Latest Updates
-
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ
Akshaya Tritiya Wishes in Kannada: ಅಕ್ಷಯ ತೃತೀಯ 2024: ಶುಭ ಕೋರಲು ಇಲ್ಲಿದೆ ಶುಭಾಶಯಗಳು
ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನವೇ ಅಕ್ಷಯ ತೃತೀಯ. ಈ ವರ್ಷ ಮೇ 10ರಂದು ಆಚರಿಸಲಾಗುವುದು. ದಿನ ಹಿಂದೂಗಳಿಗೆ ತುಂಬಾನೇ ಪ್ರಾಮುಖ್ಯವಾದ ದಿನ.

ಚಿನ್ನ ಬೆಳ್ಳಿ ಕೊಳ್ಳಲು, ಆಸ್ತಿ ಖರೀದಿಸಲು, ವಾಹನ ಖರೀದಿಸಲು, ಯಾವುದಾದರು ಹೊಸ ವ್ಯವಹಾರಕ್ಕೆ ಕೈ ಹಾಕಲು, ರೈತರು ಹೊಲದಲ್ಲಿ ಹೊಸ ಬೆಳೆಗೆ ಕೆಲಸ ಪ್ರಾರಂಭಿಸಲು, ತುಂಬಾ ಶುಭವೆಂದು ಈ ದಿನವನ್ನು ಪರಿಗಣಿಸಲಾಗಿದೆ.
ಅಕ್ಷಯ ತೃತೀಯದಂದು ಯಾವುದೇ ಶುಭ ಕಾರ್ಯ ಮಾಡಿದರೂ ಅದರ ಫಲ ಉತ್ತಮವಾಗಿರುತ್ತದೆ ಎಂಬ ನಂಬಿಕೆ ಇದೆ. ಈ ಅಕ್ಷಯ ತೃತೀಯಾದಂದು ಏನೇ ಮಾಡಿದರೂ ಅದು ಅಕ್ಷಯವಾಗಿರುತ್ತದೆ. ಈ ಶುಭ ದಿನದಂದು ನಿಮ್ಮ ಪ್ರೀತಿ ಪಾತ್ರರಿಗೆ ಶುಭ ಕೋರಲು ಇಲ್ಲಿದೆ ಉತ್ತಮ ಶುಭಾಶಯಗಳು...
1. ಅಕ್ಷಯ ತೃತೀಯ ಶುಭಾಶಯಗಳು
2. ಈ ಅಕ್ಷಯ ತೃತೀಯ ನಿಮ್ಮ ಸಂಪತ್ತು, ಆರೋಗ್ಯ ವೃದ್ಧಿಸಲಿ, ಮನೆಯಲ್ಲಿ ಖುಷಿ ತುಂಬಲಿ...
ಅಕ್ಷಯ ತೃತೀಯ ಶುಭಾಶಯಗಳು
3. ಅಕ್ಷಯ ತೃತೀಯದಂದು ನೀವು ಕೈಗೊಂಡ ಕಾರ್ಯ ಅಕ್ಷಯವಾಗಲಿ, ಅದೃಷ್ಟದ ಲಕ್ಷ್ಮಿ ನಿಮಗೆ ಒಲಿಯಲಿ ಎಂದು ಹಾರೈಸುವೆ.
ಅಕ್ಷಯ ತೃತೀಯ ಶುಭಾಶಯಗಳು
4. ನಿಮ್ಮ ಹಾಗೂ ಮನೆಯವರ ಆರೋಗ್ಯ ಅಕ್ಷಯವಾಗಿರಲಿ
ಅದೃಷ್ಟ ನಿಮ್ಮ ಜೊತೆಗಿರಲಿ
ನೀವು ಮಾಡುತ್ತಿರುವ ಕಾರ್ಯದಲ್ಲಿ ಯಶಸ್ವಿ ಕಾಣಲಿ ಎಂದು ಹಾರೈಸುವೆ
ಅಕ್ಷಯ ತೃತೀಯ ಶುಭಾಶಯಗಳು
5. ಈ ಅಕ್ಷಯ ತೃತೀಯ ಶುಭ ದಿನದಂದು ನಿಮ್ಮ ಎಲ್ಲಾ ಕನಸುಗಳು ನೆರವೇರಲಿ, ಆ ದೇವರು ಆರೋಗ್ಯ, ಆಯುಸ್ಸು, ಐಶ್ವರ್ಯ ಕೊಟ್ಟು ನಿಮ್ಮನ್ನು, ನಿಮ್ಮ ಮನೆಯವರನ್ನು ಸಂರಕ್ಷಿಸಲಿ ಎಂದು ಮನ ತುಂಬಿ ಹಾರೈಸುವೆ.
6. ನಿನ್ನ ಕಾರ್ಯದಲ್ಲಿ ಯಶಸ್ವಿ ದೊರೆಯಲಿ, ಅದೃಷ್ಟ ಲಕ್ಷ್ಮಿ ಸದಾ ನಿನ್ನ ಜೊತೆಗಿರಲಿ...
ನಿನ್ನ ಮುಖದಲ್ಲಿ ನಗು ಅಕ್ಷಯವಾಗಿರಲಿ ಎಂಬುವುದೇ ನನ್ನಾಸೆ
ಅಕ್ಷಯ ತೃತೀಯ ಶುಭಾಶಯಗಳು
7. ಅಕ್ಷಯ ತೃತೀಯಾದಂದು ಮಾತ್ರವಲ್ಲ ಇಡೀ ನಿನ್ನ ಬಾಳಿನಲ್ಲಿ ಆರೋಗ್ಯ, ಸಂಪತ್ತು ತುಂಬಿರಲಿ. ಬೇಡಿದ್ದನ್ನು ಕೊಡುವ ನಿನ್ನ ಕೈಗಳು ಸದಾ ಅಕ್ಷಯವಾಗಿರಲಿ, ನಿಮ್ಮಿಂದ ಮತ್ತಷ್ಟು ಉಪಕಾರ ಈ ಸಮಾಜಕ್ಕೆ ಆಗುವಂತಾಗಲಿ
ನಿಮಗೆ, ನಿಮ್ಮ ಕುಟುಂಬಕ್ಕೆ ಅಕ್ಷಯ ತೃತೀಯಾ ಶುಭಾಶಯಗಳು
ದೇವರ ಕೃಪೆ ಸದಾ ನಿಮ್ಮ ಮೇಲಿರಲಿ.



Click it and Unblock the Notifications






