Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪ್ರೀತಿಪಾತ್ರರಿಗೆ ನಾಡಹಬ್ಬ ದಸರಾಕ್ಕೆ ಶುಭ ಕೋರಲು ಇಲ್ಲಿವೆ ಸಂದೇಶಗಳು
ನಾಡಿನೆಲ್ಲಡೆ ನವರಾತ್ರಿಯ ಸಂಭ್ರಮ. ಮಹಿಷಾಸುರ ಎಂಬ ರಾಕ್ಷಸನ ಜೊತೆಗೆ ಯುದ್ಧ ಮಾಡಿ, ಜಯ ಗಳಿಸಿದ ನೆನಪಿಗಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಅಹಂ ಮತ್ತು ದುಷ್ಟ ತನದ ಮೇಲೆ ಶಾಂತಿ ಮತ್ತು ವಿಜಯವನ್ನು ಪ್ರತಿನಿಧಿಸುವ ಹಬ್ಬ. ಈ ಹಬ್ಬವು ದೇವಿಯ ವಿಜಯದ ಸಂಭ್ರಮಾಚರಣೆಯು ಒಂದು ಸಂಗತಿ.
ಮನುಕುಲದ ಅಭಿವೃದ್ಧಿ ಹಾಗೂ ಪೋಷಣೆಯ ಕೆಲಸವನ್ನು ದುರ್ಗಾ ದೇವಿ ಮಾಡುತ್ತಾಳೆ. ಹಾಗಾಗಿ ನವರಾತ್ರಿಯ ಸಮಯದಲ್ಲಿ ದೇವಿಗೆ ಇಷ್ಟವಾಗುವ ರೀತಿಯಲ್ಲಿ ಪೂಜೆ, ವ್ರತ ಹಾಗೂ ಉತ್ಸವವನ್ನು ಕೈಗೊಳ್ಳುವುದು.
ಅಂತೆಯೇ ಸಂತುಷ್ಟಳಾದ ತಾಯಿಯು ತನ್ನ ಭಕ್ತರ ಜೀವನವು ಸಂತೋಷದಿಂದ ಹಾಗೂ ಸಮೃದ್ಧಿಯಿಂದ ಕೂಡಿರಲಿ ಎಂದು ಹರಸುತ್ತಾಳೆ ಎನ್ನುವ ನಂಬಿಕೆಯಿದೆ. ನವರಾತ್ರಿಯ ವ್ರತಾಚರಣೆಯನ್ನು ಆಚರಿಸುವುದರಿಂದ ಭವಿಷ್ಯದಲ್ಲಿ ಕಷ್ಟಗಳು ಕಣ್ಮರೆಯಾಗುತ್ತವೆ ಎಂದು ಹೇಳಲಾಗುವುದು.
ನವರಾತ್ರಿ ಹಾಗೂ ನಾಡಹಬ್ಬ ದಸರಾಗೆ ಶುಭಾಶಯ ಕೋರಲು, ಫೇಸ್‌ಬುಕ್, ವಾಟ್ಸಾಪ್‌ನಲ್ಲಿ ಸಂದೇಶ ಸಾರಲು ಇಲ್ಲಿ ಕೋಟ್ಸ್ ನೀಡಲಾಗಿದೆ ನೋಡಿ:

1. ದಸರಾ ಹಬ್ಬದ ಶುಭಾಶಯಗಳು
ಚಾಮುಂಡೇಶ್ವರಿ ದೇವಿ ನಿಮಗೆ ಐಶ್ವರ್ಯ, ಆರೋಗ್ಯ ನೀಡಿ ಅನುಗ್ರಹಿಸಲಿ.
