Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಗುರು ಪೂರ್ಣಿಮೆ ವಿಶೇಷ: ರಾಶಿಗೆ ಅನುಗುಣವಾಗಿ ಗುರುಗಳಿಗೆ ಉಡುಗೊರೆ ನೀಡಿ
'ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ, ಗುರು ಸಾಕ್ಷಾತ್ ಪರಬ್ರಹ್ಮ... ತಸ್ಮೈ ಶ್ರೀ ಗುರುವೇ ನಮಃ' ಈ ಸಾಲುಗಳನ್ನು ಓದಿದಾಗ ಪ್ರತಿಯೊಬ್ಬರಿಗೂ ತಮಗೆ ಮಾರ್ಗದರ್ಶಕರಾದ ಗುರುವಿನ ನೆನಪು ಬರುವುದು ಸಹಜ. ಗುರುವೇ ದೇವರೆಂದು ಭಾವಿಸುವ ಕಾಲವೊಂದಿತ್ತು. ಅಂತಹ ಗುರುವನ್ನು ಇಂದಿನ ದಿನಗಳಲ್ಲಿ ತುಂಬಾ ಕೆಟ್ಟದಾಗಿ ಬಿಂಬಿಸಲಾಗುತ್ತಿದೆ. ಇದಕ್ಕೆ ಕಾರಣಗಳು ಏನೇ ಇದ್ದರೂ ಗುರುವಿನ ಸ್ಥಾನ ಪೂಜ್ಯನೀಯ.
ಹಿಂದೂ ಪಂಚಾಂಗದಲ್ಲಿ ಬರುವಂತಹ ಗುರು ಪೂರ್ಣಿಮೆಯಂದು ಗುರುವಿಗೆ ಗೌರವ ಸಲ್ಲಿಸುವುದು ಪ್ರಮುಖವಾಗಿರುವುದು. ಜುಲೈ 27, ಶುಕ್ರವಾರ ಗುರುಪೂರ್ಣಿಮೆ. ಈ ದಿನವನ್ನು ಮಹಾಭಾರತ ಬರೆದಿರುವ ಗುರು ವೇದವ್ಯಾಸರ ಹುಟ್ಟುಹಬ್ಬ ಮಾತ್ರವಲ್ಲದೆ ಇದೇ ದಿನ ಶಿವ ದೇವರು ಸಪ್ತರ್ಷಿಗಳಿಗೆ ಏಳು ವಿಧದ ಯೋಗದ ಮೂಲವನ್ನು ಹೇಳಿಕೊಟ್ಟ, ಭಗವಾನ್ ಬುದ್ಧ ಮೊದಲ ಸಲ ಧರ್ಮಮೋಪದೇಶ ಮಾಡಿದ ದಿನ. ಇದೇ ದಿನ 24ನೇ ತೀರ್ಥಂಕರರಾಗಿದ್ದ ಭಗವಾನ್ ಮಹಾವೀರರು ಗೌತಮ ಸ್ವಾಮಿಯನ್ನು ಮೊದಲ ಶಿಷ್ಯನಾಗಿ ಸ್ವೀಕರಿಸಿದ ದಿನ.

