ನರಮುಖ ಗಣಪತಿಯ ಈ ದೇಗುಲದಲ್ಲಿದೆ ಪಿತೃದೋಷಕ್ಕಿದೆ ಪರಿಹಾರ.

ಪ್ರತಿ ಶುಭಕಾರ್ಯದ ಮೊದಲ ಪೂಜೆ ಗಣೇಶನಿಗೆ ಸಲ್ಲಬೇಕು. ಗಣೇಶನು ಶಿವ ಹಾಗೂ ಪಾರ್ವತಿಯ ಮುದ್ದಿನ ಮಗ. ಗಣೇಶನಿಗೆ ಸುಮುಖ, ಏಕದಂತ, ಕಪಿಲ, ಗಜಕರ್ಣ, ಲಂಬೋಧರ, ವಿಕತ, ವಿನಾಯಕ, ಧುಮ್ರಕೇತು, ಗಣಾಧ್ಯಕ್ಷ, ಬಾಲಚಂದ್ರ ಹಾಗೂ ಗಜಾನನ ಹೀಗೆ ಹಲವಾರು ಹೆಸರುಗಳಿಂದ ನಾವು ಆತನನ್ನು ಸಂಭೋದಿಸುತ್ತೇವೆ.

Ganesha Worshipped in Man Form; Adi Vinayaka Temple Thilatharpanapuri Tamilnadu History and Significance in Kannada

ಸಾಮಾನ್ಯವಾಗಿ ವಿನಾಯಕ ಅಂದ ತಕ್ಷಣ ನಮಗೆ ತಕ್ಷಣ ನೆನಪಾಗೋದು ದೊಳ್ಳು ಹೊಟ್ಟೆ ಹಾಗೂ ಆತನ ಸೊಂಡಿಲು. ಆದರೆ ನೀವೆಲ್ಲಿಯಾದರೂ ಮಾನವರಂತೆ ತಲೆಯನ್ನು ಹೊಂದಿರುವ ಗಣೇಶನನ್ನು ಕಂಡಿದ್ದೀರಾ. ಹೌದು, ತಮಿಳುನಾಡಿನಲ್ಲಿ ಅಂತಹದ್ದೇ ಒಂದು ದೇವಾಲಯವಿದೆ. ಅಲ್ಲಿ ನರಮುಖ ಗಣಪನನ್ನು ಆರಾಧನೆ ಮಾಡಲಾಗುತ್ತದೆ. ಹಾಗಾದರೆ ಆ ದೇವಾಲಯದ ಹಿನ್ನೆಲೆ ಏನು? ಇಲ್ಲಿ ಪಿತೃದೋಷ ಪರಿಹಾರವಾಗುತ್ತಾ? ಮಾನವರಂತೆ ತಲೆಯನ್ನು ಹೊಂದಿರುವ ವಿನಾಯಕ ಹಿಂದಿರುವ ಸ್ವಾರಸ್ಯಕರ ಸಂಗತಿಯೇನು? ಎಂಬುದರ ಬಗ್ಗೆ ತಿಳಿಸಿಕೊಡ್ತೀವಿ.

