Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನಿಮ್ಮ ಪ್ರೀತಿ ಪಾತ್ರರಿಗೆ ಹುಟ್ಟು ಹಬ್ಬದ ಶುಭಾಷಯ ಈ ರೀತಿ ಹೇಳಿ!
ಪ್ರತಿಯೊಬ್ಬರಿಗೂ ಅವರ ಹುಟ್ಟು ಹಬ್ಬ ಅಂದ್ರೆ ತುಂಬಾನೇ ಸ್ಪಷಲ್. ಇದ್ರ ಜೊತೆಗೆ ನಮ್ಮ ಪ್ರೀತಿ ಪಾತ್ರರ ಹುಟ್ಟು ಹಬ್ಬ ಕೂಡ ನಮಗೆ ತುಂಬಾನೇ ಸ್ಪೆಷಲ್. ಈ ದಿನಕ್ಕಾಗಿ ನಾವು ತುಂಬಾ ದಿನಗಳಿಂದ ಕಾಯುತ್ತಿರುತ್ತೇವೆ. ಅವರನ್ನು ಖುಷಿ ಪಡಿಸೋದಕ್ಕಾಗಿ ತುಂಬಾ ಪ್ಲಾನ್ ಮಾಡ್ಕೊಂಡಿರ್ತೀವಿ. ಇದ್ರ ಜೊತೆಗೆ ಆ ದಿನ ಅವರಿಗೆ ಸ್ಪೆಷಲ್ ಆಗಿ ವಿಶ್ ಮಾಡೋದಕ್ಕೆ ಕಾತುರದಿಂದ ಕಾಯುತ್ತಿರುತ್ತೇವೆ. ನಿಮ್ಮ ಪ್ರೀತಿ ಪಾತ್ರರ ಹುಟ್ಟು ಹಬ್ಬದ ದಿನ ಅವರಿಗೆ ಈ ರೀತಿ ವಿಶ್ ಮಾಡಿ.

ಅಪ್ಪ ಮಗಳಿಗೆ, ಪ್ರಿಯತಮ ಪ್ರೇಯಸಿಗೆ, ಮಗ ತಾಯಿಗೆ ಹೀಗೆ ಹಲವರು ತಮ್ಮ ಪ್ರೀತಿಪಾತ್ರರ ಹುಟ್ಟುಹಬ್ಬದ ಶುಭ ದಿನದಂದು ಹೇಗೆಲ್ಲಾ ಶುಭಸೂಚಕ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.

1 ವಯಸ್ಸಿಗೂ ಆಯಸ್ಸಿಗೂ ಹುಟ್ಟುಹಬ್ಬದ ಸೇತುವೆ : -
ನಿನಗೆ ವಯಸ್ಸು ಹೆಚ್ಚಾದಂತೆ ಆಯಸ್ಸೂ ಹೆಚ್ಚಾಗಲಿ, ನನ್ನಿಂದ ನಿನಗೆ ಪ್ರೀತಿಯ ಹುಟ್ಟುಹಬ್ಬದ ಶುಭಾಶಯಗಳು

2 ನಿನ್ನ ಹುಟ್ಟುಹಬ್ಬ, ನನ್ನ ಸಂಭ್ರಮ : -
ಇಡೀ ವರ್ಷದಿಂದ ಕಾಯುತ್ತಿದ್ದೆ ಈ ಸುದಿನಕ್ಕೆ, ಬಾಳು ಹಸಿರಾಗಿಸುವ ಶುಭ ಸಂದರ್ಭಕ್ಕೆ, ನೂರು ವರ್ಷ ಸುಖವಾಗಿ ಬಾಳು. ನನ್ನಿಂದ ನಿನಗೆ ಹುಟ್ಟುಹಬ್ಬದ ಶುಭಾಶಯಗಳು

3 ಸಂತೋಷದ ಹಾದಿಯಲ್ಲಿ ಸಿಹಿಯ ಲೇಪನ : -
ನೀ ನಡೆವ ಹಾದಿ ಸದಾ ಹಸಿರಾಗಿರಲಿ, ನಿನ್ನೆಲ್ಲಾ ಆಕಾಂಕ್ಷೆಗಳು ಈಡೇರಲಿ, ಏನೇ ಬಂದರೂ ನಿನ್ನ ಜೊತೆ ನಾನಿರುವೆ, ನನ್ನ ನಲ್ಮೆಯ ಹೃದಯವೇ ನಿನಗೆ ಹುಟ್ಟುಹಬ್ಬದ ಶುಭಾಶಯಗಳು

4. ಪ್ರೀತಿಯ ಅರಗಿಣಿಗೆ ಪಂಜರದ ಉಡುಗೊರೆ : -
ಪಂಜರದ ಗಿಣಿ ನೀನಾಗಬಾರದು, ಕತ್ತಲು ನಿನ್ನ ಜೀವನದಲ್ಲಿ ಸುಳಿಯಬಾರದು, ಕಣ್ಣು ಬಿಟ್ಟು ನೋಡು ಹೊರಗಿನ ಪ್ರಪಂಚ, ಬಣ್ಣ ಬಣ್ಣದ ಹಕ್ಕಿಗಳ ಕಲರವದಂತೆ, ಸುಂದರ ಹೂದೋಟದಂತೆ, ಬೆಳೆದು ನಿಂತಿರುವ ಹಸಿರ ಸೊಬಗ ರಾಶಿಯಂತೆ ಕಂಗೊಳಿಸಲಿ ನಿನ್ನ ಬಾಳು, ಓ ನನ್ನ ಮನವೇ ನಿನಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

