Latest Updates
-
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ
2022ರಲ್ಲಿ ಗಂಗಾ ದಸರಾ ಯಾವಾಗ? ಇದರಲ್ಲಿ 10 ಸಂಖ್ಯೆಯ ಮಹತ್ವ ಗೊತ್ತೇ?
ಭಾರತದ ಪವಿತ್ರ ನದಿಗಳಲ್ಲಿ ಪ್ರಮುಖವಾದ ನದಿ ಗಂಗಾ, ಹಿಂದೂ ಧರ್ಮದಲ್ಲಿ ಗಂಗಾ ಸ್ನಾನ, ಗಂಗಾ ತೀರ್ಥ, ಅಲ್ಲಿ ಮಾಡುವ ಪೂಜೆ, ಪುರಸ್ಕಾರಗಳಿಗೆ ಅದರದ್ದೇ ಆದ ಮಹತ್ವವಿದೆ, ಅದರಲ್ಲೊಂದು ಗಂಗಾ ದಸರಾ ಆಚರಣೆ. 2022ರಲ್ಲಿ ಗಂಗಾ ದಸರಾ ಯಾವಾಗ ಆಚರಿಸಲಾಗುವುದು?
ಗಂಗಾ ಆರತಿಗೆ ಶುಭ ಸಮಯ ಯಾವಾಗ, ಈ ಆಚರಣೆಯಲ್ಲಿ 10 ಸಂಖ್ಯೆಯ ಪ್ರಾಮುಖ್ಯತೆ ಇವುಗಳ ಬಗ್ಗೆ ತಿಳಿಯೋಣ:

ಪೌರಾಣಿಕ ನಂಬಿಕೆಗಳ ಪ್ರಕಾರ, ಜ್ಯೇಷ್ಠ ತಿಂಗಳ ಶುಕ್ಲ ಪಕ್ಷದ ಹತ್ತನೇ ದಿನ ಭಗೀರಥ ಋಷಿಯ ದಣಿವರಿಯದ ಶ್ರಮದಿಂದಾಗಿ ಗಂಗಾ ಮಾತೆ ಭೂಮಿಗೆ ಬರುತ್ತಾಳೆ. ಗಂಗೆ ಭೂಮಿಗೆ ಬಂದು ಭೂಮಿಯನ್ನು ಪಾವನ ಮಾಡಿದ ದಿನವನ್ನು ಗಂಗಾ ದಸರಾವನ್ನಾಗಿ ಆಚರಿಸಲಾಗುವುದು. ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಸಕಲ ಪಾಪಗಳು ತೊಳೆದು ಹೋಗಿ , ಪುಣ್ಯ ದೊರೆಯುತ್ತದೆ ಎಂಬ ನಂಬಿಕೆಯಿಂದ ಲಕ್ಷಾಂತರ ಭಕ್ತರು ಗಂಗಾ ನದಿಯಲ್ಲಿ ಮಿಂದು ಪೂಜೆ ಸಲ್ಲಿಸುತ್ತಾರೆ.

ಗಂಗಾ ದಸರಾ 2022ರ ಶುಭ ಸಮಯ:
ದಶಮಿ ತಿಥಿ ಪ್ರಾರಂಭ: ಜೂನ್ 09, 2022 ಬೆಳಗ್ಗೆ 08:21ಕ್ಕೆ
ದಶಮಿ ತಿಥಿ ಮುಕ್ತಾಯ: ಜೂನ್ 10, 2022 ಬೆಳಗ್ಗೆ 07:25ಕ್ಕೆ
ಹಸ್ತ ನಕ್ಷತ್ರ ಪ್ರಾರಂಭ: ಜೂನ್ 09, 2022 ಬೆಳಗ್ಗೆ 04:31ಕ್ಕೆ
ಹಸ್ತ ನಕ್ಷತ್ರ ಮುಕ್ತಾಯ: ಜೂನ್ 10, 2022 ಬೆಳಗ್ಗೆ 04:26ಕ್ಕೆ
ಜ್ಯೋತಿಪದ ಯೋಗ ಪ್ರಾರಂಭ: ಜೂನ್ 9, 2022 ಬೆಳಗ್ಗೆ 03:27ಕ್ಕೆ
ಜ್ಯೋತಿಪದ ಯೋಗ ಮುಕ್ತಾಯ:ಜೂನ್ 10, 2022 ಬೆಳಗ್ಗೆ 01:50ಕ್ಕೆ

