For Quick Alerts
ALLOW NOTIFICATIONS  
For Daily Alerts

ಅಚ್ಚರಿ ಲೋಕಕ್ಕೆ ತಳ್ಳುವ 'ಪುನರ್ಜನ್ಮದ' ನೈಜ ಘಟನೆಗಳು

By manu
|

ಸಾವಿನ ನಂತರ ಏನಾಗುತ್ತದೆ ಎಂಬ ಪ್ರಶ್ನೆಗೆ ವಿವಿಧ ಧರ್ಮಗಳಲ್ಲಿ ವಿವಿಧವಾದ ಉತ್ತರಗಳು ಸಿಗುತ್ತವೆ. ಹಿಂದೂ ಧರ್ಮದ ಪ್ರಕಾರ ಸಾವಿನ ಬಳಿಕ ದೇಹದಿಂದ ಆತ್ಮ ಹೊರಹೋಗಿ ಬೇರೊಂದು ಶರೀರವನ್ನು ಪ್ರವೇಶಿಸುತ್ತದೆ. ಆದ್ದರಿಂದ ದೇಹಕ್ಕೆ ಸಾವೇ ಹೊರತು ಆತ್ಮಕ್ಕೆ ಸಾವಿಲ್ಲ ಎನ್ನುತ್ತದೆ. ಇದನ್ನೇ ಪುನರ್ಜನ್ಮ ಎನ್ನುತ್ತೇವೆ. ಆದ್ದರಿಂದಲೇ ಹೆಚ್ಚಿನವರು ತಮ್ಮ ಆತ್ಮೀಯತೆ ಮತ್ತು ಪ್ರೀತಿಯನ್ನು ತೋರ್ಪಡಿಸಲು ಮುಂದಿನ ಜನ್ಮದಲ್ಲೂ ನಿನ್ನ ಹೊಟ್ಟೆಯಲ್ಲಿಯೇ ಮತ್ತೊಮ್ಮೆ ಹುಟ್ಟಿ ಬರುವೆ, ಏಳೇಳು ಜನ್ಮಕ್ಕೂ ನೀವೇ ನನಗೆ ಗಂಡನಾಗಬೇಕು ಎಂಬ ಮಾತುಗಳನ್ನು ಬಳಸುತ್ತಾರೆ. ಹಿ೦ದೂ ಧರ್ಮದಲ್ಲಿ ಬಿಚ್ಚಿಟ್ಟ ಪುನರ್ಜನ್ಮದ ವಿಸ್ಮಯಕಾರಿ ರಹಸ್ಯವೇನು?

ಆದರೆ ವಿಜ್ಞಾನ ಪುನರ್ಜನ್ಮವನ್ನು ಒಪ್ಪುವುದಿಲ್ಲ. ಏಕೆಂದರೆ ವಿಜ್ಞಾನಕ್ಕೆ ಯಾವುದೇ ವಿಷಯವನ್ನು ಪ್ರತಿಪಾದಿಸಲು ಬಲವಾದ ಸಾಕ್ಷ್ಯ ಮತ್ತು ಪುರಾವೆಗಳು ಬೇಕು. ಪುನರ್ಜನ್ಮ, ಆತ್ಮ, ಪಿಶಾಚಿ, ದೆವ್ವ, ಅತೀಂದ್ರಿಯ ಶಕ್ತಿಗಳು ಮೊದಲಾದವುಗಳನ್ನು ಇದೇ ಕಾರಣಕ್ಕೆ ವಿಜ್ಞಾನದ ಮೂಲಕ ಸತ್ಯವೆಂದು ತಿಳಿಸಲು ಸಾಧ್ಯವಿಲ್ಲ. ವಿಸ್ಮಯ ಜಗತ್ತು: ಸಾವಿನ ನಂತರ ನಡೆಯುವುದೆಲ್ಲ ವಿಚಿತ್ರ

ಆದರೆ ನಿಜಜೀವನದಲ್ಲಿ ನಡೆದ ಹಲವಾರು ಘಟನೆಗಳು ಈ ಅತೀಂದ್ರಿಯ ಶಕ್ತಿಗಳು ನಿಜ ಎಂದು ತಿಳಿಸುತ್ತವೆ. ಉತ್ತರಪ್ರದೇಶದ ಗೋರಖ್ಪುರದ ಗೀತಾ ಪ್ರೆಸ್ ಪ್ರಕಾಶನ ಇಂತಹ ಮೈ ನವಿರೇಳಿಸುವ ನಿಜಸಂಗತಿಗಳನ್ನು ಸಂಗ್ರಹಿಸಿ ಪ್ರಕಟಿಸಿದೆ. ಅದರಲ್ಲಿ ಪ್ರಮುಖವಾದ ಘಟನೆಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ವಿವರಿಸಲಾಗಿದೆ. ಆದರೆ ಇದನ್ನು ನಂಬುವುದೂ ಬಿಡುವುದೂ ಅವರರವರಿಗೆ ಬಿಟ್ಟ ಆಯ್ಕೆ...

