗಿರುವುದು ನಿಮ್ಮ ಖುಷಿ ಅಷ್ಟೇ, ಹೋಳಿ ಹಬ್ಬದ ಶುಭಾಶಯಗಳು.

ಹ್ಯಾಪಿ ಹೋಳಿ.
ನನಗೆ ಸಾಧ್ಯವಾಗಿದ್ದರೆ ಕಾಮನ ಬಿಲ್ಲನ್ನು ಹಿಡಿದು ನಿಮಗೆ ಕಳುಹಿಸುತ್ತಿದ್ದೆ, ಆದರೇನು ಹೋಳಿಯ ಬಣ್ಣ ಕಳುಹಿಸುತ್ತಿದ್ದೇನೆ, ಅದು ನಿಮ್ಮ ಬದುಕಿನಲ್ಲಿ ಕಾಮನ ಬಿಲ್ಲಿನ ಪ್ರಕಾಶ ಬೀರಲಿ ಎಂದು ಆಶಿಸುತ್ತೇನೆ. ಹ್ಯಾಪಿ ಹೋಳಿ.



Click it and Unblock the Notifications











