Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಕ್ಯಾಂಡಿ ಕೇನ್‍ನ ದಂತಕಥೆಗಳಲ್ಲಿ ಯೇಸುವಿನ ಬಗ್ಗೆ ಏನನ್ನು ಹೇಳಲಾಗಿದೆ?
ಇಡೀ ವರ್ಷದಲ್ಲಿ ಕ್ರಿಸ್‍ಮಸ್ ಅವಧಿಯು ಅತ್ಯಂತ ಸಂಭ್ರಮ ಸಡಗರಗಳಿಂದ ಕೂಡಿರುವ ಸಮಯವಾಗಿದೆ. ಇದೇ ಸಮಯದಲ್ಲಿ ಚಳಿಗಾಲವು ಎಲ್ಲಾ ಕಡೆ ಆವರಿಸಿಕೊಂಡಿರುತ್ತದೆ ಮತ್ತು ಇಡೀ ವಿಶ್ವವು ದೇವರು ಮಗುವಾಗಿ ಜೀಸಸ್ ರೂಪದಲ್ಲಿ ಜನಿಸಿದ್ದನ್ನು ಸಂಭ್ರಮದ ರೂಪದಲ್ಲಿ ಆಚರಿಸುತ್ತಿರುತ್ತದೆ. ಎಲ್ಲಾ ಕಡೆಗಳಲ್ಲಿಯು ಯೇಸು ಹೇಗೆ ಮಗುವಾಗಿ ಜನಿಸಿದನು ಎಂಬುದರ ಪ್ರತಿ ರೂಪಗಳನ್ನು ಇಟ್ಟಿರುತ್ತಾರೆ. ಇದು ಈ ಸಂಭ್ರಮವನ್ನು ಮತ್ತಷ್ಟು ತರ್ಕಬದ್ಧಗೊಳಿಸುತ್ತದೆ. ಕುತೂಹಲಕಾರಿ ವಿಚಾರವೇನೆಂದರೆ, ಕ್ರಿಸ್‍ಮಸ್‍ಗೆ ಸಂಬಂಧಿಸಿದ ಪ್ರತಿಯೊಂದು ಅಂಶವು, ಜೀಸಸ್‍ಗೆ ಸಂಬಂಧಿಸಿರುತ್ತದೆ.
ಅದು ಕ್ರಿಸ್‍ಮಸ್ ಟ್ರೀಯಾಗಿರಲಿ ಅಥವಾ ಸಾಂಟಾ ಕ್ಲಾಸ್ ಆಗಿರಲಿ ಅಥವಾ ಕ್ರಿಸ್‍ಮಸ್ ಟ್ರೀಗೆ ಸಂಬಂಧಿಸಿದ ಅಲಂಕಾರಿಕ ವಸ್ತುಗಳಾಗಿರಲಿ ಎಲ್ಲವೂ ಜೀಸಸ್‍ಗೆ ಸಂಬಂಧಿಸಿರುತ್ತವೆ. ಕ್ರಿಸ್‍ಮಸ್ ಟ್ರೀಯನ್ನು ಅಲಂಕಾರಿಸುವ ಪ್ರತಿಯೊಂದು ಅಂಶಗಳ ಹಿಂದೆಯೂ ಒಂದು ಕುತೂಹಲಕಾರಿಯಾದ ಕಥೆಯು ಅಡಗಿರುತ್ತದೆ.