ಕೋಸಿಕಾಲಾ ಗ್ರಾಮದ ನಿರ್ಮಲ್ ಪ್ರಕಾಶನಾಗಿ ಜನ್ಮತಾಳಿದ ಕಥೆ

ಕೋಸಿಕಾಲಾ ಗ್ರಾಮದ ನಿರ್ಮಲ್ ಪ್ರಕಾಶನಾಗಿ ಜನ್ಮತಾಳಿದ ಕಥೆ

ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಕೋಸಿಕಾಲಾ ಗ್ರಾಮ, ಇಸವಿ 1950. ಈ ಗ್ರಾಮದ ನಿವಾಸಿ ಭೋಲೆನಾಥ ಜೈನ್ ರವರ ಮಗ ನಿರ್ಮಲ್ ಎಂಬುವನು ಸಿಡುಬು ರೋಗದಿಂದ ಪ್ರಾಣ ತ್ಯಜಿಸಿದ್ದ. ಇದರ ಸರಿಯಾಗಿ ಒಂದು ವರ್ಷದ ಬಳಿಕ, ಅಂದರೆ 1951ರಲ್ಲಿ ಸಮೀಪದ ಛಾಟಾ ಗ್ರಾಮದ ಬಿ.ಎಲ್ ವಾಶರ್ನೆ ಎಂಬುವರ ಮನೆಯಲ್ಲಿ ಗಂಡು ಮಗುವಿನ ಜನ್ಮವಾಯಿತು. ಆ ಮಗುವಿಗೆ ಅವರು ಪ್ರಕಾಶ್ ಎಂದು ನಾಮಕರಣ ಮಾಡಿದರು. ಮಗುವಾಗಿದ್ದಾಗ ಏನೂ ವಿಶೇಷ ಕಂಡುಬರದ ಪ್ರಕಾಶ ಸುಮಾರು ನಾಲ್ಕುವರೆ ವರ್ಷವಾಗುತ್ತಲೂ ತನ್ನ ವಯಸ್ಸಿಗೂ ಮೀರಿದ ಮಾತನಾಡಲು ತೊಡಗಿದ. ತಾನು ಸಮೀಪದ ಕೋಸಿಕಾಲಾ ಗ್ರಾಮದವನು, ತನ್ನ ಹೆಸರು ನಿರ್ಮಲ್, ನನಗೆ ಹಳೆಯ ಮನೆಗೆ ಹೋಗಬೇಕು ಎಂದೆಲ್ಲಾ ಹಠಹಿಡಿಯತೊಡಗಿದ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

Image courtesy- Dailybhaskar

ಕೋಸಿಕಾಲಾ ಗ್ರಾಮದ ನಿರ್ಮಲ್ ಪ್ರಕಾಶನಾಗಿ ಜನ್ಮತಾಳಿದ ಕಥೆ

ಕೋಸಿಕಾಲಾ ಗ್ರಾಮದ ನಿರ್ಮಲ್ ಪ್ರಕಾಶನಾಗಿ ಜನ್ಮತಾಳಿದ ಕಥೆ

ಮಗುವಿನ ತೊದಲು ಮಾತಿಗೆ ಹೆಚ್ಚಿನ ಆದ್ಯತೆ ನೀಡದ ಹಿರಿಯರು ಏನೋ ಸಿಹಿ ಕೊಟ್ಟು ಸುಮ್ಮನಾಗಿಸುತ್ತಿದ್ದರು. ಆದರೆ ಇದು ದಿನೇ ದಿನೇ ಹೆಚ್ಚುತ್ತಾ ಹೋಯ್ತು. ಸುಮಾರು ಐದು ವರ್ಷದವನಾದಾಗ ಇವನ ಉಪಟಳ ತಾಳಲಾಗದೇ ಒಂದು ಬಾರಿ ಆ ಗ್ರಾಮಕ್ಕೆ ಕೊಂಡೊಯ್ದು ಬಂದರೆ ಸುಮ್ಮನಾಗಬಹುದು ಎಂದೆಣೆಸಿ ಮಗುವಿನ ಚಿಕ್ಕಪ್ಪ ಆತನನ್ನು ಒಂದು ದಿನ ಕೋಸಿಕಾಲಾ ಗ್ರಾಮಕ್ಕೆ ಕರೆದೊಯ್ದರು.