2. ದಸರಾ ನಿಮ್ಮಾಎಲ್ಲಾ ಚಿಂತೆಗಳನ್ನು ಸುಟ್ಟು ಮನೆಯಲ್ಲಿ ಸಂತೋಷ-ಸಡಗರ ತುಂಬುವಂತೆ ಮಾಡಲಿ
ದಸರಾ ಹಬ್ಬದ ಶುಭಾಶಯಗಳು
3. ದುರ್ಗಾ ಮಾತೆ ನಿಮ್ಮ ಬದುಕಿನ ಹಾದಿಯಲ್ಲಿ ನಗುವನ್ನು ತುಂಬಿರಲಿ, ನಾಡ ಹಬ್ಬ ದಸರಾದ ಶುಭಾಶಯಗಳು
4. ನಿಮಗೂ, ನಿಮ್ಮ ಕುಟುಂಬಕ್ಕೂ ದಸರಾ ಹಬ್ಬದ ಶುಭಾಶಯಗಳು, ನಿಮ್ಮೆಲ್ಲಾ ಆಸೆಗಳು ನೆರವೇರಲಿ, ಆ ರಾಮನ ಆಶೀರ್ವಾದ ನಿಮ್ಮ ಮೇಲಿರಲಿ.
5. ಅಧರ್ಮ ನಶಿಸಿ, ಧರ್ಮ ಬಾಳಲಿ
ವಿಜಯದಶಮಿಯ ಶುಭಾಶಯಗಳು
6.ನಿಮ್ಮಲ್ಲಿರುವ ಅಸುರ (ದುರಾಲೋಚನೆಗಳು, ನಕಾರಾತ್ಮಕ ಚಿಂತನೆ)ನನ್ನು ಸೋಲಿಸಿ, ದುರ್ಗೆ ದೇವಿ ನಿಮಗೆ ಸಕಲ ಐಶ್ವರ್ಯ ನೀಡಿ ಅನುಗ್ರಹಿಸಲಿ, ದಸರಾ ಹಬ್ಬದ ಶುಭಾಶಯಗಳು
7. ಕೆಟ್ಟದರ ವಿರುದ್ಧ ಹೋರಾಡಿ ಗೆದ್ದ ದಿನವನ್ನು ವಿಜಯದಶಮಿಯಾಗಿ ಆಚರಿಸುತ್ತಿದ್ದೇವೆ. ಈ ಹಬ್ಬವು ನಿಮಗೂ, ನಿಮ್ಮ ಕುಟುಂಬಕ್ಕೂ ಖುಷಿ, ನೆಮ್ಮದಿಯನ್ನು ತರಲಿ, ನಿಮಗೂ, ನಿಮ್ಮ ಕುಟುಂಬಕ್ಕೂ ದಸರಾ ಹಬ್ಬದ ಶುಭಾಶಯಗಳು.
8. ನಿಮ್ಮ ಬದುಕಿನಲ್ಲಿರುವ ಎಲ್ಲಾ ಚಿಂತೆಗಳು ದೂರವಾಗಲಿ, ಯಶಸ್ಸು ನಿಮ್ಮದಾಗಲಿ, ದಸರಾ ಹಬ್ಬದ ಶುಭಾಶಯಗಳು
9. ಸತ್ಯ ಬಾಳುತ್ತೆ, ಒಳ್ಳೆಯತನ ಎಂದಿಗೂ ಗೆಲ್ಲುತ್ತೆ, ಅದರ ಸಂಕೇತವೇ ವಿಜಯದಶಮಿಯ ಆಚರಣೆ, ನಿಮಗೂ, ನಿಮ್ಮ ಕುಟುಂಬಕ್ಕೂ ದಸರಾ ಹಬ್ಬದ ಶುಭಾಶಯಗಳು
10. ನಿಮಗೂ, ನಿಮ್ಮ ಕುಟುಂಬಕ್ಕೂ ನವರಾತ್ರಿ, ದಸರಾ ಹಬ್ಬದ ಶುಭಾಶಯಗಳು
ಆ ದೇವರು ನಿಮಗೆ ಸಕಲ ಐಶ್ವರ್ಯ, ನೆಮ್ಮದಿ, ಆರೋಗ್ಯ ನೀಡಿ ಕರುಣಿಸಲಿ. ಜೈ ಚಾಮುಂಡೇಶ್ವರಿ



Click it and Unblock the Notifications








