ಇಸ್ಲಾಂ ಧರ್ಮದ ಪವಿತ್ರ ರಂಜಾನ್ ಹಬ್ಬದ ವಿಶೇಷತೆ ಏನು?

By Arshad

ಚಂದ್ರನ ಚಲನೆಯನ್ನಾಧರಿಸಿದ ಮುಸ್ಲಿಂ ಕ್ಯಾಲೆಂಡರ್‌ನಲ್ಲಿ ಒಂಬತ್ತನೆಯ ತಿಂಗಳಾಗಿ ಬರುವ ರಂಜಾನ್ ಮುಸ್ಲಿಮರ ಪಾಲಿಗೆ ಅತ್ಯಂತ ಪವಿತ್ರವಾದ ಮಾಸವಾಗಿದೆ.

ವಿಶ್ವದಾದ್ಯಂತ ಮುಸ್ಲಿಮರು ಈ ತಿಂಗಳಿಡೀ ಸೂರ್ಯೋದಯಕ್ಕಿಂತ ಒಂದೂವರೆ ಗಂಟೆ ಮೊದಲಿನಿಂದ ಹಿಡಿದು ಸೂರ್ಯಾಸ್ತಮಾನದ ಕ್ಷಣದ ವರೆಗೆ ಏನನ್ನೂ ತಿನ್ನದೇ ಅಥವಾ ಕುಡಿಯದೇ ಮತ್ತು ಮಾನಸಿಕವಾಗಿ ಯಾವ ಬಯಕೆಯನ್ನೂ ಬಯಸದೇ ದೇವರ ಧ್ಯಾನ, ಕುರಾನ್ ಪಠಣ, ಪ್ರಾರ್ಥನೆ ಮತ್ತು ಇತರ ವಿಧಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಮೂಲಕ ಉಪವಾಸ ಅಥವಾ ರೋಜಾವನ್ನು ಅನುಸರಿಸುತ್ತಾರೆ. ರಂಜಾನ್ ಮಾಸದಲ್ಲಿ ಖರ್ಜೂರಕ್ಕೆ ಏಕೆ ಅಷ್ಟೊಂದು ಮಹತ್ವ?

ದೈಹಿಕ ಮತ್ತು ಮಾನಸಿಕವಾಗಿ ಅನ್ನಾಹಾರ ಮತ್ತು ಬಯಕೆಗಳಿಂದ ದೂರವಿರುವುದರ ಮೂಲಕ ಸಾಮಾಜಿಕ ಸಮನ್ವಯತೆ, ಕಡ್ಡಾಯದಾನದ ಮೂಲಕ ಸಮಾಜದಲ್ಲಿ ಪರಸ್ಪರ ಸಮಾನತೆ, ಮನಸ್ಸಿನ ಮೇಲೆ ಹತೋಟಿ ಪಡೆಯುವ ಮೂಲಕ ದೇವನ ಅನುಗ್ರಹಕ್ಕೆ ಪಾತ್ರನಾಗುವಂತೆ ಇಸ್ಲಾಂ ಧರ್ಮದ ಪಂಚ ಮೂಲಭೂತ ಕರ್ತವ್ಯಗಳಲ್ಲೊಂದಾದ ರೋಜಾ ತಿಳಿಸುತ್ತದೆ. ರಂಜಾನ್ ಮಾಸದಲ್ಲಿ ಮನಸ್ಸು ಭಕ್ತಿ-ಭಾವದಿಂದ ಕೂಡಿರಲಿ

