Latest Updates
-
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ!
ಮಂಗಳ ಗೌರಿ ವ್ರತ ಮಾಡುವುದು ಹೇಗೆ? ಈ ವರ್ಷ 9 ವಾರ ಗೌರಿ ವ್ರತ ಆಚರಿಸಬಹುದು ನೋಡಿ!
ಈ ವರ್ಷ ಶ್ರಾವಣ ಮೊದಲ ದಿನ ಶ್ರಾವಣ ಮಂಗಳವಾರದಿಂದಲೇ ಶುರುವಾಗಲಿದೆ. ಶ್ರಾವಣ ಮಂಗಳವಾರ ಎಂದರೆ ಹೆಣ್ಮಕ್ಕಳಿಗೆ ಸಡಗರ, ಸಂಭ್ರಮ, ಏಕೆಂದರೆ ಈ ದಿನ ಮಂಗಳಗೌರಿ ವ್ರತ ಪ್ರಾರಂಭ, ಮಂಗಳ ಗೌರಿ ವ್ರತದ ಆಚರಣೆಯ ವಿಧಿ ವಿಧಾನಗಳೇನು? ಈ ದಿನ ಯಾವ ಮಂತ್ರಗಳನ್ನು ಪಠಿಸಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ:

ಮಂಗಳ ಗೌರಿ ವ್ರತದ ನಿಯಮಗಳು
* ಬೆಳಗ್ಗೆ ಬೇಗನೆ ಎದ್ದೇಳಿ
ಪ್ರತಿ ಶ್ರಾವಣ ಮಂಗಳ ಬೆಳಗ್ಗೆ ಬೇಗನೆ ಅಂದರೆ ಬ್ರಹ್ಮ ಮುಹೂರ್ತದಲ್ಲಿ ಎದ್ದೇಳಿ. ನಂತರ ಸ್ನಾನ ಮಾಡಿ,ಮನೆ ಹಾಗೂ ದೇವರ ಕೋಣೆಯನ್ನು ಸ್ವಚ್ಛಗೊಳಿಸಿ.
* ನಂತರ ಹಲಗೆಯ ಮೇಲೆ ಕೆಂಪು ಬಟ್ಟೆ ಹಾಸಿ ತಾಯಿ ಮಂಗಳ ಗೌರಿ ಅಥವಾ ಪಾರ್ವತಿ ದೇವಿಯ ಫೋಟೋವನ್ನು ಇಟ್ಟು, ಹೂಗಳು ಹಾಗೂ ಆಭರಣಗಳಿಂದ ಅಲಂಕರಿಸಿ,
* ದೇವಿಗೆ ಹಿಟ್ಟಿನಿಂದ ಮಾಡಿದ ದೀಪಕ್ಕೆ ತುಪ್ಪವನ್ನು ಬೆಳಗಬೇಕು.
* ತಟ್ಟೆಯಲ್ಲಿ 16 ವೀಳ್ಯೆದೆಲೆ, 16 ಬಳೆಗಳು, 16 ಲವಂಗ, ಏಲಕ್ಕಿ, 16 ಬಗೆಯ ಹಣ್ಣುಗಳು ಇವೆಲ್ಲಾ (16 ಸಂಖ್ಯೆಯಲ್ಲಿ ಇಡಿ), 5 ಬಗೆಯ ಒಣ ಹಣ್ಣುಗಳು, 7 ಬಗೆಯ ಧಾನ್ಯಗಳನ್ನು ಇಡಬೇಕು.
* ದೇವಿಗೆ ನೈವೇದ್ಯ ಅರ್ಪಿಸಿ ಪೂಜಿಸಿ
* ದೇವಿಯ ಹಾಡುಗಳು ಅಥವಾ ಮಂತ್ರಗಳನ್ನು ಹೇಳಿ
* ನಂತರ ಮುತ್ತೈದೆಯರಿಗೆ ತಾಂಬೂಲ ನೀಡಲಾಗುವುದು.