ಕೋಸಿಕಾಲಾ ಗ್ರಾಮದ ನಿರ್ಮಲ್ ಪ್ರಕಾಶನಾಗಿ ಜನ್ಮತಾಳಿದ ಕಥೆ

ಕೋಸಿಕಾಲಾ ಗ್ರಾಮದ ನಿರ್ಮಲ್ ಪ್ರಕಾಶನಾಗಿ ಜನ್ಮತಾಳಿದ ಕಥೆ

ಅದು ಇಸವಿ 1956, ಪ್ರಕಾಶ ಗ್ರಾಮದೊಳಕ್ಕೆ ಬಂದೊಡನೆಯೇ ತನ್ನದೇ ಗ್ರಾಮದಂತೆ ಒಂದೊಂದು ವಸ್ತುವನ್ನೂ ಗುರುತಿಸುತ್ತಾ ಹೋದ. ಆದರೆ ತನ್ನ ಹಳೆಯ ಮನೆಗೆ ಬಂದಾಗ ಮನೆಯನ್ನು ಗುರುತಿಸಿದರೂ ಭೋಲೆನಾಥ ಜೈನ್ ಮನೆಯಲ್ಲಿರದ ಕಾರಣ ಸುಮ್ಮನೇ ವಾಪಸಾಗಬೇಕಾಯ್ತು.

ಕೋಸಿಕಾಲಾ ಗ್ರಾಮದ ನಿರ್ಮಲ್ ಪ್ರಕಾಶನಾಗಿ ಜನ್ಮತಾಳಿದ ಕಥೆ

ಕೋಸಿಕಾಲಾ ಗ್ರಾಮದ ನಿರ್ಮಲ್ ಪ್ರಕಾಶನಾಗಿ ಜನ್ಮತಾಳಿದ ಕಥೆ

ಅವಕ್ಕಾದ ಪ್ರಕಾಶನ ಚಿಕ್ಕಪ್ಪ ಇನ್ನೂ ಹೆಚ್ಚಿನ ಹೊತ್ತು ಕಳೆದರೆ ಎಡವಟ್ಟಾಗಬಹುದೆಂದು ಮಗುವನ್ನು ಎತ್ತಿಕೊಂಡು ಮನೆಗೆ ಹಿಂದಿರುಗಿ ಎಲ್ಲರಿಗೂ ವಿಷಯ ತಿಳಿಸಿದ. ಇದನ್ನು ಪುರ್ನರ್ಜನ್ಮದ ಕಥೆ ತಿಳಿದು ಪ್ರಕಾಶ ಹಳೆಯದೆಲ್ಲವನ್ನೂ ಮರೆಯುವಂತೆ ಮಾಡಲು ಇನ್ನಿಲ್ಲದ ಪ್ರಯತ್ನ ನಡಿಸಿದರು. ಆದರೆ ಪ್ರಕಾಶನ ಪೂರ್ವಜನ್ಮದ ನೆನಪುಗಳು ದಿನೇದಿನೇ ಹೆಚ್ಚುತ್ತಾ ಹೋಯ್ತು. 1961ರಲ್ಲಿ ಪ್ರಕಾಶ ಹತ್ತು ವರ್ಷದ ಬಾಲಕನಾಗಿದ್ದಾಗ ಯಾವುದೋ ಕೆಲಸಕ್ಕೆ ಭೋಲೆನಾಥ ಜೈನ್ ಛಾಟಾ ಗ್ರಾಮಕ್ಕೆ ಆಗಮಿಸಿದ್ದ.