ಈ ದಿನ ಗುರುಗಳಿಗೆ ಗೌರವ ಸಲ್ಲಿಸುವ ದಿನವಾಗಿದೆ. ಇದು ಕೇವಲ ಹಿಂದೂ ಧರ್ಮದಲ್ಲಿ ಮಾತ್ರವಲ್ಲದೆ, ಬೌದ್ಧ ಮತ್ತು ಜೈನ ಧರ್ಮದಲ್ಲೂ ಪ್ರಚಲಿತದಲ್ಲಿದೆ. ಗುರುಗಳೆಂದು ಪರಿಗಣಿಸಲಾಗಿರುವಂತಹ ಮೂರ್ತಿಗಳನ್ನು ಈ ದಿನ ಪೂಜಿಸಲಾಗುತ್ತದೆ. ಈ ದಿನ ಗುರುವಿಗೆ ಉಡುಗೊರೆ ಕೊಡುವ ದಿನವಾಗಿದೆ.
ಗುರುಪೂರ್ಣಿಮೆಯ ಮಹತ್ವ
ಹಿಂದೂಗಳಿಗಾಗಿ, ಗುರುಪೂರ್ಣಿಮೆಯಂದು ಚಾತುರ್ಮಾಸ ಆರಂಭವಾಗುತ್ತದೆ. ರೈತರಿಗೆ ಈ ದಿನ ಅತ್ಯಂತ ಮಹತ್ವದ್ದಾಗಿದೆ. ಮಳೆಗಾಲದ ಪ್ರಾರಂಭವನ್ನು ಸೂಚಿಸುವ ಗುರುಪೂರ್ಣಿಮೆ ದವಸ ಧಾನ್ಯಗಳ ಬೆಳೆಯುವಿಕೆ ಅತೀ ಮುಖ್ಯವಾದ ಸಮಯವಾಗಿದೆ. ಬೇಸಿಗೆಯ ತಾಪದಿಂದ ತಂಪಿನ ಅನುಭೂತಿಯನ್ನು ನಮಗೆ ನೀಡುವ ಮಾನ್‌ಸೂನ್ ಅಥವಾ ಮಳೆಗಾಲ ನಿಮ್ಮ ಆಧ್ಯಾತ್ಮಿಕ ಪಾಠಗಳನ್ನು ಪ್ರಾರಂಭಿಸಲು ಮುಖ್ಯವಾದ ದಿನಗಳಾಗಿವೆ. ಆದ್ದರಿಂದ ಗುರುಪೂರ್ಣಿಮೆಯಂದು ಸ್ವಲ್ಪ ಹೊತ್ತನ್ನು ಗುರುವಿಗಾಗಿ ಮೀಸಲಿಟ್ಟು ನಿಮ್ಮನ್ನು ಜ್ಞಾನದ ಕಡೆಗೆ ಕೊಂಡೊಯ್ದ ಆ ಮಹಾನ್ ಚೇತನಕ್ಕೆ ನಮಸ್ಕರಿಸಿ. ಬನ್ನಿ ಇಂದಿನ ಲೇಖಲನದಲ್ಲಿ ನಿಮ್ಮ ರಾಶಿಗೆ ಅನುಗುಣವಾಗಿ ಗುರಿವಿಗೆ ಯಾವ ರೀತಿಯ ಉಡುಗೊರೆ ಕೊಡಬಹುದು ಎಂದು ನೀವು ಈ ಲೇಖನದ ಮೂಲಕ ತಿಳಿಯಿರಿ.

ಮೇಷ
ಮೇಷ ರಾಶಿಯು ಮಂಗಳನಿಗೆ ಸಂಬಂಧಿಸಿದ್ದಾಗಿದೆ. ಮೇಷ ರಾಶಿಯವರಾಗಿದ್ದರೆ ನಿಮ್ಮ ಗುರುವಿಗೆ ಕೆಂಪು ಹವಳ ಉಡುಗೊರೆ ನೀಡಬಹುದು. ಧಾನ್ಯಗಳು ಮತ್ತು ಧಾನ್ಯಗಳಿಂದ ಮಾಡಿರುವಂತಹ ವಸ್ತುಗಳನ್ನು ಆಧ್ಯಾತ್ಮಿಕ ಗುರುಗಳಿಗೆ ನೀಡಬಹುದು.

ವೃಷಭ
ವೃಷಭ ರಾಶಿಯು ಶುಕ್ರನಿಗೆ ಸಂಬಂಧಿಸಿದ್ದಾಗಿದೆ. ಶುಕ್ರನ ದಿನವಾದ ಶುಕ್ರವಾರದಂದು ಗುರುಪೂರ್ಣಿಮೆ ಆಚರಿಸಲ್ಪಡುವ ಕಾರಣದಿಂದಾಗಿ ಬೆಳ್ಳಿಯಿಂದ ಮಾಡಿರುವಂತಹ ಯಾವುದಾದರೂ ವಸ್ತುವನ್ನು ಗುರುವಿಗೆ ಉಡುಗೊರೆ ನೀಡಿ. ಬೆಳ್ಳಿ ನಾಣ್ಯ, ಬೆಳ್ಳಿ ಉಂಗುರ ಅಥವಾ ಬೆಳ್ಳಿ ತುಂಡು ಕೂಡ ಆಗಬಹುದು.

