Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
ಬಕ್ರೀದ್ 2019: ದಿನಾಂಕ, ಮಹತ್ವ, ಹಿನ್ನೆಲೆ ಹಾಗೂ ಹಬ್ಬದ ಆಚರಣೆಯ ಪ್ರಾಮುಖ್ಯತೆ
ವಿಶ್ವದೆಲ್ಲೆಡೆಯಲ್ಲಿ ಇಂದು ಬಕ್ರೀದ್ ಹಬ್ಬ ಆಚರಣೆ ಮಾಡಲಾಗುತ್ತಿದ್ದು, ಭಾರತದಲ್ಲೂ ಮುಸ್ಲಿಮರು ಬಕ್ರೀದ್ ನ ಶುಭಾಶಯಗಳನ್ನು ಹಂಚಿಕೊಂಡು ಆಚರಣೆಯಲ್ಲಿ ತೊಡಗಿದ್ದಾರೆ. ಬಕ್ರೀದ್‌ನ್ನು ಬಲಿದಾನದ ಹಬ್ಬವನ್ನಾಗಿ ಆಚರಣೆ ಮಾಡಲಾಗುತ್ತದೆ. ಅಲ್ಲಾನ ಅನತಿಯಂತೆ ಇಸ್ಲಾಂನ ಸಂದೇಶವಾಹಕರಾಗಿದ್ದ ಇಬ್ರಾಹಿಂ ತನ್ನ ಮಗನನ್ನು ಬಲಿದಾನ ಮಾಡುವ ದಿನವಿದು. ಇಬ್ರಾಹಿಂ ಅವರು ಮಾಡಿರುವಂತಹ ಬಲಿದಾನದಂತೆ ಮುಸ್ಲಿಮರು ವಿಶ್ವದೆಲ್ಲೆಡೆಯಲ್ಲಿ ಗಂಡು ಆಡನ್ನು ಬಲಿದಾನ ಮಾಡಿ ಈ ಹಬ್ಬವನ್ನು ಆಚರಣೆ ಮಾಡುವರು. ಬಲಿದಾನ ಮಾಡಿದ ಆಡಿನ ಮಾಂಸದಿಂದ ಕುಟುಂಬದವರಿಗೆ ವಿವಿಧ ಖಾದ್ಯಗಳನ್ನು ತಯಾರಿಸಿ ಅದನ್ನು ಬಡವರಿಗೂ ಹಂಚಲಾಗುತ್ತದೆ. ಮಸೀದಿಯಲ್ಲಿ ಈದ್ ಆಲ್-ಅದಾ ಪ್ರಾರ್ಥನೆಯು ನಡೆಯುತ್ತದೆ. ಈ ದಿನದಂದು ಹಬ್ಬದ ಸಂಭ್ರಮದಲ್ಲಿ ಎಲ್ಲರು ಹೊಸ ಬಟ್ಟಬರೆಗಳನ್ನು ಧರಿಸುವರು.
ಚಂದ್ರವರ್ಷದ ಕೊನೆಯ ತಿಂಗಳಾಗಿರುವ ದಹು ಅಲ್ ಹಿಜ್ಜಾಹದ ಹತ್ತನೇ ದಿನದಂದು ಬಕ್ರೀದ್ ಆಚರಣೆ ಮಾಡಲಾಗುತ್ತದೆ. ಇದೇ ಹಜ್ ಗೆ ಯಾತ್ರೆ ಕೂಡ ಕೈಗೊಳ್ಳುವರು. ಪವಿತ್ರ ಹಜ್ ಗೆ ಜೀವಮಾನದಲ್ಲಿ ಒಂದು ಸಲವಾದರೂ ಭೇಟಿ ನೀಡಬೇಕು ಎನ್ನುವ ನಂಬಿಕೆಯು ಮುಸ್ಲಿಮರಲ್ಲಿದೆ.