ಪ್ರಾತಃಕಾಲದ ಆಹಾರ ಸೇವನೆಗೆ ಸುಹೂರ್ ಎಂದೂ ಸೂರ್ಯಾಸ್ತಮಾನದ ವೇಳೆ ಉಪವಾಸವನ್ನು ಸಂಪನ್ನಗೊಳಿಸುವ ಆಹಾರಸೇವನೆಗೆ ಇಫ್ತಾರ್ ಎಂದೂ ಕರೆಯುತ್ತಾರೆ.
(ಪಂಚ ಮೂಲಭೂತ ಕರ್ತವ್ಯಗಳು-ದಿನಕ್ಕೆ ಐದು ಹೊತ್ತಿನ ಪ್ರಾರ್ಥನೆಗಳನ್ನು ಕಡ್ಡಾಯವಾಗಿ ನಿರ್ವಹಿಸುವುದು, ಕುರಾನ್ ನ ಕಲ್ಮಾ ಅಂದರೆ ಕಡ್ಡಾಯವಾಗಿ ಅನುಸರಿಸಬೇಕಾದ ವಿಧಿಗಳನ್ನು ಜೀವನಪರ್ಯಂತ ಅನುಸರಿಸುವುದು, ರಮಧಾನ್ ಅಥವಾ ರಂಜಾನ್ ತಿಂಗಳ ರೋಜಾ ಅನುಸರಿಸುವುದು, ವರ್ಷಕ್ಕೊಂದು ಬಾರಿ ಕಡ್ಡಾಯದಾನ (ಜಕಾತ್) ನೀಡುವುದು ಹಾಗೂ ಕನಿಷ್ಟ ಜೀವಮಾನದಲ್ಲೊಮ್ಮೆ ಹಜ್ ಯಾತ್ರೆ ನಿರ್ವಹಿಸುವುದು). ಬನ್ನಿ ರಂಜಾನ್ ಹಬ್ಬದ ಕುರಿತು ಇನ್ನಷ್ಟು ಮಾಹಿತಿಯನ್ನು ಸ್ಲೈಡ್ ಮೂಲಕ ಓದಿ.... ರಂಜಾನ್ ಸಮಯದಲ್ಲಿ ಮಾಡುವ ಉಪವಾಸದ ಮಹತ್ವ

ಇಸ್ಲಾಂ ಕ್ಯಾಲೆಂಡರ್‌ ಪ್ರಕಾರ

ಇಸ್ಲಾಂ ಕ್ಯಾಲೆಂಡರ್‌ ಪ್ರಕಾರ

ಇಸ್ಲಾಂ ಕ್ಯಾಲೆಂಡರ್‌ನಲ್ಲಿ ರಂಜಾನ್ ಮಾಸಕ್ಕೇಕೆ ಇಷ್ಟು ಮಹತ್ವ ನೀಡಲಾಗಿದೆ ಎಂದರೆ ಪವಿತ್ರವಾದ ಕುರಾನ್ ಅಲ್ಲಾಹನಿಂದ ಪ್ರವಾದಿ ಮೊಹಮ್ಮದರ ಮೂಲಕ ಭೂಮಿಗೆ ಅವತೀರ್ಣಗೊಳ್ಳಲು ಪೂರ್ಣವಾಗಿ ಇಪ್ಪತ್ತಮೂರು ವರ್ಷಗಳು ಬೇಕಾಯಿತು. ಅದರ ಪ್ರಪ್ರಥಮ ವಾಕ್ಯಗಳು ಈ ತಿಂಗಳಲ್ಲಿಯೇ ಅವತೀರ್ಣಗೊಂಡುದುದರಿಂದ ರಂಜಾನ್ ಮಾಸಕ್ಕೆ ಅತಿಹೆಚ್ಚಿನ ಮಹತ್ವವಿದೆ. ಪ್ರಥಮ ವಾಕ್ಯಗಳು ಕ್ರಿಶ 610ರಲ್ಲಿ ಅವತೀರ್ಣಗೊಂಡಬಳಿಕ ಇಸ್ಲಾಂನ ಹೊಸ ಯುಗ ಪ್ರಾರಂಭವಾಯಿತು. ಅಂದಿನಿಂದ ಪ್ರಾರಂಭವಾದ ಶಕೆಗೆ ಹಿಜರಿ ಶಕೆ ಎಂದು ಕರೆಯುತ್ತಾರೆ. ಚಂದ್ರನ ಚಲನೆಯನ್ನು ಆಧರಿಸಿದ ಈ ಕ್ಯಾಲೆಂಡರ್ ಇಂಗ್ಲೀಷ್ ಕ್ಯಾಲೆಂಡರಿಗಿಂತಲೂ ಹತ್ತರಿಂದ ಹನ್ನೆರಡು ದಿನ ಕಡಿಮೆಯಾಗುವ ಕಾರಣ ಈ ವರ್ಷ 1436 ಇಸವಿ ನಡೆಯುತ್ತಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಇಸ್ಲಾಂ ಕ್ಯಾಲೆಂಡರ್‌ ಪ್ರಕಾರ

