Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಶುಭಕಾರ್ಯಕ್ಕೆ ಮಾರ್ಚ್ 2023 ನಲ್ಲಿರುವ ಮಂಗಳಕರ ದಿನಗಳು
ಹಿಂದೂ ಧರ್ಮದಲ್ಲಿ ಪ್ರತಿಯೊಂದು ದಿನಕ್ಕೂ ಅದರದ್ದೇ ಆದ ಪ್ರಾಶಸ್ತ್ಯ ನೀಡಲಾಗಿದೆ. ಏನೇ ಒಳ್ಳೆಯ ಕೆಲಸ ಮಾಡಬೇಕಾದರೂ ಜ್ಯೋತಿಷಿಗಳ ಬಳಿ ತೆರಳಿ ದಿನ ನೋಡುವ ಪದ್ಧತಿ ತಲತಲಾಂತಗಳಿಂದ ಬಳುವಳಿಯಾಗಿ ಬಂದಿದೆ. ಶುಭ ಹಾಗೂ ಅಶುಭ ದಿನಗಳ ಕುರಿತು ಜನಗಳ ನಂಬಿಕೆಯೂ ಅಷ್ಟೇ ಗಾಢವಾಗಿದೆ.

ನಮಗಿಷ್ಟ ಬಂದ ದಿನಗಳಲ್ಲಿ ಏನಾದರೂ ಶುಭ ಕಾರ್ಯಗಳನ್ನು ಮಾಡುವುದರಿಂದ ಒಳಿತಾಗುವುದಿಲ್ಲ. ದಿನ, ಗಳಿಗೆ ಎಲ್ಲವೂ ಕೂಡಿ ಬರಬೇಕು ಆಗ ಮಾತ್ರ ನಾವು ಅಂದುಕೊಂಡ ಕೆಲಸ ಆಗೋದಕ್ಕೆ ಸಾಧ್ಯ. ಮನೆ ಕಟ್ಟುವುದು, ಬೈಕ್, ಕಾರು, ಆಟೋ ಖರೀದಿ, ಮದುವೆ, ಗೃಹಪ್ರವೇಶ, ಹುಡುಗ-ಹುಡುಗಿ ನೋಡುವ ಶಾಸ್ತ್ರ ಹೀಗೆ ಚಿಕ್ಕ ಚಿಕ್ಕ ಶುಭ ಕಾರ್ಯಗಳಿಂದ ಹಿಡಿದು ದೊಡ್ಡ ಕಾರ್ಯಗಳಿಗೂ ಶುಭ ದಿನ ನೋಡಿ ಅದೇ ದಿನ ಕಾರ್ಯ ಕೈಗೊಳ್ಳುತ್ತೇವೆ. ಮಾರ್ಚ್ ತಿಂಗಳಲ್ಲಿ ಅನೇಕ ಜನ ಶುಭ ಕಾರ್ಯಗಳನ್ನು ಮಾಡಬೇಕು ಅಂದುಕೊಂಡಿರಬಹುದು. ಹಾಗಾದ್ರೆ ಮಾರ್ಚ್ ತಿಂಗಳಲ್ಲಿ ಇರುವ ಶುಭ ದಿನಗಳು ಯಾವುದು ಅನ್ನೋದರ ಬಗ್ಗೆ ತಿಳಿದುಕೊಳ್ಳೋಣ:
ಮಾರ್ಚ್ 2023 ರ ಮಂಗಳಕರ ದಿನಗಳು
ಮಾರ್ಚ್ 1
ಮಾರ್ಚ್ 3 ರಂದು ಬೆಳಗ್ಗೆ 9:11ರ ನಂತರ ಒಳ್ಳೆಯ ಸಮಯ
ಮಾರ್ಚ್ 4
ಮಾರ್ಚ್ 9
ಮಾರ್ಚ್10 ರಂದು ಬೆಳಗ್ಗೆ 9:21ರ ನಂತರ ಒಳ್ಳೆಯ ಸಮಯ
ಮಾರ್ಚ್ 11
ಮಾರ್ಚ್ 12 ರಂದು ಬೆಳಗ್ಗೆ 7:59 ರ ನಂತರ ಒಳ್ಳೆಯ ಸಮಯ
ಮಾರ್ಚ್13 ರಂದು ಬೆಳಗ್ಗೆ 8:20 ರಿಂದ ರಾತ್ರಿ 9:27 ರವರೆಗೆ ಒಳ್ಳೆಯ ಸಮಯ
ಮಾರ್ಚ್ 17 ರಂದು ಮಧ್ಯಾಹ್ನ 2:07 ರ ನಂತರ ಒಳ್ಳೆಯ ಸಮಯ
ಮಾರ್ಚ್18
ಮಾರ್ಚ್ 22
ಮಾರ್ಚ್ 23
ಮಾರ್ಚ್ 26 ರಂದು ಮಧ್ಯಾಹ್ನ 2:01 ರ ನಂತರ ಒಳ್ಳೆಯ ಸಮಯ
ಮಾರ್ಚ್ 27
ಮಾರ್ಚ್ 28 ರಂದು ಸಂಜೆ 7:01 ರ ನಂತರ ಒಳ್ಳೆಯ ಸಮಯ
ಮಾರ್ಚ್ 30
ಮಾರ್ಚ್ 31
2023 ಮಾರ್ಚ್‌ನಲ್ಲಿ ಮಂಗಳಕರವಲ್ಲದ ದಿನಗಳು
ಮಾರ್ಚ್‌ನಲ್ಲಿ ಕೆಲವು ದಿನಗಳನ್ನು ಶುಭಕಾರ್ಯಗಳನ್ನು ನಡೆಸಲು ಪ್ರಾಶಸ್ತ್ಯವಾದ ದಿನವಲ್ಲ ಎಂದು ಹೇಳಲಾಗಿದೆ ಅವುಗಳೆಂದರೆ ಮಾರ್ಚ್ 2, 7, 14, 19, 20, 24 ಮತ್ತು ಮಾರ್ಚ್ 25.
ನಾವು ಮೇಲೆ ಕೊಟ್ಟಿರುವ ಮಾಹಿತಿಗಳಲ್ಲಿ ಕೆಲವು ದಿನಗಳ ಬಗ್ಗೆ ಮಾಹಿತಿಯನ್ನು ನೀಡಿಲ್ಲ. ಯಾಕೆಂದರೆ ಆ ದಿನಗಳು ಒಳ್ಳೆಯ ಹಾಗೂ ಕೆಟ್ಟ ದಿನಗಳ ಪಟ್ಟಿಗೆ ಸೇರುವುದಿಲ್ಲ. ಆ ದಿನಗಳನ್ನು ಸಾಧಾರಣ ದಿನಗಳು ಎಂದು ಪರಿಗಣಿಸಬಹುದು.



Click it and Unblock the Notifications


