Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಫೆಬ್ರವರಿ 2021: ವಾಹನ, ಆಸ್ತಿ ಖರೀದಿ ಮುಂತಾದ ಶುಭ ಕಾರ್ಯಕ್ಕೆ ಈ ದಿನ ಅದೃಷ್ಟಕರ
ಫೆಬ್ರವರಿಯಲ್ಲಿ ನಿಮ್ಮ ಮನೆಯಲ್ಲಿ ಪೂಜೆ, ಮಗುವಿನ ನಾಮಕರಣ, ಮದುವೆ, ಗೃಹ ಪ್ರವೇಶ, ಆಸ್ತಿ ಖರೀದಿ, ಹೊಸ ವಾಹನ ಖರೀದಿ ಹೀಗೆ ಮುಂತಾದ ಶುಭ ಕಾರ್ಯಗಳನ್ನು ಮಾಡಲು ಇಚ್ಚಿಸುವುದಾದರೆ ಅದಕ್ಕಾಗಿ ಶುಭ ಗಳಿಗೆ ನೋಡಿಯೇ ನೋಡುತ್ತೀರಿ.

ನಾವಿಲ್ಲಿ ಫೆಬ್ರವರಿ ತಿಂಗಳಿನಲ್ಲಿ ಯಾವ ದಿನ ಹಾಗೂ ಸಮಯ ತುಂಬಾ ಚೆನ್ನಾಗಿದೆ ಎಂಬ ಮಾಹಿತಿಯನ್ನು ನೀಡಿದ್ದೇವೆ. ಇದನ್ನು ಅಮೃತ್ ಸಿದ್ಧಿ ಯೋಗ 2021 ನೋಡಿ ಹೇಳಲಾಗಿದೆ.
ಅಮೃತ ಸಿದ್ಧಿ ಯೋಗ ನಕ್ಷತ್ರ ಹಾಗೂ ವಾರ ನೋಡಿ ಹೇಳಲಾಗುವುದು. ಅದೃಷ್ಟ ಹಾಗೂ ಸಂಪತ್ತಿಗಾಗಿ ಈ ತಿಂಗಳು ಯಾವ ದಿನ ಶುಭಕಾರ್ಯಕ್ಕೆ ಶುಭವಾಗಿದೆ ಎಂದು ನೋಡೋಣ:

ಯಾವ ತಾರೀಕಿನಲ್ಲಿ ಅಮೃತ ಸಿದ್ಧಿ ಯೋಗವಿದೆ
ಅಮೃತ ಸಿದ್ಧಿ ಯೋಗ
ಫೆಬ್ರವರಿ 16, ಮಂಗಳವಾರ
ಅಶ್ವನಿ ನಕ್ಷತ್ರ: ಮಂಗಳವಾರ
ಸಮಯ: ರಾತ್ರಿ 16/02/21 08:56 ರಿಂದ 17/02/21 ಬೆಳಗ್ಗೆ06:34ರವರೆಗೆ
ಅಮೃತ ಸಿದ್ಧಿ ಯೋಗ
20, ಫೆಬ್ರವರಿ 2021, ಶನಿವಾರ
ರೋಹಿಣಿ
ಸಮಯ: 20/02/21 ಬೆಳಗ್ಗೆ 06:32ರಿಂದ 21/02/21 ಬೆಳಗ್ಗೆ 06:32ರವರೆಗೆ
ಅಮೃತ ಸಿದ್ಧಿ ಯೋಗ
22 ಫೆಬ್ರವರಿ, ಸೋಮವಾರ
ಮೃಗಶಿರ
ಸಮಯ: 22/02/21 ಬೆಳಗ್ಗೆ 06:31 ರಿಂದ 22/02/21 ಬೆಳಗ್ಗೆ10:58 ರವರೆಗೆ
ಅಮೃತ ಸಿದ್ಧಿ ಯೋಗ
25 ಫೆಬ್ರವರಿ, ಮಂಗಳವಾರ
ಪುಷ್ಯಾ
ಸಮಯ: ಬೆಳಗ್ಗೆ 25/02/21 06:30
ರಿಂದ 25/02/21 01:17ರವರೆಗೆ