ಅಂತಹ ಒಂದು ಅಲಂಕಾರಿ ವಸ್ತುಗಳಲ್ಲಿ ಒಂದು ಕ್ಯಾಂಡಿ ಕೇನ್. ಕ್ಯಾಂಡಿ ಕೇನ್ ಎಂಬುದು ಕ್ರಿಸ್‍ಮಸ್ ಸಮಯದಲ್ಲಿ ಮಕ್ಕಳಿಗೆ ಬಹುವಾಗಿ ಹಂಚಲ್ಪಡುವ ಮತ್ತು ಕ್ರಿಸ್‍ಮಸ್ ಟ್ರೀಗೆ ಹೆಚ್ಚಾಗಿ ತೂಗು ಹಾಕುವ ಅಂಶಗಳಲ್ಲಿ ಒಂದಾಗಿದೆ. ನಿಮಗೆ ಗೊತ್ತೆ ಈ ವಿನೀತವಾದ ಕ್ಯಾಂಡಿ ಕೇನ್ ಹಿಂದೆ ಸಹ ಹಲವಾರು ದಂತಕಥೆಗಳು ಅಡಗಿವೆ ಎಂದು? ಬನ್ನಿ ನಾವು ನಿಮಗೆ ಕ್ಯಾಂಡಿ ಕೇನ್‍ಗು ಮತ್ತು ಕ್ರಿಸ್‍ಮಸ್‍ಗು ಇರುವ ಸಂಬಂಧವನ್ನು ಅದರ ಮಹತ್ವವನ್ನು ವಿವರಿಸುತ್ತೇವೆ.
ಕ್ಯಾಂಡಿ ಕೇನ್‍ನ ಉಗಮ: ಕ್ಯಾಂಡಿ ಕೇನ್‍ನ ಉಗಮವು ಸುಮಾರು 350 ವರ್ಷಗಳಷ್ಟು ಹಿಂದಕ್ಕೆ ಹೋಗುತ್ತದೆ. ಆಗ ಕ್ಯಾಂಡಿಯನ್ನು ವೃತ್ತಿಪರವಾಗಿ ಮತ್ತು ಮನೆಯಲ್ಲಿಯೇ ಗಟ್ಟಿಯಾದ ಸಕ್ಕರೆಯ ಕಡ್ಡಿಗಳಾಗಿ ತಯಾರಿಸಲಾಗುತ್ತಿತ್ತು. ಜನಪದ ಕಥೆಗಳ ಪ್ರಕಾರ 1670 ರಲ್ಲಿ ಜರ್ಮನಿಯ ಕಲೋನ್‍ನಲ್ಲಿ, ಚರ್ಚ್‍ನಲ್ಲಿದ್ದ ಒಬ್ಬ ಸಮೂಹ ಗಾಯನ ನಿರ್ವಾಹಕನು (ಕೊಯರ್ ಮಾಸ್ಟರ್) ಕ್ರಿಸ್‍ಮಸ್ ಸಂಜೆಯಲ್ಲಿ ಮಕ್ಕಳು ಮಾಡುವ ಗದ್ದಲವನ್ನು ನಿಭಾಯಿಸುವ ಸಲುವಾಗಿ ಸ್ಥಳೀಯ ಮಿಠಾಯಿಯಂಗಡಿಯವನಿಗೆ ಕೆಲವೊಂದು ಮಿಠಾಯಿಗಳನ್ನು ತಯಾರಿಸಲು ಹೇಳಿದನು. ಇದರಿಂದ ಪೂಜಾ ಪುನಸ್ಕಾರಗಳ ಸಂದರ್ಭದಲ್ಲಿ ಮಕ್ಕಳ ಗದ್ದಲ ಕಡಿಮೆಯಾಗುತ್ತದೆ ಎಂಬುದು ಆತನ ಭಾವನೆಯಾಗಿತ್ತು. ಇದನ್ನು ಕೇಳಿದ ಮಿಠಾಯಿ ತಯಾರಕನು ಶಿಶು ಜೀಸಸ್‍ನ (ಯೇಸುವಿನ) ಜನನದ ಕಾರಣವನ್ನು ತಿಳಿದು, ಆ ಮಗುವನ್ನು ನೋಡಲು ಬಂದ ಒಬ್ಬ ಕುರಿಗಾಹಿಯನ್ನು (ಶೆಫರ್ಡ್) ನೆನಪಿಸುವಂತಹ ಒಂದು ಕೋಲಿನಂತಹ ಮಿಠಾಯಿ ಎಂದರೆ ಸ್ಟಿಕ್ ತಯಾರಿಸಿದನು. ಅದನ್ನು ಕೇನ್ ಎಂದು ಆಂಗ್ಲ ಭಾಷೆಯಲ್ಲಿ ಕರೆಯುತ್ತಾರೆ.