ಕೋಸಿಕಾಲಾ ಗ್ರಾಮದ ನಿರ್ಮಲ್ ಪ್ರಕಾಶನಾಗಿ ಜನ್ಮತಾಳಿದ ಕಥೆ

ಕೋಸಿಕಾಲಾ ಗ್ರಾಮದ ನಿರ್ಮಲ್ ಪ್ರಕಾಶನಾಗಿ ಜನ್ಮತಾಳಿದ ಕಥೆ

ಯಾವುದೋ ಸಾರ್ವಜನಿಕ ಸ್ಥಳದಲ್ಲಿ ಜನರು ಲೋಕಾಭಿರಾಮವಾಗಿ ಮಾತನಾಡುತ್ತಿದ್ದಾಗ ಹೀಗೊಂದು ಬಾಲಕನಿಗೆ ಹಳೆಯ ಜನ್ಮದ ನೆನಪುಗಳು ಬಂದಿವೆ, ಹಿಂದಿನ ಜನ್ಮದಲ್ಲಿ ತಾನು ನಿರ್ಮಲ್ ಆಗಿದ್ದೆ ಎಂದೆಲ್ಲಾ ಹೇಳುತ್ತಾನೆ ಎಂಬ ಮಾತುಗಳನ್ನು ಸುಮ್ಮನೇ ಕೇಳುತ್ತಿದ್ದ ಭೋಲೆನಾಥನಿಗೆ ನಿರ್ಮಲ್ ಎಂಬ ಪದ ಕಿವಿಯ ಮೇಲೆ ಬಿದ್ದಿದ್ದೇ ತಡ, ಮೈರೋಮಗಳೆಲ್ಲ ಸೆಟೆದವು. ಹರಟೆ ಕೊಚ್ಚುತ್ತಿದ್ದ ಜನರಲ್ಲಿಯೇ ಕೊಂಚ ವಿಚಾರಿಸಿ ನೇರವಾಗಿ ವಾಶರ್ನೆಯವರ ಮನೆಗೆ ಬಂದ. ಮನೆಗೆ ಅಡಿಯಿಟ್ಟನೋ ಇಲ್ಲವೋ ಹತ್ತು ವರ್ಷದ ಬಾಲಕ ಪ್ರಕಾಶ ತನ್ನ ಹಿಂದಿನ ಜನ್ಮದ ತಂದೆಯನ್ನು ಗುರುತಿಸಿ ನೇರವಾಗಿ ಹೋಗಿ ಅಪ್ಪಿಕೊಂಡ. ಎಲ್ಲರಿಗೂ ತನ್ನ ಹಿಂದಿನ ಜನ್ಮದ ಬಗ್ಗೆ ಪುರಾವೆ ನೀಡಲು ಭೋಲೆನಾಥ ಮತ್ತು ನಿರ್ಮಲ್ ರಿಗೆ ಮಾತ್ರ ಗೊತ್ತಿದ್ದ ಹಲವು ಖಾಸಗಿ ಸಂಗತಿಗಳನ್ನು ತಿಳಿಸಿ ತಾನು ಹಿಂದಿನ ಜನ್ಮದ ನಿರ್ಮಲ್ ಹೌದು ಎಂದು ಅನ್ನಿಸಿಕೊಂಡ.

 ಆಗ್ರಾದ ಮಂಜುವಿಗೆ ಎರಡು ಮನೆಗಳು

ಆಗ್ರಾದ ಮಂಜುವಿಗೆ ಎರಡು ಮನೆಗಳು

ಈ ಘಟನೆ ನಡೆದದ್ದು ಆಗ್ರಾ ನಗರದಲ್ಲಿ. ಹಿಂದೊಮ್ಮೆ ಆಗ್ರಾದ ಬಡಾವಣೆಯೊಂದರ ಅಂಚೆ ವಿತರಕನಾಗಿದ್ದ ಪಿ.ಎನ್. ಭಾರ್ಗವನಿಗೆ ಮಂಜು ಎಂಬ ಹೆಸರಿನ ಮಗಳೊಬ್ಬಳಿದ್ದಳು. ಆಕೆಗೆ ಎರಡು ವರ್ಷವಾಗುತ್ತಿದ್ದಂತೆಯೇ ತನಗೆ ಎರಡು ಮನೆಗಳಿವೆ ಎಂಬ ಮಾತುಗಳನ್ನು ಆಡಲು ತೊಡಗಿದಳು. ಮಗುವಿನ ಮಾತುಗಳಿಗೆ ಹೆಚ್ಚಿನ ಮನ್ನಣೆ ನೀಡದ ಹಿರಿಯರು ಯಾವಾಗ ಆಗ್ರಾ ನಗರದಲ್ಲಿ ಪಯಣಿಸುವಾಗ ಧುಲಿಯಾಗಂಜ್ ಎಂಬ ಭವ್ಯ ಬಂಗಲೆಯ ಎದುರಿಗೆ ಬಂದಾಗ ಈ ಬಂಗಲೆ ತನ್ನದು ಎಂದು ಹೇಳತೊಡಗಿದಳೋ, ಆಗಿನಿಂದ ಕೊಂಚ ಅಪ್ರತಿಭರಾಗತೊಡಗಿದರು. ಬರೆಯ ಒಂದು ಬಾರಿ ಹೇಳಿದ್ದರೆ ಮಗು ತಮಾಷೆ ಮಾಡುತ್ತಿದೆ ಎನ್ನಬಹುದಿತ್ತು. ಆದರೆ ಪ್ರತಿಬಾರಿಯೂ ಮಗು ಈ ಮನೆ ತನ್ನದೇ ಎಂದು ಎದೆ ತಟ್ಟಿ ಹೇಳುತ್ತಿರುವುದು ವಿಸ್ಮಯಕ್ಕಿಂತಲೂ ಹೆಚ್ಚಾಗಿ ಆತಂಕ ಮೂಡಿಸಿತು.