ತಮಿಳುನಾಡಿನಲ್ಲಿ ಸಿಗುತ್ತೆ ನರಮುಖ ಗಣಪನ ದರ್ಶನ

ತಮಿಳುನಾಡಿನಲ್ಲಿ ಸಿಗುತ್ತೆ ನರಮುಖ ಗಣಪನ ದರ್ಶನ

ತಮಿಳುನಾಡಿನ ತಿಲತರ್ಪಣಪುರಿಯ ಮುಕ್ತೀಶ್ವರ ದೇವಾಲಯದ ಹತ್ತಿರದಲ್ಲಿ ಆದಿ ವಿನಾಯಕನ ದೇವಾಲಯವನ್ನು ಕಾಣಬಹುದು. ಇಲ್ಲಿ ಏಕದಂತ ನೆಲೆಯಾಗಿದ್ದು, ಈ ದೇವಾಲಯ ನಿಜಕ್ಕೂ ನಮ್ಮಲ್ಲಿ ಅಚ್ಚರಿ ಮೂಡಿಸುತ್ತದೆ. ಯಾಕೆಂದ್ರೆ ಇಲ್ಲಿ ನೀವು ಮಾನವರಂತೆ ತಲೆ ಇರುವ ಗಣೇಶನನ್ನು ಕಾಣಬಹುದು. ಇಲ್ಲಿನ ವಿನಾಯಕ ಮನುಷ್ಯರಂತೆ ತಲೆಹೊಂದಿರೋದ್ರಿಂದ ಈತನನ್ನು "ನರಮುಖ ಗಣಪ" ಎಂದು ಕರೆಯಲಾಗುತ್ತದೆ. ಮಾನವ ರೂಪಿಯಾಗಿರೋ ಗಣಪನನ್ನೇ ಇಲ್ಲಿ ಭಕ್ತಿಯಿಂದ ಪೂಜೆಸಲಾಗುತ್ತದೆ.

ಇದೇ ಜಾಗದಲ್ಲಿ ದಶರಥನ ಆತ್ಮಕ್ಕೆ ಮುಕ್ತಿ

ಇದೇ ಜಾಗದಲ್ಲಿ ದಶರಥನ ಆತ್ಮಕ್ಕೆ ಮುಕ್ತಿ

ಪುರಾಣಗಳ ಪ್ರಕಾರ ಒಂದು ಬಾರಿ ಶ್ರೀ ರಾಮನು ತನ್ನ ತಂದೆಯಾದ ದಶರಥನ ಅಂತಿಮ ಕಾರ್ಯಗಳನ್ನು ಮಾಡುತ್ತಿರುತ್ತಾನೆ. ತಂದೆಯ ಪಿಂಡವನ್ನು ಮುಂದೆ ಇಟ್ಟು ಭಕ್ತಿಯಿಂದ ಆತನ ಮೋಕ್ಷಕ್ಕಾಗಿ ಬೇಡಿಕೊಳ್ಳುತ್ತಿರುತ್ತಾನೆ. ಈ ವೇಳೆ ಆ ಪಿಂಡಗಳು ಹುಳುವಾಗಿ ಮಾರ್ಪಾಡಾಗುತ್ತದೆ. ಶ್ರೀರಾಮ ಎಷ್ಟೇ ಬಾರಿ ಭಕ್ತಿಯಿಂದ ಬೇಡಿಕೊಂಡರು ಕೂಡ ಪಿಂಡಗಳು ಮತ್ತೆ ಮತ್ತೆ ಹುಳುವಿನ ರೂಪಕ್ಕೆ ತಿರುಗುತ್ತಿತ್ತು.

ಲಿಂಗಗಳಾಗಿ ಬದಲಾದ ಪಿಂಡಗಳು

ಲಿಂಗಗಳಾಗಿ ಬದಲಾದ ಪಿಂಡಗಳು

ಈ ವೇಳೆ ಶ್ರೀರಾಮ ಶಿವನ ಮೊರೆ ಹೋಗುತ್ತಾನೆ. ಆಗ ಶಿವ ಮಂಥರವನ ಅಂದರೆ ಈಗಿನ ಮುಕ್ತೀಶ್ವಕ್ಕೆ ತೆರಳಿ ಅಲ್ಲಿ ಪೂಜೆಯನ್ನು ಸಲ್ಲಿಸುವಂತೆ ಸಲಹೆ ನೀಡುತ್ತಾನೆ. ಆಗ ಮಾತ್ರ ದಶರಥನ ಆತ್ಮಕ್ಕೆ ಶಾಂತ ಸಿಗುತ್ತೆ ಎಂಬ ಸತ್ಯವನ್ನು ತಿಳಿಸುತ್ತಾನೆ. ನಂತರ ಶಿವನ ಮಾತಿನಂತೆ ಶ್ರೀರಾಮ ಇಲ್ಲಿಗೆ ಬಂದು ಪೂಜೆ ಸಲ್ಲಿಸಿದಾಗ ಆ ನಾಲ್ಕು ಪಿಂಡಗಳು ನಾಲ್ಕು ಲಿಂಗಗಳಾಗಿ ಬದಲಾಗುತ್ತದೆ. ನಂತರ ಈ ಲಿಂಗಗಳನ್ನು ಮುಕ್ತಿಶ್ವರ ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ.

