Latest Updates
-
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ
ಹನುಮಾನ್ ಜಯಂತಿ: ನಿಮ್ಮ ರಾಶಿಗೆ ಈ ಪ್ರಸಾದ ಹನುಮಂತನಿಗೆ ಅರ್ಪಿಸಿದರೆ ಇಷ್ಟಾರ್ಥ ನೆರವೇರುವುದು
ಏಪ್ರಿಲ್ 16 ಚೈತ್ರ ಪೂರ್ಣಿಮಾ, ಶ್ರೀರಾಮನ ಪರಮ ಭಕ್ತ ಆಂಜನೇಯ ಜನಿಸಿದ ದಿನ. ಈ ದಿನವನ್ನು ಹನುಮಾನ್ ಜಯಂತಿಯಂದು ಆಚರಿಸಲಾಗುವುದು.
ಅದು ಈ ವರ್ಷ ಶನಿವಾರ ಬಂದಿದೆ. ಹನುಮಂತನ ಆರಾಧನೆಗೆ ಶ್ರೇಷ್ಠವಾದ ದಿನ. ನಿಮಗೆ ಶ್ರೀ ಹನುಮಂತ ಆರೋಗ್ಯ, ಐಶ್ವರ್ಯ ನೀಡಲಿ, ನಿಮ್ಮ ಇಷ್ಟಾರ್ಥಗಳು ನೆರವಾಗಲಿ.

ಹನುಮಂತನ ಭಕ್ತರು ವಾಯು ಪುತ್ರನಿಗೆ ಪೂಜೆಯಲ್ಲಿ ಪ್ರಸಾದ ನೀಡುವಾಗ ನಿಮ್ಮ ರಾಶಿಯ ಪ್ರಕಾರ ಪ್ರಸಾದವನ್ನು ಅರ್ಪಿಸಿದರೆ ಮತ್ತಷ್ಟು ಒಳ್ಳೆಯದು ಎಂಬುವುದನ್ನು ವೈದಿಕ ಶಾಸ್ತ್ರ ಹೇಳುತ್ತದೆ. ನೀವು ಶ್ರೀ ಹನುಮಂತನಿಗೆ ಪ್ರಸಾದವನ್ನು ಅರ್ಪಿಸಿ ನಂತರ ಬಂದ ಭಕ್ತರಿಗೆ ಹಂಚಿ.

ಈ ವ್ರತ ನಿಯಮ ಪಾಲಿಸಿ:
* ರಾಮ, ಸೀತೆ, ಹನುಂತನನನ್ನು ಧ್ಯಾನಿಸಿ ನೆಲದಲ್ಲಿ ಮಲಗಬೇಕು.
* ಮುಂಜಾನೆ ಸ್ನಾನ ಮಾಡಿ ಮಡಿ ಬಟ್ಟೆ ಧರಿಸಬೇಕು.
* ಬಲಗೈಯಲ್ಲಿ ನೀರನ್ನು ತೆಗೆದುಕೊಂಡು ಸಂಕಲ್ಪ ಮಾಡಿ.
* ಪೂರ್ವಕ್ಕೆ ಮುಖ ಮಾಡಿ ಪ್ರಾರ್ಥನೆ ಮಾಡಿ.
* ಹನುಮಾನ್ ಚಾಲೀಸ ಪಠಿಸಿ
* ಷೋಡಶೋಪಚಾರ ಪ್ರಕಾರ ಪೂಜೆ ಮಾಡಿ.

ನಿಮ್ಮ ರಾಶಿ ಪ್ರಕಾರ ಶ್ರೀಹನುಮಂತನಿಗೆ ಯಾವ ಪ್ರಸಾದ ಅರ್ಪಿಸಬೇಕು:
1. ಮೇಷ ರಾಶಿ
ಕಡ್ಲೆ ಹಿಟ್ಟಿನ ಲಾಡುಗಳನ್ನು ಆಂಜನೇಯನಿಗೆ ಅರ್ಪಿಸಿ.
2 ವೃಷಭ ರಾಶಿ
ವೃಷಭ ರಾಶಿಯವರು ಹನುಮಂತನಿಗೆ ತುಳಸಿಯನ್ನು ಅರ್ಪಿಸಿ.
3. ಮಿಥುನ ರಾಶಿ
ಮಿಥುನ ರಾಶಿಯವರು ತುಳಸಿಯನ್ನು ಅರ್ಪಿಸಿ ಪೂಜಿಸಿ.
4. ಕರ್ಕ ರಾಶಿ
ಹಸುವಿನ ತುಪ್ಪದಲ್ಲಿ ಮಾಡಿದ ಹಲ್ವಾವನ್ನು ಅರ್ಪಿಸಿ.

ನಿಮ್ಮ ರಾಶಿ ಪ್ರಕಾರ ಶ್ರೀಹನುಮಂತನಿಗೆ ಯಾವ ಪ್ರಸಾದ ಅರ್ಪಿಸಬೇಕು:
5. ಸಿಂಹ ರಾಶಿ
ಸಿಂಹ ರಾಶಿಯವರು ಜಿಲೇಬಿಯನ್ನು ಶ್ರೀಹನುಮಂತನಿಗೆ ಅರ್ಪಿಸಿ.
6. ಕನ್ಯಾ ರಾಶಿ
ಕನ್ಯಾ ರಾಶಿಯವರು ಶ್ರೀ ಆಂಜನೇಯನಿಗೆ ಕುಂಕುಮವನ್ನು ಅರ್ಪಿಸಿ.
7. ತುಲಾ ರಾಶಿ
ತುಲಾ ರಾಶಿಯವರು ಮೋತೊಚೂರ್ ಲಡ್ಡು ಅರ್ಪಿಸಿ.
8. ವೃಶ್ಚಿಕ ರಾಶಿ
ತುಪ್ಪದಲ್ಲಿ ಮಾಡಿದ ಕಡ್ಲೆ ಹಿಟ್ಟಿನ ಲಡ್ಡುಗಳನ್ನು ಅರ್ಪಿಸಿ.

ನಿಮ್ಮ ರಾಶಿ ಪ್ರಕಾರ ಶ್ರೀಹನುಮಂತನಿಗೆ ಯಾವ ಪ್ರಸಾದ ಅರ್ಪಿಸಬೇಕು:
9. ಧನು ರಾಶಿ
ಧನು ರಾಶಿಯವರು ಶ್ರೀ ಹನುಮಂತನಿಗೆ ತುಳಸಿಯನ್ನು ಅರ್ಪಿಸುವುದು ಒಳ್ಲೆಯದು.
10. ಮಕರ ರಾಶಿ
ಮಕರ ರಾಶಿಯವರು ಮೋತಿಚೂರ್ ಲಡ್ಡುಗಳನ್ನು ಪ್ರಸಾದವಾಗಿ ಅರ್ಪಿಸಿ.
11. ಕುಂಭ ರಾಶಿ
ಕುಂಭ ರಾಶಿಯವರು ಕೆಂಪು ಬಣ್ಣದ ವಸ್ತ್ರ ಹಾಗೂ ಲಡ್ಡುಗಳನ್ನು ಅರ್ಪಿಸಿ.
12. ಮೀನ ರಾಶಿ
ಮೀನ ರಾಶಿಯವರು ಪವನ ಪುತ್ರನಿಗೆ ಲವಂಗವನ್ನು ಅರ್ಪಿಸಿ.



Click it and Unblock the Notifications