ಪೂಜಾ ವಿಧಾನ
* ಗಂಗಾ ದಸರಾ ದಿನದಂದು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಗಂಗಾ ನದಿಯಲ್ಲಿ ಮುಳುಗಿ ಏಳಬೇಕು.
* ನಿಮಗೆ ಗಂಗೆಗೆ ಹೋಗಲು ಸಾಧ್ಯವಾಗದಿದ್ದರೆ ನೀವು ಮನೆಯಲ್ಲಿ ಮಾಡುವ ಸ್ನಾನ ನೀರಿಗೆ ಸ್ವಲ್ಪ ಗಂಗಾ ಜಲ ಸೇರಿಸಿ ಸ್ನಾನ ಮಾಡಿ.
* ನಂತರ ಸೂರ್ಯನಿಗೆ ಆರ್ಘ್ಯವನ್ನು ಸೇರಿಸಿ.
* ಸೂರ್ಯನಿಗೆ ಆರ್ಘ್ಯ ಸಲ್ಲಿಸುವಾಗ ತಾಮ್ರದ ಜೊಂಬಿನಲ್ಲಿ ನೀರು ತೆಗೆದುಕೊಂಡು ಅದಕ್ಕೆ ಗಂಗಾ ಜಲ ಬೆರೆಸಿ ಆ ನೀರನ್ನು ಸೂರ್ಯ ದೇವನಿಗೆ ಅರ್ಪಿಸಿ.
ಅದರ ನಂತರ ದೇವರ ಮನೆಗೆ ಆ ನೀರನ್ನು ಸಿಂಪರಿಸಬೇಕು, ಮನೆಯೊಳಗಡೆ ಆ ಪವಿತ್ರ ನೀರನ್ನು ಸಿಂಪಡಿಸಿ. ನಂತರ ಗಂಗಾ ಪೂಜೆ ಮಾಡಬೇಕು.
* ಗಂಗಾ ನದಿ ತೀರದಲ್ಲಿ ಭಕ್ತರು ಜ್ಯೋತಿ ಪದ ಯೋಗದಲ್ಲಿ ಗಂಗಾ ಆರತಿ ಬೆಳಗುತ್ತಾರೆ.

ಗಂಗಾ ಪೂಜೆಯಲ್ಲಿ 10 ಸಂಖ್ಯೆಗೆ ವಿಶೇಷ ಸ್ಥಾನವಿದೆ
* ಹತ್ತು ದಿನ ಭಕ್ತರು ಗಂಗೆಗೆ ಪೂಜೆಗೆ ಸಲ್ಲಿಸುತ್ತಾರೆ
* ಗಂಗಾ ಸ್ನಾನ ಮಾಡುವುದರಿಂದ ಹತ್ತು ಪಾಪಗಳಿಂದ ಮುಕ್ತಿ ಪಡೆಯಬಹುದು.
* ಬೆಳಗ್ಗೆ 10 ಬಗೆಯ ಪದ್ಧತಿಯಲ್ಲಿ ಗಂಗೆಯನ್ನು ಪೂಜಿಸಿದರೆ ಮೋಕ್ಷ ದೊರೆಯುವುದು
* ಗಂಗೆಗೆ ಪ್ರಿಯವಾದ ಹತ್ತು ಬಗೆಯ ಹೂ, ಹಣ್ಣುಗಳನ್ನು ಇಟ್ಟು ಪೂಜಿಸಲಾಗುವುದು.
* ಗಂಗೆ ಪೂಜೆಯಲ್ಲಿ ಬಡವರಿಗೆ 10 ಬಗೆಯ ತಿನಿಸುಗಳನ್ನು ನೀಡಲಾಗುವುದು
* ಗಂಟೆಗಳ ಕಾಲ ನೀರು ಸಹ ಸೇವಿಸದೆ ಉಪವಾಸವ್ರತ ಪಾಲಿಸಿದರೆ ಒಳ್ಳೆಯದು.
* ಗಂಗಾ ನದಿ ಹಿಮಾಚಲ ಪ್ರದೇಶ, ಉತ್ತರಖಾಂಡ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಚತ್ತೀಸ್‌ಗಢ, ಬಿಹಾರ, ಜಾರ್ಖಂಡ್, ಹರಿಯಾಣ, ರಾಜಸ್ಥಾನ, ಪಶ್ಚಿಮ ಬಂಗಾಳ ಹೀಗೆ 10 ರಾಜ್ಯಗಳಲ್ಲಿ ನಡೆಯುತ್ತದೆ.
* 10 ಬಿದಿರಿನ ಕಡ್ಡಿಯಿಂದ ಗಂಗೆ ನದಿ ತೀರದಲ್ಲಿ ಗಂಗೆಗೆ ಚಿಕ್ಕ ಮಂದಿರ ಕಟ್ಟಿ ಪೂಜೆ ಸಲ್ಲಿಸುತ್ತಾರೆ
ಗಂಗಾ ದಸರಾ ಮಹತ್ವ ಗಂಗಾ ದಸರಾ ದಿನದಂದು, ಯಾರು ಗಂಗಾ ನದಿಯಲ್ಲಿ ಅಥವಾ ಯಾವುದೇ ಪವಿತ್ರ ನದಿ ಅಥವಾ ಕೊಳದಲ್ಲಿ ಸ್ನಾನ ಮಾಡಿ ತನ್ನ ಯೋಗ್ಯತೆಗೆ ಅನುಗುಣವಾಗಿ ದಾನ ಮಾಡಿದರೆ, ಅವನು ತನ್ನ ಎಲ್ಲಾ ಪಾಪಗಳಿಂದ ಮುಕ್ತಿ ಪಡೆಯುತ್ತಾನೆ. ತಾಯಿಯ ಗಂಗೆಯ ಆರಾಧನೆಯಿಂದ ಮೋಕ್ಷ ಸಿಗುವುದು.



Click it and Unblock the Notifications