ಕೇನ್ ಆಫ್ ದಿ ಶೆಫರ್ಡ್: ಕ್ಯಾಂಡಿ ಕೇನ್ ಈ ಶೆಫರ್ಡ್‌ಗಳು ಕುರಿಗಳನ್ನು ಮೇಯಿಸಲು ಬಳಸುವ ಕೋಲಿನಂತೆ ಇರುತ್ತದೆ. ಇದು ಜೀಸಸ್ (ಯೇಸು) ಸಹ ಒಬ್ಬ ಗುಡ್ ಶೆಫರ್ಡ್, ಕ್ರಿಸ್‍ಮಸ್ ದಿನ ಆತನು ನಮ್ಮ ಲೋಕಕ್ಕೆ ಬಂದ ಎಂಬುದನ್ನು ನೆನಪು ಮಾಡಿಕೊಡುತ್ತದೆ. "ದ ಲಾರ್ಡ್ ಇಸ್ ಮೈ ಶೆಫರ್ಡ್" ಎಂದು ಬೈಬಲ್ ಹೇಳುತ್ತದೆ. ಎಂದರೆ ದೇವರು ನನ್ನಂತಹ ಕುರಿಗಳನ್ನು ಮೇಯಿಸುವ ಕುರಿಗಾಹಿ - ಎಂದು ಇದರರ್ಥ. ಆದ್ದರಿಂದ ಕ್ಯಾಂಡಿ ಕೇನ್ ಜೀಸಸ್ ಒಬ್ಬ ಕುರಿಗಾಹಿಯೆಂಬುದನ್ನು ನಮಗೆ ಮನವರಿಕೆ ಮಾಡಿಕೊಡುತ್ತದೆ. ಜೊತೆಗೆ ಈತ ನಮ್ಮನ್ನು ಅತ್ತಿತ್ತ ಸುತ್ತ-ಮುತ್ತ ಕಳೆದುಹೋಗದಂತೆ ಮತ್ತು ನಮಗೆ ನೋವಾಗದಂತೆ ಕಾಪಾಡುತ್ತಾನೆ ಎಂದು ಇದು ಸಾರುತ್ತದೆ.
"J" ಆಕಾರ: ಕ್ಯಾಂಡಿ ಕೇನ್ "J" ಆಕಾರದಲ್ಲಿದೆ. ಇಂಗ್ಲೀಷ್ ಭಾಷೆಯಲ್ಲಿ "J" ಎಂದರೆ ಜೀಸಸ್ ಎಂದೂ ಸಹ ಸೂಚಿಸುತ್ತದೆ. ಇದು ಸಹ ನಮಗೆ ಜೀಸಸ್ ಕ್ರೈಸ್ಟ್ ಕುರಿತು ಯಾವಾಗ ಬೇಕಾದರು ನೆನಪಿಗೆ ತರುತ್ತದೆ.
ಕ್ಯಾಂಡಿ ಕೇನ್‍ನ ಬಣ್ಣಗಳು: ಕ್ಯಾಂಡಿ ಕೇನನ್ನು ಉತ್ಪಾದನೆ ಮಾಡಿದ ಸಮಯದಲ್ಲಿ ಅದನ್ನು ಸ್ವಚ್ಛ ಬಿಳುಪಿನಲ್ಲಿ ತಯಾರಿಸಲಾಗಿತ್ತು. ಬಿಳಿ ಎಂಬ ಬಣ್ಣವೇ ಪವಿತ್ರತೆಯನ್ನು ಸೂಚಿಸುತ್ತದೆ ಮತ್ತು ಜೀಸಸ್ ಸಹ ಯಾವುದೇ ಕಲೆಗಳಿಲ್ಲದೆ ಬಿಳಿಯ ಬಣ್ಣದಂತೆ ಪವಿತ್ರವಾಗಿದ್ದನು ಎಂದು ಇದು ಸೂಚಿಸುತ್ತಿತ್ತು. ನಂತರ ಇದಕ್ಕೆ ಕೆಂಪು ಬಣ್ಣವನ್ನು ಸುರುಳಿಯಾಕಾರವಾಗಿ ಬಳಿಯಲಾಯಿತು. ಕೆಂಪು ನಮಗೆ ಜೀಸಸ್‍ರ ಪವಿತ್ರ ರಕ್ತವನ್ನು ಮತ್ತು ಆತ ಮಾನವೀಯತೆಗಾಗಿ ಮಾಡಿದ ತ್ಯಾಗವನ್ನು ನೆನಪಿಗೆ ತರುತ್ತದೆ.