Image courtesy- Dailybhaskar

ಆಗ್ರಾದ ಮಂಜುವಿಗೆ ಎರಡು ಮನೆಗಳು

ಆಗ್ರಾದ ಮಂಜುವಿಗೆ ಎರಡು ಮನೆಗಳು

ಒಂದು ದಿನ ಯಾವುದಕ್ಕೂ ಇರಲಿ ಎಂದು ಹಿರಿಯರು ಮಗುವನ್ನು ಈ ಬಂಗಲೆಯ ಒಳಗೆ ಕರೆದುಕೊಂಡು ಹೋದರು. ಆ ಬಂಗಲೆಯ ಮಾಲಿಕರಾಗಿದ್ದ ಪ್ರಕಾಶ್ ಸಿಂಗ್ ಚತುರ್ವೇದಿಯವರು ಆಗಂತುಕರನ್ನು ಬರಮಾಡಿಕೊಂಡು ವಿಷಯ ತಿಳಿಯಲು ಪ್ರಯತ್ನಿಸಿದರು. ಆಗ ಬಾಲಕಿ ಮಂಜು ಆ ಮನೆಯ ಮಾಲಿಕರಿಗೆ ಮತ್ತು ಸದಸ್ಯರಿಗೆ ಮಾತ್ರ ತಿಳಿದಿದ್ದ ಹಲವಾರು ಖಾಸಗಿ ಮತ್ತು ಗುಟ್ಟಿನ ವಿಷಯಗಳನ್ನು ಸ್ಪಷ್ಟವಾಗಿ ತಿಳಿಸಿದಳು. ಅವಕ್ಕಾದ ಚತುರ್ವೇದಿಯವರಿಗೆ ಈ ವಿಷಯಗಳು 1952 ರಲ್ಲಿ ಗತಿಸಿದ್ದ ಅವರ ಚಿಕ್ಕಮ್ಮರಿಗೆ ಮಾತ್ರ ಗೊತ್ತಿದ್ದು ಈಗ ಮಂಜುವಿನ ದೇಹದಲ್ಲಿ ಮತ್ತೊಮ್ಮೆ ಬಂದಿದ್ದಾರೆ ಎಂದು ಖಾತರಿಯಾಯಿತು.

ಪ್ರವೀಣ್ ಚಂದ್ರರ ಮಗಳು ರಜೂಲ್ ಮತ್ತು ಜೂನಾಗಢದ ಗೀತಾ

ಪ್ರವೀಣ್ ಚಂದ್ರರ ಮಗಳು ರಜೂಲ್ ಮತ್ತು ಜೂನಾಗಢದ ಗೀತಾ

ಇಸವಿ 1960, ಪ್ರವೀಣ್ ಚಂದ್ರ ದಂಪತಿಗಳಿಗೆ ಹೆಣ್ಣು ಮಗುವೊಂದು ಹುಟ್ಟಿತು. ಆಕೆಯನ್ನು ರಜೂಲ್ ಎಂದು ನಾಮಕರಣ ಮಾಡಿ ಅಕ್ಕರೆಯಿಂದ ಸಾಕುತ್ತಿದ್ದರು. ಮೂರು ವರ್ಷದವರೆಗೂ ಏನೂ ತೊಂದರೆಯಿರಲಿಲ್ಲ. ಆದರೆ ಮೂರು ವರ್ಷವಾದ ಬಳಿಕ ಆಕೆ ನಾನು ಜೂನಾಗಢ ಜಿಲ್ಲೆಯವಳೆಂದೂ ತನ್ನ ಹೆಸರು ಗೀತಾ ಎಂದೂ ಹೇಳತೊಡಗಿದಳು. ಮಗುವಿನ ಮುಗ್ಧ ಮಾತುಗಳು ಎಂದು ಪಾಲಕರು ನಿರ್ಲಕ್ಷಿಸಿದರೂ ಆಕೆಯ ಅಜ್ಜ ವಜುಭಾಯಿ ಶಾ ರವರಿಗೆ ಏನೋ ಅನುಮಾನವುಂಟಾಯಿತು. ಆಕೆಯ ಮಾತುಗಳನ್ನು ಸ್ಪಷ್ಟವಾಗಿ ಕೇಳಿಸಿಕೊಂಡು ಈ ಮಾತುಗಳಲ್ಲಿ ಎಷ್ಟು ಸತ್ಯವಿದೆ ಎಂದು ಅರಿಯಲು ಸ್ವತಃ ಜುನಾಗಢಕ್ಕೆ ಹೊರಟೇ ಬಿಟ್ಟರು.