ಹೌದು, ಇಂದಿಗೂ ಕೂಡ ಭಕ್ತರು ಈ ಜಾಗಕ್ಕೆ ಭೇಟಿಕೊಟ್ಟು "ಪಿತೃದೋಷ" ಕ್ಕೆ ಪರಿಹಾರ ಕಂಡುಕೊಳ್ಳುತ್ತಾನೆ. ತಿಲತರ್ಪಣಪುರಿಯು "ತಿಲ" ಹಾಗೂ "ತರ್ಪಣ" ಎಂಬು ಹೆಸರಿನಿಂದ ಈ ಹೆಸರು ಬಂದಿದೆ.

 ಇಲ್ಲಿ ಪಿತೃತರ್ಪಣ ಸಲ್ಲಿಸಿದರೆ ಮೋಕ್ಷ ಲಭಿಸುತ್ತದೆ

ಇಲ್ಲಿ ಪಿತೃತರ್ಪಣ ಸಲ್ಲಿಸಿದರೆ ಮೋಕ್ಷ ಲಭಿಸುತ್ತದೆ

ಹಿಂದೂಗಳ ಧರ್ಮಗ್ರಂಥಗಳಲ್ಲಿ ಉಲ್ಲೇಖವಾಗಿರುವಂತೆ ಏಳು ಸ್ಥಳಗಳು ಪಿತೃಗಳಿಗೆ ತರ್ಪಣ ಸಲ್ಲಿಸಲು ಯೋಗ್ಯವೆಂದು ನಂಬಲಾಗಿದೆ. ಅವುಗಳಲ್ಲಿ ಕಾಶಿ, ರಾಮೇಶ್ವರ, ಶ್ರೀವಂಚಿಯಮ್‌, ಗಯಾ, ತ್ರಿವೇಣಿ ಸಂಗಮ ಹಾಗೂ ತಿಲತರ್ಪಣಪುರಿ. ಹೌದು, ತಿಲತರ್ಪಣಪುರಿ ದೇವಾಲಯವನ್ನು ಕಾಶಿ ರಾಮೇಶ್ವರಕ್ಕೆ ಸಮನಾದ ಪವಿತ್ರ ದೇವಾಲಯ ಎಂಬ ನಂಬಿಕೆ ಕೂಡ ಇದೆ. ಅಮಾವಾಸ್ಯೆಯ ದಿನ ಇಲ್ಲಿ ತರ್ಪಣ ಸಲ್ಲಿಸುವುದರಿಂದ ಮುಕ್ತಿ ದೊರೆಯುತ್ತಂತೆ. ಇನ್ನೂ ವಿಸ್ತಾರವಾದ ಈ ಜಾಗದಲ್ಲಿ ಮುಖ್ಯ ದೇವಾಲಯದ ಹೊರಗಡೆ ಆದಿ ವಿನಾಯಕನ ದೇಗುಲವನ್ನು ಕಾಣಬಹುದು.

ಆದಿ ವಿನಾಯಕ ದೇವಾಲಯದ ವಿಶೇಷತೆಗಳು

ಆದಿ ವಿನಾಯಕ ದೇವಾಲಯದ ವಿಶೇಷತೆಗಳು

ಈ ದೇವಾಲಯದಲ್ಲಿ ಐದು ಅಡಿ ಎತ್ತರದ ಗಣೇಶನ ವಿಗ್ರವನ್ನು ನೀವು ಕಾಣಬಹುದಾಗಿದೆ. ಇನ್ನೂ ವಿನಾಯಕನ ಸೊಂಟದ ಸುತ್ತಲು ನಾಗಾಭರಣವನ್ನು ಹಾಕಲಾಗಿದೆ. ಈ ದೇವಾಲಯದ ಪೂರ್ವದಲ್ಲಿ ನೀವು ನಾಗನಂದಿಯನ್ನು ಕಾಣಬಹುದು. ಸಾಮಾನ್ಯವಾಗಿ ಶಿವನ ದೇವಾಲಯಗಳಲ್ಲಿ ನೀವು ನಂದಿಯ ವಿಗ್ರಹವನ್ನು ನೋಡುತ್ತೀರಿ ಆದ್ರೆ ವಿಶೇಷ ಅಂದ್ರೆ ಆದಿ ವಿನಾಯಕನ ದೇವಾಲಯದಲ್ಲಿ ಈ ವಿಗ್ರಹ ನಮಗೆ ಕಾಣ ಸಿಗುತ್ತದೆ.