ಬೈಬಲ್ ನಮಗೆ ಜೀಸಸ್ ಹೇಗೆ ಕ್ರೂರವಾಗಿ ಹಿಂಸಿಸಲ್ಪಟ್ಟನು ಮತ್ತು ಹೇಗೆ ಆತನ ಬೆನ್ನಿನ ಮೇಲೆ ಬಾಸುಂಡೆಗಳು ಬಂದಿದ್ದವು ಎಂಬುದನ್ನು ತಿಳಿಸುತ್ತದೆ. ಇನ್ನೂ ಮುಂದೆ ಸಾಗುವ ಬೈಬಲ್ ಈ ಬಾಸುಂಡೆಗಳು ನಮಗೆಲ್ಲ ಚೇತರಿಸಿಕೊಳ್ಳುವ ಶಕ್ತಿಯನ್ನು ನೀಡಿದವು ಎಂದು ಸಹ ಹೇಳುತ್ತದೆ. ಆದ್ದರಿಂದಲೆ ಕ್ಯಾಂಡಿ ಕೇನ್ ಮೇಲಿನ ಕೆಂಪು ಗೆರೆಗಳು ನಮಗೆ ಜೀಸಸ್ ನರಳಿ ಸತ್ತರು ಎಂದು ತಿಳಿಸುತ್ತದೆ ಮತ್ತು ಅವರ ನೆನಪಿನಲ್ಲಿ ನಾವು ಪರಿಪೂರ್ಣವಾದ ಜೀವನವನ್ನು ಜೀವಿಸಬೇಕು ಎಂದು ಸಾರುತ್ತದೆ.
ಸಿಹಿಯ ರುಚಿ: ಕ್ಯಾಂಡಿ ಕೇನ್ ನಮಗೆ ಜೀಸಸ್ ಮನುಕುಲದ ಮೇಲೆ ಹೊಂದಿದ್ದ ಪ್ರೀತಿಯನ್ನು ನೆನಪಿಸುತ್ತದೆ
ಗಟ್ಟಿಯಾದ ಮಿಠಾಯಿ: ಕ್ಯಾಂಡಿಯ ಗಟ್ಟಿತನವು ನಮಗೆ ಕ್ರೈಸ್ತರ ಚರ್ಚ್‍ನ ಬುನಾದಿಯು ಗಟ್ಟಿಯಾದ ಬಂಡೆಗಲ್ಲುಗಳ ಮೇಲೆ ನಿರ್ಮಾಣವಾಗಿದೆ ಎಂಬ ಅಂಶವನ್ನು ಸಾರುತ್ತದೆ.
ಮಿಂಟಿ ಸ್ವಾದ: ಕ್ಯಾಂಡಿಯ ಪೆಪ್ಪರ್‌ಮಿಂಟ್ ಸ್ವಾದವು "ಹಿಸ್ಸೊಪ್"ನ ಬಳಕೆಯನ್ನು ಪ್ರತಿನಿಧಿಸುತ್ತದೆ. ಇದೊಂದು ಗಿಡಮೂಲಿಕೆಯಾಗಿದ್ದು, ಬೈಬಲ್‍ನ ಹಳೆಯ ಒಡಂಬಡಿಕೆಯಲ್ಲಿ ಇದರ ಉಲ್ಲೇಖ ಬಂದಿದೆ.