ಪ್ರವೀಣ್ ಚಂದ್ರರ ಮಗಳು ರಜೂಲ್ ಮತ್ತು ಜೂನಾಗಢದ ಗೀತಾ

ಪ್ರವೀಣ್ ಚಂದ್ರರ ಮಗಳು ರಜೂಲ್ ಮತ್ತು ಜೂನಾಗಢದ ಗೀತಾ

ಜುನಾಗಢದಲ್ಲಿ ಹಲವಾರು ಕಡೆ ವಿಚಾರಿಸಿದ ಬಳಿಕ ಕೆಲವರು ಜೂನಾಗಢದ ಗೋಕುಲದಾಸ ಠಕ್ಕರ್ ಎಂಬುವರ ಹೆಸರು ಸೂಚಿಸಿದರು. ಅವರನ್ನು ಭೇಟಿಯಾದ ಬಳಿಕ ನಿಜಕ್ಕೂ ಗೋಕುಲದಾಸರಿಗೆ ಗೀತಾ ಎಂಬ ಮಗಳಿದ್ದು ಆಕೆ ಎರಡೂವರೆ ವರ್ಷವಾಗಿದ್ದಾಗ 1959ರಲ್ಲಿ ವಿಧಿವಶಳಾಗಿದ್ದಳು ಎಂಬ ಸತ್ಯ ತಿಳಿಯಿತು.

ಪ್ರವೀಣ್ ಚಂದ್ರರ ಮಗಳು ರಜೂಲ್ ಮತ್ತು ಜೂನಾಗಢದ ಗೀತಾ

ಪ್ರವೀಣ್ ಚಂದ್ರರ ಮಗಳು ರಜೂಲ್ ಮತ್ತು ಜೂನಾಗಢದ ಗೀತಾ

ಮನೆಗೆ ಹಿಂದಿರುಗಿದ ವಜುಭಾಯಿ ತಕ್ಷಣ ಯಾವುದೇ ಕ್ರಮ ಕೈಗೊಳ್ಳದೇ 1965ರವರೆಗೂ, ಅಂದರೆ ರಜೂಲ್ ಗೆ ಐದು ವರ್ಷವಾಗುವವರೆಗೂ ಕಾದರು. ಬಳಿಕ ಒಂದು ದಿನ ಆಕೆಯನ್ನು ಠಕ್ಕರ್ ಕುಟುಂಬದವರೊಡನೆ ಭೇಟಿ ಮಾಡಿಸಿದರು. ಅವರನ್ನೆಲ್ಲಾ ಕಂಡ ತಕ್ಷಣ ನಿನ್ನೆ ಮೊನ್ನೆ ಬೀಳ್ಕೊಟ್ಟವರಂತೆ ಪ್ರತಿಯೊಬ್ಬರನ್ನೂ ಗುರುತಿಸಿದ ರಜೂಲ್ ಎಲ್ಲರನ್ನೂ ಅವಕ್ಕಾಗಿಸಿದಳು. ಅಷ್ಟೇ ಅಲ್ಲ, ಹಿಂದಿನ ಜನ್ಮದಲ್ಲಿ ತಾನು ಯಾವ ದೇವಸ್ಥಾನಕ್ಕೆ ತನ್ನ ತಾಯಿ ಕರೆದುಕೊಂಡು ಹೋಗುತ್ತಿದ್ದಳು ಎಂಬುದನ್ನೂ ಗುರುತಿಸಿ ತೋರಿಸಿದಳು.