ಬಕ್ರೀದ್ ನ ಪ್ರಾಮುಖ್ಯತೆ ಮತ್ತು ಇತಿಹಾಸ
ಪ್ರವಾದಿ ಇಬ್ರಾಹಿಂ ಅಥವಾ ಅಬ್ರಾಹಂ ನೀಡಿರುವಂತಹ ಬಲಿದಾನ ಸಂಕೇತವನ್ನು ನೆನಪಿಸಿಕೊಳ್ಳುವ ಹಬ್ಬವೇ ಬಕ್ರೀದ್. ಪ್ರವಾದಿ ಅವರಿಗೆ ಅಲ್ಲಾ ತನ್ನ ಮೇಲಿನ ನಂಬಿಕೆಯನ್ನು ಸಾಬೀತು ಮಾಡಲು ಹೇಳುವರು ಮತ್ತು ಇದನ್ನು ಸಾಬೀತು ಮಾಡಲು ಪ್ರವಾದಿ ಅವರು ತನಗೆ ತುಂಬಾ ಇಷ್ಟವಿರುವಂತಹವರ ಬಲಿದಾನ ಮಾಡುವರು. ಪ್ರವಾದಿ ಅವರು ದೇವರ ಮೇಲಿನ ನಂಬಿಕೆಯಿಂದಾಗಿ ತನ್ನ 13ರ ಹರೆಯದ ಮಗ ಇಸ್ಮಾಯಿಲ್ ನನ್ನು ಬಲಿದಾನ ಮಾಡುವರು.
ಪ್ರವಾದಿ ಅವರು ತನ್ನ ಮೇಲೆ ಇಟ್ಟಿರುವಂತಹ ನಂಬಿಕೆಯನ್ನು ನೋಡಿದ ದೇವರು, ಇಸ್ಮಾಯಿಲ್ ನ ಬದಲಿಗೆ ಆಡೊಂದನ್ನು ಇಡುವಂತೆ ದೇವತೆ ಜಿಬ್ರಾಲ್ ಅಥವಾ ಗ್ಯಾಬ್ರಿಯಲ್ ನನ್ನು ಕಳುಹಿಸಿಕೊಡುವರು. ಈ ದಿನದಿಂದ ಮುಸ್ಲಿಮರು ಬಕ್ರೀದ್ ನಂದು ಗಂಡು ಆಡಿನ ಬಲಿ ಕೊಡುವರು. ಬಲಿಕೊಟ್ಟ ಆಡಿನ ಮಾಂಸವನ್ನು ಮೂರು ಭಾಗಗಳನ್ನಾಗಿ ಮಾಡಲಾಗುತ್ತದೆ. ಇದರಲ್ಲಿ ಒಂದು ಭಾಗವು ಬಡವರು ಮತ್ತು ಅಗತ್ಯವಿರುವಂತವರಿಗೆ, ಇನ್ನೊಂದು ಭಾಗ ಸ್ನೇಹಿತರಿಗೆ ಮತ್ತು ಉಳಿದ ಮೂರನೇ ಭಾಗವು ಕುಟುಂಬ ಸದಸ್ಯರಿಗೆ ಆಹಾರ ತಯಾರಿಸಿಕೊಳ್ಳಲು ಬಳಸಲಾಗುತ್ತದೆ.
ಈದ್ ಆಲ್ ಅದಾ ದಿನಾಂಕ
ಈ ವರ್ಷ ಈದ್ ಆಲ್ ಅದಾವನ್ನು ಆಗಸ್ಟ್ 12ರ ಸೋಮವಾರದಂದು ಆಚರಣೆ ಮಾಡಲಾಗುತ್ತದೆ.
ಈದ್ ಆಲ್ ಅದಾ ಹಬ್ಬದ ಆಹಾರ
ಬಕ್ರೀದ್ ಹಬ್ಬಕ್ಕಾಗಿ ಮಟನ್ ಬಿರಿಯಾನಿ, ಮಟನ್ ಕೊರ್ಮಾ, ಮಟನ್ ಕೀಮಾ ಮತ್ತು ಭುನಿ ಕಲೆಜಿ ತಯಾರಿಸಲಾಗುತ್ತದೆ. ಇದರೊಂದಿಗೆ ಸಿಹಿ ತಿಂಡಿಗಳಾಗಿರುವಂತಹ ಶೀರ ಕುರ್ಮಾ ಮತ್ತು ಪಾಯಸ ಮಾಡಲಾಗುತ್ತದೆ.



Click it and Unblock the Notifications