ಮನೆಯವರಿಗೆ ಐಶ್ವರ್ಯ ಹಾಗೂ ಆರೋಗ್ಯ ಕರುಣಿಸಲು ಮಾಡುವ ವ್ರತ
ಈ ದಿನ ಮನೆಯ ಹೆಣ್ಮಕ್ಕಳು ಕೂಡ ತುಂಬಾ ಸಂಪ್ರದಾಯಕವಾಗಿ ಉಡುಗೆ ತೊಡುಗೆ ಕೊಟ್ಟು ಈ ಪೂಜೆಯನ್ನು ಮಾಡುತ್ತಾರೆ. ಈ ದಿನ ಗೌರಿಯನ್ನು ಪೂಜಿಸುವುದರಿಂದ ಮನೆಯವರಿಗೆ , ಗಂಡನಿಗೆ, ಮಕ್ಕಳಿಗೆ ಆರೋಗ್ಯ, ಐಶ್ವರ್ಯ ಲಭಿಸುತ್ತದೆ, ಮನೆಗೆ ಶ್ರೇಯಸ್ಸು ಉಂಟಾಗುತ್ತದೆ ಎಂಬ ನಂಬಿಕೆ ಈ ವ್ರತವನ್ನು ಮಾಡಲಾಗುವುದು.
ಮಂಗಳ ಗೌರಿ ವ್ರತವನ್ನು ಯಾರು ಮಾಡುತ್ತಾರೆ?
ಮಂಗಳಗೌರಿ ವ್ರತವನ್ನು ಹೊಸದಾಗಿ ಮದುವೆಯಾದ ಹೆಣ್ಮಕ್ಕಳು ಹಾಗೂ ಮದುವೆಯಾಗಿ 5 ವರ್ಷ ತುಂಬಿರದ ಹೆಣ್ಮಕ್ಕಳು ಈ ವ್ರತವನ್ನು ಮಾಡುತ್ತಾರೆ. ಇದನ್ನು ಪ್ರತಿ ಶ್ರಾವಣ ಮಂಗಳವಾರ ಮಾಡಲಾಗುವುದು, ಮಂಗಳವಾರ ಸಾಧ್ಯವಾಗದಿದ್ದರೆ ಶುಕ್ರವಾರ ಮಾಡಲಾಗುವುದು.
ಈ ವರ್ಷ ಅಧಿಕ ಶ್ರಾವಣ ಮಾಸವಿರುವುದರಿಂದ 5 ವಾರಕ್ಕಿಂತ ಹೆಚ್ಚು ಮಂಗಳ ಗೌರಿ ವ್ರತ ಆಚರಿಸಬಹುದು.
ಜುಲೈ 18ರಂದು ಮಂಗಳ ಗೌರಿ ವ್ರತ ಪ್ರಾರಂಭ
ಆಗಸ್ಟ್ 8
ಆಗಸ್ಟ್ 15
ಆಗಸ್ಟ್ 22
ಆಗಸ್ಟ್ 29
ಸೆಪ್ಟೆಂಬರ್ 5
ಸೆಪ್ಟೆಂಬರ್ 12ಕ್ಕೆ ಮಂಗಳ ಗೌರಿ ವ್ರತ ಮುಕ್ತಾಯ.
ಈ ದಿನ ಈ ಮಂತ್ರಗಳನ್ನು ಪಠಿಸಿ
''ಓಂ ಉಮಾಮಹೇಶ್ವರಾಭ್ಯಂ ನಮಃ''
''ಓಂ ಪಾರ್ವತ್ಯೈ ನಮಃ''
ಓಂ ಗೌರ್ಯೇ ನಮಃ''
''ಓ ಸಾಂಬ ಶಿವಾಯ ನಮಃ''
''ಹೇ ಗೌರೀ ಶಂಕರಾರ್ಧಾಂಗೀ ಯಥಾ ತ್ವಂ ಶಂಕರ ಪ್ರಿಯಾ''
''ತಥಾ ಮಾಂ ಕುರೂ ಕಲ್ಯಾಣೀ, ಕಾಂತ ಕಾಂತಾಂ ಸುದುರ್ಲಭಾಂ''
''ಓಂ ಹ್ಲೀಂ ವಾಗ್ವಾದಿನೀ ಭಗವತೀ ಮಮಂ ಕಾರ್ಯ ಸಿದ್ಧಿ ಕುರೂ ಕುರೂ ಫಟ್ ಸ್ವಾಹಾ''



Click it and Unblock the Notifications