ಮಿಥುನ
ಬುಧನು ಈ ರಾಶಿಗೆ ಸಂಬಂಧಿಸಿದವನಾಗಿರುವನು. ಗುರು ಪೂರ್ಣಿಮೆಯ ದಿನದಂದು ಗುರುಗಳಿಗೆ ಶಾಲು ಉಡುಗೊರೆ ಕೊಟ್ಟರೆ ಅದರಿಂದ ಆಶೀರ್ವಾದ ಸಿಗುವುದು. ಒಳ್ಳೆಯ ಶಾಲು ಖರೀದಿಸಿ, ಅದನ್ನು ನಿಮ್ಮ ಶಿಕ್ಷಕರಿಗೆ ನೀಡಿ.

ಕರ್ಕಾಟಕ
ಈ ರಾಶಿಯು ಚಂದ್ರನಿಗೆ ಸಂಬಂಧಪಟ್ಟಿರುವುದು. ಧಾನ್ಯಗಳಿಂದ ಮಾಡಿರುವಂತಹ ವಸ್ತುಗಳನ್ನು ಗುರುವಿಗೆ ನೀಡಿದರೆ ತುಂಬಾ ಲಾಭಕಾರಿಯಾಗಿರುವುದು. ಸಿಹಿತಿಂಡಿ ಉಡುಗೊರೆ ನೀಡುವುದು ಒಳ್ಳೆಯ ಆಯ್ಕೆ. ಅಕ್ಕಿಯಿಂದ ಮಾಡಿರುವಂತಹ ತಿಂಡಿಗೆ ಪ್ರಾಮುಖ್ಯತೆ ನೀಡಿ.

ಸಿಂಹ
ಸಿಂಹ ರಾಶಿಗೆ ಸಂಬಂಧಪಟ್ಟಿರುವುದು ಸೂರ್ಯ. ಇದರಿಂದ ಈ ರಾಶಿಯಲ್ಲಿ ಹುಟ್ಟಿರುವಂತಹ ಜನರು ಪಂಚಧಾತುವಿನಿಂದ ಮಾಡಿರುವಂತಹ ವಸ್ತುಗಳನ್ನು ಗುರುವಿಗೆ ಉಡುಗೊರೆ ನೀಡಿ, ಆಶೀರ್ವಾದ ಪಡೆಯಿರಿ. ಪಂಚಧಾತು ಎನ್ನುವುದು ಸಂಸ್ಕೃತ ಪದ. ಐದು ಲೋಹಗಳಿಂದ ಮಾಡಿರುವುದು. ಹಿತ್ತಳೆ, ತಾಮ್ರ, ಸತು ಮತ್ತು ಅಲುಮೀನಿಯಂ.

ಕನ್ಯಾ
ಈ ರಾಶಿಯು ಬುಧನಿಗೆ ಸಂಬಂಧಪಟ್ಟಿರುವುದು. ಈ ರಾಶಿಯವರು ತಮ್ಮ ಗುರುವಿಗೆ ವಜ್ರವನ್ನು ಉಡುಗೊರೆ ನೀಡಬೇಕು. ಇದು ಎಲ್ಲರಿಗೂ ಸಾಧ್ಯವಿಲ್ಲದೆ ಇರುವ ಕಾರಣದಿಂದ ವಜ್ರದ ಆಕಾರದ ಉಡುಗೊರೆ ನೀಡಿ.