ಇಸ್ಲಾಂ ಕ್ಯಾಲೆಂಡರ್‌ ಪ್ರಕಾರ

ರಂಜಾನ್ ತಿಂಗಳಲ್ಲಿ ಯಾವ ರಾತ್ರಿಯಂದು ಪ್ರಥಮ ವಾಕ್ಯಗಳು ಅವತೀರ್ಣಗೊಂಡವೋ ಅದಕ್ಕೆ ಅತ್ಯಂತ ಹೆಚ್ಚಿನ ಮಹತ್ವವಿದೆ. ಲೈಲತುಲ್ ಕದ್ರ್ ಎಂದು ಕರೆಯಲಾಗುವ ಈ ರಾತ್ರಿ ಯಾವುದೆಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ರಮಧಾನ್ ತಿಂಗಳ 21,23,25,27,29ನೇ ದಿನಾಂಕದಂದು ಅಂದರೆ ಕೊನೆಯ ಹತ್ತುದಿನಗಳ ಬೆಸಸಂಖ್ಯೆಗಳ ದಿನಗಳ ಮುನ್ನಾರಾತ್ರಿ ಲೈಲತುಲ್ ಕದ್ರ್ ಆಗಿರಬಹುದು. ಇದರಲ್ಲಿ 27ನೇ ದಿನದ ಮುನ್ನಾರಾತ್ರಿ (ಅಂದರೆ 26ನೇ ದಿನದ ರಾತ್ರಿ) ಹೆಚ್ಚು ಸಂಭವನೀಯ ಎಂದು ಹೆಚ್ಚಿನವರು ನಂಬುತ್ತಾರೆ. ಈ ರಾತ್ರಿಯಲ್ಲಿ ನಡೆಸಿದ ಪ್ರಾರ್ಥನೆಗಳು ಉಳಿದ ಸಮಯದ ಪ್ರಾರ್ಥನೆಗಿಂತ ಸಾವಿರಾರು ಪಟ್ಟು ಹೆಚ್ಚು ಫಲಪ್ರದ ಎಂದು ಹೇಳಲಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಇಸ್ಲಾಂ ಕ್ಯಾಲೆಂಡರ್‌ ಪ್ರಕಾರ

ಇಸ್ಲಾಂ ಕ್ಯಾಲೆಂಡರ್‌ ಪ್ರಕಾರ

ರಂಜಾನ್‌ ತಿಂಗಳ ರೋಜಾ ಅವಧಿಯಲ್ಲಿ ಕೇವಲ ಅನ್ನಾಹಾರಗಳನ್ನು ತ್ಯಜಿಸುವುದು ಮಾತ್ರ ಉಪವಾಸವಲ್ಲ. ಮೂಲತಃ ಮನಸ್ಸಿನಲ್ಲಿ ಅನ್ನಾಹಾರದ ಸಹಿತ ಯಾವುದೇ ಬಯಕೆಗಳನ್ನು ಹೊಂದದಿರುವುದು, ಸುಳ್ಳು ಆಡದಿರುವುದು, ಕೆಟ್ಟದ್ದನ್ನು ಯೋಚಿಸದಿರುವುದು, ಲೈಂಗಿಕ ಕಾಮನೆಗಳನ್ನು ಕೆರಳಿಸದಿರುವುದು, ಚಾಡಿ ಹೇಳದಿರುವುದು ಮೊದಲಾದವುಗಳಿಂದ ಮನಸ್ಸನ್ನು ನಿಗ್ರಹಿಸುವುದು ಕಡ್ಡಾಯವಾಗಿದೆ. ಅಷ್ಟೇ ಏಕೆ, ಸುವಾಸನೆಯನ್ನು ಅಘ್ರಾಣಿಸುವುದು, ರುಚಿ ನೋಡುವುದು ಮತ್ತು ಉಗುಳು ನುಂಗುವುದನ್ನೂ ರೋಜಾ ಅವಧಿಯಲ್ಲಿ ನಿಷೇಧಿಸಲಾಗಿದೆ.

