Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ನಿಮ್ಮ ಪ್ರೀತಿ ಪಾತ್ರರಿಗೆ ದೀಪಾವಳಿ ಶುಭಾಶಯ ಕೋರಲು ಇಲ್ಲಿದೆ ಸಂದೇಶಗಳು
Happy Diwali 2024 Wishes in kannada : ಬೆಳಕಿನ ಹಬ್ಬ ದೀಪಾವಳಿ ಎಂದರೆ ಸಡಗರ-ಸಂಭ್ರಮ. ಅಂದಕಾರದಿಂದ ಬೆಳಕಿನೆಡೆಗೆ ಕರೆದೊಯ್ಯುವ ಹಬ್ಬ ದೀಪಾವಳಿ. ಎಲ್ಲೆಲ್ಲೂ ಬೆಳಕನ್ನು ಹರಡುತ್ತಾ ಸಂಭ್ರಮದ ವಾತಾವರಣವನ್ನು ಹೆಚ್ಚಿಸುವ ಅತ್ಯಂತ ದೊಡ್ಡ ಹಬ್ಬ ದೀಪಾವಳಿ. ಐದು ದಿನಗಳ ಕಾಲ ಆಚರಿಸಲಾಗುವ ಈ ಹಬ್ಬವು ವಿಶೇಷವಾದ ಧಾರ್ಮಿಕ ಆಚರಣೆಗಳನ್ನು ಒಳಗೊಂಡಿದೆ. ಪ್ರದೇಶದಿಂದ ಪ್ರದೇಶಕ್ಕೆ ಈ ಹಬ್ಬದ ಆಚರಣೆಯಲ್ಲಿ ಕೊಂಚ ವಿಭಿನ್ನತೆ ಇರುವುದನ್ನು ಕಾಣಬಹುದು.
ಐದು ದಿನದ ಹಬ್ಬಗಳ ಆಚರಣೆಯಲ್ಲಿ ವಿವಿಧ ಆಚರಣೆಗಳನ್ನು ಅನುಸರಿಸಲಾಗುವುದು. ಮನೆಯನ್ನೆಲ್ಲಾ ಸ್ವಚ್ಛ ಮಾಡಿ ದೀಪಾವಳಿಗೆ ಅಲಂಕಾರ ಮಾಡಲಾಗುವುದು. ದೀಪಾವಳಿ ಆಚರಣೆ ಇಂದಿನಿಂದಲೇ ಅಂದರೆ ಧಂತೆರೇಸ್ ದಿನದಿಂದಲೇ ಪ್ರಾರಂಭವಾಗುವುದು. ಈ ವರ್ಷ ಅಕ್ಟೋಬರ್ 31ರಂದು ದೀಪಾವಳಿ ಆಚರಣೆ ಮಾಡಲಾಗುವುದು. ಲಕ್ಷ್ಮಿ ದೇವಿಯ ಆರಾಧನೆಯೊಂದಿಗೆ ವಿವಿಧ ದೇವತೆಗಳಿಗೂ ಪೂಜೆ ಸಲ್ಲಿಸಲಾಗುವುದು. ದೀಪಾವಳಿ ಹಬ್ಬದ ಅಮವಾಸ್ಯೆಯ ದಿನವನ್ನು ಅತ್ಯಂತ ಮಹತ್ವದ ದಿನ ಎಂದು ಪರಿಗಣಿಸಲಾಗುವುದು. ಅದು ಲಕ್ಷ್ಮಿ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸುವರು. ಇದನ್ನು ಸಾಮಾನ್ಯವಾಗಿ ಲಕ್ಷ್ಮಿ ಪೂಜೆ, ಲಕ್ಷ್ಮಿ -ಗಣೇಶ ಪೂಜೆ ಅಥವಾ ದೀಪಾವಳಿ ಪೂಜೆ ಎಂದು ಸಹ ಕರೆಯಲಾಗುತ್ತದೆ.
ಈ ದೀಪಾವಳಿಗೆ ನಿಮ್ಮ ಪ್ರೀತಿ ಪಾತ್ರರಿಗೆ ಶುಭಾಶಯ ಕೋರಲು ಇಲ್ಲಿದೆ ನೋಡಿ ಮೆಸೇಜ್‌ಗಳು.

* ನಿಮಗೂ, ನಿಮ್ಮ ಕುಟುಂಬಕ್ಕೆ ದೀಪಾವಳಿ ಹಬ್ಬದ ಶುಭಾಶಯಗಳು
* ದೀಪದ ಬೆಳಕಿನಲ್ಲಿ ಕತ್ತಲು ದೂರ ಸರಿಯುವಂತೆ, ನಮ್ಮಲ್ಲಿರುವ ಕೋಪ., ಅಹಂ ದೂರವಾಗಲಿ, ಪ್ರೀತಿಯ ಬೆಳಕು ಹರಡಲಿ, ದೀಪಾವಳಿ ಹಬ್ಬದ ಶುಭಾಶಯಗಳು.
* ಕಷ್ಟಗಳು ದೂರವಾಗಲಿ, ಬಾಳು ಬಂಗಾರವಾಗಿ, ದೀಪಾವಳಿಯ ಸಂಭ್ರಮ ವರ್ಷಪೂರ್ತಿ ನೆಲೆಸಲಿ, ದೀಪಾವಳಿ ಹಬ್ಬದ ಶುಭಾಶಯಗಳು.
* ದೀಪದಿಂದ ದೀಪ ಬೆಳಗುವಂತೆ, ಪ್ರೀತಿಯಿಂದಲೇ ಪ್ರೀತಿ ಹರಡುವುದು, ದ್ವೇಷ, ಕೋಪ ನಶಿಸಲಿ, ಪ್ರೀತಿ ಮೂಡಲಿ, ದೀಪಾವಳಿ ಹಬ್ಬದ ಶುಭಾಶಯಗಳು.
* ಬೆಳಕಿನ ಹಬ್ಬ ದೀಪಾವಳಿ ನಿಮಗೆ, ನಿಮ್ಮ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ ನೀಡಲಿ, ದೀಪಾವಳಿ ಹಬ್ಬದ ಶುಭಾಶಯಗಳು
* ಅಜ್ಞಾನ, ಅಂಧಕಾರ ದೂರವಾಗಲಿ, ದ್ವೇಷ, ಅಸೂಯೆ ದೂರವಾಗಲಿ, ಬಾಳಲ್ಲಿ ಸಂತಸ ಬೆಳಗಲಿ, ದೀಪಾವಳಿ ಹಬ್ಬದ ಶುಭಾಶಯಗಳು
* ಕತ್ತಲು ಕರಗುವಂತೆ ಕಷ್ಟ ಕರಗಲಿ, ದೀಪದ ಬೆಳಕಿನಂತೆ ಸಂತೋಷ ಬರಲಿ, ಜೀವನ ಆನಂದವಾಗಿರಲಿ, ದೀಪಾವಳಿ ಹಬ್ಬದ ಶುಭಾಶುಗಳು
* ಬೆಳಕಿನ ಹಬ್ಬ ದೀಪಾವಳಿ ಬದುಕಿನಲ್ಲಿ ಹೊಸ ಬೆಳಕು ತರಲಿ, ಜೀವನದಲ್ಲಿ ನೆಮ್ಮದಿ ಇರಲಿ, ಆರೋಗ್ಯ, ಐಶ್ವರ್ಯ ಆ ದೇವ ಕರುಣಿಸಲಿ, ದೀಪಾವಳಿ ಹಬ್ಬದ ಶುಭಾಶಯಗಳು



Click it and Unblock the Notifications