ತುಲಾ
ಈ ರಾಶಿಗೆ ಅಧಿಪತಿಯು ಶುಕ್ರ. ಈ ರಾಶಿಯವರು ತಮ್ಮ ಗುರುವಿಗೆ ಕಂಬಳಿಯನ್ನು ನೀಡಬೇಕು.

ವೃಶ್ಚಿಕ
ಈ ರಾಶಿಯು ಮಂಗಳನಿಗೆ ಸಂಬಂಧಿಸಿದ್ದಾಗಿದೆ. ಪ್ಲೂಟೋ ಕೂಡ ಈ ರಾಶಿಯ ಅಧಿಪತಿ ಎಂದು ಹೇಳಲಾಗುತ್ತದೆ. ಗುರುಪೂರ್ಣಿಮೆಯಂದು ಶಿಕ್ಷಕರ ಆಶೀರ್ವಾದ ಪಡೆಯಲು ನೀವು ಮಾಣಿಕ್ಯ ರತ್ನಗಳನ್ನು ಉಡುಗೊರೆ ನೀಡಬಹುದು.

ಧನು
ಈ ರಾಶಿಗೆ ಗುರು ಅಧಿಪತಿಯಾಗಿರುವನು. ಬಂಗಾರದ ಉಡುಗೊರೆ ನೀಡಿದರೆ ಆಗ ಗುರುವಿನ ಆಶೀರ್ವಾದ ಸಿಗುವುದು. ಬ್ರಹಸ್ಪತಿ ಈ ಗ್ರಹದ ದೇವರು ಮತ್ತು ಇವರನ್ನು ಎಲ್ಲಾ ದೇವರುಗಳ ಗುರು ಎಂದು ಪರಿಗಣಿಸಲಾಗಿದೆ. ಇದರಿಂದ ಬಂಗಾರ ಉಡುಗೊರೆ ನೀಡಿದರೆ ಬ್ರಹ್ಮಸ್ಪತಿ ದೇವರ ಆಶೀರ್ವಾದವು ಸಿಗುವುದು.

ಮಕರ
ಮಕರ ರಾಶಿಗೆ ಶನಿಯು ಅಧಿಪತಿ. ಗುರುಪೂರ್ಣಿಮೆಯ ದಿನದಂದು ಈ ರಾಶಿಯವರು ತಮ್ಮ ಗುರುವಿಗೆ ಹಳದಿ ಬಣ್ಣದ ಉಡುಗೊರೆಗಳನ್ನು ನೀಡಬೇಕು.

ಕುಂಭ
ಯುರೇನಸ್ ಈ ರಾಶಿಯ ಅಧಿಪತಿಯಾಗಿರುವ. ಈ ರಾಶಿಯವರು ತಮ್ಮ ಶಿಕ್ಷಕರಿಗೆ ಬಿಳಿ ಬಣ್ಣದ ಉಡುಗೊರೆಗಳನ್ನು ನೀಡಬೇಕು. ಇದು ಬಟ್ಟೆ, ಅಂಗಿ ಅಥವಾ ಬಿಳಿ ಬಣ್ಣದ ಪಾದರಕ್ಷೆಯಾಗಿರಬಹುದು.

ಮೀನ
ನೆಪ್ಚೂನ್ ಈ ರಾಶಿಯ ಅಧಿಪತಿ. ಮೀನ ರಾಶಿಯವರು ತಮ್ಮ ಗುರುಗಳಿಗೆ ಧಾನ್ಯಗಳಿಂದ ಮಾಡಿರುವಂತಹ ಸಿಹಿ ತಿನಿಸುಗಳನ್ನು ಉಡುಗೊರೆಯಾಗಿ ನೀಡಬೇಕು. ಗುರುಗಳಿಗೆ ಉಡುಗೊರೆ ಕೊಡುವ ಜತೆಗೆ ಗುರು ಪೂರ್ಣಿಮೆಯ ದಿನ ಬಡವರಿಗೆ ದಾನ ಮಾಡಿದರೆ ಈಶ್ವರ ದೇವರ ಆಶೀರ್ವಾದ ಸಿಗುವುದು.



Click it and Unblock the Notifications