Image courtesy - Dailybhaskar

ದಿಲ್ಲಿಯ ಗೋಪಾಲನೇ ಮಧುರಾದ ಶಕ್ತಿಪಾಲ

ದಿಲ್ಲಿಯ ಗೋಪಾಲನೇ ಮಧುರಾದ ಶಕ್ತಿಪಾಲ

ಈ ಘಟನೆ ನಡೆದದ್ದು ದೆಹಲಿಯಲ್ಲಿ, 1956ರಲ್ಲಿ. ದೆಹಲಿಯ ನಿವಾಸಿಗಳಾದ ಗುಪ್ತಾ ಕುಟುಂಬದಲ್ಲಿ ಗಂಡುಮಗುವೊಂದು ಜನಿಸಿತು. ಮಗುವಿಗೆ ಗೋಪಾಲ ಎಂಬ ಹೆಸರನ್ನಿಟ್ಟು ಅತಿ ಮುದ್ದಿನಿಂದ ಸಾಕುತ್ತಿದ್ದರು. ಆದರೆ ಮಗು ಮಾತನಾಡಲು ಪ್ರಾರಂಭಿಸುತ್ತಿದ್ದಂತೆಯೇ ತಾನು ಮಥುರಾದವನು, ತನ್ನ ಹೆಸರು ಶಕ್ತಿಪಾಲ, ತನಗೆ ಮೂವರು ಸಹೋದರರು ಮತ್ತು ಅವರೇ ತನ್ನನ್ನು ಹೊಡೆದು ಕೊಂದಿದ್ದಾರೆ ಎಂದೆಲ್ಲಾ ಮಾತನಾಡಲು ತೊಡಗಿದ. ಅಷ್ಟೇ ಅಲ್ಲ, ತನಗೆ ಮಥುರಾದಲ್ಲಿ 'ಸುಖ್ ಸಂಚಾರಕ್' ಎಂಬ ಔಷಧಿ ಅಂಗಡಿಯೂ ಇದೆ ಎಂದು ಬಡಬಡಿಸಲು ತೊಡಗಿದ.

Image courtesy - Dailybhaskar

ದಿಲ್ಲಿಯ ಗೋಪಾಲನೇ ಮಧುರಾದ ಶಕ್ತಿಪಾಲ

ದಿಲ್ಲಿಯ ಗೋಪಾಲನೇ ಮಧುರಾದ ಶಕ್ತಿಪಾಲ

ಮೊದಮೊದಲು ಈ ಮಾತುಗಳನ್ನು ಅಲಕ್ಷಿಸಿದರೂ ಪದೇ ಪದೇ ಮಗು ಇದೇ ಮಾತುಗಳನ್ನು ಹೇಳುತ್ತಿರುವುದು ಗೋಪಾಲನ ತಂದೆಗೆ ಇದರಲ್ಲಿ ಏನಾದರೂ ಸತ್ಯವಿರಬೇಕು ಎಂದೆನ್ನಿಸಿತು. ಯಾವುದಕ್ಕೂ ಇರಲಿ ಎಂದು ಮಥುರಾ ನಗರಕ್ಕೆ ತನ್ನ ಕೆಲವು ಸ್ನೇಹಿತರೊಡನೆ ತೆರಳಿ ವಿಚಾರಿಸಲು ತೊಡಗಿದ. ಹೆಚ್ಚೇನೂ ಶ್ರಮವಿಲ್ಲದೇ 'ಸುಖ್ ಸಂಚಾರಕ್' ಔಷಧಿ ಅಂಗಡಿ ಸಿಕ್ಕೇ ಬಿಟ್ಟಿತು. ಅಷ್ಟೇ ಅಲ್ಲ, ಸ್ಥಳೀಯರಿಂದ ಈ ಔಷಧಿಯ ಮಾಲಿಕನಾಗಿದ್ದ ಶಕ್ತಿಪಾಲ ತನ್ನದೇ ಸಹೋದರರೊಬ್ಬರ ಮೂಲಕ ಹತನಾಗಿದ್ದ ಎಂದೂ ತಿಳಿದುಬಂದಿತು.