ರಂಜಾನ್‌‌ನ ಉಪವಾಸ

ರಂಜಾನ್‌‌ನ ಉಪವಾಸ

ರಂಜಾನ್‌‌ನ ಉಪವಾಸ ಎಲ್ಲಾ ವಯಸ್ಕರಿಗೆ ಮತ್ತು ಆರೋಗ್ಯವಂತರಿಗೆ ಕಡ್ಡಾಯವಾಗಿದೆ. ಆದರೆ ದೈಹಿಕವಾಗಿ ಸಬಲರಲ್ಲದವರಿಗೆ ಇದರಿಂದ ವಿನಾಯಿತಿ ನೀಡಲಾಗಿದೆ. ಗರ್ಭಿಣಿಯರು, ಮಾನಸಿಕ ಸ್ಥಿಮಿತವಿಲ್ಲದಿರುವವರು, ದೈಹಿಕವಾಗಿ ಉಪವಾಸವಿರಲು ಅಸಮರ್ಥರಾಗಿರುವವರು, ಬಾಣಂತಿಯರಿಗೆ ವಿನಾಯಿತಿ ಇದೆ. ಇನ್ನೂ ಪ್ರೌಢಾವಸ್ಥೆಯನ್ನು ತಲುಪಿಲ್ಲದ ಮಕ್ಕಳಿಗೂ ಉಪವಾಸ ಕಡ್ಡಾಯವಲ್ಲ. ಆದರೆ ಚಿಕ್ಕವಯಸ್ಸಿನಿಂದಲೇ ಸಾಧ್ಯವಾದಷ್ಟು ಹೆಚ್ಚು ಉಪವಾಸಗಳನ್ನು ಹಿಡಿಯುವ ಮೂಲಕ ಮುಂದಿನ ದಿನಗಳಲ್ಲಿ ಉಪವಾಸವಿರಲು ತರಬೇತಿ ಪಡೆಯುವುದನ್ನು ಇಸ್ಲಾಂ ಬೆಂಬಲಿಸುತ್ತದೆ. ಕಾಯಿಲೆಯಿಂದ ಬಳಲುತ್ತಿರುವವರು, ಪ್ರಯಾಣದಲ್ಲಿರುವವರು ಹಾಗೂ ತಿಂಗಳ ರಜಾದಿನಗಳಲ್ಲಿರುವ ಮಹಿಳೆಯರಿಗೆ ಆ ದಿನಗಳಲ್ಲಿ ಉಪವಾಸ ನಿರ್ವಹಿಸಲು ಅಸಾಧ್ಯವಾದುದರಿಂದ ಈದ್ ದಿನದ ನಂತರದ ಯಾವುದೇ ಸೂಕ್ತವಾದ ದಿನಗಳಲ್ಲಿ ಇದನ್ನು ನಿರ್ವಹಿಸುವುದು ಕಡ್ಡಾಯವಾಗಿದೆ.

ಈದ್ ದಿನಗಳನ್ನು ನಿರ್ಧರಿಸುವುದು ಹೇಗೆ?

ಈದ್ ದಿನಗಳನ್ನು ನಿರ್ಧರಿಸುವುದು ಹೇಗೆ?

ರಂಜಾನ್ ತಿಂಗಳ ಮೊದಲದಿನ ಮತ್ತು ಈದ್ ಆಚರಣೆಗೆ ಅಮವಾಸ್ಯೆಯ ಬಳಿಕದ ಪ್ರಥಮ ದಿನದ ಚಂದ್ರನನ್ನು ಕಾಣುವುದು ಅಗತ್ಯವಾಗಿದೆ. ಇದನ್ನು ಮಾನಸಿಕ ಸ್ಥಿಮಿತವಿರುವ ಮತ್ತು ವಯಸ್ಕರು ತಮ್ಮ ಕಣ್ಣಾರೆ ನೋಡಬೇಕಾಗಿದ್ದು ಕನಿಷ್ಟ ಇಬ್ಬರ ಸಾಕ್ಷಿಯ ಅಗತ್ಯವಿದೆ. ಈ ಆಧಾರದ ಮೇಲೆ ರಂಜಾನ್ ಪ್ರಾರಂಭ ಮತ್ತು ಈದ್ ದಿನಗಳನ್ನು ನಿರ್ಧರಿಸಲಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಈದ್ ದಿನಗಳನ್ನು ನಿರ್ಧರಿಸುವುದು ಹೇಗೆ?

ಈದ್ ದಿನಗಳನ್ನು ನಿರ್ಧರಿಸುವುದು ಹೇಗೆ?

ಆದರೆ ಇತ್ತೀಚಿನ ವರ್ಷಗಳಲ್ಲಿ ವಾಯುವಿನಲ್ಲಿ ಪ್ರದೂಷಣೆ, ಹವಾಮಾನದಲ್ಲಿ ಏರುಪೇರು ಮೊದಲಾದ ಹಲವಾರು ಕಾರಣಗಳಿಂದ ಪ್ರಥಮ ಚಂದ್ರನ ದರ್ಶನ ಲಭ್ಯವಾಗುತ್ತಲೇ ಇಲ್ಲ. ನಿರುಪಾಯರಾಗಿ ಮರುದಿನಕ್ಕೆ ಮುಂದೂಡುವ ಅಥವಾ ಮುಂದೂಡದಿರುವ ಇಬ್ಬಂದಿಯ ನಿರ್ಧಾರಗಳಿಂದಾಗಿ ಎಲ್ಲೆಡೆ ಎರಡೆರಡು ದಿನ ಈದ್ ಆಚರಿಸುವುದನ್ನು ಕಾಣಬಹುದು.

Story first published: Saturday, July 18, 2015, 6:10 [IST]
X
Desktop Bottom Promotion