For Quick Alerts
ALLOW NOTIFICATIONS  
For Daily Alerts

  ಹನುಮಾನ್ ಜಯಂತಿ: ಪ್ರತಿಯೊಬ್ಬ ಹನುಮಾನ್ ಭಕ್ತರು ತಿಳಿದಿರಬೇಕಾದ ಸಂಗತಿಗಳು

  By Hemanth
  |
  Hanuman Jayanthi 2018 | ಹನುಮಂತನ ಬಗ್ಗೆ ನೀವು ತಿಳಿಯಬೇಕಾದ ಸಂಗತಿಗಳು | Oneindia Kannada

  ರಾಮ ಭಕ್ತನಾಗಿರುವ ಹನುಮಂತನನ್ನು ಆರಾಧಿಸದವರು ತುಂಬಾ ಕಡಿಮೆ. ಅದರಲ್ಲೂ ಬ್ರಹ್ಮಚಾರಿಗಳು ಹನುಮಂತನ ಧ್ಯಾನ ಪ್ರತಿನಿತ್ಮಾ ಡುವರು. ರಾಮಾಯಣದಲ್ಲಿ ಸೀತೆಯನ್ನು ವನವಾಸದಿಂದ ಬಿಡಿಸುವುದರಿಂದ ಹಿಡಿದು, ರಾಮಸೇತು ನಿರ್ಮಾಣ ಮಾಡುವಲ್ಲಿಯು ಹನುಮಂತನ ಪಾತ್ರ ಮಹತ್ವದ್ದು.

  ಹನುಮಾನ್ ಜಯಂತಿ ಹಬ್ಬದ ಮಹತ್ವ ಹಾಗೂ ದಂತಕಥೆಗಳು

  ಚೈತ್ರಾ ಮಾಸದಲ್ಲಿ ಬರುವಂತಹ ಹುಣ್ಣೆಮೆಯಂದು ಹಿಂದೂಗಳು ಹನುಮಾನ್ ಜಯಂತಿ ಆಚರಿಸುವರು. ಇದು ಹನುಮಂತನ ಹುಟ್ಟುಹಬ್ಬದ ದಿನವೆಂದು ಪರಿಗಣಿಸಲಾಗಿದೆ. ಹನುಮಾನ್ ಜಯಂತಿ ವೇಳೆ ಹನುಮಂತ ದೇವರ ಕೆಲವೊಂದು ಪ್ರೇರಣಾತ್ಮಕ ಕಥೆಗಳನ್ನು ತಿಳಿಯುವ....

  ಹನುಮಂತ-ತುಂಬಾ ಪ್ರೇರಣೆಯ ಪಾತ್ರ

  ಹನುಮಂತ-ತುಂಬಾ ಪ್ರೇರಣೆಯ ಪಾತ್ರ

  ವಾಲ್ಮೀಕಿ ರಾಮಾಯಣ ಮತ್ತು ತುಳಸಿದಾಸ ರಾಮಚರಿತಮಾನಸದಲ್ಲಿ ಹನುಮಂತನು ತನ್ನ ದೇವರು ರಾಮನ ಸೇವೆ, ಭಕ್ತಿ ಮತ್ತು ಬದ್ಧತೆಯ ರೂಪ. ರಾಮ ಒಬ್ಬ ದೇವತಾರೂಪವೆಂದು ತಿಳಿದುಕೊಂಡ ಬಳಿಕ ಹನುಮಂತನು ಆತನಿಗಾಗಿ ತನ್ನ ಸರ್ವಸ್ವ ಸಮರ್ಪಿಸುವನು. ರಾಮನ ಸೇವೆಯ ಹೊರತಾಗಿ ಆತನಿಗೆ ಜಗತ್ತಿನಲ್ಲಿ ಬೇರೆ ಯಾವುದು ಕಾಣುವುದಿಲ್ಲ.