Image courtesy - dailybhaskar

ದಿಲ್ಲಿಯ ಗೋಪಾಲನೇ ಮಧುರಾದ ಶಕ್ತಿಪಾಲ

ದಿಲ್ಲಿಯ ಗೋಪಾಲನೇ ಮಧುರಾದ ಶಕ್ತಿಪಾಲ

ಔಷಧಿ ಅಂಗಡಿಯ ಮನೆಯವರಲ್ಲಿ ಈ ವಿಷಯ ತಿಳಿಸಿದಾಗ ಅವರೂ ಅಪ್ರತಿಭರಾದರು. ಕುತೂಹಲ ತಡೆಯಲಾಗದೇ ತಕ್ಷಣವೇ ದೆಹಲಿಗೆ ತೆರಳಿ ಗೋಪಾಲನನ್ನು ಭೇಟಿಯಾದರು. ಇವರನ್ನು ಕಂಡಾಕ್ಷಣ ಗೋಪಾಲ ಅವರಲ್ಲಿ ತನ್ನ ಚಿಕ್ಕಮ್ಮ, ತನ್ನ ಹೆಂಡತಿಯನ್ನು ಗುರುತಿಸಿದ. ಬಳಿಕ ಗೋಪಾಲ ಅವರೊಂದಿಗೆ ಮಥುರಾಕ್ಕೆ ತೆರಳಿದ ಬಳಿಕ ತನ್ನ ಅಂಗಡಿ, ತನ್ನ ಮನೆ, ಅಕ್ಕಪಕ್ಕದವರು ಎಲ್ಲರನ್ನೂ ಗುರುತಿಸಿದ. ಅಷ್ಟೇ ಸಾಲದೆಂಬಂತೆ ಹಿಂದಿನ ಜನ್ಮದ ತನ್ನ ಮಕ್ಕಳನ್ನೂ ಗುರುತು ಹಿಡಿದ.

ಶ್ರೀಲಂಕಾದ ರೂಬಿ ಹಿಂದಿನ ಜನ್ಮದಲ್ಲಿ ಹುಡುಗನಾಗಿದ್ದಳು

ಶ್ರೀಲಂಕಾದ ರೂಬಿ ಹಿಂದಿನ ಜನ್ಮದಲ್ಲಿ ಹುಡುಗನಾಗಿದ್ದಳು

1963ರಲ್ಲಿ ಶ್ರೀಲಂಕಾದ ಬಾಟಾಪೋಲಾ ಗ್ರಾಮದ ಸೇಮೆನ್ ಸಿಲ್ವಾ ಎಂಬುವರ ಮಗಳಾಗಿ ಹುಟ್ಟಿದ ರೂಬಿ ಕುಸುಮಾ ಸಹಾ ಮಾತನಾಡಲು ಪ್ರಾರಂಭಿಸಿದೊಡನೇ ತನ್ನ ವಯಸ್ಸಿಗೂ ಮೀರಿದ ಪದಗಳನ್ನು ಬಳಸಲು ತೊಡಗಿದಳು. ತಾನು ಹಿಂದಿನ ಜನ್ಮದಲ್ಲಿ ಹುಡುಗನಾಗಿ ಹುಟ್ಟಿದ್ದೆನೆಂದೂ, ಬಾವಿಗೆ ಬಿದ್ದು ಸತ್ತೆನೆಂದೂ ಹೇಳತೊಡಗಿದಳು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

Dailybhaskar

ಶ್ರೀಲಂಕಾದ ರೂಬಿ ಹಿಂದಿನ ಜನ್ಮದಲ್ಲಿ ಹುಡುಗನಾಗಿದ್ದಳು

ಶ್ರೀಲಂಕಾದ ರೂಬಿ ಹಿಂದಿನ ಜನ್ಮದಲ್ಲಿ ಹುಡುಗನಾಗಿದ್ದಳು

ಈ ಬಗ್ಗೆ ಕೊಂಚ ವಿವರ ಕೆದಕಿದವರಿಗೆ ಹಲವು ರೋಚಕ ಸಂಗತಿಗಳು ತಿಳಿದುಬಂದವು. ಅದೇ ಗ್ರಾಮದಲ್ಲಿ ಕೆಲವರ್ಷಗಳ ಕೆಳಗೆ ಬಾಲಕನೊಬ್ಬ ಬಾವಿಗೆ ಬಿದ್ದು ಮೃತಪಟ್ಟಿದ್ದು ನಿಜವಾಗಿತ್ತು. ಈ ವಿವರವನ್ನು ಹುಡುಕಿಕೊಂಡು ಮೃತಬಾಲಕನ ಮನೆ ತಲುಪಿದಾಗ ರೂಬಿ ಆ ಮನೆಯ ಎಲ್ಲರನ್ನೂ ಗುರುತು ಹಿಡಿಯತೊಡಗಿದಳು.

Dailybhaskar


English summary

Believe it or not: Interesting stories of rebirth!

There are many beliefs in Hinduism that science does not believe. One such belief is rebirth and belief is practiced in Hinduism. According to Hinduism, after death of a person, only his body perishes not his soul. The soul leaves the body after death and enters another body. This is called reincarnation. Click on this slide show to read the stories…
X
Desktop Bottom Promotion