5. ಇನಿಯನ ನೆನಪು, ಹೊಸ ಹುರುಪು : -
ಕಂಗೊಳಿಸುವ ನಿನ್ನ ಕಣ್ಣುಗಳು, ಮನದ ತುಂಬಾ ತುಂಬಿದ ನಿನ್ನ ನೆನಪುಗಳು, ನಾಚಿಸುವ ನಿನ್ನ ಚಿರಯೌವನ, ಹುಟ್ಟುಹಬ್ಬದ ನೆಪದೊಂದಿಗೆ ಮತ್ತೊಮ್ಮೆ ನಿನ್ನ ಜೊತೆ ಕಾಲಕಳೆಯುವ, ಸಲುಗೆಯಿಂದಿರುವ ಸಂದರ್ಭದ ನಿರೀಕ್ಷೆ ನನ್ನದು. ನಿನಗಾಗಿ ನನ್ನ ಪ್ರೀತಿಯ ಶುಭಕಾಮನೆಗಳು.

6. ಬಾಳು ಬೆಳಗಲು ನೀನೇ ಸ್ಪೂರ್ತಿ : -
ಇರುಳಿಗೆ ಹಗಲಾಗಿ, ಕತ್ತಲೆಗೆ ದೀಪವಾಗಿ, ಬಳ್ಳಿಗೆ ಆಸರೆಯಾಗಿ ನಮ್ಮೆಲ್ಲರ ಬಾಳು ಬೆಳಗಿದ ನಿನ್ನ ಜೀವನ ಹಸನಾಗಿರಲಿ. ನಿನಗೆ ಜನ್ಮದಿನದ ಶುಭಾಶಯಗಳು.

7. ಮುಗ್ದ ಮುಗುಳ್ನಗೆಗೆ ಮನೆಯವರ ಕಾತುರ : -
ಹೊಳೆಯುವ ಚಂದ್ರನಂತೆ, ತಿಳಿ ನೀರಿನ ಅಲೆಯಂತೆ, ಮಲ್ಲಿಗೆಯ ಸುವಾಸನೆಯಂತೆ, ಬಿರಿದ ತಾವರೆಯಂತೆ ನಕ್ಕು ನಲಿಯುವ ನಿನ್ನ ಮೊಗವು ಸದಾ ಹೀಗೆ ಇರಲಿ. ನಿನ್ನ ಸಂತೋಷವೇ ನಮಗೆಲ್ಲಾ ಹಬ್ಬದ ತಳಿರು ತೋರಣದಂತೆ, ನಮ್ಮ ಪುಟ್ಟ ಮಗುವಿಗೆ ಹುಟ್ಟು ಹಬ್ಬದ ಹಾರೈಕೆಗಳು

8 ಮೂರು ನಿಮಿಷದ ಹಾರೈಕೆ : -
ಮನಸ್ಸಿನ ತಳಮಳ ಹೇಳತೀರದು, ಮಾತು ತಾಳಲಾರದು, ಕಾಯುತ್ತಿದ್ದ ಕಾತುರದ ಕ್ಷಣ ಅದುವೇ ನಿನ್ನ ಜನ್ಮದಿನ. ಮೂರು ನಿಮಿಷದ ನನ್ನ ಹಾರೈಕೆ ನೂರು ವರ್ಷದ ನಿನ್ನ ಆಯಸ್ಸಾಗಲಿ. ನಿನಗೆ ಹುಟ್ಟುಹಬ್ಬದ ಶುಭಾಶಯಗಳು

9 ಯಶಸ್ಸಿನ ಗರಿ ನಿನ್ನ ಹೆಗಲೇರಲಿ : -
ಸಾಧನೆಯ ಶಿಖರ ಹುಲ್ಲುಹಾಸಿನಂತಾಗಲಿ, ಹಾದಿ ಮುಳ್ಳುಗಳು ಹೂವುಗಳಂತಾಗಲಿ, ಯಶಸ್ಸು ರತ್ನಗಂಬಳಿಯಾಗಲಿ, ನೀನು ಮುಟ್ಟಿದ್ದೆಲ್ಲಾ ಚಿನ್ನವಾಗಲಿ, ವರ್ಷದ ಎಲ್ಲಾ ದಿನಗಳು ನಿನಗೆ ಶುಭವಾಗಲಿ, ಶುಭಕಾಮನೆಗಳೊಂದಿಗೆ ಹುಟ್ಟುಹಬ್ಬದ ಶುಭಾಶಯಗಳು

10 ಹೊಸ ದಿನ, ಹೊಸ ಜೀವನ : -
ನೋವು - ನಲಿವುಗಳ ನಡುವಿನಲ್ಲಿ ನಿನ್ನದೇ ಆದ ಜೀವನದಲ್ಲಿ ಸಂಕಷ್ಟಗಳ ಸಂಕೋಲೆಯಲ್ಲಿ ಸುತ್ತುವರೆದ ಸಾವಿರ ಅಗ್ನಿಕುಂಡದಲ್ಲಿ ಪುಟಿದೆದ್ದ ಬಂಗಾರ ನೀನು. ಇಂದಿನ ನಿನ್ನ ಹುಟ್ಟುಹಬ್ಬ ನಿನಗೆ ಹೊಸ ಜೀವನ ನೀಡಲಿ, ಹಾರೈಕೆಗಳ ಮಹಾಪೂರವೇ ನಿನಗೆ ಹರಿದು ಬರಲಿ. ಹುಟ್ಟುಹಬ್ಬದ ಸಂಭ್ರಮ ಇಡೀ ಜೀವನ ಹಾಗೆ ಇರಲಿ. ನಿನಗೆ ಜನ್ಮದಿನದ ಶುಭಾಶಯಗಳು.



Click it and Unblock the Notifications
