Latest Updates
-
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ!
ಚೈತ್ರ ನವರಾತ್ರಿ 2022: ದುರ್ಗಾ ಪೂಜೆ ಸಮಯದಲ್ಲಿ ಮಾಡಬೇಕಾದ, ಮಾಡಬಾರದ ಕೆಲಸಗಳು
Short Story
oi-Meghashree Devaraju
ಶುಕ್ಲ ಪ್ರತಿಪಚೈತ್ರ ಅಂದರೆ ಶಾರ್ದಿಯಾ ನವರಾತ್ರಿಯಂದು ದೇವಿಯು ಪ್ರತೀ ಬಾರಿ ವಿವಿಧ ವಾಹನಗಳಲ್ಲಿ ಭೂಮಿಗೆ ಬರುತ್ತಾಳೆ ಎನ್ನುವ ನಂಬಿಕೆಯಿದೆ. ಈ ಬಾರಿ ಚೈತ್ರ ಎಂದರೆ ವಸಂತ ನವರಾತ್ರಿ 2022ನೇ ಸಾಲಿನ ಚೈತ್ರ ನವರಾತ್ರಿ ಏಪ್ರಿಲ್ 2 ರಿಂದ ಏಪ್ರಿಲ್ 7ರವರೆಗೆ ಇರಲಿದೆ. ಈ 9 ದಿನಗಳಲ್ಲಿ, ಜನರು ದುರ್ಗಾ ದೇವಿಯ ಎಲ್ಲಾ ಒಂಬತ್ತು ಅವತಾರಗಳನ್ನು ಪೂಜಿಸುತ್ತಾರೆ, ದೇವಿ ಆರಾಧನೆಯನ್ನು ಭಾರತದಾದ್ಯಂತ ಉತ್ಸಾಹದಿಂದ ಆಚರಿಸಲಾಗುತ್ತದೆ.

ಭಾರತದಲ್ಲಿ ಒಂದು ವರ್ಷದಲ್ಲಿ ವಿಭಿನ್ನ ಸಂದರ್ಭಗಳಲ್ಲಿ ನವರಾತ್ರಿ ಆಚರಿಸಲಾಗುತ್ತದೆ. ಚೈತ್ರ ನವರಾತ್ರಿ - ಮಾಘ ಗುಪ್ತ ನವರಾತ್ರಿ, ಶರದ್ ನವರಾತ್ರಿ ಮತ್ತು ಆಷಾಢ ಗುಪ್ತ ನವರಾತ್ರಿ. ಆದರೆ, ಚೈತ್ರ ನವರಾತ್ರಿ ಮತ್ತು ಶರದ್ ನವರಾತ್ರಿ ಮಾತ್ರ ಮುಖ್ಯ. ಚೈತ್ರ ನವರಾತ್ರಿಯು ಪ್ರತಿ ವರ್ಷ ಚೈತ್ರ ದ ತಿಥಿಯಿಂದ ಆರಂಭವಾಗಿ ನವಮಿ ತಿಥಿಯವರೆಗೆ ನಡೆಯುತ್ತದೆ. ಈ ವರ್ಷ, ಚೈತ್ರ ನವರಾತ್ರಿಯು ಏಪ್ರಿಲ್ 2 ಪ್ರಾರಂಭವಾಗಿ ಏಪ್ರಿಲ್ 7ರಂದು ಕೊನೆಗೊಳ್ಳಲಿದೆ. ದುರ್ಗಾ ದೇವಿಯ ಆಶೀರ್ವಾದವನ್ನು ಪಡೆಯಲು ಬಯಸುವವರು, ಈ 9 ದಿನಗಳಲ್ಲಿ ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳು ಕೆಲವು ಇದೆ.
ಯಾವುವು ಮುಂದೆ ನೋಡೋಣ:
ಚೈತ್ರ ನವರಾತ್ರಿ ಸಮಯದಲ್ಲಿ ಮಾಡಬೇಕಾದ ಸಂಗತಿಗಳು
* 9 ದಿನಗಳವರೆಗೆ ಉಪವಾಸ ಮಾಡಲು ಪ್ರಯತ್ನಿಸಿ. ಉಪವಾಸವು ದೇಹವನ್ನು ಶುದ್ಧಗೊಳಿಸುತ್ತದೆ.
* ನೀವು ಉಪವಾಸವಿಲ್ಲದಿದ್ದರೂ ನಿಮ್ಮ ಮನೆಯಲ್ಲಿ ಸಾತ್ವಿಕ ಆಹಾರವನ್ನು ತಯಾರಿಸಿ.
* 9 ದಿನಗಳ ಕಾಲ ಪ್ರತಿದಿನ ದುರ್ಗಾ ದೇವಿಯ ದೇವಸ್ಥಾನಕ್ಕೆ ಭೇಟಿ ನೀಡಿ.
* ಪ್ರತಿದಿನ ದುರ್ಗಾ ದೇವಿಗೆ ಶುದ್ಧ ನೀರನ್ನು ಅರ್ಪಿಸಿ.
* ಅಖಂಡ ದೀಪವನ್ನು 9 ದಿನಗಳವರೆಗೆ ಬೆಳಗಿಸಬೇಕು.
* ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ದುರ್ಗಾ ಚಾಲೀಸವನ್ನು ಓದಿ.
* ಇತರರ ಬಗ್ಗೆ ಕೆಟ್ಟದಾಗಿ ಯೋಚಿಸಬೇಡಿ ಮತ್ತು ನಿಮ್ಮ ಹೃದಯವನ್ನು ಸ್ವಚ್ಛವಾಗಿಟ್ಟುಕೊಳ್ಳಿ.
* ಇತರರಿಗೆ ಸಹಾಯ ಮಾಡಿ - ಇದು ಯಾವಾಗಲೂ ಭಕ್ತಿಯ ಅತ್ಯುತ್ತಮ ರೂಪವಾಗಿದೆ.
* ಚೈತ್ರ ನವರಾತ್ರಿಯಲ್ಲಿ 9 ದಿನಗಳ ಕಾಲ ಲೈಂಗಿಕ ಕ್ರಿಯೆಯನ್ನು ತಪ್ಪಿಸಿ.
* ಮಾಂಸ ಮತ್ತು ಮದ್ಯವನ್ನು ಸಂಪೂರ್ಣವಾಗಿ ತ್ಯಜಿಸಬೇಕು.
* ಚೈತ್ರ ನವರಾತ್ರಿಯ ಒಂಬತ್ತು ದಿನಗಳಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿ ತಿನ್ನಬೇಡಿ.
* ನೀವು ಉಪವಾಸ ಮಾಡುತ್ತಿದ್ದರೆ ಸೂರ್ಯಾಸ್ತದ ಮೊದಲು ಸಂಪೂರ್ಣ ಭೋಜನವನ್ನು ಸೇವಿಸಬೇಡಿ.
* ಕಹಿ ಆಹಾರವನ್ನು ತಪ್ಪಿಸಿ.
* ಗಡ್ಡ ಅಥವಾ ಉಗುರುಗಳನ್ನು ಟ್ರಿಮ್ ಮಾಡುವುದು ಮತ್ತು ಕೂದಲು ಕತ್ತರಿಸುವುದನ್ನು ಮುಂದಿನ 9 ದಿನಗಳವರೆಗೆ ತಪ್ಪಿಸಬೇಕು.
Comments
English summary
Chaitra Navaratri 2022: Dos And Don'ts To Seek Blessings From Goddess Durga in kannada
Story first published: Thursday, March 24, 2022, 19:49 [IST]
Other articles published on Mar 24, 2022



Click it and Unblock the Notifications