ಒಂದೊಂದು ವಸ್ತು ಒಂದೊಂದು ಕಥೆ ಹೇಳುತ್ತದೆ

ಒಂದೊಂದು ವಸ್ತು ಒಂದೊಂದು ಕಥೆ ಹೇಳುತ್ತದೆ

ಈ ದೇವಾಲಯದ ಒಳ ಹೋದಂತೆ ಇಲ್ಲಿರುವ ಆದಿ ಗಣೇಶನ ಮೂರ್ತಿ ನಮ್ಮಲ್ಲಿ ಪೂಜ್ಯಭಾವವನ್ನು ಮೂಡಿಸುತ್ತದೆ. ಈತನ ಕೈಯಲ್ಲಿರುವ ಕೊಡಲಿಯು ಆಸೆಯನ್ನ ನಾಶಮಾಡುತ್ತೆ ಎಂದು ನಂಬಲಾಗಿದೆ. ಈ ವಿಗ್ರಹದ ಮೇಲಿರುವ ಹಗ್ಗವು ಜನರ ಸಂಕಷ್ಟಗಳನ್ನು ಪರಿಹರಿಸುವ ಸಂಕೇತವಾಗಿದೆ. ಮೋದಕವು ಆಧ್ಯಾತ್ಮಿಕ ಜೀವನದಲ್ಲಿರುವ ಸಂತೋಷವನ್ನು ಸೂಚಿಸಿದ್ರೆ, ಕಮಲದ ಹೂವು ಸ್ವಯಂ ಸಾಕ್ಷಾತ್ಕಾರವನ್ನು ಸೂಚಿಸುವ ಸಂಕೇತವಾಗಿದೆ. ಗಣೇಶನ ಹೊಟ್ಟೆಯು ಭಕ್ತರು ಕೊಟ್ಟ ತಿನಿಸುಗಳನ್ನು ತಿಂದು ಅರಗಿಸಿಕೊಳ್ಳುವ ಶಕ್ತಿ ಇದೆ ಎಂಬುದನ್ನು ಸೂಚಿಸುತ್ತದೆ. ಇನ್ನೂ ಕೊನೆಯದಾಗಿ ಗಣಪತಿಯ ಮುಂದಿರುವ ಇಲಿಯು ಮನುಷ್ಯರು ಆಸೆಗಳ ಮೇಲೆ ಹಿಡತವನ್ನು ಸಾಧಿಸಬೇಕು ಎಂಬುದನ್ನು ತೋರಿಸುತ್ತದೆ.

ವಿನಾಯಕನ ಹೊರತಾಗಿ ಈ ದೇವಾಲಯದಲ್ಲಿ ಆದಿ ಶಂಕರ, ರಿಷಿ ವೇದವ್ಯಾಸ, ಗಾಯತ್ರಿ ದೇವಿ, ಸದಾಶಿವ, ಬ್ರಹ್ಮೇಂದ್ರ, ಸಂತಪತ್ತಿನಾಥನ ವಿಗ್ರಗಳು ದೇವಾಲಯದ ಒಳಗಿದೆ. ಪ್ರತಿ ಗುರುವಾರ ಆದಿ ವಿನಾಯಕನಿಗೆ ಇಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ

ಮೊದಲ ಪೂಜೆ

ಮೊದಲ ಪೂಜೆ

ಪ್ರತಿಯೊಬ್ಬರಿಗೂ ಶಿವನು ಗಣೇಶನ ಶಿರಚ್ಚೇಧ ಮಾಡಿದ ಕಥೆ ಗೊತ್ತಿರಬಹುದು. ಗಣೇಶನ ನಡವಳಿಕೆಯಿಂದ ಕೋಪಗೊಂಡ ಶಿವನು ಗಣೇಶನ ಶಿರಚ್ಛೇಧ ಮಾಡುತ್ತಾನೆ. ನಂತರ ಪಾರ್ವತಿಯ ಗೋಳಾಟ ಕಂಡು ಶಿವನು ತನ್ನ ಸೈನ್ಯಕ್ಕೆ ಉತ್ತರ ದಿಕ್ಕಿಗೆ ಮಲಗಿರುವ ಯಾವುದಾದರೂ ಪ್ರಾಣಿಯ ಶಿರವನ್ನು ಕಡಿದು ತರುವಂತೆ ಆಜ್ಞೆ ಮಾಡುತ್ತಾನೆ. ಇದರಂತೆ ಶಿವನ ಸೈನ್ಯವು ಆನೆಯ ತಲೆಯನ್ನು ಕಡಿದು ತಂದಾಗ ಗಣೇಶನಿಗೆ ಆನೆಯ ತಲೆಯನ್ನೇ ಇಡಲಾಗುತ್ತದೆ. ನಂತರ ಶಿವನು ಯಾವುದೇ ಕೆಲಸ ಮಾಡುವ ಮುಂಚೆ ಮೊದಲ ಪೂಜೆ ಗಣೇಶನಿಗೆ ಸಲ್ಲಿಸಬೇಕೆಂಬ ವರವನ್ನು ನೀಡುತ್ತಾನೆ. ಇದೇ ಕಾರಣಕ್ಕೆ ಇಂದಿಗೂ ಜನ ಮೊದಲ ಪೂಜೆಯನ್ನು ವಿಘ್ನೇಶ್ವರನಿಗೆ ಅರ್ಪಿಸೋದು.

ಮಕ್ಕಳು ಹಾಗೂ ಕುಟುಂಬಕ್ಕೆ ಒಳ್ಳೆಯದಾಗುತ್ತದೆ

ಸಂಕಟಹರ ಚರ್ತುರ್ಥಿ ದಿನದಲ್ಲಿ ಮಹಾಗುರು ಅಗಸ್ತ್ಯನನ್ನು ಇಲ್ಲಿ ಆದಿ ವಿನಾಯಕನ ಹೆಸರಿನಲ್ಲಿ ಪೂಜಿಸಲಾಗುತ್ತಿದೆ ಎಂದು ಭಕ್ತರ ನಂಬಿಕೆ. ಏಕದಂತನನ್ನು ಭಕ್ತಿಯಿಂದ ಬೇಡಿಕೊಂಡರೆ ಕುಟುಂಬದಲ್ಲಿ ಶಾಂತಿ ನೆಲೆಯಾಗುತ್ತದೆ ಹಾಗೂ ಮಕ್ಕಳ ನೆನಪಿನ ಶಕ್ತಿ ಕೂಡ ಹೆಚ್ಚಾಗುತ್ತಂತೆ. ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಬಂದು ವಿನಾಯಕನಿಗೆ ಪೂಜೆ ಸಲ್ಲಿಸಿ ಆತನ ಕೃಪೆಗೆ ಪಾತ್ರರಾಗುತ್ತಾರೆ.

ನೀವು ಕೂಡ ಕುಟುಂಬ ಸಮೇತರಾಗಿ ತಮಿಳುನಾಡಿನಲ್ಲಿರುವ ಈ ಮುಕ್ತಿಶ್ವರ ದೇವಾಲಯಕ್ಕೆ ಭೇಟಿ ಕೊಟ್ಟರೆ ನರಮುಖ ಗಣೇಶನ ದರ್ಶನ ಪಡೆಯಬಹುದು.

English summary

Ganesha Worshipped in Man Form; Adi Vinayaka Temple Thilatharpanapuri Tamilnadu History and Significance in Kannada

Why Ganesha Worshipped in Man Form in Adi Vinayaka Temple Thilatharpanapuri Tamil nadu. Know Adi Vinayaka Temple History and Significance. Read More.
Story first published: Monday, March 6, 2023, 14:30 [IST]
X
Desktop Bottom Promotion