Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ದೀಪಾವಳಿ 2021: ಲಕ್ಷ್ಮಿ-ಕುಬೇರ ಪೂಜೆ ಮಾಡುವಾಗ ಏನು ಮಾಡಬಾರದು?
ಬೆಳಕಿನ ಹಬ್ಬ ದೀಪಾವಳಿಯಂದು ಲಕ್ಷ್ಮಿ ಪೂಜೆಯನ್ನು ಮಾಡಲಾಗುವುದು. ಈ ದಿನ ಲಕ್ಷ್ಮಿ ಹುಟ್ಟಿದಳು ಎಂದು ಪೌರಾಣಿಕ ಕತೆಯಿದೆ. ಈ ದಿನ ಲಕ್ಷ್ಮಿ ಹಾಗೂ ಕುಬೇರನ ಪೂಜೆ ಮಾಡುವುದರಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗುವುದು.
ದೀಪಾವಳಿಯಂದು ಹಚ್ಚುವ ಹಣತೆಯ ಬೆಳಕು ಕಾರ್ಗತ್ತಲು ಓಡಿಸಿ ಬೆಳಕನ್ನು ತುಂಬುವುದು. ಬದುಕಿನಲ್ಲಿರುವ ನೋವು, ದುಃಖ, ಕಷ್ಟಗಳು ದೂರವಾಗಿ ಸಂತೋಷ ತುಂಬಲಿ ಎನ್ನುವುದು ಈ ಹಣತೆ ಹಚ್ಚುವುದರ ಆಶಯವಾಗಿದೆ. ದೀಪಾವಳಿ ಬಳಿಕ ಕಾರ್ತಿಕ ಶುಕ್ಲ ಪಕ್ಷ ಪ್ರಾರಂಭವಾಗುವುದು.
ದೀಪಾವಳಿಯಂದು ಲಕ್ಷ್ಮಿ ಪೂಜೆ ಮಾಡುವಾಗ ಈ ನಿಯಮಗಳನ್ನು ಪಾಲಿಸಿ:

2021ರಲ್ಲಿ ಲಕ್ಷ್ಮಿ ಪೂಜೆಗೆ ಶುಭ ಸಮಯ
ನವೆಂಬರ್ 4 ಸಂಜೆ 06:09ರಿಂದ 08:20ರವರೆಗೆ
ಪ್ರದೋಷ ಕಾಲ: ಸಂಜೆ 05:34ರಿಂದ 08:10ರವರೆಗೆ
ವೃಷಭ ಕಾಲ: ಸಂಜೆ 06:10ರಿಂದ 08:06ರವರೆಗೆ

ಪೂಜೆ ಮಾಡುವಾಗ ಏನು ಮಾಡಬೇಕು?
* ಪೂಜೆಗೆ ಇರುವ ವಸ್ತುಗಳನ್ನು ಈಶಾನ್ಯ ದಿಕ್ಕಿಗೆ ಸೆಟ್ ಮಾಡಿ. ಮನೆಯ ಸದಸ್ಯರು ಉತ್ತರಕ್ಕೆ ಮುಖ ಮಾಡಿ ಕುಳಿತುಕೊಳ್ಳಿ.
* ದೀಪವನ್ನು ಹಚ್ಚಿಡುವಾಗ 4 ದೀಪಗಳಂತೆ ಗುಂಪಾಗಿ ಇಡಿ. ಈ ದೀಪಗಳನ್ನು ಗಣೇಶನಿಗೆ, ಲಕ್ಷ್ಮಿಗೆ, ಕುಬೇರ, ಇಂದ್ರನಿಗೆ ಅಂತ ಮನಸ್ಸಿನಲ್ಲಿ ನೆನೆಸಿ ಹಚ್ಚಿಡಬೇಕು.
* ದೀಪಗಳನ್ನು ಹಚ್ಚಿಡುವಾಗ 11. 21, 51 ಈ ರೀತಿ ಬೆಸ ಸಂಖ್ಯೆಯಲ್ಲಿ ಹಚ್ಚಿಡಿ.
* ಹಣ, ಚಿನ್ನ ಇವುಗಳನ್ನು ಲಕ್ಷ್ಮಿ ಮುಂದೆ ಇಟ್ಟು ಪೂಜಿಸುವುದರ ಜೊತೆಗೆ ಹಣದ ವ್ಯವಹಾರದ ಬುಕ್ ಅನ್ನು ಕೂಡ ಲಕ್ಷ್ಮಿ ಮುಂದೆ ಇಟ್ಟು ಪೂಜಿಸಿ.
* ಲಕ್ಷ್ಮಿಗೆ ಕೆಂಪು ಬಣ್ಣವೆಂದರೆ ಇಷ್ಟ. ಅವಳಿಗೆ ಕೆಂಪು ಬಣ್ಣದ ಹೂಗಳನ್ನು ಅರ್ಪಿಸಿ.

ಲಕ್ಷ್ಮಿ ಪೂಜೆ ಮಾಡುವಾಗ ಏನು ಮಾಡಬಾರದು?
* ಲಕ್ಷ್ಮಿ ಪೂಜೆ ಮಾಡುವಾಗ ಗಜಿಬಿಜಿ ಶಬ್ದ, ಜೋರಾಗಿ ಮಾತನಾಡುವುದು ಮಾಡಬಾರದು.
* ಗಂಟೆಯನ್ನು ಕೂಡ ನಿಧಾನಕ್ಕೆ ಬಾರಿಸಿ.
* ಮನೆಯ ವಾತಾವರಣ ಶಾಂತವಾಗಿರಬೇಕು.
* ಯಾರೊಂದಿಗೂ ಕೋಪಗೊಳ್ಳುವುದು, ಜಗಳ ಮಾಡುವುದು ಮಾಡಬಾರದು.
* ಲೆದರ್ ವಸ್ತುಗಳನ್ನು ಗಿಫ್ಟ್ ಮಾಡಬಾರದು.



Click it and Unblock the Notifications
