Latest Updates
-
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ!
Happy Bhogi 2022 Wishes : ಭೋಗಿ ಹಬ್ಬಕ್ಕೆ ಶುಭ ಕೋರಲು ಇಲ್ಲಿದೆ ಶುಭಾಶಯಗಳು
ಭೋಗಿ ಎನ್ನುವುದು ಸಂಕ್ರಾಂತಿಯ ಮುಂಚಿತ ದಿನ ಆಚರಿಸುವ ಹಬ್ಬವಾಗಿದೆ. ಸಾಮಾನ್ಯವಾಗಿ ಈ ಹಬ್ಬವನ್ನು ಜನವರಿ 13ರಂದು ಆಚರಿಸಲಾಗುವುದು. ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ, ಮಹಾರಾಷ್ಟ್ರದಲ್ಲಿ ಭೋಗಿ ಹಬ್ಬ ಆಚರಿಸಲಾಗುವುದು.
ಕರ್ನಾಟಕದಲ್ಲಿ ಈ ದಿನ ಸಜ್ಜಿಗೆ, ರೊಟ್ಟಿ, ಬದನೆಕಾಯಿ ಮಾಡಿ ಸವಿಯಲಾಗುವುದು.
ಭೋಗಿ ಹಬ್ಬದಂದು ಇಂದ್ರನನ್ನು ಪೂಜಿಸಲಾಗುವುದು. ಬೆಳೆ ಪಡೆದ ಬಳಿಕ ಒಳ್ಳೆಯ ಮಳೆ ನೀಡಿ ಬೆಳೆ ಬೆಳೆಯಲು ಸಹಕರಿಸಿದ ಇಂದ್ರನನ್ನು ಈ ದಿನ ಪೂಜಿಸುತ್ತಾರೆ, ಮನೆಯಲ್ಲಿರುವ ಬೇಡದ ಹಳೆಯ ವಸ್ತುಗಳನ್ನು ಬೆಂಕಿಗೆ ಬಿಸಾಡಿ , ಹೊಸ ಬಟ್ಟೆ ಧರಿಸಿ ಸಂಭ್ರಮದಿಂದ ಆಚರಿಸಲಾಗುವುದು.
ಹಳೆಯ ಋಣಾತ್ಮಕ ಚಿಂತೆ ದೂರವಾಗಿ ಧನಾತ್ಮಕ ಶಕ್ತಿ ತುಂಬಲಿ ಎಂಬುವುದೇ ಈ ಹಬ್ಬದ ಆಶಯವಾಗಿದೆ. ಭೋಗಿ ಹಬ್ಬಕ್ಕೆ ಶುಭ ಕೋರಲು ಶುಭಾಶಯಗಳನ್ನು ನೀಡಿದ್ದೇವೆ ನೋಡಿ.

ಶುಭಾಶಯ 1
ಈ ಸುಗ್ಗಿಯ ಹಬ್ಬ ನಿಮಗೆ ಸಂತೋಷ, ಅದೃಷ್ಟ ತರಲಿ, ಭೋಗಿ ಹಬ್ಬದ ಶುಭಾಶಯಗಳು

ಶುಭಾಶಯ 2
ಈ ಭೋಗಿ ಹಬ್ಬದಂದು ಲೆಕ್ಕಕ್ಕೆ ಸಿಗದಷ್ಟು ಖುಷಿ, ಸಂಪತ್ತು ನಿಮಗೆ ಆ ದೇವರು ಕರುಣಿಸಲಿ ಎಂದು ಹಾರೈಸುವೆ, ಭೋಗಿ ಹಬ್ಬದ ಶುಭಾಶಯಗಳು

ಶುಭಾಶಯ 3
ನಿಮಗೂ, ನಿಮ್ಮ ಕುಟುಂಬಕ್ಕೂ ಭೋಗಿ ಹಬ್ಬದ ಶುಭಾಶಯಗಳು

ಶುಭಾಶಯ 4
ಭೋಗಿ ಹಬ್ಬದ ಶುಭಾಶಯಗಳು, ಸಂಕ್ರಾಂತಿಯ ಎಳ್ಳು-ಬೆಲ್ಲದಂತೆ ಆರೋಗ್ಯವಾದ ಹಾಗೂ ಸಿಹಿಯಾದ ಬದುಕು ನಿಮ್ಮದಾಗಲಿ.

ಶುಭಾಶಯ 5
ಭೋಗಿಯ ಈ ಶುಭ ದಿನದಂದು ಸೂರ್ಯನ ರಶ್ಮಿಯಂತೆ ಪ್ರಕಾಶಮಾನವಾದ ಹಾಗೂ ಸಮೃದ್ಧಿಯ ಬದುಕು ನಿಮ್ಮದಾಗಲಿ ಎಂದು ಹಾರೈಸುವೆ, ಭೋಗಿ ಹಬ್ಬದ ಶುಭಾಶಯಗಳು.

ಶುಭಾಶಯ 6
ಸೂರ್ಯ ಉದಯಿಸುವ ಬೀರುವ ಪ್ರಭೆಯಂತೆ ನಿಮ್ಮ ಬದುಕು ಪ್ರಕಾಶಮಾನವಾಗಿರಲಿ ಎಂದು ಹಾರೈಸುವೆ, ಹ್ಯಾಪಿ ಭೋಗಿ.

ಶುಭಾಶಯ 7
ಭೋಗಿಯ ಈ ಶುಭ ದಿನದಂದು ನೀವು ಪ್ರಾರಂಭಿಸಿದ ಹೊಸ ಕಾರ್ಯ ಒಳ್ಳೆಯ ಫಲ ನೀಡಲಿ ಎಂದು ಹಾರೈಸುವೆ.

ಶುಭಾಶಯ 8
ಈ ಭೋಗಿ ಹೊಸ ಬದುಕಿನ ಶುಭಾರಂಭದ ದಿನಾಗಲಿ, ಹಳೆಯದನ್ನು ಮರೆತು ಭವಿಷ್ಯದ ಕಡೆ ಮುನ್ನುಗ್ಗೋಣ, ಭೋಗಿ ಹಬ್ಬದ ಶುಭಾಶಯಗಳು



Click it and Unblock the Notifications