  ಜ್ಞಾನಿನಮ ಅಗ್ರೇಗ್ಯಾಮಾ (ಬುದ್ಧಿವಂತ ಅಗ್ರಗಣ್ಯ)

  ಜ್ಞಾನಿನಮ ಅಗ್ರೇಗ್ಯಾಮಾ (ಬುದ್ಧಿವಂತ ಅಗ್ರಗಣ್ಯ)

  ಸರ್ವೋಚ್ಚ ಸಾಧನೆಯ ಬುದ್ದಿವಂತ ಅಗ್ರಗಣ್ಯ ಎಂದು ತುಳಸಿದಾಸರು ಹನುಮಂತನನ್ನು ಬಣ್ಣಿಸಿದ್ದಾರೆ. ರಾಮಾಯಣದಲ್ಲಿ ರಾಮನನ್ನು ಹಲವಾರು ಕಡೆಗಳಲ್ಲಿ ಹನುಮಂತ ಗುರುತಿಸಿರುವ ಕಾರಣ ಆತ ತುಂಬಾ ಬುದ್ಧಿವಂತ. ರಾಮಾಯಣದ ಕಿಷ್ಕಿಂದ ಕಾಂಡದಲ್ಲಿ ರಾಮ ಮತ್ತು ಹನುಮಂತನ ಮೊದಲ ಭೇಟಿಯನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ಹನುಮಂತನ ಮಾತಿನಿಂದ ರಾಮ ತುಂಬಾ ಪ್ರಭಾವಿತನಾಗುತ್ತಾನೆ ಮತ್ತು ಲಕ್ಷಣನಲ್ಲಿ ಹೇಳುತ್ತಾನೆ. ಇಂತಹ ಮಾತುಗಳನ್ನು ಆಡಲು ಇಬ್ಬರಿಂದ ಮಾತ್ರ ಸಾಧ್ಯ. ಒಂದು ವೇದಗಳಲ್ಲಿ ತುಂಬಾ ಪಾರಂಗತರಾಗಿರವವರು ಮತ್ತು ಸಾಮಾಜಿಕ ಹಾಗೂ ನೈತಿಕ ವಿಜ್ಞಾನವನ್ನು ಸರಿಯಾಗಿ ಕಲಿತುಕೊಂಡಿರುವವರಿಂದ ಸಾಧ್ಯವೆಂದು ಹೇಳುತ್ತಾನೆ.

  ವಿನಮ್ರ ಸೇವಕ

  ವಿನಮ್ರ ಸೇವಕ

  ಹನುಮಂತನು ಸಂಪೂರ್ಣವಾಗಿ ತನ್ನ ಅಹಂನ್ನು ಧ್ವಂಸ ಮಾಡಿಕೊಂಡಿದ್ದ. ವಾಲ್ಮೀಕಿ ಮತ್ತು ತುಳಸಿದಾಸರ ರಾಮಾಯಣದಲ್ಲಿ ಇದನ್ನು ತುಂಬಾ ಸುಂದರವಾಗಿ ವರ್ಣಿಸಲಾಗಿದೆ. ಹನುಮಂತದಲ್ಲಿ ಸ್ವಯಂಸೇವೆಯ ಒಳ್ಳೆಯ ಗುಣವಿದೆ. ಹನುಮಂತ ನೀನು ನನಗೆ ಏನು ಮಾಡುತ್ತಿ ಎಂದು ರಾಮ ಹೇಳುತ್ತಾನೆ. ಈ ವೇಳೆ ಉತ್ತರಿಸುವ ಹನುಮಂತ, ನನ್ನ ಗೌರವ ಮತ್ತು ಪ್ರೀತಿ ಯಾವತ್ತೂ ಕಡಿಮೆಯಾಗದಿರಲಿ ಮತ್ತು ನಿಮ್ಮನ್ನು ಬಿಟ್ಟು ಬೇರೆ ಯಾವುದನ್ನು ನಾನು ಧ್ಯಾನಿಸದಂತೆ ಆಗಲಿ ಎನ್ನುತ್ತಾನೆ. ಹನುಮಂತನು ಮೋಕ್ಷ ಅಥವಾ ಸ್ವರ್ಗ ಕೇಳಲಿಲ್ಲ. ವಿನಮ್ರತೆಯಿಂದ ಸೇವೆ ಮಾಡಿದರೆ ಆಗ ಖಂಡಿತವಾಗಿಯೂ ಶ್ರೇಷ್ಠವಾಗಿರುವುದನ್ನು ಸಾಧಿಸಬಹುದು ಎಂದು ಹನುಮಂತ ಹೇಳಿಕೊಟ್ಟಿದ್ದಾನೆ.

