Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
February 2022 Vrat & Festival List: ಫೆಬ್ರವರಿ ತಿಂಗಳಿನಲ್ಲಿ ಬರುವ ಹಬ್ಬಗಳು, ವ್ರತಗಳ ಸಂಪೂರ್ಣ ಮಾಹಿತಿ
ನೆನ್ನೆ ಮೊನ್ನೆ ಹೊಸ ವರ್ಷ ಆಚರಣೆ ಮಾಡಿದ್ದಂಗೆ ಇದೆಯಲ್ಲಾ? ಎಷ್ಟು ಬೇಗ ವರ್ಷ ಮೊದಲ ತಿಂಗಳು ಕಳೆದು ಹೋಯ್ತ, ಇನ್ನೇನು ಫೆಬ್ರವರಿ ಬಂದೇ ಬಿಡ್ತು. ಜನವರಿಯಲ್ಲಿ ಸಂಕ್ರಾಂತಿಯ ಸುಗ್ಗಿ ಇತ್ತು, ಫೆಬ್ರವರಿ ಎಂದ ಮೇಲೆ ಕೇಳಬೇಕೇ? ಪ್ರೇಮಿಗಳಿಗೆ ವಿಶೇಷವಾದ ತಿಂಗಳು, ಫೆಬ್ರವರಿ 14ಕ್ಕೆ ವ್ಯಾಲೆಂಟೈನ್ಸ್ ಡೇ ಆಚರಿಸಲಾಗುವುದು. ಅಲ್ಲದೆ ಹಿಂದೂ ಕ್ಯಾಲೆಂಡರ್‌ನ ಕೊನೆಯ ತಿಂಗಳು ಫಲ್ಗುಣ ಫೆಬ್ರವರಿ ಮಧ್ಯದಿಂದ ಶುರುವಾಗುವುದು. ಫೆಬ್ರವರಿ ಪ್ರಾರಂಭದಲ್ಲಿಯೇ ಮೌನಿ ಅಮವಾಸ್ಯೆ ಇದೆ. ಅಲ್ಲದೆ ಗಣೇಶ ಜಯಂತಿ, ಬಸಂತ್ ಪಂಚಮಿ, ರಥ ಸಪ್ತಮಿ, ಭೀಷ್ಮ ಅಷ್ಟಮಿ, ಗುಪ್ತ ನವರಾತ್ರಿ, ಕುಂಭ ಸಂಕ್ರಾಂತಿ, ಜಯ ಏಕಾದಶಿ, ಪ್ರದೋಷ ವ್ರತ, ಛತ್ರಪತಿ ಶಿವಾಜಿ ಜಯಂತಿ, ವಿಜಯ ಏಕಾದಶಿ ಹೀಗೆ ಅನೇಕ ವಿಶೇಷ ದಿನಗಳಿವೆ.
ಫೆಬ್ರವರಿ ತಿಂಗಳಿನಲ್ಲಿ ಯಾವೆಲ್ಲಾ ದಿನಗಳು ತುಂಬಾ ವಿಶೇಷವಾಗಿವೆ ಎಂದು ನೋಡೋಣ ಬನ್ನಿ:

ಫೆಬ್ರವರಿ ತಿಂಗಳಿನ ವಿಶೇಷ ದಿನಗಳು
ಫೆಬ್ರವರಿ 1, ಮಂಗಳವಾರ: ಮೌನಿ ಅಮವಾಸ್ಯೆ ಅಥವಾ ಮಾಘ ಅಮವಾಸ್ಯೆ
ಫೆಬ್ರವರಿ 2, ಬುಧವಾರ: ಗುಪ್ತ ನವರಾತ್ರಿ ಪ್ರಾರಂಭ
ಫೆಬ್ರವರಿ4, ಶುಕ್ರವಾರ: ಗಣೇಶ ಜಯಂತಿ
ಫೆಬ್ರವರಿ 5, ಶನಿವಾರ: ವಸಂತ ಪಂಚಮಿ, ಸರಸ್ವತಿ ಪೂಜೆ
ಫೆಬ್ರವರಿ 7, ಸೋಮವಾರ: ರಥ ಸಪ್ತಮಿ
ಫೆಬ್ರವರಿ 8, ಮಂಗಳವಾರ: ಭೀಷ್ಮ ಅಷ್ಟಮಿ
ಫೆಬ್ರವರಿ11, ಶುಕ್ರವಾರ: ಗುಪ್ತ ನವಮಿ ಮುಕ್ತಾಯ
ಫೆಬ್ರವರಿ 12, ಶನಿವಾರ: ಜಯ ಏಕಾದಶಿ
ಫೆಬ್ರವರಿ 13, ಭಾನುವಾರ: ಕುಂಭ ಸಂಕ್ರಾಂತಿ, ಪ್ರದೋಷ ವ್ರತ
ಫೆಬ್ರವರಿ 16, ಬುಧವಾರ: ಮಾಘ ಪೂರ್ಣಿಮಾ, ಸಂತ ರವಿದಾಸ ಜಯಂತಿ
ಫೆಬ್ರವರಿ 17, ಗುರುವಾರ: ಫಲ್ಗುಣ ತಿಂಗಳು ಶುರುವಾಗುವುದು
ಫೆಬ್ರವರಿ 19, ಶನಿವಾರ: ಛತ್ರಪತಿ ಶಿವಾಜಿ ಜಯಂತಿ
ಫೆಬ್ರವರಿ 27, ಭಾನುವಾರ: ವಿಜಯಾ ಏಕಾದಶಿ
ಫೆಬ್ರವರಿ 28, ಸೋಮವಾರ: ಪ್ರದೋಷ ವ್ರತ

ಮೌನಿ ಅಮವಾಸ್ಯೆ, ಗಣೇಶ ಜಯಂತಿ
ಮೌನಿ ಅಮವಾಸ್ಯೆಯಂದು ನದಿಯಲ್ಲಿ ಸ್ನಾನ ಮಾಡಿ ಉಪವಾಸವಿದ್ದು ಮೌನಿ ಅಮವಾಸ್ಯೆ ಆಚರಿಸಲಾಗುವುದು.
ಗಣೇಶ ಜಯಂತಿ: ಈ ತಿಂಗಳಿನಲ್ಲಿ ಗಣೇಶ ಜಯಂತಿಯನ್ನು ಫೆಬ್ರವರಿ 14ರಂದು ಆಚರಿಸಲಾಗುವುದು. ಮಾಘ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಗಣೇಶ ಜನಿಸಿದ ಎಂದು ನಂಬಲಾಗಿದೆ.

ವಸಂತ ಪಂಚಮಿ, ರಥ ಸಪ್ತಮಿ
ವಸಂತ ಪಂಚಮಿ: ವಸಂತ ಪಂಚಮಿಯಂದು ಸರಸ್ವತಿ ಪೂಜೆಯನ್ನು ಮಾಡಲಾಗುವುದು.
ರಥ ಸಪ್ತಮಿ: ಸೂರ್ಯನು ಈ ದಿನದಂದು ರಥವೇರಿ ಬರುತ್ತಾನೆ ಎಂಬ ನಂಬಿಕೆ ಇದೆ

ಏಕಾದಶಿ, ಪ್ರದೋಷ ವ್ರತ
ಏಕಾದಶಿ: ಈ ತಿಂಗಳಿನಲ್ಲಿ ಎರಡು ಏಕಾದಶಿ ಇದೆ. 1. ಜಯ ಏಕಾದಶಿ 2. ವಿಜಯ ಏಕಾದಶಿ
ಪ್ರದೋಷ ವ್ರತ: ಪ್ರದೋಷ ವ್ರತದಂದು ಶಿವನನ್ನು ಆರಾಧಿಸಲಾಗುವುದು.



Click it and Unblock the Notifications