ಅಮೃತ ಸಿದ್ಧಿ ಯೋಗ ಇದ್ದರೂ ಯಾವ ದಿನ ಏನು ಮಾಡುವುದು ಶುಭಕರವಲ್ಲ?
ಅಮೃತ ಸಿದ್ದಿ ಯೋಗ ಸಾಮಾನ್ಯವಾಗಿ ತುಂಬಾವಾದ ಸಮಯವಾಗಿದೆ. ಆದರೆ ಅಮೃತ ಸಿದ್ಧಿ ಯೋಗ ಇದ್ದರೂ ಈ ದಿನಗಳಲ್ಲಿ ಕೆಲವೊಂದು ಕಾರ್ಯ ಮಾಡುವಂತಿಲ್ಲ.
ಗೃಹ ಪ್ರವೇಶ: ಮನೆಗೆ ಅಡಿಪಾಯ ಹಾಕುವುದು, ಅಥವಾ ಮನೆ ಕಟ್ಟಲು ಪ್ರಾರಂಭಿಸುವುದು ಇವನ್ನೆಲ್ಲಾ ಮಂಗಳವಾರ ಮಾಡಬಾರದು.
ಮದುವೆ ಮುಹೂರ್ತ:ಅಮೃತ ಸಿದ್ಧಿ ಯೋಗ ಗುರುವಾರ ಬಂದ್ರೆ ಆ ದಿನ ಮದುವೆಗೆ ಯೋಗ್ಯವಲ್ಲ.
ಪ್ರಯಾಣ: ಅಮೃತ ಸಿದ್ಧಿ ಶನಿವಾರ ಇದ್ದರೆ ದಕ್ಷಿಣ ಭಾಗಕ್ಕೆ ಪ್ರಯಾಣ ಶುಭವಲ್ಲ.

ಅಮೃತ ಸಿದ್ಧಿ ಯೋಗ ಯಾವಾಗ ಉಂಟಾಗುತ್ತದೆ?
ಹಸ್ತಾ ನಕ್ಷತ್ರ ಭಾನುವಾರ ಬಂದ್ರೆ
ಮೃಗಶಿರ ನಕ್ಷತ್ರ ಸೋಮವಾರ ಬಂದ್ರೆ
ಅಶ್ವನಿ ನಕ್ಷತ್ರ ಮಂಗಳವಾರ ಬಂದ್ರೆ
ಅನುರಾಧ ನಕ್ಷತ್ರ ಬುಧವಾರ ಬಂದ್ರೆ
ಪುಷ್ಯಾ ನಕ್ಷತ್ರ ಗುರುವಾರ ಬಂದ್ರೆ
ರೇವತಿ ನಕ್ಷತ್ರ ಶುಕ್ರವಾರ ಬಂದ್ರೆ
ರೋಹಿಣಿ ನಕ್ಷತ್ರ ಶನಿವಾರ ಬಂದ್ರೆ

ಅಮೃತ ಸಿದ್ಧಿ ಯೋಗ ಯಾವ ಕಾರ್ಯಕ್ಕೆ ತುಂಬಾ ಒಳ್ಳೆಯದು
* ಯಾವುದಾದರೂ ಕಾಂಟ್ರ್ಯಾಕ್ಟ್ ಪಡೆಯಲು
* ಯಾವುದಾರೂ ಸ್ಪರ್ಧಾತ್ಮಕ ಪರೀಕ್ಷೆಗೆ ಅಪ್ಲಿಕೇಷನ್ ಹಾಕಲು
* ಎಲೆಕ್ಷನ್‌ಗೆ ನಾಮಿನೇಷನ್ ಸಲ್ಲಿಸಲು
* ಆಸ್ತಿ, ವಾಹನ, ಹಣ ಖರೀದಿಗೆ
* ವಿದೇಶ ಪ್ರಯಾಣಕ್ಕೆ



Click it and Unblock the Notifications