ಆದರು ಈ ಎಲ್ಲಾ ಅಂಶಗಳನ್ನು ಸತ್ಯ ಎಂದು ಸಾರುವ ಯಾವುದೇ ಐತಿಹಾಸಿಕ ಪುರಾವೆಗಳು ಸಹ ನಮ್ಮ ಬಳಿ ಇಲ್ಲ. ಆದರೂ ಈ ಕ್ರಿಸ್‍ಮಸ್‍ಗೆ ಸ್ವಾದವನ್ನು ಹೆಚ್ಚಿಸಲು ಕ್ಯಾಂಡಿ ಕೇನ್ ಬೇಕು ಎಂದು ಕೋರೋಣ. ಸತ್ಯವಿರಲಿ ಅಲ್ಲದಿರಲಿ ಈ ಮೇಲಿನ ಅಂಶಗಳನ್ನು ನಾವು ಯಾವುದನ್ನು ಸಹ ತಳ್ಳಿಹಾಕುವಂತಿಲ್ಲ. ಏಕೆಂದರೆ ವರ್ಷಾನುಗಟ್ಟಲೆಯಿಂದ ಈ ಕ್ಯಾಂಡಿ ಕೇನ್ ಮತ್ತು ಕ್ರಿಸ್‍ಮಸ್ ಒಂದಕ್ಕೊಂದು ಅವಿನಾಭಾವ ಸಂಬಂಧವನ್ನು ಹೊಂದಿವೆ. ಇವೆಲ್ಲ ಕಟ್ಟು ಕಥೆಗಳು, ಯಾರೋ ಇದನ್ನು ಸೃಷ್ಟಿಸಿ ಗಾಳಿಸುದ್ದಿಯಾಗಿ ಹಬ್ಬಿಸಿದ್ದಾರೆ ಎಂದು ಸಹ ಇದರ ಮೇಲೆ ಆರೋಪಗಳಿದ್ದರೂ, ಆ ಗಾಳಿ ಸುದ್ದಿಗಳು ಸಹ ಕ್ಯಾಂಡಿಯಂತೆ ಮಧುರ ಎಂದು ಸ್ವೀಕರಿಸೋಣ.
ಇನ್ನು ಕೆಲವರ ಪ್ರಕಾರ ಈ ಮಿಠಾಯಿಯು ಊಹೆಗು ನಿಲುಕದಷ್ಟು ಕಾಲದಿಂದ ಅಸ್ತಿತ್ವದಲ್ಲಿದೆ ಎಂದು ಹೇಳುತ್ತಾರೆ. ಏನೇ ಆದರು ಈ ಸಿಹಿ ಅದರ ಆಕಾರ, ರುಚಿ ಮತ್ತು ಸ್ವರೂಪ ಹಾಗು ಅದು ತಳುಕು ಹಾಕಿಕೊಂಡಿರುವ ವಿಚಾರಗಳೆಲ್ಲವು ಕ್ರಿಸ್‍ಮಸ್ ಸುತ್ತಲೇ ಸುತ್ತುತ್ತವೆ. ಕುರಿಗಾಹಿಗಳ ಕೋಲಿನಂತಹ ಆಕಾರ, ಕ್ರಿಸ್‍ಮಸ್ ಟ್ರೀಗೆ ನೇತು ಹಾಕಲು ಸುಲಭವಾದ ಅಲಂಕಾರಿಕ ವಸ್ತು ಇವೆಲ್ಲವನ್ನು ನೋಡಿದಾಗ ಇದು ಕ್ರಿಸ್‍ಮಸ್‍ನ ಅವಿಭಾಜ್ಯ ಅಂಗವೆಂಬುದರಲ್ಲಿ ಯಾವುದೇ ಸಂಶಯವಿಲ್ಲ. ಈ ಸಂಪ್ರದಾಯವು ಮೋಜಿನ ಜೊತೆಗೆ ನೆನಪಿನ ಮೆರವಣಿಗೆಯನ್ನು ಹೊರಡಿಸುತ್ತದೆ.



Click it and Unblock the Notifications
