  ಹನುಮಂತ ಒಳ್ಳೆಯ ಗೆಳೆಯ

  ಹನುಮಂತ ಒಳ್ಳೆಯ ಗೆಳೆಯ

  ಹನುಮಂತ ಮತ್ತು ಸುಗ್ರೀವನ ಗೆಳೆತನವು ಗಾಳಿ ಮತ್ತು ಬೆಂಕಿಯಂತಿತ್ತು. ತುಂಬಾ ಕಠಿಣ ಸಮಯದಲ್ಲಿ ಹನುಮಂತನು ಸುಗ್ರೀವನ ಕೈಬಿಡಲಿಲ್ಲ. ಆತನು ತನ್ನ ಗೆಳೆಯನಿಗೆ ಕಷ್ಟ ಹಾಗೂ ಸುಖದಲ್ಲಿ ಭಾಗಿಯಾಗಿದ್ದಾನೆ.

   ಹನುಮಂತ ಒಳ್ಳೆಯ ರಾಜತಾಂತ್ರಿಕ

  ಹನುಮಂತ ಒಳ್ಳೆಯ ರಾಜತಾಂತ್ರಿಕ

  ರಾಮನಿಗೆ ಹನುಮಂತನ ರಾಜತಾಂತ್ರಿಕತೆ ಮತ್ತು ಜ್ಞಾನದಲ್ಲಿ ಹೆಚ್ಚಿನ ನಂಬಿಕೆಯಿತ್ತು. ರಾವಣನ ಸೋದರ ವಿಭಿಷಣ ರಾಮನ ಬಳಿಗೆ ಬಂದಾಗ ಆತನನ್ನು ಸ್ನೇಹಿತನಾಗಿ ಸ್ವೀಕರಿಸಬೇಕೇ ಅಥವಾ ಬೇಡವೇ ಎನ್ನುವ ಗೊಂದಲವಿತ್ತು. ವಿಭಿಷಣನನ್ನು ಗೆಳೆಯನಂತೆ ಸ್ವೀಕರಿಸುವಂತೆ ಹೇಳಿದ ಹನುಮಂತ ತನ್ನ ರಾಜತಾಂತ್ರಿಕತೆ ತೋರಿಸಿದ. ಇದರಿಂದಾಗಿ ರಾವನನ್ನು ಕೊಲ್ಲಲು ವಿಭಿಷಣನ ಪಾತ್ರ ತುಂಬಾ ಮಹತ್ವದ್ದಾಗಿತ್ತು. ಹನುಮಂತನು ಲಂಕೆಗೆ ಬೆಂಕಿಯನ್ನಿಟ್ಟನು. ಇದು ಒಂದು ರಾಜಕೀಯ ನಡೆ. ಇದರಿಂದಾಗಿ ಹನುಮಂತನು ಅರ್ಧ ಯುದ್ಧ ಗೆದ್ದುಕೊಂಡಿದ್ದ.

  English summary

  Hanuman Jayanti- HANUMAN Devotees Must Know these things

  Hanuman Jayanti is the birthday of Lord Hanuman and it is observed on the full moon (Purnima) day in the Hindu month of Chaitra (March – April) as per traditional lunar Hindu calendar. Let us recollect the following inspirational characteristics of Lord Hanuman on His birthday.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more